ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹೀಗೊಂದು ಅಚ್ಚರಿ: ಕಾಲಿನ ಗಾಯಕ್ಕೆ ಚಿಕಿತ್ಸೆ ಪಡೆಯಲು ತಾನೇ ಆಸ್ಪತ್ರೆಗೆ ಬಂದ ಬೀದಿನಾಯಿ! ವಿಡಿಯೊ ಇಲ್ಲಿದೆ

Viral Video: ಪ್ರಾಣಿಗಳಿಗೆ ಭಾವನೆ ವ್ಯಕ್ತ ಪಡಿಸಲು ಬರಲ್ಲ ಅಷ್ಟೆ. ಅವುಗಳಿಗೂ ಎಲ್ಲವೂ ಅರ್ಥವಾಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಗಾಯಗೊಂಡ ಬೀದಿ ನಾಯಿಯೊಂದು ಚಿಕಿತ್ಸೆಗಾಗಿ ಪಶುವೈದ್ಯರ ಕ್ಲಿನಿಕ್‌ಗೆ ಆಗಮಿನಿಸಿದೆ.‌ ಬ್ರೆಜಿಲ್‌ನ ಜುವಾಜೈರೊ ದೊ ನಾರ್ಟೆ ನಗರದಲ್ಲಿ ಗಾಯಗೊಂಡ ಬೀದಿನಾಯಿಯೊಂದು ತಾನೇ ನಡೆದುಕೊಂಡು ಪಶುವೈದ್ಯಕೀಯ ಚಿಕಿತ್ಸಾಲಯಕ್ಕೆ ಬಂದಿರುವುದು ಅನೇಕರನ್ನು ಅಚ್ಚರಿಗೆ ದೂಡಿದೆ.

ಚಿಕಿತ್ಸೆ ಪಡೆಯಲು ವೈದ್ಯರ ಬಳಿ ಬಂದ ನಾಯಿ

ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದ ಬೀದಿನಾಯಿ -

Profile
Pushpa Kumari Jan 3, 2026 5:43 PM

ಬ್ರಾಸಿಲಿಯಾ, ಜ. 3: ಮನುಷ್ಯರಂತೆಯೇ ಪ್ರಾಣಿಗಳು ಕೂಡ ವಿವಿಧ ರೀತಿಯಲ್ಲಿ ಭಾವನೆಗಳನ್ನು ವ್ಯಕ್ತಪಡಿಸುತ್ತವೆ. ಪ್ರೀತಿ ಇಟ್ಟು ಸಾಕಿದ ಸಾಕು ಪ್ರಾಣಿಗಳು ಮನೆಯವರನ್ನು ರಕ್ಷಿಸಿದ ಹಲವು ಘಟನೆಗಳನ್ನು ನಾವು ಕಂಡಿದ್ದೇವೆ. ಪ್ರಾಣಿಗಳಿಗೆ ಭಾವನೆ ವ್ಯಕ್ತ ಪಡಿಸಲು ಬರಲ್ಲ. ಆದರೆ ಅವುಗಳಿಗೂ ಎಲ್ಲವೂ ಅರ್ಥವಾಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಗಾಯಗೊಂಡ ಬೀದಿ ನಾಯಿಯೊಂದು ಪಶುವೈದ್ಯರ ಕ್ಲಿನಿಕ್‌ಗೆ ಬಂದು ಚಿಕಿತ್ಸೆ ಪಡೆದ ಹೃದಯ ಸ್ಪರ್ಶಿ ಘಟನೆಯೊಂದು ನಡೆದಿದೆ.‌ ಬ್ರೆಜಿಲ್‌ನ ಜುವಾಜೈರೊ ದೊ ನಾರ್ಟೆ ನಗರದಲ್ಲಿ ಗಾಯಗೊಂಡ ಬೀದಿನಾಯಿಯೊಂದು ತಾನೇ ನಡೆದುಕೊಂಡು ಪಶುವೈದ್ಯಕೀಯ ಚಿಕಿತ್ಸಾಲಯಕ್ಕೆ ಆಗಮಿಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಬ್ರೆಜಿಲ್‌ನಲ್ಲಿ ಬೀದಿ ನಾಯಿಯೊಂದು ಸ್ವತಃ ನೋವಿನಿಂದ ಬಳಲುತ್ತ ಸಹಾಯ ಕೇಳುತ್ತ ಕ್ಲಿನಿಕ್‌ಗೆ ಬಂದಿದ್ದು ಪಶು ವೈದ್ಯರನ್ನು ಬೆರಗುಗೊಳಿಸಿದೆ. ಸಿಸಿಟಿವಿ ದೃಶ್ಯದ ಪ್ರಕಾರ, ನಾಯಿಯು ನೋವಿನಿಂದ ಕುಂಟುತ್ತ ನಿಧಾನವಾಗಿ ಆಸ್ಪತ್ರೆಯ ಒಳಗೆ ಪ್ರವೇಶಿಸಿದೆ. ಯಾವುದೇ ಭಯವಿಲ್ಲದೆ ನಾಯಿ ವೈದ್ಯರ ಗಮನಕ್ಕಾಗಿ ಕಾದು ಕುಳಿತಿದೆ. ಅಲ್ಲಿನ ಮಹಿಳಾ ಸಿಬ್ಬಂದಿ ಅದನ್ನು ಗಮನಿಸಿ ಹತ್ತಿರ ಬಂದಾಗ, ನಾಯಿ ತನ್ನ ನೋವಿನ ಕಾಲನ್ನು ತೋರಿಸಿ ಚಿಕಿತ್ಸೆ ನೀಡುವಂತೆ ಸನ್ನೆ ಮಾಡಿದೆ.

