ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮೋದಿ‌ ನಮ್ಮನ್ನು ದೋಚುತ್ತಿದ್ದರು: ಸುಂಕ ರದ್ದುಗೊಂಡ ನಡುವೆ ಭಾರತ-ಯುಎಸ್ ವ್ಯಾಪಾರ ಒಪ್ಪಂದವನ್ನು ಹೊಗಳಿದ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದೊಂದಿಗೆ ಸಂಬಂಧ “ಅದ್ಭುತ”ವಾಗಿದೆ ಎಂದರೂ, ಪ್ರಧಾನಿ ನರೇಂದ್ರ ಮೋದಿ ಅಮೆರಿಕವನ್ನು “ಸುಲಿಗೆ ಮಾಡುತ್ತಿದ್ದರು” ಎಂದು ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದಾರೆ. ಅಮೆರಿಕ ಸುಪ್ರೀಂ ಕೋರ್ಟ್ ಅವರ ಕಠಿಣ ಸುಂಕಗಳನ್ನು ರದ್ದುಗೊಳಿಸಿದ ನಂತರ ಈ ಹೇಳಿಕೆ ಹೊರಬಂದಿದೆ.

ಮೋದಿ ಅಮೆರಿಕವನ್ನು ‘ಸುಲಿಗೆ’ ಮಾಡುತ್ತಿದ್ದರು: ಟ್ರಂಪ್

ನರೇಂದ್ರ ಮೋದಿ ಮತ್ತು ಡೊನಾಲ್ಡ್‌ ಟ್ರಂಪ್ (ಸಂಗ್ರಹ ಚಿತ್ರ) -

Profile
Sushmitha Jain Feb 21, 2026 9:31 PM

ವಾಷಿಂಗ್ಟನ್, ಫೆ. 21: ಭಾರತದೊಂದಿಗಿನ ತಮ್ಮ ಸಂಬಂಧ "ಅದ್ಭುತವಾಗಿದೆ" ಎಂದು ಶ್ಲಾಘಿಸುತ್ತಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಪ್ರಧಾನಿ ನರೇಂದ್ರ ಮೋದಿ (Narendra Modi) ಅಮೆರಿಕವನ್ನು "ಸುಲಿಗೆ ಮಾಡುತ್ತಿದ್ದರು" (Ripping us off) ಎಂದು ಹೇಳುವ ಮೂಲಕ ಹೊಸ ಸಂಚಲನ ಮೂಡಿಸಿದ್ದಾರೆ. ಅಮೆರಿಕದ ಸುಪ್ರೀಂ ಕೋರ್ಟ್ ಟ್ರಂಪ್ ವಿಧಿಸಿದ್ದ ಹಲವು ಕಠಿಣ ವ್ಯಾಪಾರ ಸುಂಕಗಳನ್ನು ರದ್ದುಗೊಳಿಸಿದ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ಹೊರತಾಗಿಯೂ ಭಾರತದೊಂದಿಗೆ ನಡೆಯಲಿರುವ ಮಧ್ಯಂತರ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. "ಹಿಂದೆ ಭಾರತದವರು ನಮಗೆ ಸುಂಕ ವಿಧಿಸುತ್ತಿದ್ದರು ಮತ್ತು ನಾವು ಸುಂಕ ಪಾವತಿಸುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಪ್ರಧಾನಿ ಮೋದಿ ಅತ್ಯಂತ ಗೌರವಾನ್ವಿತ ವ್ಯಕ್ತಿ, ಆದರೆ ಅಮೆರಿಕದ ಹಿಂದಿನ ನಾಯಕರಿಗಿಂತ ಅವರು ಹೆಚ್ಚು ಚಾಣಾಕ್ಷರಾಗಿದ್ದರು. ಈಗ ನಾವು ನ್ಯಾಯಯುತ ಒಪ್ಪಂದ ಮಾಡಿಕೊಂಡಿದ್ದೇವೆ, ಭಾರತ ಈಗ ಅಮೆರಿಕಕ್ಕೆ ಸುಂಕ ಪಾವತಿಸಲಿದೆ" ಎಂದು ಅವರು ವಿವರಿಸಿದ್ದಾರೆ.

