ವೈಯಕ್ತಿಕ ಕಾರಣ ನೀಡಿ ಐಪಿಎಲ್‌ನಿಂದ ಹಿಂದೆ ಸರಿದ ಆರ್‌ಸಿಬಿ ವೇಗಿ ಯಶ್ ದಯಾಳ್
IPL 2026: ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿರುವ ಯಶ್ ದಯಾಳ್ ತಂಡದ ಶಿಬಿರವನ್ನು ಕೂಡಿಕೊಳ್ಳದಾಗಲೇ ಅವರ ಅಭ್ಯತೆ ಬಗ್ಗೆ ಅನುಮಾನಗಳಿದ್ದವು. ಕೆಲವು ತಿಂಗಳ ಹಿಂದೆ ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಅವರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಲಾಯಿತು.
Yash Dayal -
ಬೆಂಗಳೂರು, ಮಾ.24: 19ನೇ ಆವೃತ್ತಿಯ ಐಪಿಎಲ್(IPL 2026) ಆರಂಭಕ್ಕೂ ಮುನ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಭಾರಿ ಹೊಡೆತ ಬಿದ್ದಿದೆ. ತಂಡದ ವೇಗಿ ಯಶ್ ದಯಾಳ್(Yash Dayal) ವೈಯಕ್ತಿಕ ಕಾರಣಗಳನ್ನು ನೀಡಿ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಇದನ್ನು ಫ್ರಾಂಚೈಸಿ ಕೂಡ ದೃಢಪಡಿಸಿದೆ.
ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿರುವ ಯಶ್ ದಯಾಳ್ ತಂಡದ ಶಿಬಿರವನ್ನು ಕೂಡಿಕೊಳ್ಳದಾಗಲೇ ಅವರ ಅಭ್ಯತೆ ಬಗ್ಗೆ ಅನುಮಾನಗಳಿದ್ದವು. ಕೆಲವು ತಿಂಗಳ ಹಿಂದೆ ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಅವರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಲಾಯಿತು.
ಐಪಿಎಲ್ 2026 ರ ಋತುವಿನಲ್ಲಿ ದಯಾಳ್ ಅವರ ಅನುಪಸ್ಥಿತಿಯನ್ನು ಆರ್‌ಸಿಬಿ ತಂಡದ ನಿರ್ದೇಶಕ ಮೊ ಬೊಬಟ್ ದೃಢಪಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ದಯಾಳ್ ಕೆಲವು ವೈಯಕ್ತಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಅವರು ಒಪ್ಪಂದದಲ್ಲಿ ಉಳಿದಿದ್ದರೂ, ಈ ಋತುವಿನಲ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದರು.
ದಯಾಳ್ ಅವರ ಸುತ್ತ ವಿವಾದಗಳು ಜುಲೈ 2025 ರಲ್ಲಿ ಪ್ರಾರಂಭವಾದವು, ಮದುವೆಯ ನೆಪದಲ್ಲಿ ಮಹಿಳೆಯನ್ನು ಶೋಷಿಸಿದ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ನಂತರ ಜೈಪುರದಲ್ಲಿ ಪೋಸ್ಕೋ ಕಾಯ್ದೆಯಡಿಯಲ್ಲಿ ಅವರ ವಿರುದ್ಧ ಹೊಸ ಪ್ರಕರಣ ಹೊರಬಿತ್ತು.
ಈ ಬಾರಿಯ ಐಪಿಎಲ್‌ಗೆ ಮುಂಚಿತವಾಗಿ, ಯಶ್ ದಯಾಳ್ ತಮ್ಮ ದೀರ್ಘಕಾಲದ ಗೆಳತಿ ಶ್ವೇತಾ ಪುಂಡೀರ್ ಅವರನ್ನು ವಿವಾಹವಾದರು. ಈ ಜೋಡಿ ಫೆಬ್ರವರಿ 4 ರಂದು ನೋಯ್ಡಾದಲ್ಲಿ ವಿವಾಹವಾದರು.
ಚಿನ್ನಸ್ವಾಮಿ ಕ್ರೀಡಾಂಗಣ ಪರಿಶೀಲನೆ ನಡೆಸಿದ ಬೆಂಗಳೂರು ಪೊಲೀಸರು
ಹಾಲಿ ಚಾಂಪಿಯನ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶನಿವಾರ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಉದ್ಘಾಟನಾ ಪಂದ್ಯದೊಂದಿಗೆ ತನ್ನ ಅಭಿಯಾನ ಆರಂಭಿಸಲಿದೆ. ಕಾಲ್ತುಳಿತ ದುರಂತದ ಬಳಿಕ ಚಿನ್ನಸ್ವಾಮಿಯ ಪಂದ್ಯಗಳು ಪುಣೆ, ಇಂದೋರ್ಗೆ ಸ್ಥಳಾಂತರವಾಗುವ ಸಾಧ್ಯತೆ ಸೃಷ್ಟಿಯಾಗಿದ್ದರೂ, ಕೆಎಸ್ಸಿಎ ಹೊಸ ಆಡಳಿತ ಮಂಡಳಿಯ ಪರಿಶ್ರಮದಿಂದಾಗಿ ರಾಜ್ಯದ ಕ್ರಿಕೆಟ್ ಪ್ರೇಮಿಗಳಿಗೆ ಆರ್‌ಸಿಬಿ ಪಂದ್ಯಗಳನ್ನು ಆನಂದಿಸುವ ಅವಕಾಶ ಲಭಿಸಿದೆ.
ಆರ್‌ಸಿಬಿ ಪರಿಷ್ಕೃತ ತಂಡ
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ವೆಂಕಟೇಶ್ ಅಯ್ಯರ್, ಜೇಕಬ್ ಬೆಥೆಲ್, ರಜತ್ ಪಾಟೀದಾರ್ (ನಾಯಕ), ಟಿಮ್ ಡೇವಿಡ್, ರೊಮಾರಿಯೊ ಶೆರ್ಡ್, ಜಿತೇಶ್ ಶರ್ಮ (ವಿ.ಕೀ), ಕೃನಾಲ್ ಪಾಂಡ್ಯ, ಭುವನೇಶ್ವರ್, ರಸಿಕ್ ಸಲಾಂ ದಾರ್, ಜೋಶ್ ಹ್ಯಾಸಲ್ವುಡ್, ಜೇಕಬ್ ಡಫಿ, ಸುಯಶ್ ಶರ್ಮ, ಸ್ವಪ್ನಿಲ್ ಸಿಂಗ್, ಮಂಗೇಶ್ ಯಾದವ್, ವಿಹಾನ್ ಮಲ್ಹೋತ್ರಾ, ನುವಾನ್ ತುಷಾರ, ಜೋರ್ಡನ್ ಕಾಕ್ಸ್, ಕನಿಷ್ಕ್ ಚೌಹಾಣ್, ವಿಕಿ ಒಸ್ತ್ವಾಲ್, ಸತ್ವಿಕ್ ದೇಸ್ವಾಲ್, ಅಭಿನಂದನ್ ಸಿಂಗ್.