ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇನ್‌ಸ್ಟಾಗ್ರಾಮ್‌ನಲ್ಲಿ ಭಾರಿ ವೈರಲ್ ಆಗ್ತಿದೆ 80ರ ದಶಕದ ಟ್ರೆಂಡ್: AI ಮೂಲಕ ನಿಮ್ಮ ಫೋಟೊವನ್ನು ರೆಟ್ರೋ ಲುಕ್‌ಗೆ ಬದಲಾಯಿಸುವುದು ಹೇಗೆ?

ChatGPT ’80s Photo Trend: ಇನ್‌ಸ್ಟಾಗ್ರಾಮ್ ಬಳಕೆದಾರರು 1980ರ ದಶಕಕ್ಕೆ ಹಿಂತಿರುಗಿ, ತಮ್ಮ ಫೋಟೊವನ್ನು ಆಕರ್ಷಕ ರೆಟ್ರೊ ಭಾವಚಿತ್ರಗಳಾಗಿ ಪರಿವರ್ತಿಸಲು ChatGPT ಬಳಸುತ್ತಿದ್ದಾರೆ. 80ರ ದಶಕದ ವೈಬ್‌ ಅನ್ನು ಈ AI ಫೋಟೋಗಳು ನೈಜ ಎಂಬಂತೆ ಮರುಸೃಷ್ಟಿಸುತ್ತಿವೆ. ​ಬಳಕೆದಾರರು ತಮ್ಮ ಫೋಟೊಗಳನ್ನು ಚಾಟ್‌ಜಿಪಿಟಿಗೆ ಅಪ್‌ಲೋಡ್ ಮಾಡಿ, ಪ್ರಾಂಪ್ಟ್ ನೀಡುವ ಮೂಲಕ 1980ರ ದಶಕದಲ್ಲಿದ್ದ ಬಾಲಿವುಡ್ ಶೈಲಿ, ಹಳೆಯ ಫ್ಯಾಮಿಲಿ ಆಲ್ಬಮ್, ಹಳೆಯ ಪತ್ರಿಕೆಗಳ ಮುಖಪುಟದ ಶೈಲಿಗೆ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ.

ನಿಮ್ಮ ಫೋಟೊವನ್ನು 80ರ ದಶಕದ ರೆಟ್ರೋ ಲುಕ್‌ಗೆ ಬದಲಾಯಿಸುವುದು ಹೇಗೆ?

ಸಾಂದರ್ಬಿಕ ಚಿತ್ರ -

Profile
Pushpa Kumari Sep 8, 2026 8:05 PM

ನವದೆಹಲಿ, ಸೆ. 8: ಸ್ಟುಡಿಯೋ ಜಿಬ್ಲಿ ಟ್ರೆಂಡ್ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ರೆಟ್ರೋ ಲುಕ್‌ನ ಫೋಟೋ ಭಾರಿ (ChatGPT ’80s Photo Trend) ವೈರಲ್ ಆಗುತ್ತಿದೆ. ಜನರು ತಮ್ಮ ಫೋಟೊಗಳನ್ನು 1980ರ ದಶಕದ ಗ್ಲಾಮರಸ್ ರೆಟ್ರೋ ಲುಕ್‌ಗೆ ಪರಿವರ್ತಿಸುತ್ತಿದ್ದಾರೆ. 80ರ ದಶಕದಲ್ಲಿದ್ದ ಬ್ರೈಟ್ ಸೀರೆಗಳು, ದೊಡ್ಡ ಇಯರಿಂಗ್ಸ್, ಕರ್ಲಿ ಹೇರ್‌, ಹುಡುಗರಾದರೆ ನೀಲಿ ಜೀನ್ಸ್‌ ಬಳಸುವ ಮೂಲಕ 1980ರ ದಶಕದಲ್ಲಿ ತಾವು ಇದ್ದಂತೆ ಕಲ್ಪಿಸಿಕೊಳ್ಳುತ್ತಿದ್ದಾರೆ.

ಇನ್‌ಸ್ಟಾಗ್ರಾಮ್ ಬಳಕೆದಾರರು 1980ರ ದಶಕಕ್ಕೆ ಹಿಂತಿರುಗಿ, ತಮ್ಮ ಭಾವಚಿತ್ರವನ್ನು ಆಕರ್ಷಕ ರೆಟ್ರೊ ಭಾವಚಿತ್ರಗಳಾಗಿ ಪರಿವರ್ತಿಸಲು ChatGPTಯನ್ನು ಬಳಸುತ್ತಿದ್ದಾರೆ. 80ರ ದಶಕದ ವೈಬ್‌ ಅನ್ನು ಈ AI ಫೋಟೊಗಳು ನೈಜ ಎಂಬಂತೆ ಮರುಸೃಷ್ಟಿಸುತ್ತಿವೆ. ​ಬಳಕೆದಾರರು ತಮ್ಮ ಫೋಟೊಗಳನ್ನು ಚಾಟ್‌ಜಿಪಿಟಿಗೆ ಅಪ್‌ಲೋಡ್ ಮಾಡಿ, ಪ್ರಾಂಪ್ಟ್ (Prompt) ನೀಡುವ ಮೂಲಕ 1980ರ ದಶಕದಲ್ಲಿದ್ದ ಬಾಲಿವುಡ್, ಹಳೆಯ ಫ್ಯಾಮಿಲಿ ಆಲ್ಬಮ್, ಹಳೆಯ ಪತ್ರಿಕೆಗಳ ಮುಖಪುಟದ ಶೈಲಿಗೆ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ.

