ಶ್ರೀಲಂಕಾ ಪ್ರವಾಸದ ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾದ ದ್ರಾವಿಡ್ ಪುತ್ರ ಅನ್ವಯ್!
ಬಿಸಿಸಿಐ ಜೂನಿಯರ್ ಕ್ರಿಕೆಟ್ ಕಮಿಟಿಯು ಮುಂಬರುವ ಶ್ರೀಲಂಕಾ ಪ್ರವಾಸಕ್ಕೆ ಭಾರತ ಅಂಡರ್-19 ತಂಡವನ್ನು ಪ್ರಕಟಿಸಿದೆ. ಈ ತಂಡಕ್ಕೆ ಬ್ಯಾಟಿಂಗ್ ದಿಗ್ಗಜ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಆಯ್ಕೆಯಾಗಿದ್ದಾರೆ. ಈ ಪ್ರವಾಸದಲ್ಲಿ ಭಾರತ ಕಿರಿಯರ ತಂಡ ಮೂರು ಏಕದಿನ ಪಂದ್ಯಗಳು ಹಾಗೂ ಎರಡು ಹಲವು ದಿನಗಳ ಪಂದ್ಯಗಳನ್ನು ಆಡಲಿದೆ.
ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾದ ಅನ್ವಯ್ ದ್ರಾವಿಡ್. -
ನವದೆಹಲಿ: ಭಾರತೀಯ ಕ್ರಿಕೆಟ್‌ನ ದಿಗ್ಗಜ ಹಾಗೂ ಟೀಮ್ ಇಂಡಿಯಾ ಮಾಜಿ ಹೆಡ್ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಪುತ್ರ ಅನ್ವಯ್ ದ್ರಾವಿಡ್ (Anvay Dravid) ಅವರು ಶ್ರೀಲಂಕಾ ಪ್ರವಾಸದ ಭಾರತ ಅಂಡರ್-19 ತಂಡಕ್ಕೆ (India's U1-9 Squad) ಆಯ್ಕೆಯಾಗಿದ್ದಾರೆ. ಶ್ರೀಲಂಕಾ ವಿರುದ್ಧ ಏಕದಿನ ಸರಣಿಯ ತಂಡದಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಆಗಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈಗಾಗಲೇ ಭಾರತ ಅಂಡರ್-19 ತಂಡದ ಪರ ಆಡಿದ್ದ ಸುಮಿತ್ ದ್ರಾವಿಡ್ ಅವರ ತಮ್ಮ ಅನ್ವಯ್ ದ್ರಾವಿಡ್. ಸುಮಿತ್ ಈಗಾಗಲೇ ಕರ್ನಾಟಕ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಪರ 2024ರಲ್ಲಿ ಆಡಿದ್ದಾರೆ.
ಅನ್ವಯ್ ದ್ರಾವಿಡ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ ಆಗಿರುವ ಅವರು ಈಗಾಗಲೇ ವಯೋಮಿತಿ ಕ್ರಿಕೆಟ್‌ನಲ್ಲಿ ಗಮನ ಸೆಳೆದಿದ್ದಾರೆ. ಇದೀಗ ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾಗಿರುವ ಅವರು, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹೇಗೆ ಪ್ರದರ್ಶನವನ್ನು ತೋರುತ್ತಾರೆಂಬುದು ಇಲ್ಲಿ ಪ್ರಮುಖ ಸಂಗತಿಯಾಗಿದೆ. ಜೂನಿಯರ್ ದ್ರಾವಿಡ್ ಹೇಗೆ ಬ್ಯಾಟಿಂಗ್ ಪ್ರದರ್ಶನವನ್ನು ತೋರಲಿದ್ದಾರೆಂಬುದು ತೀವ್ರ ಕುತೂಹಲವನ್ನು ಕೆರಳಿಸಿದೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರ 2027ರ ಒಡಿಐ ವಿಶ್ವಕಪ್ ಭವಿಷ್ಯ ನುಡಿದ ಆರ್ ಅಶ್ವಿನ್!
