16 ಪಾಸ್‌ಪೋರ್ಟ್, 245 ದೇಶಕ್ಕೆ ಪ್ರಯಾಣ: ಬೆಂಗಳೂರಿನ ಸಂಗೀತಗಾರನ ಅಪರೂಪದ ಸಾಧನೆಗೆ ನೆಟ್ಟಿಗರು ಫಿದಾ!
Viral News: ಬೆಂಗಳೂರು ಮೂಲದ ಖ್ಯಾತ ಸಂಗೀತಕಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸಿದ್ದಾರೆ. ಕೇವಲ ಸಂಗೀತದಿಂದ ಎಲ್ಲರನ್ನು ಆಕರ್ಷಿಸಿ ಜಗತ್ತಿನಾದ್ಯಂತ ಸಂಚಾರ ಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.16 ಪಾಸ್‌ಪೋರ್ಟ್‌ಗಳೊಂದಿಗೆ 245 ದೇಶಗಳಿಗೆ ಪ್ರಯಾಣಿಸಿದ್ದು ಇವರ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
245 ದೇಶಗಳಿಗೆ ಪ್ರಯಾಣಿಸಿದ್ದ ಬೆಂಗಳೂರಿನ ಖ್ಯಾತ ಸಂಗೀತಕಾರ -
ಬೆಂಗಳೂರು,ಜೂ.25: ನಮ್ಮಲ್ಲಿ ಉತ್ತಮ ಕೌಶಲ್ಯ ಇದ್ದರೆ ಎಲ್ಲೂ ಕೂಡ ಬದುಕನ್ನು ಸಾಗಿಸಬಹುದು. ಅದು ಕಲೆ ಆಗಿರಲಿ,ಸಂಗೀತ ಆಗಿರಲಿ. ಸಾಧಿಸುವ ಛಲ ನಮ್ಮಲ್ಲಿ ಇರಬೇಕಷ್ಟೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರು ಮೂಲದ ಖ್ಯಾತ ಸಂಗೀತಕಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸಿದ್ದಾರೆ. ಕೇವಲ ಸಂಗೀತದಿಂದ ಎಲ್ಲರನ್ನು ಆಕರ್ಷಿಸಿ ಜಗತ್ತಿನಾದ್ಯಂತ ಸಂಚಾರ ಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 16 ಪಾಸ್‌ಪೋರ್ಟ್‌ಗಳೊಂದಿಗೆ 245 ದೇಶಗಳಿಗೆ ಪ್ರಯಾಣಿಸಿದ್ದು ಇವರ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.
ಕೇವಲ ತಮ್ಮ ಸಂಗೀತದ ಬಲದಿಂದ, ಜಗತ್ತಿನಾದ್ಯಂತ ಪ್ರಯಾಣ ಬೆಳೆಸಿ ವಿಶ್ವದಾಖಲೆ ನಿರ್ಮಿಸಿ ದ್ದಾರೆ. ಇವರ ಸಾಧನೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು ಇವರನ್ನು "ಒರಿಜಿನಲ್ ಟ್ರಾವೆಲ್ ಇನ್ಫ್ಲುಯೆನ್ಸರ್" ಎಂದು ಕೊಂಡಾಡಿದ್ದಾರೆ. ಅವರ 16 ಪಾಸ್ ಪೋರ್ಟ್‌ಗಳನ್ನು ತೋರಿಸುವ ವೀಡಿಯೊ ಗಮನ ಸೆಳೆದಿದೆ. ವೀಕ್ಷಕರು ಅವರ ಪ್ರಯಾಣದ ನಡೆಯ ಬಗ್ಗೆ ಆಶ್ಚರ್ಯಚಕಿತರಾಗಿದ್ದಾರೆ.