ವಿಡಿಯೊ ನೋಡಿ:



ಗಾಯಗೊಂಡ ನಾಯಿ ಕ್ಲಿನಿಕ್‌ನ ತೆರೆದ ಬಾಗಿಲಿನ ಮೂಲಕ ಕುಂಟುತ್ತ ಬರುತ್ತಿರುವುದನ್ನು ವಿಡಿಯೊ ತೋರಿಸುತ್ತದೆ. ಪಶು ವೈದ್ಯಕೀಯ ಸಿಬ್ಬಂದಿ ನಾಯಿಯನ್ನು ಗಮನಿಸಿದಾಗ, ನಾಯಿ ತನ್ನ ಗಾಯಗೊಂಡ ಕಾಲನ್ನು ನಿಧಾನವಾಗಿ ಮೇಲಕ್ಕೆತ್ತಿ, ಪ್ರತಿರೋಧವಿಲ್ಲದೆ ಅದನ್ನು ಪರೀಕ್ಷಿಸಲು ಅವಕಾಶ ಮಾಡಿ ಕೊಟ್ಟಿದೆ. ಆರಂಭದಲ್ಲಿ ನಾಯಿಗೆ ಸಣ್ಣ ಗಾಯವೆಂದು ಕಂಡುಬಂದಿದ್ದರೂ ಅದು ಹೆಚ್ಚು ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಸೂಕ್ಷ್ಮವಾಗಿ ಪಶುವೈದ್ಯರು ಗಮನಿಸಿದಾಗ ನಾಯಿಯ ಕಾಲಿನಲ್ಲಿ ಕ್ಯಾನ್ಸರ್ ಗೆಡ್ಡೆ ಆಗಿದೆ ಎಂದು ಖಚಿತ ಪಡಿಸಿಕೊಂಡರು.

ಫ್ಲೈಓವರ್‌ನಲ್ಲಿ ಹುಟ್ಟುಹಬ್ಬ ಆಚರಣೆ; FIR ಆಗುತ್ತಲೇ ಕ್ಷಮಿಸಿ ಎಂದು ಬೇಡಿಕೊಂಡ ಯುವಕ

ಈ ಮಾರಣಾಂತಿಕ ಕಾಯಿಲೆಯಿಂದ ಅದು ಬಹಳ ದಿನಗಳಿಂದ ನರಳುತ್ತಿತ್ತು. ತಕ್ಷಣವೇ ಸ್ಪಂದಿಸಿದ ವೈದ್ಯರು ಅದಕ್ಕೆ ಕೀಮೋಥೆರಪಿ ಚಿಕಿತ್ಸೆಯನ್ನು ನೀಡಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಹಲವಷ್ಟು ಜನರು ಶ್ವಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು ಮನುಷ್ಯರಿಗಿಂತಲೂ ಪ್ರಾಣಿಗಳು ಹೆಚ್ಚು ಬುದ್ಧಿವಂತ ಮತ್ತು ಸೂಕ್ಷ್ಮ ಜೀವಿಗಳು ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಮನುಷ್ಯಗಿರಿಂತ ಹೆಚ್ಚು ಬುದ್ದಿ ಪ್ರಾಣಿಗಳಿಗೆ ಇದೆ ಎಂದು ಕಮೆಂಟ್ ಮಾಡಿದ್ದಾರೆ.