ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

MS Dhoni: ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಮುಂದಿನ ಹೆಡ್‌ ಕೋಚ್‌ ಅನ್ನು ಆರಿಸಿದ ಕೆ ಶ್ರೀಕಾಂತ್‌!

IPL 2027: ಹೆಮಾಂಗ್ ಬದಾನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಆಗಲಿದ್ದಾರೆ ಎಂಬ ವದಂತಿಗಳನ್ನು ಭಾರತದ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ತಳ್ಳಿಹಾಕಿದ್ದಾರೆ. ಮುಖ್ಯ ಕೋಚ್ ಹುದ್ದೆ ನಿಭಾಯಿಸಲು ಮಹೇಂದ್ರ ಸಿಂಗ್ ಧೋನಿ (MS Dhoni) ಅವರು ಸಂಪೂರ್ಣ ಅರ್ಹರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

IPL 2027: ಸಿಎಸ್‌ಕೆಗೆ ಮಂದಿನ ಕೋಚ್‌ ಅನ್ನು ಆರಿಸಿದ ಕೆ ಶ್ರೀಕಾಂತ್‌!

ಸಿಎಸ್‌ಕೆಗೆ ಮುಂದಿನ ಕೋಚ್‌ ಎಂಎಸ್‌ ಧೋನಿ ಎಂದ ಕೆ ಶ್ರೀಕಾಂತ್‌. -

Profile
Ramesh Kote Sep 15, 2026 4:46 PM

ನವದೆಹಲಿ: ಚೆನ್ನೈ ಸೂಪರ್‌ ಕಿಂಗ್ಸ್‌ (CSK)ತಂಡಕ್ಕೆ 2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2027) ಟೂರ್ನಿಯ ನಿಮಿತ್ತ ಹೆಡ್‌ ಕೋಚ್‌ ಆಗಲಿದ್ದಾರೆಂಬ ವರದಿಗಳನ್ನು ಮಾಜಿ ಬಿಸಿಸಿಐ ಸೆಲೆಕ್ಟರ್‌ ಕೃಷ್ಣಮಾಚಾರಿ ಶ್ರೀಕಾಂತ್‌ ತಳ್ಳಿ ಹಾಕಿದ್ದಾರೆ. ಮುಂದಿನ ಟೂರ್ನಿಯಲ್ಲಿ ಸಿಎಸ್‌ಕೆಗೆ ಹೆಡ್‌ ಕೋಚ್‌ ಆಗಿ ಕಾರ್ಯನಿರ್ವಹಿಸಲು ಮಾಜಿ ನಾಯಕ ಎಂಎಸ್‌ ಧೋನಿ (MS Dhoni) ಅರ್ಹರಾಗಿದ್ದಾರೆಂದು ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಐಪಿಎಲ್‌ ವೃತ್ತಿ ಜೀವನಕ್ಕೆ ಇನ್ನೂ ಎಂಎಸ್‌ ಧೋನಿ ವಿದಾಯ ಹೇಳಿಲ್ಲ. ಹಾಗಾಗಿ ಅವರು ಮುಂದಿನ ಸೀಸನ್‌ಗೂ ಮುನ್ನ ಐಪಿಎಲ್‌ ಬದುಕಿಗೆ ವಿದಾಯ ಹೇಳಿದರೆ, ಅವರೇ ಸಿಎಸ್‌ಕೆಗೆ ಕೋಚ್‌ ಆಗಿ ಬಂದರೂ ಅಚ್ಚರಿಪಡಬೇಕಿಲ್ಲ.

ಹೆಮಾಂಗ್ ಬದಾನಿ ಅವರ ಹೆಸರನ್ನು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮುಖ್ಯ ಕೋಚ್ ಹುದ್ದೆಗೆ ಪರಿಗಣಿಸಲಾಗುತ್ತಿದೆ ಎಂಬ ವಿಚಾರ ಕೇಳುತ್ತಿದ್ದಂತೆ ಮಾಜಿ ಭಾರತ ಕ್ರಿಕೆಟಿಗ ಹಾಗೂ ಆಯ್ಕೆಗಾರ ಕೃಷ್ ಶ್ರೀಕಾಂತ್ ಇದನ್ನು ತಳ್ಳಿಹಾಕಿದ್ದಾರೆ. ಬದಾನಿ ಅವರು ಈ ಹುದ್ದೆಗೆ ಅಗತ್ಯ ಅರ್ಹತೆ ಹೊಂದಿಲ್ಲ ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಶ್ರೀಕಾಂತ್, ಮಹೇಂದ್ರ ಸಿಂಗ್ ಧೋನಿ ಅವರೇ ಸಿಎಸ್‌ಕೆಗೆ ಮುಖ್ಯ ಕೋಚ್ ಆಗಲಿ ಸಾಕು ಎಂದು ಹೇಳಿದ್ದಾರೆ.

Women's Asia Cup: ಭಾರತ ತಂಡದ ಕ್ರಾಂತಿ ಗೌಡ್‌ಗೆ ದಂಡ ವಿಧಿಸಿದ ಐಸಿಸಿ! ಏಕೆ ಗೊತ್ತೆ?

