ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇಂತಹ ನೆಲದಲ್ಲಿ ಪ್ರಶಸ್ತಿ ಕೊಟ್ಟಿದ್ದು ಅಪೂರ್ವ: ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಸ್ವೀಕರಿಸಿದ ಶ್ರೀ ನಟರಾಜ ಸ್ವಾಮೀಜಿ ಮೆಚ್ಚುಗೆ

ಇದು ಪ್ರತಿಯೊಬ್ಬರ ಜೀವನದಲ್ಲಿ ಅಪೂರ್ವ, ಮರೆಯಲಾಗದ ಕ್ಷಣ ಎಂದು ಶ್ರೀ ನಟರಾಜ ಸ್ವಾಮೀಜಿ ಅವರು ಹೇಳಿದರು. ತಾಷ್ಕೆಂಟ್‌ನಲ್ಲಿ ವಿಶ್ವವಾಣಿ ಸಂಸ್ಥೆ ಇಂಥದೊಂದು ಕಾರ್ಯಕ್ರಮ ಆಯೋಜಿಸು ತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ನಾಡಿನ ಸಾಧಕರನ್ನು ವಿದೇಶಗಳಿಗೆ ಕರೆದೊಯ್ದು ಸತ್ಕರಿಸುವ ವಿಶ್ವೇಶ್ವರ ಭಟ್ ಅವರ ಸಾಹಸ ಅಸಾಮಾನ್ಯವಾದುದು.

ಇಂತಹ ನೆಲದಲ್ಲಿ ಪ್ರಶಸ್ತಿ ಕೊಟ್ಟಿದ್ದು ಅಪೂರ್ವ

-

Profile
Ashok Nayak Sep 13, 2026 12:13 PM

ತಾಷ್ಕೆಂಟ್: ವಸುಂಧರೆ ತನ್ನ ಒಡತಲಾಳದಲ್ಲಿ ಅನರ್ಘ್ಯ ರತ್ನಗಳನ್ನು ಹೇಗೆ ಇಟ್ಟುಕೊಂಡಿ ದ್ದಾಳೋ ಹಾಗೆಯೇ ಇಲ್ಲಿ ಪ್ರತಿಯೊಬ್ಬ ಪ್ರಶಸ್ತಿ ವಿಜೇತರ ಹಿಂದೆ ಅಪಾರ ಸಾಧನೆ ಅಡಗಿದೆ. ಇಲ್ಲಿ ಎಲ್ಲರೂ ಒಬ್ಬರಿಗಿಂತ ಒಬ್ಬರು ಪ್ರಬುದ್ಧರು. ಬಹುತೇಕ ಬಾರಿ ಪ್ರವಾಸ ಮಾಡಲು ಹೋಗಿ ಪ್ರಯಾಸ ವಾಗುತ್ತದೆ. ಆದರೆ ಇಲ್ಲಿ ಸಾಧಕರನ್ನು ಗೌರವಿಸುವುದರ ಜತೆಗೆ ಅಪರೂಪದ ಪ್ರವಾಸ ಏರ್ಪಡಿಸಿದ್ದು ವಿಶೇಷವಾಗಿದೆ.

ಇದು ಪ್ರತಿಯೊಬ್ಬರ ಜೀವನದಲ್ಲಿ ಅಪೂರ್ವ, ಮರೆಯಲಾಗದ ಕ್ಷಣ ಎಂದು ಶ್ರೀ ನಟರಾಜ ಸ್ವಾಮೀಜಿ ಅವರು ಹೇಳಿದರು. ತಾಷ್ಕೆಂಟ್‌ನಲ್ಲಿ ವಿಶ್ವವಾಣಿ ಸಂಸ್ಥೆ ಇಂಥದೊಂದು ಕಾರ್ಯಕ್ರಮ ಆಯೋಜಿಸುತ್ತಿರು ವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ನಾಡಿನ ಸಾಧಕರನ್ನು ವಿದೇಶಗಳಿಗೆ ಕರೆದೊಯ್ದು ಸತ್ಕರಿಸುವ ವಿಶ್ವೇಶ್ವರ ಭಟ್ ಅವರ ಸಾಹಸ ಅಸಾಮಾನ್ಯವಾದುದು. ಅವರು ತಮ್ಮ ಸಮಗ್ರ ಆಲೋಚನೆಗಳನ್ನು, ದಿಗ್ದಿಗಂತಕ್ಕೆ ಹರಿದಾಡುವ ವಿಚಾರ ಧಾರೆಗಳನ್ನು, ತಮ್ಮ ನೆನಪಿ ನಾಳದ ಆಲೋಚನೆಗಳನ್ನು ನಿತ್ಯವೂ ಜನತೆಗೆ ಹಂಚುತ್ತಿದ್ದಾರೆ.

