ಅಡುಗೆಗೆ ಇಟ್ಟಿಗೆ ಒಗ್ಗರಣೆ ಹಾಕಿದ ಶೆಫ್: ನೀವು ಎಂದಾದರೂ ರುಚಿ ನೋಡಿದ್ರಾ?
Viral Video: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಬೇಕು ಎನ್ನುವ ಉದ್ದೇಶದಿಂದ ಕೆಲವರು ವಿಚಿತ್ರ ರೀತಿಯ ಪ್ರಯೋಗಕ್ಕೆ ಮುಂದಾಗುತ್ತಾರೆ. ಚಲಿಸುವ ವಾಹನಗಳ ಮೇಲೆ ರೀಲ್ಸ್ ಮಾಡುವುದು, ರೈಲು ಹಳಿಗಳ ನಿಂತು ವಿಡಿಯೊ ಶೂಟ್ ಮಾಡುವುದು ಹೀಗೆ...ಇದೀಗ ವೈರಲ್ ಆಗುವ ಉದ್ದೇಶದಿಂದ ಶೆಫ್ ಒಬ್ಬ ಅಡುಗೆಗೆ ಇಟ್ಟಿಗೆ ಒಗ್ಗರಣೆ ಹಾಕಿದ್ದಾನೆ. ಬಾಣಸಿಗನೊಬ್ಬ ಕೆಂಪು ಇಟ್ಟಿಗೆಯನ್ನು ಬಿಸಿ ಮಾಡಿ ಒಗ್ಗರಣೆ ಹಾಕಿದ್ದಾನೆ.
ಅಡುಗೆಗೆ ಇಟ್ಟಿಗೆ ಒಗ್ಗರಣೆ -
ದೆಹಲಿ, ಏ. 22: ಇತ್ತೀಚಿನ ದಿನದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಬೇಕು ಎನ್ನುವ ಉದ್ದೇಶದಿಂದ ಹಲವರು ವಿಚಿತ್ರ ರೀತಿಯ ಪ್ರಯೋಗಕ್ಕೆ ಮುಂದಾಗುತ್ತಾರೆ. ಚಲಿಸುವ ವಾಹನಗಳ ಮೇಲೆ ರೀಲ್ಸ್ ಮಾಡುವುದು, ರೈಲು ಹಳಿಗಳ ನಿಂತು ವಿಡಿಯೊ ಶೂಟ್ ಮಾಡುವುದು ಹೀಗೆ...ಇದೀಗ ವೈರಲ್ (Viral News) ಆಗುವ ಉದ್ದೇಶದಿಂದ ಶೇಫ್ ಒಬ್ಬ ಅಡುಗೆಗೆ ಇಟ್ಟಿಗೆ ಒಗ್ಗರಣೆ ಹಾಕಿದ್ದಾನೆ. ಬಾಣಸಿಗನೊಬ್ಬ ಕೆಂಪು ಇಟ್ಟಿಗೆಯನ್ನು ಬಿಸಿ ಮಾಡಿ ಹೊಗೆಯಾಡುವ ಪರಿಮಳವನ್ನು ಸೃಷ್ಟಿಸಲು ಈ ವಿಚಿತ್ರ ಪ್ರಯೋಗ ಮಾಡಿದ್ದಾನೆ.
