ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಟ್ರಕ್ ಒಳಗೇ ಮದುವೆ ಮಂಟಪ: ವಧು-ವರರನ್ನು ನೋಡಿ ದಂಗಾದ ಜನ! ವಿಡಿಯೋ ನೋಡಿ

Viral News: ಹರಿಯಾಣದ ಗುರುಗ್ರಾಮ್ ನಲ್ಲಿ ವಿಚಿತ್ರ ಮದುವೆಯೊಂದು ನಡೆದಿದೆ. ಟ್ರಕ್ ಒಂದರ ಒಳಗೆ ಮದುವೆ ಮಂಟಪವನ್ನು ಸಿದ್ಧಪಡಿಸಿದ ದೃಶ್ಯವೊಂದು ವೈರಲ್ ಆಗಿದೆ. ಅಲಂಕರಿಸಿದ ವಾಹನದೊಳಗೆ ಪುರೋಹಿತರು, ವಧು-ವರರು ಮತ್ತು ಕುಟುಂಬ ಸದಸ್ಯರು ಕುಳಿತಿದ್ದು, ಸಂಪೂರ್ಣ ಮದುವೆ ಸಮಾರಂಭವೇ ಅಲ್ಲಿ ನಡೆಯುತ್ತಿರುವಂತೆ ಕಂಡುಬರುತ್ತಿದೆ.

ಟ್ರಕ್ ಒಳಗೆ ಸಿದ್ದಪಡಿಸಿದ ಮದುವೆ ಮಂಟಪ: ವಿಡಿಯೊ ನೋಡಿ!

ಹರಿಯಾಣದಲ್ಲಿ ಟ್ರಕ್ ಒಳಗೆ ಮದುವೆ ಮಂಟಪ -

Profile
Pushpa Kumari Oct 13, 2026 5:15 PM

ಹರಿಯಾಣ,ಅ.14: ಸಾಮಾನ್ಯವಾಗಿ ಮದುವೆ ಅಂದಾಗ ಮಂಟಪ, ದೇವಸ್ಥಾನ, ಹೋಟೆಲ್ ಇತ್ಯಾದಿ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಹರಿಯಾದದ ಗುರುಗ್ರಾಮ್ ನಲ್ಲಿ ವಿಚಿತ್ರ ಮದುವೆಯೊಂದು ನಡೆದಿದೆ. ಟ್ರಕ್ ಒಂದರ ಒಳಗೆ ಮದುವೆ ಮಂಟಪವನ್ನು ಸಿದ್ಧಪಡಿಸಿದ ದೃಶ್ಯವೊಂದು ವೈರಲ್ (Viral News) ಆಗಿದೆ. ಅಲಂಕರಿಸಿದ ವಾಹನದೊಳಗೆ ಪುರೋಹಿತರು, ವಧು-ವರರು ಮತ್ತು ಕುಟುಂಬ ಸದಸ್ಯರು ಕುಳಿತಿದ್ದು, ಸಂಪೂರ್ಣ ಮದುವೆ ಸಮಾರಂಭವೇ ಅಲ್ಲಿ ನಡೆಯುತ್ತಿರುವಂತೆ ಕಂಡುಬರುತ್ತಿದೆ.

ಈ ಅಪರೂಪದ ದೃಶ್ಯ ನೋಡಿ ನೆಟ್ಟಿಗರು ಆಶ್ಚರ್ಯವನ್ನು ವ್ಯಕ್ತ ಪಡಿಸಿದ್ದಾರೆ. ಹೂವಿನ ಅಲಂಕಾರ, ಗುಲಾಬಿ ಬಣ್ಣದ ಕರ್ಟನ್  ಮತ್ತು ಚಿನ್ನದ ಬಣ್ಣದ ಫಲಕಗಳೊಂದಿಗೆ ಸಾಂಪ್ರ ದಾಯಿಕ ಮದುವೆ ವೇದಿಕೆಯಂತೆ ಕಾಣುವಂತೆ ಈ ಟ್ರಕ್ ಅನ್ನು ಅಲಂಕಾರ ಮಾಡಲಾಗಿದೆ.

ವಿಡಿಯೋ ನೋಡಿ:



ಅದರೊಳಗೆ ವಧು-ವರರು, ಪುರೋಹಿತರು ಹಾಗೂ ಕುಟುಂಬದವರು ಕುಳಿತುಕೊಂಡು ಸಂಚಾರ ಮಾಡು‌ತ್ತಿದ್ದಾರೆ.ಆದರೆ ಈ ವಿಡಿಯೊ ವೈರಲ್ ಆದ ಬೆನ್ನಲ್ಲೇ ಇದು ನಿಜವಾದ ಮದುವೆಯಲ್ಲ ಬದಲಿಗೆ ಪ್ರಚಾರದ ತಂತ್ರ ಎಂದು ತಿಳಿದು ಬಂದಿದೆ. ದೃಶ್ಯಗಳಲ್ಲಿ ಪುರೋಹಿತರು ವರನ ಎದುರು ಕುಳಿತಿದ್ದು, ಸಮಾರಂಭದ ಭಾಗವಾಗಿ ಇತರರು ಹತ್ತಿರದಲ್ಲಿ ಕುಳಿತಿರುವುದನ್ನು ಕಾಣಬಹುದು. ಟ್ರಕ್ ನಗರದ ಮೂಲಕ ಚಲಿಸುವಾಗ ದಾರಿಹೋಕರಿಗೆ ಮದುವೆ ಸಮಾರಂಭದ ಕ್ಷಣವನ್ನೇ ತೋರ್ಪಡಿಸುವಂತಿದೆ.

Viral Video: ವಾರಾಣಸಿ ಕೋರ್ಟ್‌ನಲ್ಲಿ ಮಹಿಳೆಯ ಹುಚ್ಚಾಟ; ನ್ಯಾಯಾಧೀಶರ ಕುರ್ಚಿಯಲ್ಲಿಯೇ ಕುಳಿತು 'ಆರ್ಡರ್' ಎಂದು ಆದೇಶ

ಟ್ರಕ್‌ನ ಬದಿಯಲ್ಲಿ 'ರೇಮಂಡ್' ಎಂಬ ಹೆಸರಿದ್ದು, ಈ ವಿನ್ಯಾಸವು ಆ ಬ್ರ್ಯಾಂಡ್‌ಗೆ ಸಂಬಂಧಿಸಿದೆ ಎಂದು ಸೂಚಿಸುತ್ತದೆ. ಆದಾಗ್ಯೂ, ಈ ಚಟುವಟಿಕೆಯ ನಿಖರ ವಿವರ ಮತ್ತು ಇದಕ್ಕಾಗಿ ಪಾವತಿಸಿದ ಮೊತ್ತವನ್ನು ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿಲ್ಲ. "ಗುರುಗಾಂವ್ ಆರಂಭಿಕರಿಗಲ್ಲ" ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ.

ಈ ವಿಡಿಯೊಗೆ ಯಾವುದೇ ಮದುವೆ ಮಂಟಪದ ಬಾಡಿಗೆ ಖರ್ಚಿಲ್ಲದ ಅತ್ಯುತ್ತಮ ಐಡಿಯಾ ಎಂದು ಕೆಲವರು ಮೆಚ್ಚುಗೆ ವ್ಯಕ್ತ ಪಡಿಸಿದರೆ ಇನ್ನು ಕೆಲವರು ಹೀಗೂ ಪ್ರಚಾರ ಗಿಟ್ಟಿಸಿಕೊಳ್ಳಬೇಕೋ? ಎಂದು ಪ್ರಶ್ನೆ ಮಾಡಿದ್ದಾರೆ.