ಇದನ್ನೂ ಓದಿ: Vishweshwar Bhat at Tashkent: ಲಾಲ್ ಬಹದ್ದೂರ್ ಶಾಸ್ತ್ರಿಜೀ ಕಾರಣಕ್ಕೆ ತಾಷ್ಕೆಂಟ್ ಜತೆಗಿನ ಬಾಂಧವ್ಯ ಬಲವಾಗಿದೆ: ವಿಶ್ವೇಶ್ವರ ಭಟ್

ಜೇನ ಹನಿ ಎಷ್ಟು ವರ್ಷ ಇಟ್ಟರೂ ದಿವ್ಯ ಔಷಧವಾಗಿರುತ್ತದೆ. ಕೆಲವು ನೊಣಗಳು ರೋಗಗಳನ್ನು ಹರಡುತ್ತವೆ. ಆದರೆ ಇದು ಜೇನು ನೊಣ. ಹೂವಿಂದ ಹೂವಿಗೆ ಸಂಬಂಧವನ್ನು ಬೆಸೆಯುತ್ತದೆ. ಪರಿಮಳವನ್ನು ಸೂಸುತ್ತದೆ. ಎಷ್ಟು ದೂರ ಹೋದರೂ ಹೂವಿನ ಮೇಲೆ ಕೂರುತ್ತದೆ ವಿನಃ ಕಳಪೆ ವಸ್ತುವಿನ ಮೇಲೆ ಕೂರುವುದಿಲ್ಲ. ಹಾಗೆಯೇ ವಿಶ್ವೇಶ್ವರ ಭಟ್ಟರು ಏನೇ ಮಾಡಿದರೂ ಅಚ್ಚುಕಟ್ಟಾಗಿ ಮತ್ತು ಗುಣಮಟ್ಟದಿಂದ ಮಾಡುತ್ತಾರೆ ಎಂದು ಶ್ಲಾಘಿಸಿದರು.

ಈ ಕಾರ್ಯಕ್ರಮದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಮಗ ಸುನೀಲ್ ಶಾಸ್ತ್ರೀ ಅವರು ಭಾಗವಹಿಸಿದ್ದು ಮತ್ತು ಅವರ ಜತೆ ನಾವೆಲ್ಲ ಜತೆಯಾಗಿದ್ದೇ ಒಂದು ಅಪೂರ್ವ ಅನುಭವ. ಸುನೀಲ್ ಶಾಸ್ತ್ರೀ ಅವರು ಇಲ್ಲಿ ಸಮನ್ವಯ ಮತ್ತು ಸಾಮರಸ್ಯದ ಬಗ್ಗೆ ಮಾತನಾಡಿದ್ದು ಕೂಡ ಅರ್ಥ ಪೂರ್ಣವಾಗಿದೆ. ಸಮನ್ವಯ ಧರ್ಮ ಅಂದರೆ ಕರುಣೆ, ಪ್ರೀತಿ. ಯಾವುದೇ ಧರ್ಮದ ಮೂಲ ಸಾರ ದಯೆ. ದಯವಿಲ್ಲದ ಧರ್ಮ ಅದಾವುದಯ್ಯ? ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ. ಇಂತಹ ದಯಾಪೂರಿತವಾದ ತತ್ವ ಸಿದ್ಧಾಂತಗಳನ್ನು ಇಟ್ಟುಕೊಂಡಿರುವ ಸುನೀಲ್ ಶಾಸ್ತ್ರೀ ಅವರ ಜೀವನ ಸ್ಪೂರ್ತಿದಾಯಕ ಎಂದರು.

ಈ ಸಮಾರಂಭದಲ್ಲಿ ಹಿರಿಯರು ಮಾತ್ರವಲ್ಲ, ಕಿರಿಯರೂ ದೊಡ್ಡ ಸಾಧನೆ ಮಾಡಿ ಪ್ರಶಸ್ತಿಗೆ ಪಾತ್ರ ರಾಗಿದ್ದಾರೆ. ಎಲ್ಲ ಸಾಧಕರ ಹಿನ್ನೆಲೆ ಮತ್ತು ಯಶಸ್ಸಿನ ಹಾದಿ ಉಳಿದವರಿಗೂ ಪ್ರೇರಣೆಯಾಗಿದೆ. ಇದು ಪ್ರವಾಸ ಮಾತ್ರವಲ್ಲ, ಒಂದು ಅಧ್ಯಯನ. ನಮ್ಮೆಲ್ಲರ ಬದುಕಿಗೆ ಇದು ನೆರವಾಗಲಿದೆ ಎಂದು ಸ್ವಾಮೀಜಿ ಹೇಳಿದರು.