ವಿಡಿಯೋ ನೋಡಿ:
ಬೆನ್ನಿ ಪ್ರಸಾದ್ ಅವರು ಕೇವಲ 6 ವರ್ಷ, 6 ತಿಂಗಳು ಮತ್ತು 22 ದಿನಗಳಲ್ಲಿ ಅಂಟಾರ್ಕ್ಟಿಕಾ ಸೇರಿದಂತೆ ವಿಶ್ವದ ಎಲ್ಲಾ 245 ದೇಶ ಹಾಗೂ ಸ್ವತಂತ್ರ ಪ್ರಾಂತ್ಯಗಳಿಗೆ ಅತ್ಯಂತ ವೇಗವಾಗಿ ಪ್ರಯಾಣ ಮಾಡಿ ದಾಖಲೆ ನಿರ್ಮಾಣ ಮಾಡಿದ್ದಾರೆ. ಒಬ್ಬ ವ್ಯಕ್ತಿ, “ಅದು ಬೆನ್ನಿ ಪ್ರಸಾದ್ ಗೆ ಮಾತ್ರ ಸಾಧ್ಯ. ಮಹಾನ್ ಗಿಟಾರ್ ವಾದಕ ಮತ್ತು ಪ್ರೇರಕ ಭಾಷಣಕಾರ. ಅವರು ಶ್ರೀಮಂತರಾಗಿರಲಿಲ್ಲ, ಆದರೆ ಅವರ ಪ್ರತಿಭೆ ಅವರನ್ನು ಬೇರೆ ಸ್ಥಳಗಳಿಗೆ ಕರೆದೊಯ್ದಿತು” ಎಂದು ಕೊಂಡಾಡಿದ್ದಾರೆ
Viral Video: ಭೀಕರ ಅಲೆಗಳಿಂದ ವೃದ್ಧರ ಪ್ರಾಣ ಉಳಿಸಿ ಕಪಾಳಮೋಕ್ಷ ಮಾಡಿದ ಯುವಕ; ಕಾರಣವೇನು?
ಇತ್ತೀಚೆಗೆ 'ಮೋಸ್ಟ್ ಟ್ರಾವೆಲ್ಡ್ ಪೀಪಲ್' ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬೆನ್ನಿ ಪ್ರಸಾದ್ ಅವರು ತಮ್ಮ ಹಳೆಯ ಪಾಸ್ ಪೋರ್ಟ್‌ಗಳ ಪುಟಗಳನ್ನು ತಿರುಗಿಸುತ್ತಾ ಮಾತನಾಡಿದ್ದಾರೆ. ಕಠಿಣ ವೀಸಾ ನಿಯಮಗಳಿರುವ ಭಾರತೀಯ ಪಾಸ್‌ಪೋರ್ಟ್ ಇಟ್ಟುಕೊಂಡು ಅವರು ಇಡೀ ವಿಶ್ವವನ್ನೇ ಸುತ್ತಿದ್ದಾರೆ ನಿಜಕ್ಕೂ ಗ್ರೇಟ್ ಎಂದು ಹಲವಾರು ಪ್ರತಿಕ್ರಿಯೆ ನೀಡಿದ್ದಾರೆ
ಆಗಸ್ಟ್ 6, 1975 ರಂದು ಬೆಂಗಳೂರಿನಲ್ಲಿ ಜನಿಸಿದ ಬೆನ್ನಿ ಪ್ರಸಾದ್ ಗೆ ಬಾಲ್ಯದಿಂದಲೂ ತೀವ್ರವಾದ ಆಸ್ತಮಾದಿಂದ ಬಳಲುತ್ತಿದ್ದರು. ಇದರಿಂದ ದೀರ್ಘಕಾಲದ ಕಾರ್ಟಿಸೋನ್ ಸ್ಟೀರಾಯ್ಡ್ ಚಿಕಿತ್ಸೆಗೆ ಕೂಡ ಒಳಗಾಗಿದ್ದರು,ಅವರಿಗೆ ಶೇ. 60 ರಷ್ಟು ಶ್ವಾಸಕೋಶ ಹಾನಿಯಾಗಿತ್ತು ತಮಗಿದ್ದ ಕಾಯಿಲೆ ಹಾಗೂ ಕುಟುಂಬದ ನಿರೀಕ್ಷೆಗಳ ಒತ್ತಡದಿಂದಾಗಿ 16ನೇ ವಯಸ್ಸಿನಲ್ಲಿ ತೀವ್ರ ಖಿನ್ನತೆಗೆ ಜಾರಿ ಆತ್ಮಹತ್ಯೆಯ ಯೋಚನೆ ಮಾಡಿದ್ದರು. ಆದರೆ, ನಂತರದ ದಿನಗಳಲ್ಲಿ ಒಂದು ಯೂತ್ ರಿಟ್ರೀಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರಿಗೆ ಹೊಸ ಬದುಕಿನ ಬಗ್ಗೆ ಕನಸು ಹುಟ್ಟಿತ್ತು. ಸಂಗೀತ ಪ್ರಿಯರಾಗಿ ಇಂದು ಪ್ರಸಿದ್ಧಿ ಪಡೆದಿದ್ದಾರೆ.