“ಹೆಮಾಂಗ್ ಬದಾನಿ ಸಿಎಸ್‌ಕೆಯ ಮುಖ್ಯ ಕೋಚ್ ಆಗುವ ಸಾಧ್ಯತೆಯೇ ಇಲ್ಲ. ಅವರು ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಏನನ್ನೂ ಮಾಡಿಲ್ಲ. ಸಿಎಸ್‌ಕೆ ಅವರಿಗಾಗಿ ಏಕೆ ಸಂಪೂರ್ಣವಾಗಿ ಪ್ರಯತ್ನಿಸಬೇಕು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಕೋಚ್ ಆಗಿ ಅವರು ವಿಶೇಷ ಸಾಧನೆ ಮಾಡಿಲ್ಲ. ನಿಮ್ಮ ಬಳಿ ಧೋನಿ ಇರುವಾಗ ಮತ್ತೊಬ್ಬ ಕೋಚ್ ಏಕೆ ಬೇಕು? ಧೋನಿ ಅವರೇ ಮುಖ್ಯ ಕೋಚ್ ಆಗಲಿ ಸಾಕು,” ಎಂದು ಶ್ರೀಕಾಂತ್ ಆಗ್ರಹಿಸಿದ್ದಾರೆ.

ಧೋನಿ ಭಾರತ ಕೋಚ್ ಬಯಸಿದರೆ ಚಂದ್ರಕಾಂತ್ ಪಂಡಿತ್ ಆಯ್ಕೆ

ಎಂಎಸ್‌ ಧೋನಿ ಭಾರತೀಯ ಕೋಚ್‌ಗೆ ಆದ್ಯತೆ ನೀಡಲು ಬಯಸಿದರೆ, ಕೆಕೆಆರ್‌ ಮಾಜಿ ಕೋಚ್ ಚಂದ್ರಕಾಂತ್ ಪಂಡಿತ್ ಅವರನ್ನು ಆಯ್ಕೆ ಮಾಡಬಹುದು ಎಂದು ಶ್ರೀಕಾಂತ್ ಸಲಹೆ ನೀಡಿದ್ದಾರೆ.

7 ವರ್ಷಗಳ ಬಳಿಕ ಪಾಕಿಸ್ತಾನ ದೇಶಿ ಕ್ರಿಕೆಟ್‌ಗೆ ಮರಳಲು ಸಜ್ಜಾದ ಬಾಬರ್‌ ಆಝಮ್‌!

“ಧೋನಿ ಭಾರತೀಯ ಕೋಚ್‌ಗೆ ಆದ್ಯತೆ ನೀಡುತ್ತಿದ್ದರೆ, ನಾನು ಚಂದ್ರಕಾಂತ್ ಪಂಡಿತ್ ಅವರನ್ನು ಆಯ್ಕೆ ಮಾಡುತ್ತೇನೆ. ಅವರು ಉತ್ತಮ ವ್ಯಕ್ತಿ ಹಾಗೂ ಟ್ರೋಫಿಗಳನ್ನು ಗೆದ್ದಿದ್ದಾರೆ. ಸಿಎಸ್‌ಕೆ ಭಾರತೀಯ ಕೋಚ್‌ ಆಯ್ಕೆಯತ್ತ ಹೋಗಬೇಕು. ಕೋಚ್ ಒಬ್ಬ ಅತ್ಯುತ್ತಮ ಅಂತಾರಾಷ್ಟ್ರೀಯ ಆಟಗಾರನಾಗಿರಬೇಕು ಅಥವಾ ದೇಶಿ ಕ್ರಿಕೆಟ್/ಐಪಿಎಲ್ ಮಟ್ಟದಲ್ಲಿ ಕೋಚ್ ಆಗಿ ದೊಡ್ಡ ಸಾಧನೆ ಮಾಡಿರಬೇಕು,” ಎಂದು ಶ್ರೀಕಾಂತ್ ಹೇಳಿದ್ದಾರೆ.

ಕೋಚ್ ಆಯ್ಕೆ ವಿಚಾರದಲ್ಲಿ ಆತುರ ಬೇಡ: ಶ್ರೀಕಾಂತ್

ಹೊಸ ಮುಖ್ಯ ಕೋಚ್ ಆಯ್ಕೆ ಮಾಡುವ ವಿಚಾರದಲ್ಲಿ ಸಿಎಸ್‌ಕೆ ಆತುರದ ನಿರ್ಧಾರ ಕೈಗೊಳ್ಳುವ ಅಗತ್ಯವಿಲ್ಲ ಎಂದು ಶ್ರೀಕಾಂತ್ ಹೇಳಿದ್ದಾರೆ.

“ಸಿಎಸ್‌ಕೆ ಸಮಯ ತೆಗೆದುಕೊಳ್ಳುತ್ತಿರುವುದು ಒಳ್ಳೆಯದೇ. ನಿರ್ಧಾರ ಕೈಗೊಳ್ಳಲು ಯಾವುದೇ ಆತುರದ ಅಗತ್ಯವಿಲ್ಲ. ಹರಾಜು ಡಿಸೆಂಬರ್‌ನಲ್ಲಿ ನಡೆಯಲಿದೆ. ಹೀಗಾಗಿ ಸಾಕಷ್ಟು ಸಮಯವಿದೆ. ಅವರು ಯಾವುದೇ ರೀತಿಯ ಆತುರ ಮಾಡದೆ, ಶಾಂತವಾಗಿ ಯೋಚಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು,” ಎಂದು ಶ್ರೀಕಾಂತ್ ಸಲಹೆ ನೀಡಿದ್ದಾರೆ.