ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬಂಗಾಳವನ್ನು ಮಣಿಸಿ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್‌ಗೆ ತಲುಪಿದ ಜಮ್ಮು-ಕಾಶ್ಮೀರ

Ranji Trophy Semi Final,: ಬಂಗಾಳ ಪರ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್‌ ಮತ್ತು ದ್ವಿತೀಯ ಇನಿಂಗ್ಸ್‌ನಲ್ಲಿ ಒಂದು ವಿಕೆಟ್‌ ಸೇರಿ ಒಟ್ಟು ಒಂಬತ್ತು ವಿಕೆಟ್‌ ಪಡೆದ ಮೊಹಮ್ಮದ್‌ ಶಮಿ ಅವರ ಈ ಬೌಲಿಂಗ್‌ ಪ್ರದರ್ಶನ ವ್ಯರ್ಥವಾಯಿತು. ಆದರೆ ಅವರು ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವ ನಿಟ್ಟಿನಲ್ಲಿ ಅವರಿಗೆ ಈ ಪ್ರದರ್ಶನ ತೃಪ್ತಿ ನೀಡಿತು ಎನ್ನಲಡ್ಡಿಯಿಲ್ಲ.

ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್‌ಗೆ ತಲುಪಿದ ಜಮ್ಮು-ಕಾಶ್ಮೀರ

Jammu & Kashmir reaches Ranji Trophy final -

Abhilash BC
Abhilash BC Feb 18, 2026 1:22 PM

ಕೋಲ್ಕತಾ, ಫೆ.18: ಬುಧವಾರ ಬಂಗಾಳ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಂಗಾಳ ವಿರುದ್ಧ ಪ್ರಬಲ ಗೆಲುವು ಸಾಧಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರ(Jammu and Kashmir vs Bengal) ತನ್ನ ಮೊದಲ ರಣಜಿ ಟ್ರೋಫಿ(Ranji Trophy Semi Final) ಫೈನಲ್ ತಲುಪಿ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

ಪಂದ್ಯದಲ್ಲಿ ಒಂಬತ್ತು ವಿಕೆಟ್‌ಗಳು ಮತ್ತು ಮೊದಲ ಇನ್ನಿಂಗ್ಸ್‌ನಲ್ಲಿ 54 ಎಸೆತಗಳಲ್ಲಿ 42 ರನ್ ಗಳಿಸಿದ ಔಕಿಬ್ ನಬಿ ಅವರ ಆಲ್‌ರೌಂಡ್ ಪ್ರದರ್ಶನದಿಂದ ಜಮ್ಮು ತಂಡ ಎರಡು ಬಾರಿಯ ಚಾಂಪಿಯನ್ ಬಂಗಾಳ ವಿರುದ್ಧ ಆರು ವಿಕೆಟ್‌ಗಳ ಜಯ ಸಾಧಿಸಿತು. ಫೈನಲ್‌ನಲ್ಲಿ ಕರ್ನಾಟಕವನ್ನು ಎದುರಿಸುವ ಸಾಧ್ಯತೆಯಿದೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಉತ್ತರಾಖಂಡ್ ವಿರುದ್ಧ ಕರ್ನಾಟಕ ಮುನ್ನಡೆ ಸಾಧಿಸಿದ್ದು ಗೆಲುವಿನ ಸನಿಹದಲ್ಲಿದ್ದೆ.

