ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರೀಲ್ಸ್‌ಗಾಗಿ ಮರ ಏರಿ ಡ್ಯಾನ್ಸ್‌ ಮಾಡಿದ ಕಾಶ್ಮೀರಿ ಮಹಿಳೆ; ನೆಟ್ಟಿಗರು ಹೇಳಿದ್ದೇನು ನೋಡಿ

ಕಾಶ್ಮೀರಿ ಮಹಿಳೆಯೊಬ್ಬಳು ರೀಲ್ಸ್‌ಗಾಗಿ ಎತ್ತರವಾದ ಮರವನ್ನು ಹತ್ತಿ ಡ್ಯಾನ್ಸ್ ಮಾಡಿದ್ದಾಳೆ. ಈಕೆ 2002ರ ಬಾಲಿವುಡ್ ಹಾಡಿಗೆ ಡ್ಯಾನ್ಸ್ ಮಾಡಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರು ಇದನ್ನು ನೋಡಿ ತಮಾಷೆ ಮಾಡಿದ್ದಾರೆ.

ರೀಲ್ಸ್‌ ಕ್ರೇಜ್‌ಗಾಗಿ ಮರ ಹತ್ತಿದ ಮಹಿಳೆ; ಮುಂದೇನಾಯ್ತು ವಿಡಿಯೊ ನೋಡಿ

Profile pavithra Apr 26, 2025 8:06 PM

ಶ್ರೀನಗರ: ಜನರು ಸೋಶಿಯಲ್ ಮೀಡಿಯಾಗಳಿಗಾಗಿ ರೀಲ್ಸ್‌ ಮಾಡಲು ಏನೇನೋ ಸರ್ಕಸ್‌ ಮಾಡುತ್ತಾರೆ. ಎತ್ತರದ ಪಾಳುಬಿದ್ದ ಕಟ್ಟಡಗಳು, ಚಲಿಸುವ ರೈಲುಗಳು, ರೈಲಿನ ಟ್ರ್ಯಾಕ್‍ಗಳ ಮೇಲೆ ಡ್ಯಾನ್ಸ್‌ ಮಾಡಲು ಹೋಗಿ ಅನಾಹುತ ಮೈಮೇಲೆ ಎಳೆದುಕೊಳ್ಳುತ್ತಾರೆ. ಇದೀಗ ಕಾಶ್ಮೀರಿ ಮಹಿಳೆಯೊಬ್ಬಳು ಎತ್ತರವಾದ ಮರ ಹತ್ತಿ ಡ್ಯಾನ್ಸ್ ಮಾಡಿದ್ದಾಳೆ. ಈಕೆ 2002ರ ಬಾಲಿವುಡ್ ಹಾಡಿಗೆ ಡ್ಯಾನ್ಸ್ ಮಾಡಿದ್ದು, ಇದನ್ನು ನೋಡಿ ನೆಟ್ಟಿಗರು ಫುಲ್‌ ಶಾಕ್‌ ಅಗಿದ್ದಾರೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಉಷಾ ನಾಗವಂಶಿ ಎಂಬ ಮಹಿಳೆ ಎತ್ತರವಾಗಿ ಬೆಳೆದು ನಿಂತ ಮರದ ಕೊಂಬೆಗಳ ಮೇಲೆ ನಿಂತುಕೊಂಡು 2002ರ ಹಿಂದಿ ಚಿತ್ರ ʼಇಷ್ಕಜಾದೇಯʼದ 'ಮೇರಾ ಆಶಿಕ್ ಚಲ್ಲಾ' ಹಾಡಿಗೆ ಡ್ಯಾನ್ಸ್ ಮಾಡಿದ್ದಾಳೆ. ಇದನ್ನು ನೋಡಿ ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ. ಈ ವಿಡಿಯೊ ಈಗಾಗಲೇ ವೈರಲ್‌ ಆಗಿದ್ದು, ಸುಮಾರು 3,00,000 ಮಂದಿ ಲೈಕ್ ಮಾಡಿದ್ದಾರೆ. 16,000 ಕ್ಕೂ ಹೆಚ್ಚು ಕಾಮೆಂಟ್‍ಗಳು ಮತ್ತು ಒಂದು ಮಿಲಿಯನ್ ಬಾರಿ ಶೇರ್ ಆಗಿದೆ.

ಮರ ಏರಿ ಡ್ಯಾನ್ಸ್‌ ಮಾಡಿದ ಮಹಿಳೆಯ ವಿಡಿಯೊ ಇಲ್ಲಿದೆ ನೋಡಿ...

ಕಾಮೆಂಟ್ ವಿಭಾಗದಲ್ಲಿ ನೆಟ್ಟಿಗರು ತಮಾಷೆ ಮಾಡುವ ಮೂಲಕ ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ ಕೇವಲ ಸೋಶಿಯಲ್ ಮಿಡಿಯಾ ರೀಲ್‍ಗಾಗಿ ನಾಗವಂಶಿ ತನ್ನ ಪ್ರಾಣವನ್ನು ಪಣಕ್ಕಿಟ್ಟಿದ್ದರಿಂದ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ.

