ತಮ್ಮ ಬದುಕಲ್ಲಿ ಮಾಜಿ ಪ್ರಧಾನಿ ಶಾಸ್ತ್ರಿಯವರ ಪ್ರಭಾವ ನೆನೆದ ಮಾಜಿ ಸಚಿವ ಮಾಧುಸ್ವಾಮಿ
ಒಳ್ಳೆಯವರು ಎಂದರೆ ದೇವರಿಗೂ ಪ್ರೀತಿ ಇರಬೇಕು. ಆದ್ದರಿಂದ ಲಾಲ್ ಬಹಾದ್ದೂರ್ ಶಾಸ್ತ್ರಿಯ ವರನ್ನು ಭಗವಂತ ಅಕಾಲಿಕವಾಗಿ ಕರೆಯಿಸಿಕೊಂಡಿರಬೇಕು. ಯಾವುದೇ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡು ವುದು ಸುಲಭವಲ್ಲ. ಸಾಧನೆಯ ಹಾದಿಯಲ್ಲಿ ಮೊದಲ ನಡಿಗೆಯಷ್ಟೇ ಉತ್ಸಾಹ ಕೊನೆಯ ತನಕ ಇರಬೇಕು. ಆಗ ಮಾತ್ರ ಗುರಿ ಮುಟ್ಟಲು ಸಾಧ್ಯವಾಗುತ್ತದೆ.
-
ತಾಷ್ಕೆಂಟ್: ತಾಷ್ಕೆಂಟ್, ಶಿಮ್ಲಾ, ಲಾಹೋರ್ ಮೊದಲಾದ ನಗರಗಳು ಸದಾ ಅವಿಸ್ಮರಣೀಯ ವಾಗಿರುತ್ತವೆ. ಇದಕ್ಕೆ ಕಾರಣ ಆ ನಗರಗಳಲ್ಲಿ ಸಂಭವಿಸಿರುವ ಐತಿಹಾಸಿಕ ಮಹತ್ವದ ಘಟನಾವಳಿ ಗಳು. ತಾಷ್ಕೆಂಟ್ ಎಂದ ತಕ್ಷಣ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ನೆನಪಾಗುತ್ತಾರೆ. ಚಿಕ್ಕಂದಿ ನಿಂದಲೂ ಅವರ ಬಗ್ಗೆ ನನಗೆ ಅಪಾರ ಪ್ರೀತಿ ಮತ್ತು ಗೌರವ. ಅವರು ಯುದ್ಧದ ಸಂದರ್ಭ ಆರ್ಥಿಕ ಬಿಕ್ಕಟ್ಟು ನಿರ್ವಹಣೆಯ ಸಲುವಾಗಿ ದೇಶದ ಜನತೆಗೆ ಒಂದು ಹೊತ್ತು ಉಪವಾಸ ಮಾಡಲು ಜನತೆಗೆ ಕರೆ ಕೊಟ್ಟಿದ್ದರು.
ಪ್ರತಿ ಸೋಮವಾರ ಜನ ಶಾಸ್ತ್ರಿಯವರ ಕರೆಗೆ ಓಗೊಟ್ಟು ಉಪವಾಸ ಮಾಡುತ್ತಿದ್ದರು. ನಾನೂ 40 ವರ್ಷಗಳ ಕಾಲ ಪ್ರತಿ ಸೋಮವಾರ ರಾತ್ರಿ ಉಪವಾಸ ಮಾಡಿದ್ದೆ ಎಂದು ಗ್ಲೋಬಲ್ ಅಚೀವರ್ಸ್ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಮಾಧುಸ್ವಾಮಿಯವರು ಹೇಳಿದರು.
ಒಳ್ಳೆಯವರು ಎಂದರೆ ದೇವರಿಗೂ ಪ್ರೀತಿ ಇರಬೇಕು. ಆದ್ದರಿಂದ ಲಾಲ್ ಬಹಾದ್ದೂರ್ ಶಾಸ್ತ್ರಿಯ ವರನ್ನು ಭಗವಂತ ಅಕಾಲಿಕವಾಗಿ ಕರೆಯಿಸಿಕೊಂಡಿರಬೇಕು. ಯಾವುದೇ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡುವುದು ಸುಲಭವಲ್ಲ. ಸಾಧನೆಯ ಹಾದಿಯಲ್ಲಿ ಮೊದಲ ನಡಿಗೆಯಷ್ಟೇ ಉತ್ಸಾಹ ಕೊನೆಯ ತನಕ ಇರಬೇಕು. ಆಗ ಮಾತ್ರ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಸಾಧನೆಯ ಹಾದಿಗೆ ಕೊನೆ ಎಂಬುದು ಇರುವುದಿಲ್ಲ. ಸಾಧನೆಯ ಪಥದಲ್ಲಿ ಮತ್ತಷ್ಟು ಸಾಧನೆಗೆ ಇಂಥ ಪ್ರಶಸ್ತಿಗಳು ಪ್ರೇರಣೆ ನೀಡುತ್ತವೆ ಎಂದು ಸಾಧನೆಯ ಬಗ್ಗೆ ಮಾಧುಸ್ವಾಮಿ ವಿವರಿಸಿದರು. ಇಲ್ಲಿ ಪ್ರಶಸ್ತಿ ಪಡೆಯು ತ್ತಿರುವವರು ಅಪಾರ ಪರಿಶ್ರಮ ಪಟ್ಟು ಮೇಲೆ ಬಂದಿದ್ದಾರೆ. ಸ್ವಂತ ಪರಿಶ್ರಮದ ಫಲವನ್ನು ಸಾಧಕರು ಅನುಭವಿಸುತ್ತಾರೆ.
