ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬುರ್ಖಾ ಧರಿಸಿ ಮಹಿಳಾ ಬೋಗಿ ಪ್ರವೇಶ ಮಾಡಿದ ವ್ಯಕ್ತಿ: ಅನುಮಾನಾಸ್ಪದ ನಡವಳಿಕೆ ಕಂಡು ಬೆಚ್ಚಿಬಿದ್ದ ಮಹಿಳೆಯರು!

Viral Video: ಮುಂಬೈನ ಲೈಫ್‌ಲೈನ್ ಲೋಕಲ್ ಟ್ರೈನ್‌ನಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಘಾಟ್‌ಕೋಪರ್ ಬಳಿಯ ಮಹಿಳಾ ಕಂಪಾರ್ಟ್‌ಮೆಂಟ್‌ಗೆ ಬುರ್ಖಾ ಧರಿಸಿದ ವ್ಯಕ್ತಿಯೊಬ್ಬ ಪ್ರವೇಶಿ ಸಿದ್ದು, ಆತಂಕ ಮೂಡಿಸಿದ್ದಾನೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ

ಮುಂಬೈ ಲೋಕಲ್ಸ್ ಮಹಿಳಾ ಬೋಗಿಯಲ್ಲಿ ಬುರ್ಖಾ ಧರಿಸಿ ಪ್ರಯಾಣಿಸಿದ ವ್ಯಕ್ತಿ!

ಬುರ್ಖಾ ಧರಿಸಿ ಮಹಿಳಾ ಬೋಗಿ ಪ್ರವೇಶ ಮಾಡಿದ ವ್ಯಕ್ತಿ -

Profile
Pushpa Kumari Feb 9, 2026 3:21 PM

ಮುಂಬೈ,ಫೆ.9: ರೈಲು ಪ್ರಯಾಣ ಅತ್ಯಂತ ಸುರಕ್ಷಿತ ಮತ್ತು ಅಗ್ಗ ಎಂದು ಹೆಚ್ಚಿನವರು ಪ್ರಯಾಣ ಮಾಡುತ್ತಾರೆ. ಇತ್ತೀಚೆಗೆ ಪ್ರಯಾಣಿಕರ ಸುರಕ್ಷತೆಗಾಗಿ ರೈಲ್ವೆ ಇಲಾಖೆಯೂ ಕಟ್ಟು ನಿಟ್ಟಿನ ನಿಯಮ ಜಾರಿಗೆ ತಂದರೂ ನಿಯಮ ಉಲ್ಲಂಘನೆ ಮಾಡುವ ಸಂಖ್ಯೆ ಕಡಿಮೆಯಾಗಿಲ್ಲ.ಇದೀಗ ಮುಂಬೈನ ಲೈಫ್‌ಲೈನ್ ಲೋಕಲ್ ಟ್ರೈನ್‌ನಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಘಾಟ್‌ಕೋಪರ್ ಬಳಿಯ ಮಹಿಳಾ ಕಂಪಾರ್ಟ್‌ಮೆಂಟ್‌ಗೆ ಬುರ್ಖಾ ಧರಿಸಿದ ವ್ಯಕ್ತಿಯೊಬ್ಬ ಪ್ರವೇಶಿಸಿದ್ದು, ಆತಂಕ ಮೂಡಿಸಿದ್ದಾನೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ

ಬುರ್ಖಾ ಧರಿಸಿದ ವ್ಯಕ್ತಿಯೂ ಮಹಿಳೆಯಂತೆ ನಟಿಸುತ್ತಾ ಮಹಿಳಾ ಬೋಗಿ ಪ್ರವೇಶಿಸಿ ಪ್ರಯಾಣಿ ಕರಲ್ಲಿ ಆತಂಕ ಮೂಡಿಸಿದ್ದಾನೆ. ಈ ಘಟನೆಯು ಮಹಿಳಾ ಪ್ರಯಾಣಿಕರಲ್ಲಿ ಭಯ ಮತ್ತು ಗೊಂದಲವನ್ನು ಉಂಟುಮಾಡಿದೆ. ವರದಿಗಳ ಪ್ರಕಾರ, ಆ ವ್ಯಕ್ತಿ ಜನದಟ್ಟಣೆಯ ಪರಿಸ್ಥಿತಿಯನ್ನು ದುರುಪಯೋಗಿಸಿಕೊಂಡು ಕಂಪಾರ್ಟ್‌ಮೆಂಟ್ ಹತ್ತಿದ್ದಾನೆ. ಆದರೆ ಅವನ ಅನುಮಾನಾಸ್ಪದ ನಡವಳಿಕೆಯು ಶೀಘ್ರದಲ್ಲೇ ಅವನ ಸುತ್ತಲಿನ ಮಹಿಳೆಯರ ಗಮನ ಸೆಳೆಯಿತು.

ವಿಡಿಯೋ ನೋಡಿ:



ಬುರ್ಖಾ ಧರಿಸಿದ್ದ ವ್ಯಕ್ತಿಯೂ ಜನದಟ್ಟಣೆಯ ಲಾಭ ಪಡೆದು ಯಾರಿಗೂ ಅನುಮಾನ ಬಾರದಂತೆ ಮಹಿಳೆಯರ ಮೀಸಲು ಬೋಗಿಯನ್ನು ಏರಿದ್ದನು. ‌ಪ್ರಯಾಣಿಕರು ಆತನ ಮೇಲೆ ಡೌಟ್ ಬಂದು ಪ್ರಶ್ನಿಸಿದಾಗ ಆತ ಸಿಕ್ಕಿಬಿದ್ದಿದ್ದಾನೆ. ಸದ್ಯ ಮಹಿಳೆಯರು ಆತನನ್ನು ಹಿಡಿಯಲು ಪ್ರಯತ್ನಿಸುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಕ್ಷಣವೇ ಮಹಿಳೆಯರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Viral Video: ಫ್ಲೈ ಓವರ್‌ನಿಂದ ಹಾರಿದ ಕಾರು- ಬೆಚ್ಚಿಬೀಳಿಸುವ ವಿಡಿಯೊ ವೈರಲ್!

ಇದಕ್ಕೆ ಪ್ರತಿಕ್ರಿಯೆಯಾಗಿ, ಸರ್ಕಾರಿ ರೈಲ್ವೆ ಪೊಲೀಸ್ (GRP) ಮತ್ತು ರೈಲ್ವೆ ರಕ್ಷಣಾ ಪಡೆ (RPF) ತಂಡಗಳು ತ್ವರಿತವಾಗಿ ಸ್ಥಳಕ್ಕೆ ಬಂದಿವೆ. ಆದರೆ, ಆ ವ್ಯಕ್ತಿಯನ್ನು ಬಂಧಿಸುವ ಮೊದಲೇ ರೈಲಿ ನಿಂದ ಹಾರಿ ಪರಾರಿಯಾಗಿದ್ದ. ಸದ್ಯ ಘಾಟ್‌ಕೋಪರ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ರೈಲ್ವೆ ನಿಲ್ದಾಣ ಮತ್ತು ಬೋಗಿಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.