ಮಗುವಿನ ಚೇಷ್ಟೆಗೆ ವಸ್ತು ಸಂಗ್ರಹಾಲಯದಲ್ಲಿದ್ದ 51.5 ಲಕ್ಷ ರುಪಾಯಿ ಮೌಲ್ಯದ ಚಿನ್ನದ ಕಿರೀಟಕ್ಕೆ ಹಾನಿ
ವಸ್ತು ಪ್ರದರ್ಶನವೊಂದರಲ್ಲಿ ಮಗುವೊಂದು ಆಕಸ್ಮಿಕವಾಗಿ ಗಾಜಿನ ಪೆಟ್ಟಿಗೆಯನ್ನು ಮುಟ್ಟಿ ತಳ್ಳಿದ ಕಾರಣ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಗಾಜಿನ ಒಳಗೆ ಇದ್ದ ಸುಮಾರು 2 ಎರಡು ಕೆಜಿ ತೂಕದ ಮದುವೆಯ ಕಿರೀಟ ಕೆಳಗೆ ಬಿದ್ದ ಪರಿಣಾಮ ಹಾನಿಗೊಳಗಾಗಿದೆ. ಸದ್ಯ ಇದರ ದುರಸ್ತಿ ವೆಚ್ಚ ಸುಮಾರು 51.5 ಲಕ್ಷ ರುಪಾಯಿ ತಲುಪಬಹುದು ಎನ್ನಲಾಗಿದೆ.
51.5 ಲಕ್ಷ ಮೌಲ್ಯದ ಚಿನ್ನದ ಕಿರೀಟಕ್ಕೆ ಹಾನಿ -
ಬೀಜಿಂಗ್, ಡಿ.17: ಮಕ್ಕಳ ಬಗ್ಗೆ ಪೋಷಕರು ಎಷ್ಟು ಎಚ್ಚರಿಕೆ ವಹಿಸಿದರೂ ಕಡಿಮೆಯೇ. ಯಾಕೆಂದರೆ ಕೆಲವೊಮ್ಮೆ ಮಕ್ಕಳ ಚೇಷ್ಟೆಯಿಂದ ಇತರರಿಗೆ ತೊಂದರೆಯಾಗುವುದೂ ಇದೆ. ಅಂತೆಯೇ ವಸ್ತು ಪ್ರದರ್ಶನವೊಂದರಲ್ಲಿ ಮಗುವೊಂದು ಆಕಸ್ಮಿಕವಾಗಿ ಗಾಜಿನ ಪೆಟ್ಟಿಗೆಯನ್ನು ಮುಟ್ಟಿ ತಳ್ಳಿದ ಕಾರಣ ಲಕ್ಷಾಂತರ ರುಪಾಯಿ ನಷ್ಟವಾಗಿದೆ. ಗಾಜಿನ ಒಳಗೆ ಇದ್ದ ಸುಮಾರು 2 ಎರಡು ಕೆಜಿ ತೂಕದ ಮದುವೆಯ ಕಿರೀಟ ಕೆಳಗೆ ಬಿದ್ದ ಪರಿಣಾಮ ಹಾನಿಗೊಳಗಾಗಿದೆ. ಸದ್ಯ ಇದರ ದುರಸ್ತಿ ವೆಚ್ಚ ಸುಮಾರು 51.5 ಲಕ್ಷ ರುಪಾಯಿ ತಲುಪಬಹುದು ಎನ್ನಲಾಗಿದೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral Video) ಆಗುತ್ತಿದೆ.
ಚೀನಾದ ಬೀಜಿಂಗ್‌ನಲ್ಲಿರುಚ ಎಕ್ಸ್ ಮ್ಯೂಸಿಯಂನಲ್ಲಿ ಈ ಘಟನೆ ನಡೆದಿದೆ. ಸಾರ್ವಜನಿಕರಿಗಾಗಿ ಮ್ಯೂಸಿಯಂನಲ್ಲಿ ಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು ಈ ವೇಳೆ ಈ ಘಟನೆ ಸಂಭವಿಸಿದೆ. ಮಾಹಿತಿ ಪ್ರಕಾರ, ಚಿಕ್ಕ ಮಗುವೊಂದು ಅಲ್ಲಿದ್ದ ಗಾಜನ್ನು ಪದೇ ಪದೆ ಸ್ಪರ್ಶಿಸಿದೆ. ಈ ವೇಳೆ ಅಚಾನಕ್ಕಾಗಿ ಗಾಜಿನ ಕವಚ ತಪ್ಪಿ ಕೆಳಗೆ ಬಿದ್ದಿದೆ. ಇದರೊಂದಿಗೆ ಒಳಗಿದ್ದ ಬೆಲೆಬಾಳುವ ಚಿನ್ನದ ಕಿರೀಟವೂ ನೆಲಕ್ಕೆ ಉರುಳಿದೆ.
