ಛೀ...ಥೂ...: ಕ್ಲಾಸ್ ರೂಮ್‌ನಲ್ಲೇ ಶಿಕ್ಷಕಿಗೆ ಲೊಚ ಲೊಚ ಮುತ್ತಿಟ್ಟ ಶಿಕ್ಷಕ; ರಾಸಲೀಲೆಯ ವಿಡಿಯೊ ವೈರಲ್
Viral Video: ಉತ್ತರ ಪ್ರದೇಶದ ಕೌಜ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಓರ್ವ ಶಿಕ್ಷಕ ಹಾಗೂ ಶಿಕ್ಷಕಿ ತರಗತಿಯೊಳಗೇ ಅನುಚಿತವಾಗಿ ವರ್ತಿಸಿದ್ದಾರೆ. ಈ ವಿಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ಅವರನ್ನು ಅಮಾನತುಗೊಳಿಸಲಾಗಿದೆ. ವೈರಲ್ ಆದ ವಿಡಿಯೊದಲ್ಲಿ ಶಿಕ್ಷಕನು ಶಿಕ್ಷಕಿಗೆ ಮುತ್ತಿಕ್ಕುವ ದೃಶ್ಯ ಕಂಡು ಬಂದಿದೆ.
ತರಗತಿ ಕೊಠಡಿಯೊಳಗೆ ಶಿಕ್ಷಕರ ಲವ್ವಿ-ಡವ್ವಿ -
ಲಖನೌ, ಜು. 16: ಮಕ್ಕಳಿಗೆ ಪಾಠ ಹೇಳಿಕೊಡಬೇಕಾದ ಶಿಕ್ಷಕರೇ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ. ಉತ್ತರ ಪ್ರದೇಶದ ಕೌಜ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಓರ್ವ ಶಿಕ್ಷಕ ಹಾಗೂ ಶಿಕ್ಷಕಿ ತರಗತಿಯೊಳಗೆ ಅನುಚಿತವಾಗಿ ವರ್ತಿಸಿದ್ದಾರೆ. ಈ ವಿಡಿಯೊ ಆನ್‌ಲೈನ್‌ನಲ್ಲಿ (Viral News) ಕಾಣಿಸಿಕೊಂಡ ನಂತರ ಅವರನ್ನು ಅಮಾನತುಗೊಳಿಸಲಾಗಿದೆ. ವೈರಲ್ ಆದ ವಿಡಿಯೊದಲ್ಲಿ ಶಿಕ್ಷಕನು ಶಿಕ್ಷಕಿಗೆ ಮುತ್ತಿಕ್ಕುವ ದೃಶ್ಯ ಕಂಡು ಬಂದಿದೆ.
ಸರ್ಕಾರಿ ಶಾಲೆಯೊಂದರಲ್ಲಿ ಇಬ್ಬರು ಶಿಕ್ಷಕರು ತರಗತಿ ಕೊಠಡಿಯ ಒಳಗೇ ರೊಮ್ಯಾನ್ಸ್ ಮಾಡಿದ್ದಾರೆ. ವರದಿಗಳ ಪ್ರಕಾರ ಶಿಕ್ಷಕನ ಪತ್ನಿಗೆ ತನ್ನ ಪರಿ ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಅನುಮಾನಗೊಂಡಿದ್ದಳು. ಹೀಗಾಗಿ ಆತನ ಪತ್ನಿ, ಸಾಕ್ಷಿ ಕಲೆಹಾಕಲು ತರಗತಿ ಕೊಠಡಿಯೊಳಗೆ ರಹಸ್ಯ ಕ್ಯಾಮರಾವನ್ನು ಅಳವಡಿಸಿದ್ದಳು. ಈ ಕ್ಯಾಮರಾದಲ್ಲಿ ಇಬ್ಬರೂ ಶಾಲಾ ಅವಧಿಯಲ್ಲೇ ಅಸಭ್ಯವಾಗಿ ವರ್ತಿಸಿರುವುದು ಕಂಡು ಬಂದಿದೆ.
ವಿಡಿಯೊ ನೋಡಿ:
Breaking News: Kannauj, Uttar Pradesh
— Ms. Avnni (@Avnni61) July 15, 2026
A video allegedly from a composite government school in Saurikh Block has gone viral, triggering controversy. The clip appears to show a male assistant teacher and a female assistant teacher kissing on the school premises.
Following the… pic.twitter.com/iisk0y3KqK
ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಜಿಲ್ಲಾ ಮೂಲ ಶಿಕ್ಷಣ ಅಧಿಕಾರಿ ಸಂದೀಪ್ ಕುಮಾರ್ ಸೌರಿಖ್‌ನ ಬ್ಲಾಕ್ ಶಿಕ್ಷಣ ಅಧಿಕಾರಿ (ಬಿಇಒ) ವಿಶ್ವನಾಥ್ ಪಾಠಕ್ ಅವರಿಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಈ ಕೃತ್ಯ ಪರಿಶೀಲಿಸಿದ ನಂತರ ರಾಜ್ಯ ಶಿಕ್ಷಣ ಇಲಾಖೆ ಇಬ್ಬರನ್ನೂ ಅಮಾನತುಗೊಳಿಸಿ ಕಠಿಣ ಕ್ರಮ ಕೈಗೊಂಡಿದೆ. ಈ ಘಟನೆಯು ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು ಮತ್ತು ವೃತ್ತಿಪರ ನಡವಳಿಕೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ನೆರೆಮನೆಯ ಯುವಕನಿಂದನೇ ಕಿರುಕುಳ; ಕಣ್ಣೀರು ಹಾಕಿದ ಅಪ್ರಾಪ್ತ ಬಾಲಕಿ
ಅಮಾನತು ಅವಧಿಯಲ್ಲಿ ಶಿಕ್ಷಕನನ್ನು ಗುಗರಾಪುರ ಬ್ಲಾಕ್ ರಿಸೋರ್ಸ್ ಸೆಂಟರ್ ಹಾಗೂ ಶಿಕ್ಷಕಿಯನ್ನು ತಲಗ್ರಾಮ್ ಬಿಆರ್‌ಸಿಗೆ ನಿಯೋಜಿಸಲಾಗಿದೆ. ಈ ವಿಡಿಯೊ ವೈರಲ್ ಆದ ಬಳಿಕ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ. ಶಾಲೆಗಳು ನೈತಿಕ ಮೌಲ್ಯಗಳಿಗೆ ಮೀಸಲಾದ ಸುರಕ್ಷಿತ ಸ್ಥಳಗಳಾಗಿ ಉಳಿಯಬೇಕು. ಈ ರೀತಿ ವರ್ತನೆ ತೋರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನೆಟ್ಟಿಗರು ಸೂಚಿಸಿದ್ದಾರೆ.