ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ಲೇ ಸ್ಕೂಲ್‌ನಲ್ಲಿ ಪುಟ್ಟ ಕಂದಮ್ಮಗಳಿಗೆ ಮನಬಂದಂತೆ ಹೊಡೆದ ಶಿಕ್ಷಕ: ವಿಡಿಯೋ ನೋಡಿದ್ರೆ ಕರುಳು ಚುರ್‌ ಎನ್ನುತ್ತೆ

Viral Video; ಜಾರ್ಖಂಡ್‌ನ ಪಲಾಮು ಜಿಲ್ಲೆಯ ಜಾಪ್ಲಾದಲ್ಲಿರುವ 'ಲಕ್ಷ್ಮಿ ಶಿಶು ವಾಟಿಕಾ ಪ್ಲೇ ಸ್ಕೂಲ್' ನಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದ್ದು ಪೋಷಕರನ್ನೇ ಆತಂಕಕ್ಕೆ ತಳ್ಳಿದೆ.‌ ಶಾಲೆಯ ಪ್ರಾಂಶು ಪಾಲರೊಬ್ಬರು ಪುಟ್ಟ ಮಕ್ಕಳ ಕೆನ್ನೆಗೆ ಹೊಡೆದು ಸರಿಯಾಗಿ ಥಳಿಸುತ್ತಿರುವ ವಿಡಿಯೊವೊಂದು ಭಾರೀ ವೈರಲ್ ಆಗಿದೆ.

ಪುಟ್ಟ ಮಕ್ಕಳ ಮೇಲೆ ಶಿಕ್ಷಕನ ದರ್ಪ: ವಿಡಿಯೊ ವೈರಲ್

ಪುಟ್ಟ ಮಕ್ಕಳ ಮೇಲೆ ಶಿಕ್ಷಕನ ದರ್ಪ -

Profile
Pushpa Kumari Jun 15, 2026 3:09 PM

ಜಾರ್ಖಂಡ್ ,ಜೂ.15: ಮಕ್ಕಳು ಶಾಲೆಯಲ್ಲಿ ಉತ್ತಮವಾಗಿ ಕಲಿಯಲು ಶಿಕ್ಷಕರ ಪಾತ್ರ ಬಹಳಷ್ಟಿದೆ. ಗುರುಗಳ ಬುದ್ದಿಮಾತು, ಮಾರ್ಗದರ್ಶನ ಮೂಲಕವೇ ವಿದ್ಯಾರ್ಥಿಗಳು ಬೆಳೆಯಲು ಸಾಧ್ಯ..ಅದೇ ರೀತಿ ಮಕ್ಕಳನ್ನು ಶಿಕ್ಷಕರು ಸರಿಯಾದ ರೀತಿಯಲ್ಲಿ ನಡೆಸಿಕೊಂಡರೆ ಮಾತ್ರ ಶಾಲೆ ಹಾಗೂ ಮಕ್ಕಳು ಬೆಳೆಯಲು ಸಾಧ್ಯವಾಗುತ್ತದೆ. ಆದರೆ ಜಾರ್ಖಂಡ್‌ನ ಪಲಾಮು ಜಿಲ್ಲೆಯ ಜಾಪ್ಲಾದಲ್ಲಿರುವ 'ಲಕ್ಷ್ಮಿ ಶಿಶು ವಾಟಿಕಾ ಪ್ಲೇ ಸ್ಕೂಲ್'ನಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದ್ದು ಪೋಷಕರನ್ನೇ ಆತಂಕಕ್ಕೆ ತಳ್ಳಿದೆ.‌ ಶಾಲೆಯ ಪ್ರಾಂಶುಪಾಲರೊಬ್ಬರು ಪುಟ್ಟ ಮಕ್ಕಳ ಕೆನ್ನೆಗೆ ಹೊಡೆದು ಸರಿಯಾಗಿ ಥಳಿಸುತ್ತಿರುವ ವಿಡಿಯೊವೊಂದು ಭಾರೀ ವೈರಲ್ (Viral News) ಆಗಿದೆ.

