ಮುಂಬೈ ಇಂಡಿಯನ್ಸ್‌ನ ಟಾಪ್ 3 ಫ್ಲಾಪ್ ಆಟಗಾರರನ್ನು ಹೆಸರಿಸಿದ ಶಾನ್ ಪೊಲಾಕ್!
ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ 2026ರ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತನ್ನ ಗತವೈಭವ ಮೆರೆಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಅಂಕಪಟ್ಟಿಯ ಕೆಳಭಾಗದಲ್ಲಿ ಪೈಪೋಟಿ ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ ಸಾರಥ್ಯದ ಮುಂಬೈ ತಂಡ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರಷ್ಟೇ ಪ್ಲೇ-ಆಫ್ಸ್ ರೇಸ್‌ನಲ್ಲಿ ಉಳಿಯಲು ಸಾಧ್ಯ.
2026ರಲ್ಲಿ ಮುಂಬೈ ಇಂಡಿಯನ್ಸ್ ವೈಫಲ್ಯ -
ಬೆಂಗಳೂರು: ಐಪಿಎಲ್ 2026 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡ ಪಾಯಿಂಟ್ಸ್ ಟೇಬಲ್‌ನ ತಳಭಾಗದಲ್ಲಿ ಹೋರಾಟ ನಡೆಸುತ್ತಿರುವ ಹಿನ್ನೆಲೆ, ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಶಾನ್ ಪೊಲಾಕ್ (Shaun Pollock) ಮಾತನಾಡಿದ್ದು, ಮುಂಬೈ ತಂಡದ ಮೂವರು ದೊಡ್ಡ ಫ್ಲಾಪ್ ಆಟಗಾರರನ್ನು ಗುರುತಿಸಿದ್ದಾರೆ.
ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಲು ವಿಫಲವಾಗಿದೆ. ಲೀಗ್ ಈಗ ಮಧ್ಯಭಾಗಕ್ಕೆ ಬಂದು ನಿಂತಿದ್ದು, ಏಳು ಪಂದ್ಯಗಳಲ್ಲಿ ಕೇವಲ ಎರಡು ಜಯಗಳೊಂದಿಗೆ ಮುಂಬೈ ತಂಡ ಅಂಕಪಟ್ಟಿಯಲ್ಲಿ ಕೆಳಭಾಗದಲ್ಲೇ ಉಳಿದಿದೆ. ಈಗ ಮುಂದಿನ ಹಂತಕ್ಕೆ ಪ್ರವೇಶಿಸಲು ತಂಡಕ್ಕೆ ಸವಾಲು ಬಹಳಾ ಕಠಿಣವಾಗಿದೆ.
ಮುಂಬೈ ಇಂಡಿಯನ್ಸ್‌ಗೆ ಆಘಾತ, 2026ರ ಐಪಿಎಲ್ ಟೂರ್ನಿಯಿಂದ ಮಿಚೆಲ್ ಸ್ಯಾಂಟ್ನರ್ ಔಟ್!
ಗಾಯಗಳ ಸಮಸ್ಯೆ, ಕಳಪೆ ಲಯ ಮತ್ತು ಪ್ರಮುಖ ಕ್ಷಣಗಳಲ್ಲಿನ ಮೇಲುಗೈ ಸಾಧಿಸಲು ವಿಫಲವಾಗಿದ್ದು ತಂಡಕ್ಕೆ ಭಾರಿ ಹೊಡೆತ ನೀಡಿದೆ. ಪ್ರಮುಖ ಬ್ಯಾಟರ್ ರೋಹಿತ್ ಶರ್ಮಾ (Rohit Sharma) ಅವರ ಹ್ಯಾಮ್‌ಸ್ಟ್ರಿಂಗ್ ಗಾಯದ ಕಾರಣ ಕೊನೆಯ ಮೂರು ಪಂದ್ಯಗಳನ್ನು ಮಿಸ್ ಮಾಡಿದ್ದು, ಆ ಎಲ್ಲ ಪಂದ್ಯಗಳಲ್ಲೂ ಮುಂಬೈ ಸೋಲುಂಡಿದೆ. ನಾಯಕತ್ವ ವಹಿಸಿರುವ ಹಾರ್ದಿಕ್ ಪಾಂಡ್ಯ (Hardik Pandya) ತಂಡವನ್ನು ಸಮತೋಲನದಲ್ಲಿ ಇಡಲು ಪ್ರಯತ್ನಿಸಿದರೂ, ಮುಂಬೈ ತನ್ನ ಗತವೈಭವ ತೋರಲು ಸಾಧ್ಯವಾಗಿಲ್ಲ.
ಕ್ರಿಕ್‌ಬಜ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮಾಜಿ ಆಲ್‌ರೌಂಡರ್ ಶಾನ್ ಪೊಲಾಕ್, ಮುಂಬೈ ತಂಡವು ತಮ್ಮ ಅನುಭವಿ ಬೌಲಿಂಗ್ ವಿಭಾಗದಿಂದ ದೊಡ್ಡ ನಿರೀಕ್ಷೆ ಇಟ್ಟುಕೊಂಡಿತ್ತು ಎಂದು ಹೇಳಿದ್ದಾರೆ. ಆದರೆ ಆ ನಿರೀಕ್ಷೆಗಳು ಈವರೆಗೆ ನೆರವೇರಿಲ್ಲ.
