ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಾರ್‌ಗೆ ಡಿಕ್ಕಿ ಹೊಡೆದ 15 ವರ್ಷದ ಅಪ್ರಾಪ್ತ ಬಾಲಕ: ಪೋಷಕರ ನಿರ್ಲಕ್ಷ್ಯದ ವಿರುದ್ಧ ಕಿಡಿ!

Viral News: 15 ವರ್ಷದ ಬಾಲಕನು ಕಾರು ಚಲಾಯಿಸಿದ್ದು ಮತ್ತೊಂದು ಕಾರಿಗೆ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ಕಾರ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು ಸಾಕಷ್ಟು ಹಾನಿಯಾಗಿದೆ. ಆದರೆ ಇದರಲ್ಲಿ ಇನ್ನೊಂದು ಆತಂಕಕಾರಿಯಾದ ಸಂಗತಿಯೆಂದರೆ, ಡಿಕ್ಕಿ ಹೊಡೆದ ಕಾರಿನೊಳಗೆ ಮಗುವೊಂದು ಇತ್ತು ಎನ್ನಲಾಗಿದೆ.

ಮಗುವಿದ್ದ ಕಾರಿಗೆ ಡಿಕ್ಕಿ ಹೊಡೆದ 15 ವರ್ಷದ ಅಪ್ರಾಪ್ತ ಬಾಲಕ!

ಮಗುವಿದ್ದ ಕಾರಿಗೆ ಡಿಕ್ಕಿ ಹೊಡೆದ 15 ವರ್ಷದ ಅಪ್ರಾಪ್ತ ಬಾಲಕ -

Profile
Pushpa Kumari Aug 21, 2026 9:04 PM

ನೋಯ್ಡಾ,ಆ. 21: ಅಪ್ರಾಪ್ತ ಬಾಲಕನೊಬ್ಬ ಕಾರು ಚಲಾಯಿಸಲು ಹೋಗಿ ಭೀಕರ ಅಪಘಾತ ವಾದ ಘಟನೆಯೊಂದು (Viral News) ನಡೆದಿದೆ. 15 ವರ್ಷದ ಬಾಲಕನು ಕಾರು ಚಲಾಯಿಸಿದ್ದು ಮತ್ತೊಂದು ಕಾರಿಗೆ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ಕಾರ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು ಸಾಕಷ್ಟು ಹಾನಿಯಾಗಿದೆ. ಆದರೆ ಇದರಲ್ಲಿ ಇನ್ನೊಂದು ಆತಂಕಕಾರಿಯಾದ ಸಂಗತಿಯೆಂದರೆ, ಡಿಕ್ಕಿ ಹೊಡೆದ ಕಾರಿನೊಳಗೆ ಮಗುವೊಂದು ಇತ್ತು ಎನ್ನಲಾಗಿದೆ.

