ಲೆನ್ಸ್‌ಕಾರ್ಟ್ ಬೆನ್ನಲ್ಲೇ ಏರ್ ಇಂಡಿಯಾದಿಂದಲೂ ʼಸಿಂದೂರʼ ವಿವಾದ: ಸಿಬ್ಬಂದಿಗೆ ಬಿಂದಿ ನಿಷೇಧ
Viral News: ಲೆನ್ಸ್‌ಕಾರ್ಟ್ ಸಂಸ್ಥೆ ಉದ್ಯೋಗಿಗಳಿಗೆ ಡ್ರೆಸ್ ಕೋಡ್ ನಿಯಮ ಜಾರಿಗೆ ತಂದಿತ್ತು. ಅದರಂತೆ ಸಿಬ್ಬಂದಿ ಬಿಂದಿ, ತಿಲಕ ಇಟ್ಟುಕೊಳ್ಳಬಾರದೆಂದು ಹೇಳಿತ್ತು. ಈ ನಿಯಮದ ಸ್ಕ್ರೀನ್ ಶಾಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಘಟನೆ ಬೆನ್ನಲ್ಲೇ ಇದೀಗ ಏರ್ ಇಂಡಿಯಾ ಕ್ಯಾಬಿನ್ ತನ್ನ ಸಿಬ್ಬಂದಿಗೆ ಹೊರಡಿಸಿರುವ ನಿಯಮ ಚರ್ಚೆಗೆ ಕಾರಣವಾಗಿದೆ.
ಏರ್ ಇಂಡಿಯಾ ರೂಲ್ಸ್‌ನ ಸ್ಕ್ರೀನ್ ಶಾಟ್ -
ನವದೆಹಲಿ, ಏ. 18: ಇತ್ತೀಚೆಗೆ ಲೆನ್ಸ್‌ಕಾರ್ಟ್ ಸಂಸ್ಥೆ ಉದ್ಯೋಗಿಗಳಿಗೆ ಡ್ರೆಸ್ ಕೋಡ್ ನಿಯಮ ಜಾರಿಗೆ ತಂದಿತ್ತು. ಅದರಲ್ಲಿ ಸಿಬ್ಬಂದಿಯ ಹಿಜಾಬ್‌ಗೆ ಅನುಮತಿ ನೀಡಿ ಬಿಂದಿ, ತಿಲಕ ಇಟ್ಟುಕೊಳ್ಳಬಾರದು ಎನ್ನುವ ನಿಯಮ ಜಾರಿ ಮಾಡಲಾಗಿತ್ತು. ಈ ರೂಲ್ಸ್‌ನ ಸ್ಕ್ರೀನ್ ಶಾಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿತ್ತು. ಈ ಬಗ್ಗೆ ನೆಟ್ಟಿಗರು ಆಕ್ರೋಶವನ್ನು ಹೊರ ಹಾಕಿದ್ದರು. ಈ ಘಟನೆ ಬೆನ್ನಲ್ಲೇ ಇದೀಗ ಏರ್ ಇಂಡಿಯಾ ಕ್ಯಾಬಿನ್ ತನ್ನ ಸಿಬ್ಬಂದಿಗೆ ಹೊರಡಿಸಿರುವ ರೂಲ್ಸ್ ಚರ್ಚೆಗೆ ಕಾರಣವಾಗಿದೆ.
ಬಳಕೆದಾರ ಪ್ರಣವ್ ಮಹಾಜನ್ ಏರ್ ಇಂಡಿಯಾ ಕ್ಯಾಬಿನ್ ನಿಯಮದ ಹಲವು ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಇಲ್ಲಿರುವ ಚಿತ್ರಗಳು ಬಿಂದಿ, ಸಿಂದೂರ್, ತಿಲಕ ಮತ್ತು ಕಲಾವಾ (ಧಾರ್ಮಿಕ ದಾರ)ನಂತಹ ವಸ್ತುವನ್ನು ಕರ್ತವ್ಯದಲ್ಲಿರುವಾಗ ಅನುಮತಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತವೆ. ಸದ್ಯ ಏರ್ ಇಂಡಿಯಾ ಹೊರಡಿಸಿರುವ ಮಾರ್ಗಸೂಚಿ ಚರ್ಚೆಗೆ ಕಾರಣವಾಗಿದೆ.
