ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಾರ್ಪೊರೇಟ್ ಆಫೀಸ್ ಹೊರಗೆ ಒಂದೇ ದಿನ 450 ಕಪ್ ಕಾಫಿ ಮಾರಾಟ ಮಾಡಿ 18,000 ರೂಪಾಯಿ ಸಂಪಾದಿಸಿದ ಕಂಟೆಂಟ್ ಕ್ರಿಯೇಟರ್

Viral News: ಕಂಟೆಂಟ್ ಕ್ರಿಯೇಟರ್ ಒಬ್ಬರು ಕಾರ್ಪೊರೇಟ್ ಉದ್ಯೋಗದ ಬದಲಿಗೆ ಕಾರ್ಪೊರೇಟ್ ಆಫೀಸ್ ಹೊರಗೆ ಸ್ವಂತವಾಗಿ ಸಣ್ಣ ಪಾನೀಯದ ಉದ್ಯಮ ಪ್ರಾರಂಭಿಸಿದರೆ ಅದು ಎಷ್ಟರ ಮಟ್ಟಿಗೆ ಸಕ್ಸಸ್ ಕಾಣಬಹುದು ಎಂದು ತಿಳಿಯಲು ವಿಭಿನ್ನ ಪ್ರಯೋಗ ಮಾಡಿ ಗಮನ ಸೆಳೆದಿದ್ದಾರೆ.

ಕಾರ್ಪೊರೇಟ್ ಆಫೀಸ್ ಹೊರಗೆ ಕಾಫಿ ಮಾರಾಟ ಲಾಭ ಗಳಿಸಿದ ಯುವಕ

ಕಾರ್ಪೊರೇಟ್ ಆಫೀಸ್ ಹೊರಗೆ ಕಾಫಿ ಮಾರಾಟ ಮಾಡಿದ ಕಟೆಂಟ್‌ ಕ್ರಿಯೇಟರ್‌ -

Profile
Pushpa Kumari Oct 4, 2026 10:24 PM

ನವದೆಹಲಿ, ಅ. 4: ಕಾರ್ಪೊರೇಟ್ ಉದ್ಯೋಗದ ಒತ್ತಡದ ಬಗ್ಗೆ ಅನೇಕರು ಬೇಸರ ಹೊರ ಹಾಕುತ್ತಲೇ ಇರುತ್ತಾರೆ. ಕೆಲಸದ ಅವಧಿ, ಕಂಪನಿಯ ಟಾರ್ಗೆಟ್ ಹೀಗೆ ನಾನಾ ಕಾರಣದಿಂದ  ವೈಯಕ್ತಿಕ ಕೆಲಸಕ್ಕೂ ಸಮಯ ಸಿಗದೇ ಉದ್ಯೋಗ ಬಿಟ್ಟವರು ಅನೇಕರಿದ್ದಾರೆ. ಇದೀಗ ಕಂಟೆಂಟ್ ಕ್ರಿಯೇಟರ್ ಒಬ್ಬರು ಕಾರ್ಪೊರೇಟ್ ಉದ್ಯೋಗದ ಬದಲಿಗೆ ಕಾರ್ಪೊರೇಟ್ ಆಫೀಸ್ ಹೊರಗೆ ಸ್ವಂತವಾಗಿ ಸಣ್ಣ ಪಾನೀಯದ ಉದ್ಯಮ ಪ್ರಾರಂಭಿಸಿದರೆ ಅದು ಎಷ್ಟರ ಮಟ್ಟಿಗೆ ಸಕ್ಸಸ್ ಕಾಣಬಹುದು ಎಂದು ತಿಳಿಯಲು ವಿಭಿನ್ನ ಪ್ರಯೋಗ (Viral News) ಮಾಡಿದ್ದಾರೆ.