ಸಿನಿ ತಾರೆಯರ 80ರ ದಶಕದ ಲುಕ್:

ಮಹಿಳೆಯರು 80ರ ದಶಕದಲ್ಲಿ ಬಳಸುತ್ತಿದ್ದ ಡಾರ್ಕ್ ಬ್ರೈಟ್‌ನ ಸಿಂಪಲ್ ಸೀರೆಗಳು, ದೊಡ್ಡ ಇಯರಿಂಗ್ಸ್, ಕರ್ಲಿ ಹೇರ್‌ಸ್ಟೈಲ್‌ ವೈರಲ್‌ ಆಗಿದೆ. ​ಪುರುಷರಿಗೆ ಲೂಸ್ ಶರ್ಟ್‌ಗಳು, ದಪ್ಪ ಮೀಸೆ ಹಾಗೂ ಆ ಕಾಲದ ಹೇರ್‌ಸ್ಟೈಲ್ ನೀಡುತ್ತಿದೆ. ಫೋಟೊಗಳಿಗೆ ಸ್ಯಾಚುರೇಟೆಡ್ ಕಲರ್ಸ್ ಹಾಗೂ ಹಳೆಯ ಫಿಲಂ ಕ್ಯಾಮೆರಾಗಳಲ್ಲಿ ಬರುತ್ತಿದ್ದ ಸಾಫ್ಟ್-ಫೋಕಸ್ ವೈಬ್ ನೀಡಲಾಗುತ್ತಿದೆ. ಕೆಲವು ಬಳಕೆದಾರರು ಪೂರ್ಣ ಸಿನಿಮೀಯ ಮೇಕ್‌ ಓವರ್‌ಗಳನ್ನು ಆರಿಸಿಕೊಂಡರೆ ಇನ್ನು ಕೆಲವರು ತಮ್ಮ ಮುಖದ ವೈಶಿಷ್ಟ್ಯ ಹಾಗೆಯೇ ಇರಿಸಿ ಬಟ್ಟೆ, ಹೇರ್ ಸ್ಟೈಲ್ ಅನ್ನು ಮಾರ್ಪಡು ಮಾಡುತ್ತಿದ್ದಾರೆ.

ಸ್ಮಶಾನದಲ್ಲಿ ಸುಡುತ್ತಿದ್ದ ಹೆಣದ ಮಾಂಸ ತಿಂದ ಮಹಿಳೆ!

ನಿಮ್ಮ ಫೋಟೊ 80ʼs ಫೋಟೊ ರೀತಿ ಮಾಡಿಕೊಳ್ಳುವುದು ಹೇಗೆ?

  • ಮೊದಲಿಗೆ ChatGPT ಅನ್ನು ತೆರೆಯಿರಿ ಮತ್ತು ಲಾಗಿನ್ ಆಗಿ ಹೊಸ ಚಾಟ್ ಆರಂಭಿಸಿ.
  • ಪ್ಲಸ್ ಐಕಾನ್ ಅನ್ನು ಟ್ಯಾಪ್ ಮಾಡಿ ಸ್ಪಷ್ಟವಾದ ಛಾಯಾಚಿತ್ರವನ್ನು ಅಪ್‌ಲೋಡ್ ಮಾಡಿ. ನಿಮ್ಮ ಮುಖ ಸ್ಪಷ್ಟವಾಗಿ ಕಾಣುವ ಫೋಟೊ ಇರಲಿ.
  • ನಿಮಗೇನು ಬೇಕೋ ಅದನ್ನು ಸ್ಪಷ್ಟವಾಗಿ ವಿವರಿಸಿ.
  • ಉಡುಗೆ, ಕೇಶ ವಿನ್ಯಾಸ, ಸೆಟ್ಟಿಂಗ್, ಬೆಳಕು ಮತ್ತು ಚಿತ್ರದ ವಿನ್ಯಾಸ ಸೇರಿದಂತೆ ನೀವು ಬಯಸುವ 80ರ ದಶಕದ ನೋಟವನ್ನು ತಿಳಿಸಿ.
  • ನಿಮ್ಮ ಮುಖದ ವೈಶಿಷ್ಟ್ಯಗಳು ಮತ್ತು ನೈಸರ್ಗಿಕ ಚರ್ಮದ ಟೋನ್ ಅನ್ನು ಕಾಪಾಡಿಕೊಳ್ಳಲು ChatGPT ಗೆ ಸಲಹೆ ನೀಡಿ.
  • ಮೊದಲ ಯತ್ನದಲ್ಲಿ ಸರಿಯಾಗಿ ಬಾರದಿದ್ದರೆ, ನಿರ್ದಿಷ್ಟ ಬದಲಾವಣೆಗೆ ವಿನಂತಿಸಿ.
  • ಉದಾಹರಣೆಗೆ: ʼʼHow will i look in 1980s, don’t change or alter my face - Retro Lookʼʼ
  • “Reimagine this photograph as a stylish Indian portrait from the 1980s. Preserve the person’s face and natural skin tone. Add a relaxed tailored shirt, high-waisted trousers, neatly styled hair and a vintage watch. Use warm lighting, slightly faded colours and realistic film grain."
  • ಅಥವಾ ನಿಮ್ಮ ಫೋಟೊ ಅಪ್‌ಲೋಡ್‌ ಮಾಡಿ ಸರಳವಾಗಿ ʼʼCreate image 80's lookʼʼ ಎಂದು ನೀಡಿದರೂ ಸಾಕು.