ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜೆಮಿನಿ ಎಐ ಬಳಸಿ ಕೃತಕ ಮೊಸಳೆ ಸೃಷ್ಟಿ: ಸುಳ್ಳು ಮಾಹಿತಿ ಹರಡಿದ ವ್ಯಕ್ತಿಗೆ 3 ವರ್ಷ ಜೈಲು ಶಿಕ್ಷೆ

Viral News: ಎಐ ತಂತ್ರಜ್ಞಾನ ಬಳಸಿ ನಕಲಿ ಮಾಹಿತಿ, ಫೋಟೊ ಬಳಸಿ ನೈಜ ಎಂಬಂತೆ ಬಿಂಬಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಸಿಂಗಾಪುರದ ವ್ಯಕ್ತಿಯೊಬ್ಬ ಜೆಮಿನಿ ಆ್ಯಪ್ ಬಳಸಿ ಕೃತಕವಾಗಿ ಸೃಷ್ಟಿಸಿದ ಮೊಸಳೆ ಫೋಟೊ ಕಳಿಸಿ ತೊಂದರೆಗೆ ಸಿಲುಕಿದ್ದಾನೆ. ನಕಲಿ ಎಐ ಫೋಟೊ ಹಂಚಿಕೊಂಡು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದು ಮತ್ತು ಸರ್ಕಾರದ ಸಂಪನ್ಮೂಲಗಳನ್ನು ಅನವಶ್ಯಕವಾಗಿ ಬಳಸುವಂತೆ ಮಾಡಿದ್ದಕ್ಕೆ ವ್ಯಕ್ತಿಗೆ ಕಠಿಣ ಶಿಕ್ಷೆಯನ್ನು ನೀಡಲಾಗಿದೆ.

ಸ್ನೇಹಿತನಿಗೆ ನಕಲಿ ಮೊಸಳೆ ಫೋಟೊ ಕಳುಹಿಸಿ ಜೈಲು ಶಿಕ್ಷೆಗೆ ಒಳಗಾದ ವ್ಯಕ್ತಿ

ಸಾಂದರ್ಭಿಕ ಚಿತ್ರ -

Profile
Pushpa Kumari Oct 4, 2026 10:15 PM

ಸಿಂಗಾಪುರ, ಅ. 4: ಆಧುನಿಕ ಯುಗದಲ್ಲಿ ತಂತ್ರಜ್ಞಾನ ಅಭಿವೃದ್ಧಿಯಾಗಿವೆ. ಅದರಲ್ಲೂ ಎಐ ಬಳಕೆಯಂತೂ ಇಂದು ಸಾಮಾನ್ಯ ಜೀವನದಲ್ಲೂ ಮುಖ್ಯ ಎಂಬಂತಾಗಿದೆ. ಈ ನಡುವೆ ಎಐ ತಂತ್ರಜ್ಞಾನ ಬಳಸಿ ನಕಲಿ ಮಾಹಿತಿ, ಫೋಟೊ ಬಳಸಿ ನೈಜ ಎಂಬಂತೆ ಬಿಂಬಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಸಿಂಗಾಪುರದ ವ್ಯಕ್ತಿಯೊಬ್ಬ ಜೆಮಿನಿ ಆ್ಯಪ್ ಬಳಸಿ ಕೃತಕವಾಗಿ ಸೃಷ್ಟಿಸಿದ ಮೊಸಳೆ ಫೋಟೊ ಕಳಿಸಿ (Viral News) ತೊಂದರೆಗೆ ಸಿಲುಕಿದ್ದಾನೆ. ನಕಲಿ ಎಐ ಫೋಟೊ ಹಂಚಿಕೊಂಡು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದು ಮತ್ತು ಸರ್ಕಾರದ ಸಂಪನ್ಮೂಲಗಳನ್ನು ಅನವಶ್ಯಕ ವಾಗಿ ಬಳಸುವಂತೆ ಮಾಡಿದ್ದಕ್ಕೆ ವ್ಯಕ್ತಿಗೆ ಕಠಿಣ ಶಿಕ್ಷೆ ನೀಡಲಾಗಿದೆ.