ಈ ಹುಚ್ಚು ಸಾಹಸ ನೋಡಿದ ಅನೇಕರು ಈತನ ವಿರುದ್ಧ ಕಿಡಿಕಾರಿದ್ದಾರೆ. ಬೇಯಿಸಿದ ಆಹಾರಕ್ಕೆ 'ಸ್ಮೋಕಿ ಫ್ಲೇವರ್' ಅಂದ್ರೆ ಹೊಗೆಯಾಡಿಸಿದ ರುಚಿ ನೀಡಬೇಕೆಂದು ಬಿಸಿ ಮಾಡಿದ ಕೆಂಪು ಇಟ್ಟಿಗೆಯನ್ನು ಅಡುಗೆಗೆ ಬಳಸಿದ್ದಾನೆ ಎನ್ನಲಾಗಿದೆ. ಕೆಲವರು ಈ ವಿಧಾನವನ್ನು ಭಾರತೀಯ ಅಡುಗೆಯಲ್ಲಿ ಬಳಸುವ ಸಾಂಪ್ರದಾಯಿಕ ವಿಧಾನ ಎಂದು ಕರೆದಿದ್ದಾರೆ. ಇನ್ನು ಹಲವರು ಕಟ್ಟಡ ನಿರ್ಮಾಣಕ್ಕೆ ಬಳಸುವ ಇಟ್ಟಿಗೆಗಳನ್ನು ಆಹಾರ ಬಳಕೆಗಾಗಿ ವಿನ್ಯಾಸಗೊಳಿಸಲಾಗಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ವಿಡಿಯೊ ನೋಡಿ:
Some chef on Instagram posted a reel where he is heating the brick, yes those red brick used in construction. And then putting a tadka on it and then putting it in the food for flavor. 😖
— Chirag Barjatya (@chiragbarjatya) April 20, 2026
Please don't do this ever. Bricks are high in heavy metals like arsenic, cadmium, chromium,… pic.twitter.com/rzRyJO0HSX
ಬಳಕೆದಾರ ಚಿರಾಗ್ ಬರ್ಜಾತ್ಯ ಈ ದೃಶ್ಯ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಬಾಣಸಿಗರು ಇಟ್ಟಿಗೆಯನ್ನು ಬಿಸಿ ಮಾಡುವ ರೀಲ್ಸ್ ಪೋಸ್ಟ್ ಮಾಡಿದ್ದಾರೆ. ಈ ಕೆಂಪು ಇಟ್ಟಿಗೆಗಳನ್ನು ಆಹಾರದಲ್ಲಿ ಸುವಾಸನೆಗಾಗಿ ಬಳಸುತ್ತಾರೆ. ವೈರಲ್ ಆದ ದೃಶ್ಯದಲ್ಲಿ ಶೆಫ್ ಮನೆ ಕಟ್ಟಲು ಬಳಸುವ ಇಟ್ಟಿಗೆಯನ್ನು ಕೆಂಪು ಆಗುವವರೆಗೆ ಕಾಯಿಸಿದ್ದಾನೆ. ನಂತರ ಅದೇ ಬಿಸಿ ಇಟ್ಟಿಗೆಯನ್ನು ಎಣ್ಣೆ ಮತ್ತು ಮಸಾಲೆಯ ಮೇಲೆ ಒಗ್ಗರಣೆ ಹಾಕಿದ್ದಾನೆ. ಇಟ್ಟಿಗೆಯ ಈ ಹೊಗೆಯು ಆಹಾರಕ್ಕೆ ಹೆಚ್ಚಿನ ರುಚಿ ನೀಡಲಿದೆ ಎಂದಿದ್ದಾನೆ.
ಅವಹೇಳನ ಮೆಟ್ಟಿ ನಿಂತು ಯಶಸ್ಸು ಕಂಡ ಸಿಲೇಂದ್ರನ್ ಅರುಣಗಿರಿ
ಈ ಬಗ್ಗೆ ಆಹಾರ ತಜ್ಞರು ಎಚ್ಚರಿಕೆ ನೀಡಿದ್ದು, ದಯವಿಟ್ಟು ಇದನ್ನು ಪ್ರಯತ್ನಿಸಬೇಡಿ ಎಂದಿದ್ದಾರೆ. ಇಟ್ಟಿಗೆಗಳಲ್ಲಿ ಆರ್ಸೆನಿಕ್, ಕ್ಯಾಡ್ಮಿಯಮ್, ಕ್ರೋಮಿಯಂ, ಸೀಸ, ನಿಕಲ್, ತಾಮ್ರ, ಸತು, ಬೇರಿಯಂ,ಮಾಲಿಬ್ಡಿನಮ್, ಬೆಳ್ಳಿ ಮತ್ತು ಬೆರಿಲಿಯಂನಂತಹ ಲೋಹಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇದು ಆರೋಗ್ಯಕ್ಕೆ ಮಾರಕ ಎಂದಿದ್ದಾರೆ. ಈ ವಿಡಿಯೊ ನೋಡಿ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರೊಬ್ಬರು, ʼʼವೈರಲ್ ಆಗಲು ಅನಗತ್ಯ ಕೆಲಸ ಮಾಡುತ್ತಿದ್ದಾರೆ. ತಡ್ಕಾ ಮಾಡಲು ಹಲವು ಮಾರ್ಗಗಳಿವೆ. ಆದರೆ ಅವರು ಇಟ್ಟಿಗೆಯನ್ನು ಆಯ್ಕೆ ಮಾಡಿದ್ದಾರೆʼʼ ಎಂದು ಕಿಡಿಕಾರಿದ್ದಾರೆ. ಮತ್ತೊಬ್ಬರು, ʼʼಮುಂದಿನ ಸಾಹಸ, ಆಹಾರಕ್ಕೆ ಫಿನಾಯಿಲ್ ಸೇರಿಸಿ ಹೊಸ ಪ್ರಯೋಗ ಮಾಡಿʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.