ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WPL 2026: ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯಗಳ ಟಿಕೆಟ್‌ ಖರೀದಿಸುವುದು ಹೇಗೆ?

WPL 2026 Tickets: ಬಹುನಿರೀಕ್ಷಿತ 2026ರ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಜನವರಿ 9 ರಿಂದ ಫೆಬ್ರವರಿ 5ರವರೆಗೆ ನವ ಮುಂಬೈ ಹಾಗೂ ವಡೋದರದಲ್ಲಿ ಪಂದ್ಯಗಳು ನಡೆಯಲಿವೆ. ಈ ಟೂರ್ನಿಯ ಪಂದ್ಯಗಳಿಗೆ ಟಿಕೆಟ್‌ಗಳನ್ನು ಡಿಸೆಂಬರ್‌ 26 ರಿಂದ ಆನ್‌ಲೈನ್‌ನಲ್ಲಿ ಪಡೆಯಬಹುದಾಗಿದೆ.

ಮಹಿಳಾ ಪ್ರೀಮಿಯರ್‌ ಲೀಗ್‌ ಪಂದ್ಯಗಳ ಟಿಕೆಟ್‌ ಖರೀದಿಸುವುದು ಹೇಗೆ?

2026ರ ಮಹಿಳಾ ಪ್ರೀಮಿಯರ್‌ ಲೀಗ್‌ ಪಂದ್ಯಗಳ ಆನ್‌ಲೈನ್‌ ಟಿಕೆಟ್‌. -

Profile
Ramesh Kote Dec 25, 2025 10:41 PM

ನವದೆಹಲಿ: ಬಹುನಿರೀಕ್ಷಿತ 2026ರ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯ (WPL 2026) ಪಂದ್ಯಗಳ ಟಿಕೆಟ್‌ಗಳು ಡಿಸೆಂಬರ್‌ 16 ರಿಂದ ಆನ್‌ಲೈನ್‌ನಲ್ಲಿ ಖರೀದಿಸಬಹುದಾಗಿದೆ. ಜನವರಿ 9 ರಿಂದ ಫೆಬ್ರವರಿ 5ರವರೆಗೆ ಈ ಟೂರ್ನಿಯು ಮುಂಬೈ ಹಾಗೂ ವಡೋದರಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರದಿಂದಲೇ ಅಭಿಮಾನಿಗಳು ಪಂದ್ಯಗಳ ಟಿಕೆಟ್‌ಗಳನ್ನು ಖರೀದಿಸಬಹುದಾಗಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)) ನಾಲ್ಕನೇ ಆವೃತ್ತಿಯ ಟೂರ್ನಿಗೆ ಜಿಲ್ಲೆಯನ್ನು ಅಧಿಕೃತ ಟಿಕೆಟ್ ಪಾಲುದಾರರನ್ನಾಗಿ ಆಯ್ಕೆ ಮಾಡಿದೆ.

ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯಗಳನ್ನು ಕೇವಲ ಎರಡು ಸ್ಥಳಗಳಲ್ಲಿ ಮಾತ್ರ ಆಯೋಜಿಸಲಾಗುತ್ತಿದೆ. ಮೊದಲನೇಯದಾಗಿ ನವ ಮುಂಬೈನ ಡಾ ಡಿವೈ ಪಾಟೀಲ್‌ ಸ್ಪೋರ್ಟ್ಸ್‌ ಅಕಾಡೆಮಿ ಕ್ರೀಡಾಂಗಣ ಹಾಗೂ ಎರಡನೇಯದಾಗಿ ವಡೋದರದ ಬಿಸಿಎ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. 2026ರ ಜನವರಿ 9 ರಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಹಾಲಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ವಿರುದ್ದ ಟೂರ್ನಿಯ ಮೊದಲನೇ ಪಂದ್ಯವನ್ನು ಆಡಲಿದೆ. ಜನವರಿ 9 ರಿಂದ 17ರವರೆಗೆ ಮೊದಲ ಹಂತದ ಪಂದ್ಯಗಳು ನಡೆಯಲಿವೆ.

IPL 2026 Auction: ಡಬಲ್‌ ಸೆಂಚುರಿ ಬಾರಿಸಿ ಸಿಎಸ್‌ಕೆಗೆ ತಿರುಗೇಟು ನೀಡಿದ ಡೆವೋನ್‌ ಕಾನ್ವೆ!