It appears that this problem runs much deeper.
— Pranav Mahajan (@pranavmahajan) April 18, 2026
Here are some pictures from the Air India Cabin Crew Handbook. Bindi, Sindoor, Tilak etc not allowed.
Why are they doing this so blatantly?#SocietyFromStreet pic.twitter.com/uqVRbXBwwF
ಏರ್ ಇಂಡಿಯಾದ ಕ್ಯಾಬಿನ್ ಕ್ರೂ ಹ್ಯಾಂಡ್‌ಬುಕ್‌ನ ಕೆಲವು ಪೇಜ್‌ಗಳು ಹರಿದಾಡುತ್ತಿವೆ. ಈ ರೂಲ್ಸ್ ಪ್ರಕಾರ, ಸಿಬ್ಬಂದಿ ಕೆಲಸ ಮಾಡುವಾಗ ಬೊಟ್ಟು, ತಿಲಕ ಅಥವಾ ಕೈಗೆ ಧಾರ್ಮಿಕ ದಾರಗಳನ್ನು ಧರಿಸುವಂತಿಲ್ಲ. ಹೆಚ್ಚಿನ ಕಾರ್ಪೊರೇಟ್‌ಗಳು ಇದೇ ರೀತಿಯ ನಿಯಮಗಳನ್ನು ಹೊಂದಿದೆ ಎಂದು ಅನೇಕರು ಬರೆದುಕೊಂಡಿದ್ದಾರೆ.
ಅತ್ತೆ ನೋಡಿಕೊಳ್ಳಲು ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಿದ ಪತಿ!
ಹಿಂದೂಗಳ ಧಾರ್ಮಿಕ ನಂಬಿಕೆಗಳ ವಿರುದ್ಧ ಹೇಗೆ ತಾರತಮ್ಯ ಮಾಡುತ್ತಾರೆ ಎಂಬುದನ್ನು ಅನೇಕ ಜನರು ಎತ್ತಿ ತೋರಿಸಿದ್ದಾರೆ. ಸಂಸ್ಥೆಯ ಪೋಸ್ಟ್‌ನಲ್ಲಿ ಹಿಂದೂಯೇತರರ ಧಾರ್ಮಿಕ ಉಡುಗೆ ಅಥವಾ ಗುರುತುಗಳನ್ನು ಉಲ್ಲೇಖಿಸಿಲ್ಲ. ಮುಸ್ಲಿಂ ಮಹಿಳಾ ಸಿಬ್ಬಂದಿಗೆ ಹಿಜಾಬ್ ಅಥವಾ ಸಿಖ್ ಪುರುಷನಿಗೆ ಪೇಟ ಧರಿಸಲು ಅವಕಾಶವಿದ್ದರೆ ನಮಗೂ ಬಿಂದಿ ತಿಲಕ ಧರಿಸ ಬಹುದಲ್ಲವೇ? ಎಂದು ಅನೇಕರು ಪ್ರಶ್ನಿಸಿದ್ದಾರೆ. ಇತ್ತೀಚೆಗಷ್ಟೇ ಲೆನ್ಸ್‌ಕಾರ್ಟ್ ಕಂಪನಿಯೂ ಇಂತಹದ್ದೇ ನಿಯಮ ಜಾರಿಗೊಳಿಸಿ ಅಲ್ಲಿನ ಸಂಸ್ಥಾಪಕರು ಕ್ಷಮೆ ಕೇಳಿದ್ದರು. ಇದರ ಬೆನ್ನಲ್ಲೇ ಏರ್ ಇಂಡಿಯಾ ವಿವಾದ ಇದೀಗ ಮತ್ತೆ ಸುದ್ದಿಯಲ್ಲಿದೆ.