ಬೀಚ್‌ಗಳಲ್ಲಿ ಕಸದ ರಾಶಿ ನೋಡಿ ವಿದೇಶಿ ಪ್ರವಾಸಿಗ ಕಿಡಿ ಕಿಡಿ; ಭಾರತೀಯರಲ್ಲಿನ ಶಿಸ್ತಿನ ಕೊರತೆ ಬಗ್ಗೆ ಕಳವಳ
Viral Video: ಸಾರ್ವಜನಿಕ ಸ್ಥಳಗಳಲ್ಲಿ ಭಾರತೀಯರು ಅಜಾಗರೂಕತೆಯಿಂದ ವರ್ತಿಸಿ ಕಸ ಹಾಕುವುದಕ್ಕೆ ವಿದೇಶಿ ಬ್ಲಾಗರ್ ಒಬ್ಬರು ಕಿಡಿಕಾರಿದ್ದಾರೆ. ಜನರು ಯಾಕೆ ಬುದ್ದಿ ಇಲ್ಲದಂತೆ ವರ್ತಿಸುತ್ತಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ನಾಗರಿಕ ಪ್ರಜ್ಞೆ ಬಗ್ಗೆ ಪ್ರಶ್ನಿಸಿದ ವಿದೇಶಿ ಪ್ರವಾಸಿಗ -
ನವದೆಹಲಿ, ಏ. 27: ಇತ್ತೀಚೆಗೆ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿ ಅಶಿಸ್ತಿನಿಂದ ವರ್ತಿಸುವ ಪ್ರಕರಣ ಜಾಸ್ತಿಯಾಗುತ್ತಿದೆ. ಬೇಕಾಬಿಟ್ಟಿಯಾಗಿ ಎಲ್ಲೆಡೆ ಕಸ ಹಾಕುವುದು, ಪ್ರವಾಸಿ ಸ್ಥಳಗಳ ನಿಯಮ ಮುರಿಯುವುದು ಹೀಗೆ ಅಶಿಸ್ತಿನಿಂದ ವರ್ತಿಸುತ್ತಾರೆ. ಅದರಲ್ಲೂ ಭಾರತೀಯರು ಅಶಿಸ್ತಿನಿಂದ ವರ್ತಿಸುತ್ತಾರೆ. ಇದೀಗ ಸಾರ್ವಜನಿಕ ಸ್ಥಳಗಳಲ್ಲಿ ಭಾರತೀಯರು ಅಜಾಗರೂಕತೆಯಿಂದ ವರ್ತಿಸಿ ಕಸ ಹಾಕುವುದಕ್ಕೆ ವಿದೇಶಿ ಬ್ಲಾಗರ್ ಒಬ್ಬರು ಕಿಡಿಕಾರಿದ್ದಾರೆ. ಜನರು ಯಾಕೆ ಬುದ್ದಿ ಇಲ್ಲದಂತೆ ವರ್ತಿಸುತ್ತಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.
ಜೋಯ್ ಟ್ರಾವೆಲ್ಸ್ ಎಂಬ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೊದಲ್ಲಿ ಪ್ರವಾಸಿ ತಾನು ಎದುರಿಸಿದ "ಅತ್ಯಂತ ಕಸದ ಕಡಲತೀರ" ಎಂದು ವಿಡಿಯೊದಲ್ಲಿ ವಿವರಿಸಿದ್ದಾರೆ. ಜನರು ಜವಾಬ್ದಾರಿ ಮರೆತು ಎಲ್ಲೆಂದರಲ್ಲಿ ತಿಂದು ಕಸ ಎಸೆಯುವ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಸ್ವಚ್ಛವಾಗಿರುವ ಪರಿಸರವನ್ನು ಕೂಡ ಈ ರೀತಿಯಾಗಿ ಹಾಳುಗೆಡುವುದು ತಪ್ಪು ಎಂದು ಕಿಡಿಕಾರಿದ್ದಾರೆ
ವಿಡಿಯೊ ನೋಡಿ:
ಜೋಯ್ ಟ್ರಾವೆಲ್ಸ್ ಎಂಬ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೊದಲ್ಲಿ, ಪ್ರವಾಸಿ ತಾನು ನೋಡಿದ ಅತ್ಯಂತ ಗಲೀಜಾದ ಬೀಚ್ ಇದು ಹೇಳಿಕೊಂಡಿದ್ದಾರೆ. ಅಲ್ಲಲ್ಲಿ ಬಿದ್ದಿರುವ ಪ್ಲಾಸ್ಟಿಕ್, ಕಸದ ತ್ಯಾಜ್ಯದ ಹತ್ತಿರ ನಿಂತಿರುವ ಅವರು ಸ್ವಚ್ಛಗೊಳಿಸದಿರುರುವ ಕುರಿತು ಸ್ಥಳೀಯರನ್ನು ಟೀಕಿಸಿದ್ದಾರೆ. ಈ ರೀತಿ ವರ್ತಿಸುವುದು ನಾಚಿಕೆಗೇಡಿನ ಸಂಗತಿ ಎಂದು ಕರೆದಿದ್ದಾರೆ.
ಸೆಲ್ಫಿಗಾಗಿ ವಿದೇಶಿ ಮಹಿಳೆ ಹಿಂದೆ ಬಿದ್ದ ಯುವಕರು
ಅನೇಕ ಜನರು ಸ್ವಚ್ಛತೆಯನ್ನು ನಾಗರಿಕ ಕರ್ತವ್ಯಕ್ಕಿಂತ ಹೆಚ್ಚಾಗಿ ಸರ್ಕಾರದ ಜವಾಬ್ದಾರಿಯಾಗಿ ಪರಿಗಣಿಸುತ್ತಾರೆ. ಅವರ ಪ್ರಕಾರ, ಸಮಸ್ಯೆಯ ಮೂಲವು ಮನಸ್ಥಿತಿಯಲ್ಲಿದೆ. ಜನರು ಕಸ ಹಾಕಿ ಸರ್ಕಾರವನ್ನು ದೂರುವುದು ತಪ್ಪು ಎಂದಿದ್ದಾರೆ. ಈ ಪೋಸ್ಟ್ ಎರಡು ದಿನಗಳಲ್ಲಿ 77,000ಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ. ಅನೇಕರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ನೆಟ್ಟಿಗರೊಬ್ಬರು, ʼʼಈ ರೀತಿ ಜನರು ಜವಾಬ್ದಾರಿ ಇಲ್ಲದಂತೆ ವರ್ತಿಸುವುದು ತಪ್ಪುʼʼ ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼವಿದೇಶಿ ಪ್ರವಾಸಿಗ ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ. ಜನರ ಮನಸ್ಥಿತಿ ಬದಲಾವಣೆಗೊಳ್ಳದೆ ಏನು ಮಾಡಲು ಸಾಧ್ಯವಿಲ್ಲʼʼ ಎಂದಿದ್ದಾರೆ.