ಮೊದಲ ಹಂತದ ಪಂದ್ಯಗಳು ನವ ಮುಂಬೈನಲ್ಲಿ ಮುಗಿದ ಬಳಿಕ ಎರಡನೇ ಹಂತದ ಪಂದ್ಯಗಳು ವಡೋದರದ ಬಿಸಿಎ ಕ್ರೀಡಾಂಗಣದಲ್ಲಿ ನಡೆಯಲಿವೆ. ಪ್ಲೇಆಫ್ಸ್‌ ಪಂದ್ಯಗಳು ಸೇರಿದಂತೆ ಇನ್ನುಳಿದ 11 ಪಂದ್ಯಗಳು ಈ ಅಂಗಣದಲ್ಲಿ ಜರುಗಲಿವೆ. ನಾಲ್ಕನೇ ಆವೃತ್ತಿಯ ಪ್ರಶಸ್ತಿಗಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಮುಂಬೈ, ಡೆಲ್ಲಿ ಕ್ಯಾಪಿಟಲ್ಸ್‌, ಯುಪಿ ವಾರಿಯರ್ಸ್ ಹಾಗೂ ಗುಜರಾತ್‌ ಜಯಂಟ್ಸ್‌ ತಂಡಗಳು ಕಾದಾಟ ನಡೆಸಲಿವೆ.

ಕಳೆದ ತಿಂಗಳು ನವದೆಹಲಿಯಲ್ಲಿ ನಡೆದಿದ್ದ ಆಟಗಾರ್ತಿಯರ ಹರಾಜು ಸಾಕಷ್ಟು ಉತ್ಸಾಹವನ್ನು ಸೃಷ್ಟಿಸಿತ್ತು. ಒಟ್ಟು 277 ಆಟಗಾರ್ತಿಯರು ಭಾಗವಹಿಸಿದ್ದರು. ಇದರಲ್ಲಿ ಭಾರತದ 194 ಮತ್ತು ವಿದೇಶದಿಂದ 83 ಆಟಗಾರ್ತಿಯರು 73 ಸ್ಥಾನಗಳಿಗೆ ಪೈಪೋಟಿ ನಡೆಸಿದ್ದರು. ಇದು ಕೆಲವು ತೀವ್ರ ಬಿಡ್ಡಿಂಗ್‌ಗೆ ಕಾರಣವಾಯಿತು. ಭಾರತದ ಆಲ್‌ರೌಂಡರ್ ದೀಪ್ತಿ ಶರ್ಮಾ ಹರಾಜಿನ ಅತ್ಯಂತ ದುಬಾರಿ ಆಟಗಾರ್ತಿ ಎನಿಸಿಕೊಂಡರು. ಯುಪಿ ವಾರಿಯರ್ಸ್‌ ಅವರನ್ನು 3.2 ಕೋಟಿ ರು.ಗೆ ಖರೀದಿಸಿತು. ಇದರ ನಡುವೆ ಆಸ್ಟ್ರೇಲಿಯಾದ ತಾರೆ ಅಲೀಸಾ ಹೀಲಿ ಅನ್‌ಸೋಲ್ಡ್‌ ಆಗುವ ಮೂಲಕ ಬೇಸರ ಮೂಡಿಸಿದ್ದರು.



2026ರ ಮಹಿಳಾ ಪ್ರೀಮಿಯರ್‌ ಲೀಗ್‌ ಟಿಕೆಟ್‌ ಪಡೆಯುವುದು ಹೇಗೆ?

2026ರ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯಗಳ ಟಿಕೆಟ್‌ಗಳನ್ನು ಅಧಿಕೃತ ಡಬ್ಲ್ಯುಪಿಎಲ್‌ ವೆಬ್‌ಸೈಟ್‌ನಲ್ಲಿ ಪಡೆಯಬಹುದು. https://www.wplt20.com/ ಹಾಗೂ ಝೋಮಾಟೋ ವೆಬ್‌ಸೈಟ್‌ನ ಜಿಲ್ಲಾ ವೆಬ್‌ಸೈಟ್‌ ಆದ https://link.district.in/DSTRKT/TATAWPL2026 ಇದರಲ್ಲಿ ಪಡೆಯಬಹುದು.

2026ರ ಡಬ್ಲ್ಯುಪಿಎಲ್‌ ಪಂದ್ಯಗಳ ಟಿಕೆಟ್‌ ಮಾರಾಟ ಆರಂಭ ಯಾವಾಗ?

ನಾಲ್ಕನೇ ಆವೃತ್ತಿಯ ಟೂರ್ನಿಯ ಪಂದ್ಯಗಳ ಟಿಕೆಟ್‌ ಮಾರಾಟ ಡಿಸೆಂಬರ್‌ 26 ರಂದು ಸಂಜೆ 06:00 ಗಂಟೆಗೆ ಆರಂಭವಾಗಲಿದೆ.