“ಸಾವು ದೀದಿಗೆ ಹೆದರುತ್ತದೆ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಇಡೀ ವಿಡಿಯೊ ನೋಡುವಾಗ ಆತಂಕ ಹೆಚ್ಚಾಗುತ್ತಿತ್ತು " ಎಂದು ಹೇಳಿದ್ದಾರೆ. ಮೂರನೆಯವರು, “ಮರದ ಕೆಳಗೆ ಇಂಟರ್‌ನೆಟ್‌ ಸ್ಲೋ ಇದೆಯೇ? “ ಎಂದು ಕೇಳಿದ್ದಾರೆ. ನೆಟ್ಟಿಗರೊಬ್ಬರು ಈ ಮಹಿಳೆ ತನ್ನ ಮುಂದಿನ ವಿಡಿಯೊವನ್ನು ಐಫೆಲ್ ಟವರ್ ಮೇಲ್ಭಾಗದಲ್ಲಿ ಮಾಡಬೇಕೆಂದು ಸಲಹೆ ನೀಡಿದ್ದಾರೆ.

ಸೋಶಿಯಲ್ ಮಿಡಿಯಾಗಳಲ್ಲಿನ ರೀಲ್ಸ್‌ಗಾಗಿ ಮಹಿಳೆಯರು ಸ್ಟಂಟ್ ಮಾಡಿದ್ದು ಇದೇ ಮೊದಲಲ್ಲ. ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ಮಹಿಳೆಯೊಬ್ಬಳು ಹೈಸ್ಪೀಡ್ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಾಯಕಾರಿ ಸ್ಟಂಟ್‍ಗಳನ್ನು ಒಳಗೊಂಡ ರೀಲ್‍ಗಳನ್ನು ಮಾಡಿದ್ದು, ಇದು ಸೋಶಿಯ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ನಂತರ ಮಹಿಳೆ ಇದಕ್ಕೆ ಭಾರೀ ದಂಡ ತೆತ್ತಿದ್ದಾಳಂತೆ. ವೈರಲ್ ಆದ ವಿಡಿಯೊದಲ್ಲಿ ಚಲಿಸುವ ಕಾರಿನ ಬಾನೆಟ್ ಮೇಲೆ ಕುಳಿತು ಹಾಗು ನಿಂತುಕೊಂಡು ಮಹಿಳೆ ಡ್ಯಾನ್ಸ್‌ ಮಾಡಿದ್ದಾಳೆ ಮತ್ತು ಇನ್ನೊಂದು ವಿಡಿಯೊದಲ್ಲಿ, ಅವಳು ತನ್ನ ಪತಿ ಡ್ರೈವಿಂಗ್ ಮಾಡುವಾಗ ಅವನ ತೊಡೆಯ ಮೇಲೆ ಮಲಗಿರುವುದು ಕೂಡ ರೆಕಾರ್ಡ್ ಆಗಿದೆ.

ಈ ಸುದ್ದಿಯನ್ನೂ ಓದಿ:Viral Video: 3 ವರ್ಷದಿಂದ ಶ್ವಾಸಕೋಶದಲ್ಲಿ 8 ಸೆಂ.ಮೀ ಉದ್ದದ ಚಾಕು ಇದ್ರೂ ವ್ಯಕ್ತಿ ಜೀವಂತ- ಏನಿದು ಘಟನೆ?

ಇದು ವೈರಲ್ ಆಗಿ ಕಾನ್ಪುರ ನಗರ ಪ್ರಾದೇಶಿಕ ಸಾರಿಗೆ ಕಚೇರಿಯ (ಆರ್‌ಟಿಒ) ಗಮನವನ್ನು ಸೆಳೆದಿದೆ. ಅಧಿಕಾರಿಗಳು ವಿಡಿಯೊಗಳನ್ನು ಪರಿಶೀಲಿಸಿ ಇಂತಹ ನಡವಳಿಕೆಯನ್ನು ಕಾನೂನುಬಾಹಿರ ಮಾತ್ರವಲ್ಲದೆ ಸಾರ್ವಜನಿಕ ಸುರಕ್ಷತೆಗೆ ಗಂಭೀರ ಅಪಾಯವೆಂದು ಪರಿಗಣಿಸಿದ್ದಾರೆ. ಹೀಗಾಗಿ ಸಾರ್ವಜನಿಕ ಹೆದ್ದಾರಿಯಲ್ಲಿ ಸ್ಟಂಟ್ ಮಾಡಿದ್ದಕ್ಕಾಗಿ ಇಲಾಖೆಯು ಮಹಿಳೆಯ ವಿರುದ್ಧ 22,500 ರೂ. ದಂಡವನ್ನು ವಿಧಿಸಿದೆ.