ಆಗಸ್ಟ್ 20ರಂದು ಸಿಂಗಾಪುರದ ಯೇ ಲಿನ್ ಎಂಬ ವ್ಯಕ್ತಿ ಜೆಮಿನಿ ಆ್ಯಪ್ ಬಳಸಿ ಮೊಸಳೆಯನ್ನು ಕೃತಕವಾಗಿ ಸೃಷ್ಟಿಸಿ  ಸ್ನೇಹಿತನಿಗೆ ಫೋಟೊ ಕಳುಹಿಸಿದ್ದ. ಈ ಫೋಟೊ ವೈರಲ್ ಆಗುತ್ತಿದ್ದಂತೆ ನಿಜವೆಂದು ಭಾವಿಸಿ ಸಿಂಗಾಪುರದ ರಾಷ್ಟ್ರೀಯ ಜಲ ಸಂಸ್ಥೆ PUBಗೆ ಪಾಂಡನ್ ಜಲಾಶಯದಲ್ಲಿ ಬೃಹತ್ ಶೋಧ ಕಾರ್ಯ ಆರಂಭಿಸಿದೆ. ಅಲ್ಲಿದ್ದ ಜನರಿಗೆ ಕಟ್ಟೆಚ್ಚರ ನೀಡಲಾಗಿ ಜಲಾಶಯದಲ್ಲಿನ ದೋಣಿ ವಿಹಾರ ಮತ್ತು ಜಲ ಕ್ರೀಡೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

ವಿಮಾನ ಪ್ರಯಾಣದ ವೇಳೆ ಬಟ್ಟೆ ಕಳಚಿ ಕಾಕ್‌ಪಿಟ್‌ಗೆ ನುಗ್ಗಲು ಯತ್ನಿಸಿದ ಮಹಿಳೆ

ಲಿನ್ ಎಐ ಚಿತ್ರಗಳನ್ನು ಹಂಚಿಕೊಂಡ ನಂತರ ಅವುಗಳನ್ನು ಡಿಲೀಟ್‌ ಮಾಡಿದ್ದಾರೆ. ಅಲ್ಲದೆ, ಅವರು ತಮ್ಮ ಮೊಬೈಲ್ ಫೋನ್‌ನಲ್ಲಿರುವ 'ಜೆಮಿನಿ AI' ಆ್ಯಪ್‌ನ ಹಿಸ್ಟ್ರಿಯನ್ನೂ  ಅಳಿಸಿ ಹಾಕಿದ್ದಾರೆ. ಬಳಿಕ‌ ​ಆಗಸ್ಟ್ 21ರಂದು ಪರಿಶೀಲನೆ ನಡೆಸಿದ ಅಧಿಕಾರಿಗಳು ಫೋಟೊ ನಕಲಿ ಎಂದು ತಿಳಿದುಕೊಂಡು ಪೊಲೀಸರಿಗೆ ದೂರು ನೀಡಿದರು.

ನಕಲಿ ಎಐ ಫೋಟೊ ಹಂಚಿಕೊಂಡು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದ್ದು ಮತ್ತು ಸರ್ಕಾರದ ಸಂಪನ್ಮೂಲಗಳನ್ನು ವ್ಯರ್ಥವಾಗಿ ಬಳಸುವಂತೆ ಮಾಡಿದ ಕಾರಣ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ಸುಮಾರು 6.2 ಲಕ್ಷ‌ ರೂಪಾಯಿವರೆಗೆ ದಂಡ ವಿಧಿಸಲಾಗಿದೆ.‌ ಲಿನ್ ನ್ಯಾಯಾಲಯದಲ್ಲಿ ವಕೀಲರನ್ನು ನೇಮಿಸಿಕೊಳ್ಳದೆ, ತಮ್ಮ ಮೇಲಿರುವ ಎರಡೂ ಆರೋಪಗಳನ್ನು ಒಪ್ಪಿಕೊಳ್ಳುವುದಾಗಿ ತಿಳಿಸಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 10ರಂದು ನಡೆಯಲಿದೆ.