ಅನ್ವಯ್ ಕೇವಲ ಏಕದಿನ ಭಾರತ ಅಂಡರ್-19 ತಂಡಕ್ಕೆ ಮಾತ್ರ ಆಯ್ಕೆಯಾಗಿದ್ದಾರೆ. ಅವರನ್ನು ಹಲವು ದಿನಗಳ ಪಂದ್ಯಗಳ ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ. ಇನ್ನೂ ಎರಡೂ ಸ್ವರೂಪಗಳ ತಂಡವನ್ನು ಯಶ್‌ವರ್ಧನ್ ಸಿಂಗ್ ಚೌವ್ಹಾಣ್ ಮುನ್ನಡೆಸಲಿದ್ದಾರೆ. ಉಪ ನಾಯಕನ ಸ್ಥಾನವನ್ನು ಲಕ್ಷ್ಯ ರಾಯ್‌ಚಾಂದನಿಗೆ ನೀಡಲಾಗಿದೆ. ಜುಲೈ 4 ರಂದು ಭಾರತ ತಂಡದ ಶ್ರೀಲಂಕಾ ಪ್ರವಾಸ ಆರಂಭವಾಗಲಿದೆ. ಮೊದಲಿಗೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.
🚨 News 🚨
— BCCI (@BCCI) June 11, 2026
India Men's U19 squads for Sri Lanka series announced.
More Details 🔽https://t.co/tGJ7FRywxK
ಶ್ರೀಲಂಕಾ ಪ್ರವಾಸದ ಭಾರತ ಅಂಡರ್-19 ತಂಡಗಳು
ಭಾರತ ಅಂಡರ್-19 ಏಕದಿನ ತಂಡ: ಸಾಗರ್ ವಿರ್ಕ್, ಲಕ್ಷ್ಯ ರಾಯ್ ಚಾಂದನಿ (ಉಪ ನಾಯಕಿ), ಯಶ್‌ವರ್ಧನ್ ಸಿಂಗ್ ಚೌವ್ಹಾಣ್ (ನಾಯಕ), ವಿನೀತ್ ವಿಕೆ, ಅರ್ಜುನ್ ರಜ್‌ಪುತ್, ಕುಶಾಗ್ರಾ ಓಜಾ, ರಜತ್ ಬಂಘೇಲಾ (ವಿಕೆಟ್ ಕೀಪರ್), ಅನ್ವಯ್ ದ್ರಾವಿಡ್ ( ವಿಕೆಟ್ ಕೀಪರ್), ಅನ್ಮೋಲ್‌ಜೀತ್ ಸಿಂಗ್, ವುತ್ಕುರಿ ಯಶ್‌ವೀರ್ ಗೌಡ್, ರೋಹಿತ್ ಅನಿಲ್ ಯಾದವ್, ಶವಿನ್ ವಿ, ಕಾವ್ಯ ಪರೇಶ್ ಪಟೇಲ್, ಮೋಹಿತ್ ಉಲ್ವಾ, ಇಶಾನ್ ಸೂದ್
ಭಾರತ ಅಂಡರ್-19 ಹಲವು ದಿನಗಳ ಪಂದ್ಯದ ತಂಡ: ಸಾಗರ್ ವಿರ್ಕ್, ಲಕ್ಷ್ಯ ರಾಯ್ ಚಾಂದನಿ (ಉಪ ನಾಯಕಿ), ಯಶ್‌ವರ್ಧನ್ ಸಿಂಗ್ ಚೌವ್ಹಾಣ್ (ನಾಯಕ), ಪಟೇಲ್ ಕುಶ್, ಮನಲ್ ಚೌವ್ಹಾಣ್, ಕುಶಾಗ್ರ ಓಜಾ, ಮಾನವ್ ಕೃಷ್ಣ (ವಿಕೆಟ್ ಕೀಪರ್), ಆರ್ಯನ್ ಸಂದೇಶ್ ಸಕ್ಪಾಲ್ (ವಿಕೆಟ್ ಕೀಪರ್), ಹೇಮ್‌ಚುದೇಶನ್ ಜೆ, ಬಿಕೆ ಕಿಶೋರ್, ರೋಹಿತ್ ಅನಿಲ್ ಯಾದವ್, ಕಾವ್ಯ ಪರೇಶ್ ಪಟೇಲ್, ಪ್ರಿಯಾಂಶ್ ಸಿಂಗ್, ಪ್ರಣವ್ ರಾಘವೇಂದ್ರ, ಚಿಗುರುಪತಿ ವೆಂಕಟ