ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನ್ಯಾಯಾಲಯದಲ್ಲೇ ಮಾರಾಮಾರಿ ಹೊಡೆದಾಟ: ವಿಚಾರಣೆ ಮುಗಿಸಿ ಬಂದು ಪತ್ನಿಯ ಕುತ್ತಿಗೆ ಹಿಸುಕಿದ ಗಂಡ!

Viral Video: ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನ ಕುಟುಂಬ ನ್ಯಾಯಾಲಯದ ಆವರಣದಲ್ಲಿಯೇ ಗಂಡ- ಹೆಂಡತಿ ಹಾಗೂ ಅವರ ಸಂಬಂಧಿಕರು ಹಿಂಸಾತ್ಮಕವಾಗಿ ಹೊಡೆದು ಕೊಂಡಿರುವ ಘಟನೆ ನಡೆದಿದೆ. ನ್ಯಾಯಾಲಯದ ಆವರಣದಲ್ಲಿ ಒಬ್ಬರಿಗೊಬ್ಬರು ಕಪಾಳಮೋಕ್ಷ ಹಾಗೂ ಗುದ್ದಾಟ ಮಾಡಿ ಕೊಂಡಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.

ಕೋರ್ಟ್ ಆವರಣದಲ್ಲೇ ಪತಿ- ಪತ್ನಿಯ ರಂಪಾಟ: ವಿಡಿಯೊ ವೈರಲ್!

ಕೋರ್ಟ್ ಆವರಣದಲ್ಲೇ ಪತಿ- ಪತ್ನಿಯ ರಂಪಾಟ -

Profile
Pushpa Kumari Sep 27, 2026 12:51 PM

ಉತ್ತರ ಪ್ರದೇಶ,ಸೆ.27: ಗಂಡ- ಹೆಂಡತಿಯ ವೈಯಕ್ತಿಕ ವಿಚಾರಗಳು ಇಂದು ಬೀದಿಗೆ ಬರುವಂತಹ ಅನೇಕ ಘಟನೆಗಳು ನಡೆಯುತ್ತಿವೆ. ಇದೀಗ ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನ ಕುಟುಂಬ ನ್ಯಾಯಾಲಯದ ಆವರಣದಲ್ಲಿಯೇ ಗಂಡ- ಹೆಂಡತಿ ಹಾಗೂ ಅವರ ಸಂಬಂಧಿಕರು ಹಿಂಸಾತ್ಮಕ ವಾಗಿ ಹೊಡೆದು ಕೊಂಡಿರುವ ಘಟನೆ ನಡೆದಿದೆ. ನ್ಯಾಯಾಲಯದ ಆವರಣದಲ್ಲಿ ಒಬ್ಬರಿಗೊಬ್ಬರು ಕಪಾಳಮೋಕ್ಷ ಹಾಗೂ ಗುದ್ದಾಟ ಮಾಡಿ ಕೊಂಡಿರುವ ದೃಶ್ಯಗಳು ವಿಡಿಯೋದಲ್ಲಿ (Viral News) ಸೆರೆಯಾಗಿದೆ.

ಡಿವೊರ್ಸ್ ವಿಚಾರಣೆ ಮುಗಿಸಿ ಕೋರ್ಟ್‌ನ ಹಾಲ್‌ನಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ಸಮರ್ಧಿರಾ ನಿವಾಸಿ ಪ್ರಿಯಾ ತ್ರಿಪಾಠಿ ಮತ್ತು ಕೊಯಿಲಾಡಾದ ಮನೀಷ್ ಕುಮಾರ್ ಎಂಬವರ ನಡುವೆ ದಾಂಪತ್ಯ ಕಲಹ ಬಂದಿದ್ದು ಕಳೆದ ಹಲವು ದಿನಗಳಿಂದ ವಿಚಾರಣೆ ನಡೆಯುತ್ತಿತ್ತು.

ವಿಡಿಯೋ ನೋಡಿ:



ಈ ವೇಳೆ ಮನೀಷ್ ತನ್ನ ಮೇಲೆ ಹಲ್ಲೆ ನಡೆಸಿ,ಕುತ್ತಿಗೆ ಹಿಸುಕಲು ಯತ್ನಿಸಿದ್ದಾನೆ ಎಂದು ಪ್ರಿಯಾ ಅವರು ಆರೋಪ ಮಾಡಿದ್ದಾರೆ. ಇದನ್ನು ತಡೆಯಲು ಬಂದ ತಂದೆ ಲಕ್ಷ್ಮೀಕಾಂತ್ ಮತ್ತು ಸಹೋದರಿ ಪ್ರಿಯಾಂಕಾ ಮೇಲೆಯೂ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

Viral Video: ಮನುಷ್ಯರಂತೆ ವಾನರ ಪಡೆಗೂ ಓಣಂ ವಿಶೇಷ ಭೋಜನ: ಇದು ದೇವರ ನಾಡಿನ ಅಯ್ಯಪ್ಪ ಸ್ವಾಮಿ ದೇವಾಲಯದ ವಿಶಿಷ್ಟ ಆಚರಣೆ

ವಿಡಿಯೋ ದೃಶ್ಯಾವಳಿಗಳಲ್ಲಿ, ಯುವತಿಯ ಮೇಲೆ ಹಲ್ಲೆ ನಡೆದ ನಂತರ ಪ್ರಿಯಾ ಅವರೊಂದಿಗೆ ಬಂದಿದ್ದ ವ್ಯಕ್ತಿಯೊಬ್ಬ ಮನೀಶ್‌ಗೆ ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು. ಸುತ್ತಮುತ್ತಲ ಜನರು ಈ ಸಂಘರ್ಷವನ್ನು ನೋಡುತ್ತಿ ರುವಾಗ ಮನೆಯ ಸಂಬಂಧಿಕರು ಪರಸ್ಪರ ಗುದ್ದಾಟ ಮತ್ತು ಕಪಾಳ ಮೋಕ್ಷ ಮಾಡಿಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು.

ಎರಡೂ ಕಡೆಯವರು ಕೈಕೈ ಮಿಲಾಯಿಸಿ, ಪರಸ್ಪರ ಹಲ್ಲೆ ಮಾಡಿಕೊಳ್ಳುವುದು ಸೆರೆಯಾಗಿದೆ. ಕೋರ್ಟ್ ಆವರಣದಲ್ಲಿದ್ದ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು ಇಬ್ಬರನ್ನೂ ಬಂಧಿಸಲಾಗಿದೆ ಎಂದು ಕೊತ್ವಾಲಿ ಮಹಾರಾಜ್‌ಗಂಜ್‌ನ ಸ್ಟೇಷನ್ ಹೌಸ್ ಆಫೀಸರ್ ಧರ್ಮೇಂದ್ರ ಸಿಂಗ್ ತಿಳಿಸಿದ್ದಾರೆ. ಘರ್ಷಣೆಗೆ ಕಾರಣವಾದ ವಿಚಾರಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