ಡೊನಾಲ್ಡ್‌ ಟ್ರಂಪ್‌ ಭಾಷಣ:



ಲೆಬನಾನ್ ಮೇಲೆ ಇಸ್ರೇಲ್ ದಾಳಿ: ಹಿಜ್ಬುಲ್ಲಾ ಹಿರಿಯ ನಾಯಕ ಸೇರಿ 10 ಮಂದಿಯ ಹತ್ಯೆ

ರಷ್ಯಾ ತೈಲ ಖರೀದಿ ಮತ್ತು ಭಾರತದ ನಿಲುವು

ತಮ್ಮ ವಿಶೇಷ ವಿನಂತಿಯ ಮೇರೆಗೆ ಭಾರತವು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಗಣನೀಯವಾಗಿ ಕಡಿಮೆ ಮಾಡಿದೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. "ರಷ್ಯಾ ಮತ್ತು ಉಕ್ರೇನ್ ನಡುವಿನ ಭೀಕರ ಯುದ್ಧವನ್ನು ನಿಲ್ಲಿಸುವ ನಿಟ್ಟಿನಲ್ಲಿ ಈ ಕ್ರಮ ಅಗತ್ಯವಾಗಿತ್ತು" ಎಂದು ಅವರು ಹೇಳಿದ್ದಾರೆ. ಆದರೆ ರಷ್ಯಾದಿಂದ ತೈಲ ಆಮದು ನಿಲ್ಲಿಸುವ ಬಗ್ಗೆ ಭಾರತ ಈವರೆಗೆ ಯಾವುದೇ ಅಧಿಕೃತ ದೃಢೀಕರಣ ನೀಡಿಲ್ಲ. ಬದಲಾಗಿ, ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ವಿವಿಧ ಮೂಲಗಳಿಂದ ಇಂಧನ ಪಡೆಯುವುದನ್ನು ಮುಂದುವರಿಸುವುದಾಗಿ ಭಾರತದ ವಿದೇಶಾಂಗ ಇಲಾಖೆ ಈ ಮೊದಲೇ ಸ್ಪಷ್ಟಪಡಿಸಿದೆ.

ಭಾರತ-ಪಾಕ್ ಸಂಘರ್ಷದ ಹಸ್ತಕ್ಷೇಪ

ಕಳೆದ ವರ್ಷ ಭಾರತ ಮತ್ತು ಪಾಕಿಸ್ತಾನದ ನಡುವೆ ಏರ್ಪಟ್ಟ ಕದನ ವಿರಾಮಕ್ಕೆ ತಾವೇ ಕಾರಣ ಎಂದು ಟ್ರಂಪ್ ಮತ್ತೊಮ್ಮೆ ಹೇಳಿಕೊಂಡಿದ್ದಾರೆ. ಆದರೆ ಅಮೆರಿಕದ ಈ ಮಧ್ಯಸ್ಥಿಕೆಯ ವಾದವನ್ನು ಭಾರತ ಈ ಹಿಂದೆಯೇ ತಿರಸ್ಕರಿಸಿದ್ದು, ಪಾಕಿಸ್ತಾನದ ಸೇನಾ ಅಧಿಕಾರಿಗಳೇ ನೇರವಾಗಿ ದೆಹಲಿಯನ್ನು ಸಂಪರ್ಕಿಸಿ ಕದನ ವಿರಾಮ ಕೋರಿದ್ದರು ಎಂದು ಸ್ಪಷ್ಟವಾಗಿ ತಿಳಿಸಿದೆ. ಸದ್ಯಕ್ಕೆ ರದ್ದಾದ ಸುಂಕಗಳ ಬದಲಾಗಿ 150 ದಿನಗಳ ಕಾಲ ತಾತ್ಕಾಲಿಕವಾಗಿ ಶೇ. 10ರಷ್ಟು ಜಾಗತಿಕ ಆಮದು ಸುಂಕವನ್ನು ವಿಧಿಸಲು ಟ್ರಂಪ್ ಆದೇಶಿಸಿದ್ದಾರೆ.