ICC ODI Ranking: ವಾರ್ಷಿಕ ನವೀಕರಣದ ಬಳಿಕ ಅಗ್ರ ಸ್ಥಾನವನ್ನು ಉಳಿಸಿಕೊಂಡ ಭಾರತ ತಂಡ!
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ವಾರ್ಷಿಕ ಒಡಿಐ ತಂಡಗಳ ಶ್ರೇಯಾಂಕವನ್ನು ನವೀಕರಣಗೊಳಿಸಿದ ಬಳಿಕವೂ ಶುಭಮನ್ ಗಿಲ್ ನಾಯಕತ್ವದ ಭಾರತ ತಂಡ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಭಾರತ ತಂಡ 118 ಅಂಕಗಳನ್ನು ಹೊಂದಿದ್ದರೆ, ಐದು ಅಂಕಗಳನ್ನು ಕಡಿಮೆ ಹೊಂದಿರುವ ನ್ಯೂಜಿಲೆಂಡ್ ತಂಡ ಎರಡನೇ ಸ್ಥಾನದಲ್ಲಿದೆ.
ಐಸಿಸಿ ಒಡಿಐ ಶ್ರೇಯಾಂಕದಲ್ಲಿ ಭಾರತ ತಂಡಕ್ಕೆ ಅಗ್ರ ಸ್ಥಾನ. -
ದುಬೈ: ವಾರ್ಷಿಕ ನವೀಕರಣದ ನಂತರ ಭಾರತ ತಂಡ, ಐಸಿಸಿ ಪುರುಷರ ಏಕದಿನ ತಂಡಗಳ ಶ್ರೇಯಾಂಕದಲ್ಲಿ(ICC ODI Ranking) ತನ್ನ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ. ಇದರ ನಡುವೆ ಹಾಲಿ ಏಕದಿನ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ. ಭಾರತ ಒಂದು ರೇಟಿಂಗ್ ಪಾಯಿಂಟ್ ಕಳೆದುಕೊಂಡಿದ್ದರೂ ಇದೀಗ ತನ್ನ ಖಾತೆಯಲ್ಲಿ 118 ಅಂಕಗಳಿವೆ. ವಾರ್ಷಿಕ ಶ್ರೇಯಾಂಕ ನವೀಕರಣದಲ್ಲಿ 2025ರ ಮೇನಿಂದ ಆಡಲಾದ ಪಂದ್ಯಗಳಿಗೆ ಪೂರ್ಣ ಮೌಲ್ಯವನ್ನು (ಶೇಕಡಾ 100) ನೀಡಲಾಗುತ್ತದೆ, ಆದರೆ ಹಿಂದಿನ ಎರಡು ವರ್ಷಗಳ ಫಲಿತಾಂಶಗಳಿಗೆ ಅರ್ಧ ಮೌಲ್ಯವನ್ನು (ಶೇಕಡಾ 50) ನಿಗದಿಪಡಿಸಲಾಗಿದೆ.
ಭಾರತ ತಂಡದ ನಂತರ, ನ್ಯೂಜಿಲೆಂಡ್ ತಂಡ 113 ಅಂಕಗಳೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಹೀಗೆ ಹೇಳಲಾಗಿದೆ: "ಇತ್ತೀಚಿನ ವಾರ್ಷಿಕ ನವೀಕರಣದ ನಂತರ ಭಾರತ ಐಸಿಸಿ ಪುರುಷರ ಏಕದಿನ ತಂಡ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದೆ. ಅವರು ಎರಡನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ (113 ಅಂಕಗಳು) ಗಿಂತ ಕೇವಲ ಐದು ಅಂಕಗಳ ಮುನ್ನಡೆಯನ್ನು ಹೊಂದಿದ್ದಾರೆ, ಆದರೆ ಆಸ್ಟ್ರೇಲಿಯಾ (109 ಅಂಕಗಳು) ತನ್ನ ಮೂರನೇ ಸ್ಥಾನವನ್ನು ಉಳಿಸಿಕೊಂಡಿದೆ. ಅಗ್ರ ಮೂರು ತಂಡಗಳ ರೌಂಡ್ ಅಪ್ ಇದಾಗಿದೆ," ಎಂದು ತಿಳಿಸಿದೆ.
ʻಕೃಣಾಲ್ ಪಾಂಡ್ಯ ಸಾಯಲಿ ಬಿಡಿʼ ಎಂದಿದ್ದ ಎಸ್ ಬದ್ರಿನಾಥ್ ಕಾಮೆಂಟರಿ ಪ್ಯಾನೆಲ್‌ನಿಂದ ವಜಾ?
ನ್ಯೂಜಿಲೆಂಡ್ ವಿರುದ್ಧದ ಕೊನೆಯ ಏಕದಿನ ಸರಣಿಯಲ್ಲಿ ಭಾರತ ತಂಡ ಸೋಲು ಅನುಭವಿಸಿತ್ತು. ಜನವರಿಯಲ್ಲಿ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಗೆದ್ದರೂ, ಭಾರತ ಅಂತಿಮ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸುವ ಮೂಲಕ ಸರಣಿಯನ್ನು 2-1 ಅಂತರದಿಂದ ಕಳೆದುಕೊಂಡಿತ್ತು.
India's dominant run in ODIs reflects in the ICC Annual Men's Team Rankings update 🙌
— ICC (@ICC) May 11, 2026
More ➡️ https://t.co/2xMlGGRUcN pic.twitter.com/f90zyoU3PJ
ಐದನೇ ಸ್ಥಾನಕ್ಕೆ ಕುಸಿದ ಪಾಕಿಸ್ತಾನ
ಇತ್ತೀಚಿನ ಐಸಿಸಿ ಶ್ರೇಯಾಂಕ ನವೀಕರಣದ ನಂತರ, ಪಾಕಿಸ್ತಾನ ಒಂದು ಸ್ಥಾನ ಕುಸಿದಿದೆ. ಅವರು ನಾಲ್ಕನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಇಳಿದಿದ್ದಾರೆ. ಇದರ ನಡುವೆ 102 ಅಂಕಗಳೊಂದಿಗೆ ದಕ್ಷಿಣ ಆಫ್ರಿಕಾ ತಂಡವು ಪಾಕಿಸ್ತಾನವನ್ನು (98) ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ಏರಿದೆ. ಇದು ಟಾಪ್ 10 ಶ್ರೇಯಾಂಕಗಳಲ್ಲಿ ಏಕೈಕ ಬದಲಾವಣೆಯಾಗಿದೆ.
ಶ್ರೀಲಂಕಾ (96), ಅಫ್ಘಾನಿಸ್ತಾನ (93), ಮತ್ತು ಇಂಗ್ಲೆಂಡ್ (89) ಅಗ್ರ ಎಂಟರಲ್ಲಿ ಸ್ಥಾನ ಪಡೆದ ಇತರ ತಂಡಗಳು. ಬಾಂಗ್ಲಾದೇಶ 84 ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ, ಆದರೆ ವೆಸ್ಟ್ ಇಂಡೀಸ್ ಪ್ರಸ್ತುತ 74 ಅಂಕಗಳನ್ನು ಹೊಂದಿದೆ. ಹಿಂದಿನ ನವೀಕರಣದಲ್ಲಿ ವೆಸ್ಟ್ ಇಂಡೀಸ್ ಬಾಂಗ್ಲಾದೇಶಕ್ಕಿಂತ ಆರು ಅಂಕಗಳಿಂದ ಹಿಂದುಳಿದಿದೆ, ಆದರೆ ಆ ಅಂತರವು ಈಗ 10 ಅಂಕಗಳಿಗೆ ಏರಿದೆ.