IPL 2026: 34 ಪಂದ್ಯಗಳು ಮುಕ್ತಾಯ; ತಂಡಗಳ ಪ್ಲೇ ಆಪ್ ಲೆಕ್ಕಾಚಾರ ಹೇಗಿದೆ?
IPL 2026 Playoffs Qualification Scenarios: 10 ತಂಡಗಳ ಸ್ವರೂಪದಲ್ಲಿ (ತಲಾ 14 ಲೀಗ್ ಪಂದ್ಯಗಳು) ಪ್ಲೇಆಫ್‌ಗೆ ಆರಾಮವಾಗಿ ಅರ್ಹತೆ ಪಡೆಯಲು, ಒಂದು ತಂಡಕ್ಕೆ ಸಾಮಾನ್ಯವಾಗಿ 16 ಅಂಕಗಳು (8 ಗೆಲುವುಗಳು) ಬೇಕಾಗುತ್ತವೆ. 14 ಅಂಕಗಳನ್ನು ಹೊಂದಿರುವ ತಂಡಗಳು ಹೆಚ್ಚಿನ ರನ್ ರೇಟ್ (NRR) ಆಧಾರದಲ್ಲಿ ಅವಲಂಬಿಸಿರುತ್ತವೆ.
Royal Challengers Bengaluru -
ಬೆಂಗಳೂರು, ಎ.25: ಇಂಡಿಯನ್ ಪ್ರೀಮಿಯರ್ ಲೀಗ್(IPL 2026)ನ ಪ್ರಸ್ತುತ ಆವೃತ್ತಿಯಲ್ಲಿ 34 ಪಂದ್ಯಗಳು ಪೂರ್ಣಗೊಂಡಿದೆ. ಪಂದ್ಯಾವಳಿ ಸಾಗುತ್ತಿರುವಂತೆ ಅಗ್ರ ನಾಲ್ಕು(IPL 2026 Playoffs Qualification Scenarios) ಸ್ಥಾನಗಳಿಗಾಗಿ ಸ್ಪರ್ಧೆಯು ತೀವ್ರಗೊಳ್ಳುತ್ತಿದೆ. ಪಂಜಾಬ್ ಕಿಂಗ್ಸ್ ಮಾತ್ರ ಅಜೇಯ ತಂಡವಾಗಿ ಉಳಿದಿದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಆದರೆ ಮಾಜಿ ಚಾಂಪಿಯನ್‌ಗಳಾದ ಮುಂಬೈ ಮತ್ತು ಕೆಕೆಆರ್ ತಂಡಗಳು ಅಂಕಪಟ್ಟಿಯ ಕೆಳಭಾಗದಲ್ಲಿ ಕಾಣಿಸಿಕೊಂಡಿದೆ.
10 ತಂಡಗಳ ಸ್ವರೂಪದಲ್ಲಿ (ತಲಾ 14 ಲೀಗ್ ಪಂದ್ಯಗಳು) ಪ್ಲೇಆಫ್‌ಗೆ ಆರಾಮವಾಗಿ ಅರ್ಹತೆ ಪಡೆಯಲು, ಒಂದು ತಂಡಕ್ಕೆ ಸಾಮಾನ್ಯವಾಗಿ 16 ಅಂಕಗಳು (8 ಗೆಲುವುಗಳು) ಬೇಕಾಗುತ್ತವೆ. 14 ಅಂಕಗಳನ್ನು ಹೊಂದಿರುವ ತಂಡಗಳು ಹೆಚ್ಚಿನ ರನ್ ರೇಟ್ (NRR) ಆಧಾರದಲ್ಲಿ ಅವಲಂಬಿಸಿರುತ್ತವೆ. ಯಾವ ತಂಡಕ್ಕೆ ಪ್ಲೇ ಆಫ್ ಪ್ರವೇಶಿಸಲು ಎಷ್ಟು ಗೆಲುವು ಬೇಕೆಂಬ ವರದಿ ಇಲ್ಲಿದೆ.