ಈ ಘಟನೆಯೂ ಅಪ್ರಾಪ್ತ ವಯಸ್ಕರ ಚಾಲನೆ ಮತ್ತು ಪೋಷಕರ ಜವಾಬ್ದಾರಿಯ ಬಗ್ಗೆ ಕಳವಳ ವ್ಯಕ್ತ ಪಡಿಸುವಂತೆ ಆಗಿದೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ‌. ಹಾನಿಗೊಳಗಾದ ಕಾರಿನ ಮಾಲೀಕರು ಅಪ್ರಾಪ್ತ ವಯಸ್ಕನಿಗೆ ಚಾಲನೆ ಮಾಡಲು ಏಕೆ ಅನುಮತಿ ನೀಡಲಾಗಿದೆ ಎಂದು ಪ್ರಶ್ನಿಸಿದ್ದು ಆತನ ತಾಯಿ ಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಾರ್ವಜನಿಕರಲ್ಲೂ ಈ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಅಪಘಾತ ಸಂಭವಿಸಿದ ತಕ್ಷಣವೇ ಅಪ್ರಾಪ್ತ ಬಾಲಕ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಸಾರ್ವಜನಿಕರು ಮಧ್ಯಪ್ರವೇಶಿಸಿ ಯುವಕನನ್ನು ತಡೆದಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಬಾಲಕನ ತಾಯಿಯನ್ನು ಸಾರ್ವಜನಿಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ವೈರಲ್ ಆದ ವಿಡಿಯೋದಲ್ಲಿ, ಕಾರಿನ ಮಾಲೀಕ ಬಾಲಕನಿಗೆ ನೀನು ಮಾತನಾಡಬೇಡ, ಸಣ್ಣ ಬಾಲಕನೆಂದು ಸುಮ್ಮನಿದ್ದೇನೆ" ಎಂದು ಎಚ್ಚರಿಸುದ್ದಾರೆ. ಹಾನಿಗೊಳಗಾದ ಕಾರಿನ ಮಾಲೀಕರ ಅಪ್ರಾಪ್ತ ವಯಸ್ಕನಿಗೆ ಚಾಲನೆ ಮಾಡಲು ಏಕೆ ಅನುಮತಿ ನೀಡಿದ್ದೀರಿ ಎಂದು ಪ್ರಶ್ನಿಸಿದಾಗ ಸಾಮಾನ್ಯವಾಗಿ ಮನೆಯಲ್ಲಿ ಚಾಲಕನನ್ನು ಹೊಂದಿರುತ್ತಾನೆ, ಆದರೆ ಆ ದಿನ ಚಾಲಕ ಲಭ್ಯವಿಲ್ಲ ಎಂದು ಹುಡುಗನ ತಾಯಿ ಉತ್ತರಿಸಿದ್ದಾರೆ.

Viral Video: ವಾಹನ ಸಂಚರಿಸುತ್ತಿದ್ದಂತೆ ಬಿರುಕು ಬಿಟ್ಟು ರಸ್ತೆಯಿಂದ ಜಿನುಗಿತು ನೀರು! ಮ್ಯಾಜಿಕ್‌ ಅಲ್ಲ, ಕಳಪೆ ಕಾಮಗಾರಿಯ ಎಫೆಕ್ಟ್‌

ತುರ್ತಾಗಿ ಯಾರನ್ನೋ ಕರೆತರಬೇಕಿದ್ದ ಕಾರಣ ಮಗನೇ ಕಾರು ಚಲಾಯಿಸಿದ ಎಂದು ಸಮರ್ಥಿಸಿದ್ದಾರೆ‌. ಆತನ ಬಳಿ ಚಾಲನಾ ಪರವಾನಗಿ ಇದೆಯೇ ಎಂದು ಕೇಳಿದ್ದಕ್ಕೆ, ತಾಯಿ ಮತ್ತು ಮಗ ಇಬ್ಬರೂ ಇಲ್ಲವೆಂದು ಒಪ್ಪಿಕೊಂಡಿದ್ದಾರೆ. ಈ ಘಟನೆ ಟೀಕೆಗೆ ಕಾರಣವಾಗಿದ್ದು ಸಾರ್ವಜನಿಕ ರಸ್ತೆಯಲ್ಲಿ ಬಾಲಕನಿಗೆ ಕಾರನ್ನು ನಿಯಂತ್ರಿಸಲು ಹೇಗೆ ಅವಕಾಶ ನೀಡಿದ್ದಾರೆ? ಹಲವರು ಪ್ರಶ್ನಿಸಿದ್ದಾರೆ.

ಬಳಕೆದಾರರೊಬ್ಬರು ಹದಿನೈದು ವರ್ಷದ ಮಗುವಿಗೆ ವಾಹನ ಚಲಾಯಿಸಲು ಪೋಷಕರು ಹೇಗೆ ಅವಕಾಶ ನೀಡುತ್ತಾರೆ? ಇದು ಬೇಜವಾಬ್ದಾರಿ ಪೋಷಕರ ಕೃತ್ಯ ಅಂದರು. ಮತ್ತೊಬ್ವರು ​"ಇಂತಹ ನಿರ್ಲಕ್ಷ್ಯ ವಹಿಸುವ ಪೋಷಕರಿಗೆ ಸರಿಯಾದ ಶಿಕ್ಷೆ ನೀಡಬೇಕು" ಅಂದರು.