ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಾಠ ಬಿಟ್ಟು ಒಟ್ಟಾಗಿ ಸಮಯ ಕಳೆಯುತ್ತಿದ್ದ ಶಿಕ್ಷಕರು: ವಿದ್ಯಾರ್ಥಿಗಳ ದೂರಿನ ಮೇರೆಗೆ ವರ್ಗಾವಣೆ!

Viral Video: ಇತ್ತೀಚೆಗೆ ಶಿಕ್ಷಕರೇ ತರಗತಿಕೋಣೆಯೊಳಗೆ ಕಾಲಹರಣ ಮಾಡುವ ಅನೇಕ ಘಟನೆಗಳು ನಡೆದಿವೆ. ಇದೀಗ ಚಿಂದ್ವಾರದ ಸರ್ಕಾರಿ ಮಧ್ಯಮ ಶಾಲೆಯೊಂದರಲ್ಲಿ ಶಿಕ್ಷಕ ಹಾಗೂ ಮತ್ತೊಬ್ಬ ಶಿಕ್ಷಕಿ ತರಗತಿಗಳನ್ನು ಬೇಗನೆ ಮುಗಿಸಿ ಒಟ್ಟಿಗೆ ಸಮಯ ಕಳೆಯುತ್ತಿದ್ದಾರೆ ಎಂದು ಮಕ್ಕಳೇ ಆರೋಪ ಮಾಡಿದ್ದಾರೆ.

ಕ್ಲಾಸ್ ಬಿಟ್ಟು ಶಿಕ್ಷಕರ ಕಾಲಹರಣ: ಮಕ್ಕಳಿಂದ ಜಿಲ್ಲಾಧಿಕಾರಿಗೆ ದೂರು!

(ಸಂಗ್ರಹ ಚಿತ್ರ) -

Profile
Pushpa Kumari Aug 21, 2026 8:55 PM

21: ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆಯೇ? ಎನ್ನುವ ಪ್ರಶ್ನೆ ಹಲವು ಪೋಷಕರಲ್ಲಿದೆ. ಹೀಗಾಗಿ ಖಾಸಗಿ ಶಾಲೆಯತ್ತವೇ ಆಕರ್ಷಿತರಾಗಿದ್ದಾರೆ. ಇತ್ತೀಚೆಗೆ ಶಿಕ್ಷಕರೇ ತರಗತಿಕೋಣೆಯೊಳಗೆ ಕಾಲಹರಣ ಮಾಡುವ ಅನೇಕ ಘಟನೆಗಳು (Viral News) ನಡೆದಿವೆ. ಇದೀಗ ಚಿಂದ್ವಾರದ ಸರ್ಕಾರಿ ಮಧ್ಯಮ ಶಾಲೆಯೊಂದರಲ್ಲಿ ಶಿಕ್ಷಕ ಹಾಗೂ ಮತ್ತೊಬ್ಬ ಶಿಕ್ಷಕಿ ತರಗತಿಗಳನ್ನು ಬೇಗನೆ ಮುಗಿಸಿ ಒಟ್ಟಿಗೆ ಸಮಯ ಕಳೆಯುತ್ತಿದ್ದಾರೆ ಎಂದು ಮಕ್ಕಳೇ ಆರೋಪ ಮಾಡಿದ್ದಾರೆ.

ಜಿಲ್ಲಾ ಕೇಂದ್ರದಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ಬೀಚ್ ಬಹ್ರಿ ಗ್ರಾಮದಲ್ಲಿರುವ ಶಾಲೆಯ ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಜನಸಂಪರ್ಕ ಕೆಂದ್ರಕ್ಕೆ ತೆರಳಿ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ ಆರೋಪ ಮಾಡಿದ್ದಾರೆ‌. ಶಿಕ್ಷಕರು ಆಗಾಗ್ಗೆ ತರಗತಿಗಳನ್ನು ಬೇಗನೆ ಮುಗಿಸಿ ಒಟ್ಟಿಗೆ ಸಮಯ ಕಳೆಯುತ್ತಾರೆ ಎಂದು ಉಲ್ಲೇಖಿಸಿದ್ದಾರೆ‌

ವಿಡಿಯೋ ನೋಡಿ:



ಸದ್ಯ ಸರ್ಕಾರಿ ಶಾಲೆಯ ಶಿಕ್ಷಕ ಹಾಗೂ ಮಹಿಳಾ ಅತಿಥಿ ಶಿಕ್ಷಕಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡ ಲಾಗಿದೆ. ಇಬ್ಬರು ಶಿಕ್ಷಕರು ಪಾಠ ಮಾಡುವುದನ್ನು ಬಿಟ್ಟು ಆಗಾಗ ಒಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ಇದರಿಂದ ತಮಗೆ ಸಮಸ್ಯೆ ಯಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳು ಬುಡಕಟ್ಟು ವ್ಯವಹಾರಗಳ ಇಲಾಖೆಯ ಸಹಾಯಕ ಆಯುಕ್ತ ಸತ್ಯೇಂದ್ರ ಸಿಂಗ್ ಮಾರ್ಕಮ್ ಅವರಿಗೆ ಈ ವಿಷಯದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

Viral Video: ಯೋಧ ಯಾವತ್ತಿದ್ದರೂ ಯೋಧನೇ; ಚಾರ್ಜ್‌ ಖಾಲಿಯಾದ ಮಹಿಳೆಯ ಎಲೆಕ್ಟ್ರಿಕ್‌ ಕಾರ್‌ ತಳ್ಳಿದ ಸೈನಿಕ

ಕ್ಷೇತ್ರ ಶಿಕ್ಷಣಾಧಿಕಾರಿ ತನಿಖಾ ಸಮಿತಿಯು ಆರೋಪಗಳ ಕುರಿತು ಪರಿಶೀಲನೆ ನಡೆಸಿ, ಇಬ್ಬರನ್ನೂ ಶಾಲೆಯಿಂದ ತೆರವುಗೊಳಿಸಿ ಬೇರೆ ಶಾಲೆಗೆ ವರ್ಗಾಯಿಸಿದೆ. ಖಾಲಿ ಇರುವ ಸ್ಥಾನಕ್ಕೆ ಹೊಸ ಅತಿಥಿ ಶಿಕ್ಷಕರನ್ನು ನೇಮಿಸಲು ಆದೇಶ ಹೊರಡಿಸಿದೆ. ಆದರೆ ಇಬ್ಬರು ಶಿಕ್ಷಕರನ್ನು ಬೇರೆ ಬೇರೆ ಶಾಲೆಗಳಿಗೆ ವರ್ಗಾಯಿಸ ಲಾಗಿದ್ದರೂ, ಅವರು ಆರೋಪಗಳನ್ನು ನಿರಾಕರಿಸಿದ್ದಾರೆ. ತಮ್ಮ ಮೇಲೆ ಮಾನಹಾನಿ ಮಾಡಲಾಗುತ್ತಿದ್ದು ಅತಿಥಿ ಶಿಕ್ಷಕರ ಹುದ್ದೆಗೆ ಮತ್ತೊಬ್ಬ ವ್ಯಕ್ತಿ ಅರ್ಜಿ ಸಲ್ಲಿಸಿದ್ದಾರೆ‌. ನೇಮಕಾತಿಗೆ ಅನುಕೂಲವಾಗುವಂತೆ ದೂರನ್ನು ರೂಪಿಸಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.