ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB up for sale: ಆರ್​ಸಿಬಿ ಖರೀದಿಗೆ ಮುಂದಾದ ಪೂನಾವಾಲ!

‘ಮಾಧ್ಯಮ ವರದಿಗಳು ಊಹಾಪೋಹಗಳಿಂದ ಕೂಡಿವೆ. ಮಾರಾಟ ಕುರಿತ ಮಾತುಕತೆಗಳು ನಡೆಯುತ್ತಿಲ್ಲ’ ಎಂದು ಡಿಯಾಜಿಯೊ ಸಂಸ್ಥೆಯು ಜೂನ್ 10ರಂದು ಬಿಎಸ್‌ಇಗೆ ಲಿಖಿತ ಸ್ಪಷ್ಟನೆ ನೀಡಿತ್ತು. ವಿರಾಟ್ ಕೊಹ್ಲಿ ಅವರು ಆರಂಭದಿಂದಲೂ ಈ ಫ್ರ್ಯಾಂಚೈಸಿಯಲ್ಲಿದ್ದಾರೆ.  ಪ್ರಸ್ತುತ ಆರ್‌ಸಿಬಿಯು ಐಪಿಎಲ್‌ನ ಅತ್ಯಧಿಕ ಮೌಲ್ಯಯುಳ್ಳ ತಂಡವಾಗಿದೆ.

ಆರ್​ಸಿಬಿ ಖರೀದಿಗೆ ಮುಂದಾದ ಪೂನಾವಾಲ!

-

Abhilash BC Abhilash BC Oct 2, 2025 10:59 AM

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB up for sale) ತಂಡವನ್ನು ಸೀರಂ ಇನ್‌ ಸ್ಟಿಟ್ಯೂಟ್ ಸಿಇಒ ಆದಾರ್‌ ಪೂನಾವಾಲ(Adar Poonawalla) ಖರೀದಿಸಲಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಎರಡು ದಿನಗಳ ಹಿಂದಷ್ಟೇ ಫ್ರಾಂಚೈಸಿ(RCB) ಮಾರಾಟದ ಬಗ್ಗೆ ಊಹಾಪೋಹ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಪೂನವಾಲ್ಲಾ ಅವರು ಡಯಾಜಿಯೊ ನಿಯಂತ್ರಿತ RCB ಮಾಲೀಕತ್ವದ ಯುನೈಟೆಡ್ ಸ್ಪಿರಿಟ್ಸ್ ಒಡೆತನದ ಫ್ರಾಂಚೈಸಿಯಲ್ಲಿ ಪಾಲನ್ನು ಖರೀದಿಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ ಮತ್ತು X ನಲ್ಲಿ "ಸರಿಯಾದ ಮೌಲ್ಯಮಾಪನದಲ್ಲಿ, ಆರ್​ಸಿಬಿ ಒಂದು ಉತ್ತಮ ತಂಡ..." ಎಂದು ಬರೆದಿದ್ದಾರೆ. ಹೀಗಾಗಿ ಅವರು ಆರ್‌ಸಿಬಿ ಖರೀದಿ ಮಾಡುವ ರೇಸ್‌ನಲ್ಲಿರುವುದು ಖಚಿತವಾದಂತಿದೆ.

ವರದಿಗಳ ಪ್ರಕಾರ, ಆದರ್ ಪೂನವಾಲ್ಲಾ ಆರ್‌ಸಿಬಿ ಫ್ರಾಂಚೈಸಿ ಅನ್ನು ಖರೀದಿಸಲು ಆಸಕ್ತಿ ಹೊಂದಿರುವ ಇತರರಿಗಿಂತ ಮುಂಚೂಣಿಯಲ್ಲಿದ್ದಾರೆ. ಸುಮಾರು 52 ಬಿಲಿಯನ್ ಅಥವಾ 17,762 ಕೋಟಿ ಮೌಲ್ಯಕ್ಕೆ ಆರ್​ಸಿಬಿ ಫ್ರಾಂಚೈಸಿ ಮಾರಾಟವಾಗಲಿದೆ ಎನ್ನಲಾಗುತ್ತಿದೆ.

ಐಪಿಎಲ್ ಪ್ರಶಸ್ತಿ ಜಯಸಿದ್ದ ಆರ್‌ಸಿಬಿಯ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಜನ ಸಾವಿಗೀಡಾಗಿದ್ದರು. ಹಲವರು ಗಾಯಗೊಂಡಿದ್ದರು. ಆ ಸಂದರ್ಭದಲ್ಲಿ ಮುಂಬೈ ಶೇರು ವಿನಿಮಯ ಕೇಂದ್ರವು ಆರ್‌ಸಿಬಿಯ ಮಾಲೀಕತ್ವದ ಸಂಸ್ಥೆ ಡಿಯಾಜಿಯೊದಿಂದ ಸ್ಪಷ್ಟನೆ ಕೇಳಿತ್ತು. ಆಗ ಪ್ರತಿಕ್ರಿಯಿಸಿದ್ದ ಸಂಸ್ಥೆಯು ಮಾರಾಟ ಕುರಿತ ವದಂತಿಗಳನ್ನು ತಳ್ಳಿ ಹಾಕಿತ್ತು.

‘ಮಾಧ್ಯಮ ವರದಿಗಳು ಊಹಾಪೋಹಗಳಿಂದ ಕೂಡಿವೆ. ಮಾರಾಟ ಕುರಿತ ಮಾತುಕತೆಗಳು ನಡೆಯುತ್ತಿಲ್ಲ’ ಎಂದು ಡಿಯಾಜಿಯೊ ಸಂಸ್ಥೆಯು ಜೂನ್ 10ರಂದು ಬಿಎಸ್‌ಇಗೆ ಲಿಖಿತ ಸ್ಪಷ್ಟನೆ ನೀಡಿತ್ತು. ವಿರಾಟ್ ಕೊಹ್ಲಿ ಅವರು ಆರಂಭದಿಂದಲೂ ಈ ಫ್ರ್ಯಾಂಚೈಸಿಯಲ್ಲಿದ್ದಾರೆ.  ಪ್ರಸ್ತುತ ಆರ್‌ಸಿಬಿಯು ಐಪಿಎಲ್‌ನ ಅತ್ಯಧಿಕ ಮೌಲ್ಯಯುಳ್ಳ ತಂಡವಾಗಿದೆ.

ಇದನ್ನೂ ಓದಿ IPL Final 2025: ವೀಕ್ಷಣೆಯಲ್ಲಿ ದಾಖಲೆ ಬರೆದ ಆರ್‌ಸಿಬಿ-ಪಂಜಾಬ್‌ ಫೈನಲ್‌ ಪಂದ್ಯ