ಸಾಧಿಸಬೇಕು ಎಂಬ ಗುರಿಗಳು ಅನೇಕ ಇರುತ್ತವೆ. ಕನಸುಗಳು ದೊಡ್ಡದಾಗಿರುತ್ತದೆ. ಎಲ್ಲವನ್ನೂ ಸಾಧಿಸಲು ಸಾಧ್ಯವಾಗದು. ಆದರೆ ಪ್ರಯತ್ನ, ಶ್ರಮದ ಫಲ ಸಿಕ್ಕೇ ಸಿಗುತ್ತದೆ. ಅನುಭವವು ಸವಿಯಲ್ಲ, ಅನುಭವದ ನೆನಪು ಸವಿಯಾಗಿರುತ್ತದೆ ಎಂದ ಮಾಧುಸ್ವಾಮಿ, ಹೈನುಗಾರಿಕೆಯಲ್ಲಿ ಕರ್ನಾಟಕ ನಡೆಸುತ್ತಿರುವ ಸಾಧನೆ ಬಗ್ಗೆ ವಿವರಿಸಿದರು.
ಕೆಎಂಎಫ್ ಈಗ ಒಂದು ಕೋಟಿ ಲೀಟರ್ ಹಾಲನ್ನು ನಿತ್ಯ ಸಂಗ್ರಹಿಸುತ್ತಿದೆ. ಈ ಹಿಂದೆ ಹಾಲು ಕ್ರಾಂತಿಯ ಪಿತಾಮಹ ಕುರಿಯನ್ ಅವರು ಅಮುಲ್ ಅನ್ನು ಕರ್ನಾಟಕ ಮುಂದೊಂದು ದಿನ ಮೀರಿಸಲಿದೆ ಎಂದು ಹೇಳಿದ್ದರು ಎಂಬುದನ್ನು ಸ್ಮರಿಸಿಕೊಂಡರು. ನಾವು ಯಾವುದೇ ಕ್ಷೇತ್ರದಲ್ಲಿ ಪರಿಶ್ರಮಪಟ್ಟರೆ ಅವಕಾಶಗಳು ಹೇರಳವಾಗಿರುತ್ತವೆ. ಸಾಧನೆ ಮಾಡಲು ಬೇಕಾದಷ್ಟು ಕ್ಷೇತ್ರಗಳಿವೆ.
ರಾಜಕೀಯವೇ ಆಗಬೇಕು ಎಂದೇನಿಲ್ಲ. ನಮ್ಮ ಬಳಿ ಉದ್ಯಮ ಮಾಡಲು ಬಂಡವಾಳ ಇರಲಿಲ್ಲ. ಹಾಗಾಗಿ ಸಾರ್ವಜನಿಕ ಕ್ಷೇತ್ರಕ್ಕೆ ಬಂದೆವು. ಒಂದು ಸಲ ರಾಜಕಾರಣಕ್ಕೆ ಬಂದರೆ ಹಿಂತಿರುಗುವುದು ಕಷ್ಟ ಸಾಧ್ಯ. ಅರ್ಧಶಕ್ತಿಯನ್ನು ಅದು ಹೀರಿಕೊಳ್ಳುತ್ತದೆ ಎಂದು ಮಾಧುಸ್ವಾಮಿ ತಮ್ಮ ಅನುಭವ ವನ್ನು ಬಿಚ್ಚಿಟ್ಟರು. ಚಿಂತಕ ಸೇಡಿಯಾಪು ಕೃಷ್ಣ ಭಟ್ಟರು ಬದುಕಿನಲ್ಲಿ ಮನುಷ್ಯನಿಗೆ ಸಮಾಧಾನ ವೇ ಶ್ರೇಷ್ಠ ಎನ್ನುತ್ತಾರೆ. ಗೌರವವನ್ನು ಗಳಿಸಿ, ಉಳಿಸಿಕೊಂಡು ಮನಸ್ಪೂರ್ತಿಯಾಗಿ ಸಮಾಧಾನಿ ಯಾಗಿ ಬಾಳಬೇಕು. ಸವಾಲುಗಳನ್ನು ಎದುರಿಸಬೇಕು ಎಂದು ಮಾಧುಸ್ವಾಮಿ ಪ್ರಶಸ್ತಿ ಪುರಸ್ಕೃತರಿಗೆ ಕಿವಿ ಮಾತು ಹೇಳಿದರು