ಶಾಲಾ ಪ್ರಾಂಶುಪಾಲರೊಬ್ಬರು ತರಗತಿಯೊಳಗೆ ಚಿಕ್ಕ ಮಕ್ಕಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದಾರೆ. ಪ್ರಾಂಶುಪಾಲನು ಹಲವಾರು ಪುಟ್ಟ ವಿದ್ಯಾರ್ಥಿಗಳನ್ನು, ಮುಖ್ಯವಾಗಿ ಹುಡುಗಿಯರನ್ನು ಸಾಲಾಗಿ ನಿಲ್ಲಿಸಿ ತರಗತಿಯೊಳಗೆ ಒಬ್ಬರ ನಂತರ ಒಬ್ಬರಂತೆ ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬಂದಿದೆ. ಈ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ, ಅನೇಕರು ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ವಿಡಿಯೋ ನೋಡಿ:



ಈ ಘಟನೆ ಜಾರ್ಖಂಡ್‌ನ ಜಪ್ಲಾದಲ್ಲಿರುವ ಲಕ್ಷ್ಮಿ ಶಿಶು ವಾಟಿಕಾ ಪ್ಲೇ ಸ್ಕೂಲ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಶಾಲೆಯ ಪ್ರಾಂಶುಪಾಲ ಶಶಿಕೇಶ್ ಕಶ್ಯಪ್ ಎಂಬಾತ ಪುಟ್ಟ ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಕೆನ್ನೆಗೆ ಬಾರಿಸಿದ್ದಾನೆ. ಇಂದು ಮಕ್ಕಳಿಗೆ ಹೊಡೆಯಲೇಬಾರದು ಎನ್ನುವ ನಿಯಮದ ನಡುವೆ ಶಿಕ್ಷಕನು ಈ ರೀತಿಯಾಗಿ ಥಳಿಸುವುದು ತಪ್ಪು ಎಂದು ಅನೇಕರು ಕಿಡಿಕಾರಿದ್ದಾರೆ. ನೆರೆ ದಿದ್ದವರ ಎದುರಲ್ಲೇ ಮನಬಂದಂತೆ ಕೆನ್ನೆಗೆ ಹೊಡೆಯುತ್ತಿದ್ದಾನೆ.

Viral News: ಜಸ್ಟ್‌ 20 ನಿಮಿಷಕ್ಕೆ ಮುರಿದು ಬಿತ್ತು ಮದುವೆ! ಗಂಡನ ಮನೆ ಸೇರುತ್ತಿದ್ದಂತೆ ದಾಂಪತ್ಯ ಜೀವನ ನಿರಾಕರಿಸಿದ್ದೇಕೆ ನವ ವಧು?

​ಈ ವೀಡಿಯೊವನ್ನು ತರಗತಿಯ ಬಾಗಿಲಿನ ಹಿಂದಿನಿಂದ ರಹಸ್ಯವಾಗಿ ರೆಕಾರ್ಡ್ ಮಾಡಲಾಗಿದೆ‌. ಹೊಡೆತದಿಂದ ಪುಟ್ಟ ಮಕ್ಕಳು ತೀವ್ರವಾಗಿ ಅಳುತ್ತಿರುವುದು ಸೆರೆಯಾಗಿದೆ. ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದು ಬಳಕೆದಾರರೊಬ್ಬರು ಶಾಲೆಗಳು ಮಗುವಿಗೆ ಸುರಕ್ಷಿತ, ಬೆಂಬಲ ಮತ್ತು ಗೌರವಾನ್ವಿತ ವಾತಾವರಣವನ್ನು ಒದಗಿಸಬೇಕು..ಈ ರೀತಿ ಭಯ ಹುಟ್ಟಿಸುವುದು ಅಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಹೆಚ್ಚಿನ ಜನರು ಆರೋಪಿ ಪ್ರಾಂಶುಪಾಲನನ್ನು ತಕ್ಷಣವೇ ಅಮಾನತುಗೊಳಿಸಿ ತನಿಖೆ ಮಾಡಲು ಒತ್ತಾಯಿಸಿದ್ದಾರೆ.