ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲಿಫ್ಟ್‌ನಲ್ಲಿ ಮಹಿಳೆಗೆ ಲೈಂಗಿಕ ದೌರ್ಜನ್ಯ: ಕಾಮುಕನಿಗೆ ಸರಿಯಾಗಿ ಥಳಿಸಿದ ಸೆಕ್ಯೂರಿಟಿ ಗಾರ್ಡ್!

Viral News: ಲಿಫ್ಟ್ ನಲ್ಲಿ ಕಾಮುಕನೊಬ್ಬ ಮಹಿಳೆಗೆ ಹಲ್ಲೆ ಮಾಡಲು ಮುಂದಾಗಿದ್ದಾನೆ.‌ ಇದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್ ಅದೇ ಸ್ಥಳದಲ್ಲಿ ಆತನಿಗೆ ಸರಿಯಾಗಿ ಥಳಿಸಿದ್ದಾರೆ. ಇದರ ದೃಶ್ಯ ಸೋಷಿ ಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಮಹಿಳೆಯ ಮೇಲೆ ಹಲ್ಲೆ: ಸೆಕ್ಯೂರಿಟಿ ಗಾರ್ಡ್ ಸಮಯ ಪ್ರಜ್ಞೆಗೆ ನೆಟ್ಟಿಗರು ಫಿದಾ

ಲಿಫ್ಟ್‌ನಲ್ಲಿ ಮಹಿಳೆಗೆ ಲೈಂಗಿಕ ದೌರ್ಜನ್ಯ -

Profile
Pushpa Kumari Apr 24, 2026 5:17 PM

ನವದೆಹಲಿ,ಏ.24: ಇತ್ತೀಚೆಗೆ ಮಹಿಳಾ ಸಬಲಿಕರಣ, ಮಹಿಳೆ ಸುರಕ್ಷತೆ ಎಂದು ಎಷ್ಟೇ ಹೇಳಿದರೂ ಮಹಿಳೆಯರಿಗೆ ಕಿರುಕುಳ ನೀಡುವ ಪ್ರಮಾಣ ಕಮ್ಮಿಯಾಗಿಲ್ಲ‌. ದಿನದಿಂದ ದಿನಕ್ಕೆ ಇಂತಹ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಲಿಫ್ಟ್ ನಲ್ಲಿ ಕಾಮುಕನೊಬ್ಬ ಮಹಿಳೆಗೆ ಹಲ್ಲೆ ಮಾಡಲು ಮುಂದಾಗಿದ್ದಾನೆ.‌ ಇದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್ ಅದೇ ಸ್ಥಳದಲ್ಲಿ ಆತನಿಗೆ ಸರಿಯಾಗಿ ಥಳಿಸಿದ್ದಾರೆ. ಇದರ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.

ಸಿಸಿಟಿವಿ ಕ್ಲಿಪ್‌ನಲ್ಲಿ ಲಿಫ್ಟ್‌ನೊಳಗೆ ಪುರುಷನೊಬ್ಬ ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಕಂಡು ಬಂದಿದೆ.‌ ಆದರೆ ಆಕೆಯ ತ್ವರಿತ ಚಿಂತನೆ ಮತ್ತು ಸೆಕ್ಯೂರಿಟಿ ಗಾರ್ಡ್ ಸಮಯ ಪ್ರಜ್ಞೆಯಿಂದ ಆತನನನ್ನು ತಡೆಯಲು ಸಾಧ್ಯವಾಗಿದೆ. ಸೆಕ್ಯೂರಿಟಿ ಗಾರ್ಡ್ ಮಾಡಿದ ಕೆಲಸಕ್ಕೆ ನೆಟ್ಟಿಗರು ಫಿದಾ ಆಗಿದ್ದು ಇಂತಹ ಕಾಮುಕರಿಗೆ ಹೀಗೆಯೇ ಮಾಡಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಲಿಫ್ಟ್‌ನ ಒಳಗೆ ಕ್ಲಿಪ್ ಪ್ರಾರಂಭವಾಗುತ್ತದೆ, ಅಲ್ಲಿ ಒಬ್ಬ ಪುರುಷ ಮಹಿಳೆಯನ್ನು ಬಲವಂತವಾಗಿ ಹಿಡಿದಿಟ್ಟುಕೊಳ್ಳುವುದನ್ನು ಕಾಣಬಹುದು. ಆತ ಆಕೆಯನ್ನು ತಳ್ಳಿ ದೌರ್ಜನ್ಯ ಎಸಗಲು ಮುಂದಾಗುತ್ತಾನೆ. ಆದರೆ ಮಹಿಳೆ ತನ್ನ ಚಾಕಚಕ್ಯತೆಯಿಂದ ಲಿಫ್ಟ್ ಬಾಗಿಲು ಮುಚ್ಚದಂತೆ ತಡೆಯಲು ಅವರು ಪದೇ ಪದೇ ತಮ್ಮ ಕಾಲನ್ನು ಬಾಗಿಲ ನಡುವೆ ಇಡುತ್ತಿದ್ದರು.

Viral Video: ಶಿಕ್ಷಕಿಗೆ ಬೀಸಣಿಕೆಯಿಂದ ಗಾಳಿ ಹಾಕಿದ ವಿದ್ಯಾರ್ಥಿ: ಸರ್ಕಾರಿ ಶಾಲೆಯ ಶಿಕ್ಷಣ ಗುಣಮಟ್ಟ ಬಗ್ಗೆ ಪ್ರಶ್ನೆ ಮಾಡಿದ ನೆಟ್ಟಿಗರು!

ಈ ಸಂದರ್ಭ ಹೊರಗಿದ್ದ ಭದ್ರತಾ ಸಿಬ್ಬಂದಿಯೂ ತಕ್ಷಣ ಗಮನಿಸಿ ಲಿಫ್ಟ್ ಒಳಗೆಯೇ ಒಳಕ್ಕೆ ಬಂದು ಆತನಿಗೆ ಮನ ಬಂದಂತೆ ಥಳಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಈ ಕ್ಷಣದಲ್ಲಿ, ಮಹಿಳೆ ಲಿಫ್ಟ್‌ನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾಳೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು ಮಹಿಳೆಯ ಸಮಯಪ್ರಜ್ಞೆ ಮತ್ತು ಗಾರ್ಡ್‌ನ ಕೆಲಸಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ಅನೇಕರು ಸೆಕ್ಯೂರಿಟಿ ಗಾರ್ಡ್ ಅನ್ನು ಹೊಗಳಿದ್ದಾರೆ‌. ಒಬ್ಬ ಬಳಕೆದಾರ ಮಹಿಳೆಯ ಪ್ರಯತ್ನವನ್ನು ಶ್ಲಾಘಿಸುತ್ತಾ "ಅವಳೂ ಸಹ ಪುರುಷ, ಸಹಾಯಕ್ಕೆ ಬರುವವರೆಗೂ ಆ ಬಾಗಿಲನ್ನು ತೆರೆದಿಡಲು ಅವಳು ಆ ಪಾದವನ್ನು ಚಾಚಿದ್ದಳು ಎಂದು ಹೇಳಿದ್ದಾರೆ''. ಮತ್ತೊಬ್ಬರು ಇಂತಹ ಕಾಮುಕರಿಗೆ ಹೀಗೆಯೇ ಥಳಿಸಬೇಕು ಎಂದು ಬರೆದಿದ್ದಾರೆ.