ಎರಡನೇ ಇನ್ನಿಂಗ್ಸ್‌ನಲ್ಲಿ ಬಂಗಾಳ ತಂಡವು 99 ರನ್‌ಗಳಿಗೆ ಆಲೌಟ್ ಆಯಿತು. ನಬಿ ಮತ್ತು ಸುನಿಲ್ ಕುಮಾರ್ ತಲಾ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ಜಮ್ಮು ತಂಡಕ್ಕೆ 126 ರನ್‌ಗಳ ಸಾಧಾರಣ ಗುರಿಯನ್ನು ನೀಡಿದರು. ಚೇಸಿಂಗ್‌ ವೇಳೆ ವಂಶಜ್ ಶರ್ಮಾ, ಮುಖೇಶ್ ಕುಮಾರ್ ಬೌಲಿಂಗ್‌ನಲ್ಲಿ ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅವರು 43 ರನ್ ಗಳಿಸಿ ಅಜೇಯರಾಗಿ ಉಳಿದರು, ಅಬ್ದುಲ್ ಸಮದ್ (27 ಎಸೆತಗಳಲ್ಲಿ 30) ಅವರಿಗೆ ಉತ್ತಮ ಬೆಂಬಲ ನೀಡಿದರು.



ಬಂಗಾಳ ಪರ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್‌ ಮತ್ತು ದ್ವಿತೀಯ ಇನಿಂಗ್ಸ್‌ನಲ್ಲಿ ಒಂದು ವಿಕೆಟ್‌ ಸೇರಿ ಒಟ್ಟು ಒಂಬತ್ತು ವಿಕೆಟ್‌ ಪಡೆದ ಮೊಹಮ್ಮದ್‌ ಶಮಿ ಅವರ ಈ ಬೌಲಿಂಗ್‌ ಪ್ರದರ್ಶನ ವ್ಯರ್ಥವಾಯಿತು. ಆದರೆ ಅವರು ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವ ನಿಟ್ಟಿನಲ್ಲಿ ಅವರಿಗೆ ಈ ಪ್ರದರ್ಶನ ತೃಪ್ತಿ ನೀಡಿತು ಎನ್ನಲಡ್ಡಿಯಿಲ್ಲ. ತಂಡದಲ್ಲಿ ಶಮಿ, ಆಕಾಶ್‌ದೀಪ್‌ ಅವರಂತದ ಅನುಭವಿ ಬೌಲರ್‌ಗಳ ಸವಾಲನ್ನು ಜಮ್ಮ ಮತ್ತು ಕಾಶ್ಮೀರ ತಂಡದ ಬ್ಯಾಟರ್‌ಗಳು ಮೆಟ್ಟಿನಿಂತದ್ದು ನಿಜಕ್ಕೂ ಅವರ ಸಾಹಸ ಮೆಚ್ಚಲೇ ಬೇಕು.

ಪತ್ನಿ ಅನುಷ್ಕಾ ಜತೆ ಕೇಲಿ ಕುಂಜ್ ಆಶ್ರಮಕ್ಕೆ ಭೇಟಿ ನೀಡಿದ ಕೊಹ್ಲಿ

ಈ ಋತುವಿನಲ್ಲಿ ಜಮ್ಮು ತಂಡದ ಕನಸಿನ ಓಟಕ್ಕೆ ನಬಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮಧ್ಯಪ್ರದೇಶ ವಿರುದ್ಧದ ಕ್ವಾರ್ಟರ್ ಫೈನಲ್ ಗೆಲುವಿನಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ 40ಕ್ಕೆ 7 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 70ಕ್ಕೆ 5 ಸೇರಿದಂತೆ 110ಕ್ಕೆ 12 ವಿಕೆಟ್‌ಗಳನ್ನು ಗಳಿಸುವ ಮೂಲಕ ಜೆ & ಕೆ ತಂಡ 56 ರನ್‌ಗಳಿಂದ ಜಯಗಳಿಸಿತು.

"ಕಳೆದ ಬಾರಿ ನಾವು ಕ್ವಾರ್ಟರ್‌ನಲ್ಲಿ ಅದನ್ನು ತಪ್ಪಿಸಿಕೊಂಡೆವು ಆದರೆ ನಾವು ಎಲ್ಲಾ ಕಠಿಣ ಪರಿಶ್ರಮ ಮಾಡಿದ್ದೇವೆ ಮತ್ತು ನಾವು ಅದಕ್ಕೆ ಅರ್ಹರು" ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಬಿ ಹೇಳಿದರು.