ದೇವಂಶ್ತ್ಯಾಗಿ ಎಂಬ ಕಂಟೆಂಟ್ ಕ್ರಿಯೇಟರ್ ವಿಭಿನ್ನ ಪ್ರಯೋಗವನ್ನು ಮಾಡಿ ಗಮನ ಸೆಳೆದಿದ್ದಾರೆ. ಕಾರ್ಪೊರೇಟ್ ಆಫೀಸ್‌ನ ಹೊರಗಡೆ ಸಣ್ಣದಾದ ಕಾಫಿ ಸ್ಟಾಲ್ ತೆರೆದಿದ್ದಾರೆ. ವಿಡಿಯೊದಲ್ಲಿ ಅವರು ಟೇಬಲ್, ಗ್ಯಾಸ್ ಸ್ಟೌ, ಇನ್‌ಸ್ಟಂಟ್ ಕಾಫಿ, ಕಪ್‌ಗಳು, ಪಾತ್ರೆಗಳು ಮತ್ತು ಇತರ ಸಾಮಗ್ರಿಗಳೊಂದಿಗೆ ಸ್ಟಾಲ್ ಸ್ಥಾಪಿಸುತ್ತಿರುವುದು ಕಂಡುಬಂದಿದೆ. ಗ್ರಾಹಕರಿಗೆ ವಿಭಿನ್ನ ಕಾಫಿ ಅನುಭವ ನೀಡಲು ನಾಲ್ಕು ಬಗೆಯ ಫ್ಲೇವರ್ ಕಾಫಿ ಬಳಸಿದ್ದಾರೆ‌. ಪ್ರತಿ ಕಪ್‌ಗೆ 40 ರೂಪಾಯಿ ದರದಲ್ಲಿ ಮಾರಾಟ ಮಾಡಿದ್ದಾರೆ.

ವಿಡಿಯೊ ನೋಡಿ:

ಬೆಳಗ್ಗಿನ ಜಾವವೇ ಅವರು ಎಲ್ಲವನ್ನೂ ಸಿದ್ಧಪಡಿಸಿಕೊಂಡಿದ್ದು 10 ಗಂಟೆಯ ವೇಳೆಗೆ ಪುಟ್ಟ ಕಾಫಿ ಅಂಗಡಿ ಸಿದ್ಧವಾಗಿದೆ. ​ಮೊದಲ 2 ಗಂಟೆಗಳಲ್ಲಿ 40 ಕಪ್ ಕಾಫಿ ಮಾರಾಟವಾಗಿದ್ದು ​ಮಧ್ಯಾಹ್ನ ಹೊತ್ತಿಗೆ ವ್ಯಾಪಾರ ಕಡಿಮೆಯಾಗಿತ್ತು. ಆದರೆ ​ಸಂಜೆ ಕೆಲಸ ಮುಗಿಸಿ ಹೊರಬಂದ ಉದ್ಯೋಗಿಗಳ ಸಂಖ್ಯೆ ಹೆಚ್ಚಾದಂತೆ ಕಾಫಿ ಬೇಡಿಕೆ ಹೆಚ್ಚಾಗಿದೆ.

ರಾಜಸ್ಥಾನ ಎಕ್ಸ್‌ಪ್ರೆಸ್‌ವೇಯಲ್ಲೇ ಪಾರ್ಟಿ ಮಾಡಿದ ಕುಟುಂಬ

​ದಿನದ ಕೊನೆಯಲ್ಲಿ ಅವರು ಒಟ್ಟು 450 ಕಪ್‌ಗಳನ್ನು ಮಾರಾಟ ಮಾಡಿ, 18,000 ರೂಪಾಯಿ ಆದಾಯ ಗಳಿಸಿರುವುದಾಗಿ ತಿಳಿಸಿದ್ದಾರೆ. ಈ ಪ್ರಯೋಗವು ಆನ್‌ಲೈನ್‌ನಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಕೆಲವರು ವಿಡಿಯೊದಲ್ಲಿ ತೋರಿಸಿರುವಂತೆ ಪ್ರತಿದಿನ 450 ಕಪ್‌ಗಳನ್ನು ಮಾರಾಟ ಮಾಡುವುದು ಅಷ್ಟು ಸುಲಭವಲ್ಲ ಎಂದು ಹೇಳಿದರೆ, ಇನ್ನು ಕೆಲವರು ತಿಂಗಳಿಗೆ 35,000 ರೂಪಾಯಿ ಗಳಿಸುವ ಕಾರ್ಪೊರೇಟ್ ಉದ್ಯೋಗಿಗಳಿಗೆ ಕಾಫಿ ಮಾರುವುದೇ ಲೇಸು ಎಂದು ಕಾಮೆಂಟ್ ಮಾಡಿದ್ದಾರೆ.