ಪಂಜಾಬ್ ಕಿಂಗ್ಸ್
ಪಂಜಾಬ್ ತಂಡ ಪ್ಲೇಆಫ್ ಪ್ರವೇಶಿಸಲು ಇನ್ನು ಸ್ವಲ್ಪವೇ ದೂರದಲ್ಲಿದೆ. ಇನ್ನುಳಿದ 8 ಪಂದ್ಯಗಳಲ್ಲಿ ಕನಿಷ್ಠ 3 ಪಂದ್ಯ ಗೆದ್ದರೂ ಪ್ಲೇ ಆಫ್ ಪ್ರವೇಶ ಪಡೆಯಲಿದೆ. ಸದ್ಯದ ಸ್ಥಿತಿ ನೋಡುವಾಗ ಪಂಜಾಬ್ ಅಗ್ರ ಎರಡು ಸ್ಥಾನಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಾಣಿಸುತ್ತಿದೆ. ಪ್ರಸ್ತುತ 11 ಅಂಕಗಳು (5 ಗೆಲುವುಗಳು, 0 ಸೋಲುಗಳು) ಸಂಪಾದಿಸಿದೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಪ್ರಸ್ತುತ ಅಂಕಗಳು: 8 ಅಂಕಗಳು (5 ಗೆಲುವುಗಳು, 2 ಸೋಲುಗಳು) | ಆಡಿದ 7 ಪಂದ್ಯಗಳು
ಹಾಲಿ ಚಾಂಪಿಯನ್ ಆರ್‌ಸಿಬಿ ಕೂಡ ಪ್ಲೇ ಆಪ್ ಸನಿಹದಲ್ಲಿದೆ. 16 ಅಂಕಗಳನ್ನು ತಲುಪಲು ಅವರಿಗೆ ಉಳಿದ 7 ಪಂದ್ಯಗಳಲ್ಲಿ 3 ಗೆಲುವುಗಳು ಬೇಕಾಗುತ್ತವೆ.
ರಾಜಸ್ಥಾನ ರಾಯಲ್ಸ್
ಇತ್ತೀಚಿನ ಎರಡು ಸೋಲುಗಳ ಹೊರತಾಗಿಯೂ, ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇ ಆಫ್ ರೇಸ್‌ನಲ್ಲಿ ಸದ್ಯಕ್ಕೆ ಸುರಕ್ಷಿತವಾಗಿದೆ. ಆರ್‌ಸಿಬಿಯಂತೆ ಅವರಿಗೆ 7 ಪಂದ್ಯಗಳಲ್ಲಿ 3 ಗೆಲುವುಗಳು ಬೇಕಾಗಿವೆ. ಶನಿವಾರ ನಡೆಯುವ ಪಂದ್ಯದಲ್ಲಿ ಗೆದ್ದರೆ ಮತ್ತಷ್ಟು ಸನಿಹಕ್ಕೆ ಬರಲಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್
ಪ್ರಸ್ತುತ ಅಂಕಗಳು: 8 ಅಂಕಗಳು (4 ಗೆಲುವುಗಳು, 3 ಸೋಲುಗಳು) | ಆಡಿದ 7 ಪಂದ್ಯಗಳು
ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಇನ್ನು 7 ಪಂದ್ಯಗಳು ಬಾಕಿ ಇವೆ. 16 ಅಂಕಗಳನ್ನು ತಲುಪಲು ಅವರಿಗೆ 4 ಗೆಲುವುಗಳು ಬೇಕಾಗಿವೆ. ಜತೆಗೆ ರನ್‌ರೇಟ್ ಕೂಡ ಬೇಕಿದೆ.
RCB vs GT: ಕೊಹ್ಲಿಯ ಕ್ಯಾಚ್ ಬಿಟ್ಟಿದ್ದು ಸೋಲಿಗೆ ಕಾರಣ ಎಂದ ನಾಯಕ ಶುಭಮನ್ ಗಿಲ್
ಡೆಲ್ಲಿ ಕ್ಯಾಪಿಟಲ್ಸ್
ಪ್ರಸ್ತುತ ಅಂಕಗಳು: 6 ಅಂಕಗಳು (3 ಗೆಲುವುಗಳು, 3 ಸೋಲುಗಳು) | ಆಡಿದ 6 ಪಂದ್ಯಗಳು
ಹೈದರಾಬಾದ್ ವಿರುದ್ಧದ ಸೋಲು ಡೆಲ್ಲಿ ಕ್ಯಾಪಿಟಲ್ಸ್‌ಗೆ ಒಂದು ಹಿನ್ನಡೆಯಾಗಿತ್ತು. ತಂಡಕ್ಕೆ ಇನ್ನು 8 ಪಂದ್ಯಗಳು ಬಾಕಿ ಇದ್ದು, ಈ ಪೈಕಿ 5 ಗೆಲುವುಗಳು ಬೇಕಾಗಿವೆ. ಶನಿವಾರದ ಪಂದ್ಯದಲ್ಲಿ ಸೋತರೆ ತಂಡದ ಹಾದಿ ಮತ್ತಷ್ಟು ಕಠಿಣವಾಗಲಿದೆ.