ವಿಡಿಯೊ ಇಲ್ಲಿದೆ:
Child accidentally damages handcrafted golden wedding crown in China
— Visegrád 24 (@visegrad24) December 16, 2025
A child accidentally knocked over a glass display at a museum in Beijing, causing a 2-kilogram golden crown to fall and sustain damage. The artifact is currently undergoing expert assessment.
The… pic.twitter.com/B6Vqk1a1W2
ಈ ಕಿರೀಟವನ್ನು ಸುಮಾರು 2 ಕೆಜಿ ಶುದ್ಧ ಚಿನ್ನದಿಂದ ತಯಾರಿಸಲಾಗಿದೆ. ಇದನ್ನು ಖ್ಯಾತ ಕಲಾವಿದ ಜಾಂಗ್ ಯುಡಾಂಗ್ ಪತ್ನಿ ಸ್ಟಾರ್ ಜಾಂಗ್ ಕೈಯಿ ಅವರಿಗಾಗಿ ವಿವಾಹದ ಉಡುಗೊರೆಯಾಗಿ ವೈಯಕ್ತಿಕವಾಗಿ ವಿನ್ಯಾಸಗೊಳಿಸಿದ್ದಾರೆ. ಈ ದಂಪತಿ ಆಯೋಜಿಸಿದ್ದ ಪ್ರದರ್ಶನದ ಭಾಗವಾಗಿ ಕಿರೀಟವನ್ನು ಇಡಲಾಗಿತ್ತು. ಜ್ಯುವೆಲ್ಲರಿ ತಜ್ಞರ ಪ್ರಕಾರ, ಈ ಕಿರೀಟವನ್ನು ಮೊದಲಿನ ರೂಪಕ್ಕೆ ತರಲು ಕನಿಷ್ಠ 51.5 ಲಕ್ಷ ರುಪಾಯಿ ಖರ್ಚು ಆಗಲಿದೆ ಎಂದು ಅಂದಾಜಿಸಲಾಗಿದೆ.
ಶಾಲೆಯಲ್ಲಿ ಚಿಕ್ಕ ಮಕ್ಕಳಿಂದ ಇಟ್ಟಿಗೆ ಹೊರಿಸಿದ ಶಿಕ್ಷಕಿ: ಆಕ್ರೋಶ
ಈ ದೃಶ್ಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಝಾಂಗ್ ಕೈಯಿ, ಈ ಕಿರೀಟವು ಬಹಳಷ್ಟು ಭಾವನಾತ್ಮಕ ಮತ್ತು ವೈಯಕ್ತಿಕ ಮೌಲ್ಯವನ್ನು ಹೊಂದಿರುವ ವಿಶಿಷ್ಟ ವಸ್ತು ಎಂದು ಬಣ್ಣಿಸಿದ್ದಾರೆ. ಆದರೆ ಅಷ್ಟು ದೊಡ್ಡ ಮೊತ್ತದ ನಷ್ಟ ಸಂಭವಿಸಿದರೂ, ಕಿರೀಟದ ಮಾಲೀಕರಾದ ಜಾಂಗ್ ಕೈಯಿ ಮಗುವಿನ ಪೋಷಕರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ. ಹಾಗೆಯೇ ಅವರ ಬಳಿ ಕೂಡ ಪರಿಹಾರ ಕೇಳಿಲ್ಲ. ಕಿರೀಟಕ್ಕೆ ವಿಮೆ ಮಾಡಲಾಗಿರುವುದರಿಂದ ಮಗುವಿನ ಕುಟುಂಬದಿಂದ ಯಾವುದೇ ಪರಿಹಾರವನ್ನು ತಾನು ಕೇಳಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಸಾರ್ವಜನಿಕರು ಇಂತಹ ಸ್ಥಳಗಳಿಗೆ ಭೇಟಿ ನೀಡಿದಾಗ ಕಲಾಕೃತಿಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಗುವಿನ ಮೇಲೆ ನಿಗಾ ಇಡದ ಪೋಷಕರ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು ಬೇರೆ ಯಾರೇ ಆಗಿದ್ದರೂ ಪೋಷಕರಿಗೆ ಸರಿಯಾದ ದಂಡ ವಿಧಿಸುತ್ತಿದ್ದರು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ಇಷ್ಟು ಮೌಲ್ಯದ ವಸ್ತುವಿನ ಬಳಿ ಮಗುವನ್ನು ಬಿಟ್ಡಿದ್ದೆ ತಪ್ಪು. ಇದು ಪೋಷಕರ ನಿರ್ಲಕ್ಷ್ಯ ಎಂದು ಬರೆದುಕೊಂಡಿದ್ದಾರೆ.