ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಟಿ20 ವಿಶ್ವಕಪ್ ಸೂಪರ್-8 ಪಂದ್ಯಗಳ ವೇಳಾಪಟ್ಟಿ, ದಿನಾಂಕ, ತಾಣಗಳ ಮಾಹಿತಿ

T20 World Cup Super Eights schedule:ಸೂಪರ್ 8ರ ಹಂತದಲ್ಲಿ ಭಾರತ ತನ್ನ ಮೊದಲನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ. ಈ ಪಂದ್ಯ ಫೆ. 22ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ನಂತರ ಫೆ. 26ರಂದು ಚೆನ್ನೈಯಲ್ಲಿ ಜಿಂಬಾಬ್ವೆ ವಿರುದ್ಧ ಸೆಣಸಲಿದೆ.

ಟಿ20 ವಿಶ್ವಕಪ್ ಸೂಪರ್-8 ಪಂದ್ಯಗಳ ವೇಳಾಪಟ್ಟಿ ಪ್ರಕಟ

Team india -

Abhilash BC
Abhilash BC Feb 19, 2026 9:13 AM

ನವದೆಹಲಿ, ಫೆ.19: ಹಾಲಿ ಆವೃತ್ತಿಯ ಟಿ-20 ವಿಶ್ವಕಪ್ ಟೂರ್ನಿಯಲ್ಲಿ 'ಸೂಪರ್ 8'ರ ಹಂತಕ್ಕೆ ವೇದಿಕೆ(T20 World Cup Super Eights schedule) ಸಿದ್ದಗೊಂಡಿದೆ. ಬುಧವಾರ ಕೊಲಂಬೊದಲ್ಲಿ ಗ್ರೂಪ್ ಎ ಪಂದ್ಯದಲ್ಲಿ ಪಾಕಿಸ್ತಾನ ತಂಡ ನಮೀಬಿಯಾವನ್ನು ಸೋಲಿಸುವ ಮೂಲಕ ಸೂಪರ್‌-8 ತಂಡಗಳು ಅಂತಿಗೊಂಡಿತು. ಆತಿಥೇಯ ಭಾರತ ತಂಡವು ಸೂಪರ್ ಎಂಟು ಹಂತದ ಮೊದಲ ಗುಂಪಿನಲ್ಲಿ ಕಾಣಿಸಿಕೊಂಡಿದೆ. ಪಂದ್ಯಗಳ ವೇಳಾಪಟ್ಟಿ ಮತ್ತು ಗುಂಪುಗಳ ಮಾಹಿತಿ ಇಲ್ಲಿದೆ.

ಫೆಬ್ರವರಿ 21ರಿಂದ ಮಾರ್ಚ್ 1ರವರೆಗೆ ಸೂಪರ್ 8 ಹಂತದ ಪಂದ್ಯಗಳು ನಿಗದಿಯಾಗಿವೆ. ಮಾರ್ಚ್ 4 ಹಾಗೂ 5ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಫೈನಲ್ ಪಂದ್ಯವು ಮಾರ್ಚ್ 8ರಂದು ನಡೆಯಲಿದೆ.

2028ರ ಟಿ20 ವಿಶ್ವಕಪ್‌ಗೆ ನೇರ ಅರ್ಹತೆ ಪಡೆದ 12 ತಂಡಗಳ ಪಟ್ಟಿ ಪ್ರಕಟಿಸಿದ ಐಸಿಸಿ

ಸೂಪರ್ 8ರ ಹಂತದಲ್ಲಿ ಭಾರತ ತನ್ನ ಮೊದಲನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ. ಈ ಪಂದ್ಯ ಫೆ. 22ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ನಂತರ ಫೆ. 26ರಂದು ಚೆನ್ನೈಯಲ್ಲಿ ಜಿಂಬಾಬ್ವೆ ವಿರುದ್ಧ ಸೆಣಸಲಿದೆ. ತನ್ನ ಕೊನೆಯ ಪಂದ್ಯದಲ್ಲಿ ಮಾ.1ರಂದು ಕೋಲ್ಕತ್ತದ ಈಡನ್ ಗಾರ್ಡನ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ.

ಸೂಪರ್-8 ಗುಂಪುಗಳು

ಗುಂಪು 1: ಭಾರತ, ಜಿಂಬಾಬ್ವೆ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ.

ಗುಂಪು 2: ಪಾಕಿಸ್ತಾನ, ಶ್ರೀಲಂಕಾ, ಇಂಗ್ಲೆಂಡ್, ನ್ಯೂಜಿಲೆಂಡ್.

ಸೂಪರ್‌-8 ಪಂದ್ಯಗಳ ವೇಳಾಪಟ್ಟಿ

ನ್ಯೂಜಿಲೆಂಡ್ vs ಪಾಕಿಸ್ತಾನ- ಫೆ. 21(ಕೊಲಂಬೊ)

ಇಂಗ್ಲೆಂಡ್ vs ಶ್ರೀಲಂಕಾ- ಫೆ. 22(ಕ್ಯಾಂಡಿ)

ಭಾರತ vs ದಕ್ಷಿಣ ಆಫ್ರಿಕಾ- ಫೆ. 22(ಅಹಮದಾಬಾದ್)

ಜಿಂಬಾಬ್ವೆ vs ವೆಸ್ಟ್ ಇಂಡೀಸ್- ಫೆ. 23(ಮುಂಬೈ)

ಇಂಗ್ಲೆಂಡ್ vs ಪಾಕಿಸ್ತಾನ- ಫೆ. 24(ಕ್ಯಾಂಡಿ)

ನ್ಯೂಜಿಲೆಂಡ್ vs ಶ್ರೀಲಂಕಾ- ಫೆ. 25(ಕೊಲಂಬೊ)

ವೆಸ್ಟ್ ಇಂಡೀಸ್ vs ದಕ್ಷಿಣ ಆಫ್ರಿಕಾ- ಫೆ. 26(ಅಹಮದಾಬಾದ್)

ಭಾರತ vs ಜಿಂಬಾಬ್ವೆ- ಫೆ.26(ಚೆನ್ನೈ)

ಇಂಗ್ಲೆಂಡ್ vs ನ್ಯೂಜಿಲೆಂಡ್- ಫೆ. 27(ಕೊಲಂಬೊ)

ಪಾಕಿಸ್ತಾನ vs ಶ್ರೀಲಂಕಾ- ಫೆ.28(ಕ್ಯಾಂಡಿ)

ಜಿಂಬಾಬ್ವೆ vs ದಕ್ಷಿಣ ಆಫ್ರಿಕಾ- ಮಾ. 1 (ನವದೆಹಲಿ)

ಭಾರತ vs ವೆಸ್ಟ್ ಇಂಡೀಸ್- ಮಾ. 1 (ಕೋಲ್ಕತ್ತಾ)