ಪೊಲಾಕ್ ಪ್ರಕಾರ, ವೇಗಿಗಳಾದ ಟ್ರೆಂಟ್ ಬೌಲ್ಟ್, ಶಾರ್ದುಲ್ ಠಾಕೂರ್ ಮತ್ತು ದೀಪಕ್ ಚಹರ್ ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ಪಂದ್ಯವನ್ನು ನಿಯಂತ್ರಿಸುವ ಜವಾಬ್ದಾರಿ ಹೊರಬೇಕಿತ್ತು. ಆದರೆ ಅವರಿಂದ ನಿರೀಕ್ಷಿತ ಪರಿಣಾಮದ ಪ್ರದರ್ಶನ ಕಾಣಿಸದಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ ಎಂದಿದ್ದಾರೆ.
RCB vs MI: ಮುಂಬೈ ಇಂಡಿಯನ್ಸ್‌ಗೆ ಮಣ್ಣು ಮುಕ್ಕಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು!
"ಈ ಮೂವರು ಪ್ರಮುಖ ಬೌಲರ್‌ಗಳಿಂದ ತಂಡಕ್ಕೆ ನಿರಾಶೆ ಎದುರಾಗಿದೆ. ಸೀಸನ್ ಆರಂಭಕ್ಕೂ ಮುನ್ನ ಇವರನ್ನೇ ಮ್ಯಾಚ್ ವಿನ್ನರ್ಸ್ ಎಂದು ಪರಿಗಣಿಸಲಾಗಿತ್ತು. ಆದರೆ ಈಗ ಆಡುತ್ತಿರುವ ಪ್ಲೇಯಿಂಗ್ ಇಲೆವೆನ್ ಹರಾಜಿನ ನಂತರ ಆಯ್ಕೆ ಮಾಡಿದ್ದ ತಂಡಕ್ಕಿಂತ ಬಹಳ ಭಿನ್ನವಾಗಿದೆ," ಎಂದು ಪೊಲಾಕ್ ಹೇಳಿದ್ದಾರೆ.
ಇದರ ಜೊತೆಗೆ, ತಂಡದಲ್ಲಿ ಹೆಚ್ಚಿನ ಆಯ್ಕೆಗಳಿರುವುದೇ ಕೆಲವೊಮ್ಮೆ ಗೊಂದಲಕ್ಕೆ ಕಾರಣವಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯವಾಗಿ ದೊಡ್ಡ ಸ್ಕ್ವಾಡ್ ತಂಡದ ಬಲವಾಗಬೇಕು, ಆದರೆ ಮುಂಬೈಗೆ ಅದು ಸ್ಪಷ್ಟತೆಯ ಕೊರತೆಯನ್ನುಂಟುಮಾಡಿದೆ ಎಂದು ವಿವರಿಸಿದ್ದಾರೆ.
ಇತ್ತೀಚೆಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೊಂದು ದೊಡ್ಡ ಹೊಡೆತವಾಗಿ ತನ್ನ ಬದ್ಧ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 103 ರನ್‌ಗಳ ಹೀನಾಯ ಸೋಲು ಎದುರಾಯಿತು. ಈ ಸೋಲು ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳಲ್ಲಿನ ದುರ್ಬಲತೆಯನ್ನು ಬಹಿರಂಗಪಡಿಸಿದೆ.
ಮುಂಬೈ ಇಂಡಿಯನ್ಸ್ ತಂಡಕ್ಕೆ ಹೊಸ ನಾಯಕನ ಮುನ್ಸೂಚನೆ!
ಪವರ್‌ಪ್ಲೇನಲ್ಲಿ ಕಡಿಮೆ ರನ್‌ಗಳನ್ನು ಕಲೆಹಾಕಿರುವುದು, ಮಧ್ಯಕ್ರಮದ ಬ್ಯಾಟಿಂಗ್ ವೈಫಲ್ಯ ಮತ್ತು ಪ್ರಮುಖ ವಿಕೆಟ್ ಟೇಕರ್ ಜಸ್‌ಪ್ರೀತ್ ಬುಮ್ರಾ (Jasprit Bumrah) ಅವರ ಆರಂಭಿಕ ಕಳಪೆ ಲಯ ತಂಡದ ಸಂಕಷ್ಟವನ್ನು ಹೆಚ್ಚಿಸಿತು. ಗಾಯಗೊಂಡ ಮಿಚೆಲ್ ಸ್ಯಾಂಟ್ನರ್ ಬದಲಿಗೆ ಈಗ ಕೇಶವ್ ಮಹಾರಾಜ್ ಅವರನ್ನು ತಂಡಕ್ಕೆ ಸೇರಿಸಬೇಕಾದ ಪರಿಸ್ಥಿತಿ ಕೂಡ ಎದುರಾಗಿದೆ.
ಒಟ್ಟಾರೆ, ಮುಂಬೈ ಇಂಡಿಯನ್ಸ್ ತಂಡಕ್ಕೆ ಈ ಸೀಸನ್ ಬಹಳಾ ಸವಾಲಿನಿಂದ ಕೂಡಿದ್ದು, ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೆ ಪ್ಲೇಆಫ್ ಕನಸು ಜೀವಂತವಾಗಿ ಉಳಿಯಬಹುದು. ಸದ್ಯಕ್ಕೆ ಪೊಂಜಾಬ್, ಬೆಂಗಳೂರು, ರಾಜಸ್ಥಾನ್ ಮತ್ತು ಹೈದರಾಬಾದ್ ತಂಡಗಳು ಪ್ಲೇ-ಆಫ್ಸ್ ತಲುಪುವ ಫೇವರಿಟ್ ತಂಡಗಳಾಗಿ ಮುನ್ನಡೆಯುತ್ತಿವೆ.