ಚೆನ್ನೈ ಸೂಪರ್ ಕಿಂಗ್ಸ್
ಐದು ಬಾರಿಯ ಚಾಂಪಿಯನ್ ಚೆನ್ನೈ ತಂಡ ಬಾರಿ ಮಿಶ್ರ ಫಲಿತಾಂಶ ಕಂಡಿದೆ. ಆಡಿದ 7 ಪಂದ್ಯಗಳ ಪೈಕಿ 3 ಗೆಲುವಿನೊಂದಿಗೆ 6 ಅಂಕ ಕಲೆಹಾಕಿದೆ. ಪ್ಲೇ ಆಫ್ ಪ್ರವೇಶಿಸಬೇಕಿದ್ದರೆ ಇನ್ನುಳಿದ 7 ಪಂದ್ಯಗಳಲ್ಲಿ 5 ಗೆಲುವುಗಳು ಬೇಕಾಗಿವೆ. ಆಯುಷ್ ಮ್ಹಾತ್ರೆ ಹೊರಗುಳಿದಿರುವುದರಿಂದ ಮತ್ತು MS ಧೋನಿ ಇನ್ನೂ ಪೂರ್ಣ ಫಿಟ್ನೆಸ್ ಕಡೆಗೆ ಶ್ರಮಿಸುತ್ತಿರುವುದರಿಂದ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.
IPL 2026: ಎರಡನೇ ತವರು ರಾಯ್ಪುರದಲ್ಲಿ ಆರ್‌ಸಿಬಿ ಪಂದ್ಯವಾಡಲು ಕಾರಣವೇನು?
ಗುಜರಾತ್ ಟೈಟಾನ್ಸ್
ಗುಜರಾತ್ ತಂಡವು 7 ಪಂದ್ಯಗಳಲ್ಲಿ ಕೇವಲ 3 ಪಂದ್ಯ ಮಾತ್ರ ಗೆದ್ದಿದೆ. ಇನ್ನುಳಿ 7 ಪಂದ್ಯಗಳಲ್ಲಿ 5 ಗೆಲುವು ಅತ್ಯಗತ್ಯ. ಅವರ ಮುಂಬರುವ ಎಲ್ಲ ಪಂದ್ಯಗಳು ನಿರ್ಣಾಯಕವಾಗಿದೆ.
ಮುಂಬೈ ಇಂಡಿಯನ್ಸ್
ಕಳಪೆ ಬ್ಯಾಟಿಂಗ್ ಮತ್ತು ಬೌಲಿಂಗ್‌ನಿಂದ ಆಡಿದ 7 ಪಂದ್ಯಗಳಲ್ಲಿ ಕೇವಲ 2 ಪಂದ್ಯ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡದ ಪ್ಲೇ ಆಫ್ ಹಾದಿ ತಂತಿಯ ಮೇಲಿನ ನಡಿಗೆಯಂತಿದೆ. ಇನ್ನುಳಿದ 7 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆಲ್ಲಲೇ ಬೇಕು. 5 ಪಂದ್ಯ ಗೆದ್ದರೂ ರನ್ ರೇಟ್ ತೀರಾ ಕಳಪೆಯಾಗಿರುವ ಕಾರಣ ಇತರ ತಂಡದ ಫಲಿತಾಂಶವನ್ನು ಪರಿಗಣಿಸಬೇಕಿದೆ.
ಲಖನೌ ಸೂಪರ್ ಜೈಂಟ್ಸ್
ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ಲಖನೌ ಸೂಪರ್ ಜೈಂಟ್ಸ್ ತಂಡದ ಪ್ಲೇ ಆಪ್ ಹಾದಿ ಹಲವು ಲೆಕ್ಕಾಚಾರದಿಂದ ಕೂಡಿದೆ. ಇನ್ನುಳಿದ 7 ಪಂದ್ಯಗಳ ಪೈಕಿ 6 ಪಂದ್ಯಗಳಲ್ಲಿ ದೊಡ್ಡ ಅಂತರದ ಗೆಲುವು ಬೇಕಿದೆ.
IPL 2026: 'ಇಲ್ಲಿ ಆಡುವುದೇ ಒಂದು ವಿಶೇಷ'; ಚಿನ್ನಸ್ವಾಮಿ ಕ್ರೀಡಾಂಗಣದ ಬಗ್ಗೆ ಕೊಹ್ಲಿ ಮನದಾಳದ ಮಾತು
ಕೋಲ್ಕತಾ ನೈಟ್ ರೈಡರ್ಸ್
ಮೂರು ಬಾರಿಯ ಚಾಂಪಿಯನ್ ಕೆಕೆಆರ್ ತಂಡ ತನ್ನ ಖ್ಯಾತಿಗೆ ತಕ್ಕ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ಆಡಿದ 7 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಮಾತ್ರ ಗೆದ್ದಿದೆ. ಇನ್ನುಳಿದ 7 ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದರೂ ಪ್ಲೇ ಆಫ್ ಪ್ರವೇಶ ಪಡೆಯುವುದು ಕಷ್ಟ. ಪವಾಡವೊಂದು ಸಂಭವಿಸಿದರಷ್ಟೇ ತಂಡಕ್ಕೆ ಅವಕಾಶ ಸಿಗಲಿದೆ. ಒಂದು ಪಂದ್ಯ ಸೋತರೂ ತಂಡ ಪ್ಲೇ ಆಫ್‌ನಿಂದ ಬಹುತೇಕ ಹೊರಬೀಳಲಿದೆ.