Bigg Boss Kannada 12: ರಕ್ಷಿತಾ ಹೊರ ಹೋಗುತ್ತಿದ್ದಂತೆ ಸ್ಪಂದನಾ -ಕಾವ್ಯ ಫುಲ್ ಖುಷ್! ಮಾಳು ಕಣ್ಣೀರು
Rakshitha Shetty: ಬಿಗ್ ಬಾಸ್ ಮನೆಯಿಂದ ಧ್ರುವಂತ್ ಹಾಗೂ ರಕ್ಷಿತಾ ಅವರು ಔಟ್ ಆಗಿದ್ದಾರೆ ಅಂತ ಮನೆಮಂದಿ ಅಂದುಕೊಂಡಿದ್ದಾರೆ. ಆದರೆ ಇಬ್ಬರೂ ಸೀಕ್ರೆಟ್ ರೂಮ್‌ನಲ್ಲಿ ಇದ್ದಾರೆ. ವೋಟಿಂಗ್ ಲೈನ್ಸ್ ಓಪನ್ ಇಲ್ಲದ ಕಾರಣ ವೀಕ್ಷಕರು ಮೊದಲೇ ಊಹಿಸಿದ್ದರು. ರಕ್ಷಿತಾ, ಧ್ರುವಂತ್ ಸದ್ಯ ಸೀಕ್ರೆಟ್ ರೂಮ್‌ನಲ್ಲಿ ಇದ್ದು ಮನೆಮಂದಿ ಏನು ಮಾತಾಡ್ತಾ ಇದ್ದಾರೆ ಅಂತ ನೋಡ್ತಾ ಇದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಿಂದ (Bigg Boss Kannada 12) ಧ್ರುವಂತ್ ಹಾಗೂ ರಕ್ಷಿತಾ (Dhruvanth Rakshitha) ಅವರು ಔಟ್ ಆಗಿದ್ದಾರೆ ಅಂತ ಮನೆಮಂದಿ ಅಂದುಕೊಂಡಿದ್ದಾರೆ. ಆದರೆ ಇಬ್ಬರೂ ಸೀಕ್ರೆಟ್ ರೂಮ್‌ನಲ್ಲಿ ಇದ್ದಾರೆ. ವೋಟಿಂಗ್ ಲೈನ್ಸ್ ಓಪನ್ ಇಲ್ಲದ ಕಾರಣ ವೀಕ್ಷಕರು ಮೊದಲೇ ಊಹಿಸಿದ್ದರು. ರಕ್ಷಿತಾ, ಧ್ರುವಂತ್ ಸದ್ಯ ಸೀಕ್ರೆಟ್ (secrete Room) ರೂಮ್‌ನಲ್ಲಿ ಇದ್ದು ಮನೆಮಂದಿ ಏನು ಮಾತಾಡ್ತಾ ಇದ್ದಾರೆ ಅಂತ ನೋಡ್ತಾ ಇದ್ದಾರೆ. ಇನ್ನು ರಕ್ಷಿತಾ ಹೊರಗೆ ಬರ್ತಿದ್ದಂತೆ ಸ್ಪಂದನಾ (Spandana Kavya) ಹಾಗೂ ಕಾವ್ಯ ಖುಷಿ ಪಟ್ಟಿದ್ದಾರೆ. ಈ ಬಗ್ಗೆ ಚರ್ಚೆಗಳು ಆಗುತ್ತಿವೆ.
ರಕ್ಷಿತಾ ಮನೆಯಿಂದ ಹೊರಹೋಗುತ್ತೀದ್ದಂತೆ ಸ್ಪಂದನಾ ಮತ್ತು ಕಾವ್ಯ ಸಂತೋಷ ಪಟ್ಟಿದ್ದಾರೆ. ಅಷ್ಟೇ ಅಲ್ಲ ಧ್ರುವಂತ್ ಅವರು ಹೋಗಿದ್ದು Surprise ಅಂತ ಅನ್ನಿಸಿಲ್ಲ ಅಂದಿದ್ದಾರೆ ಕಾವ್ಯ, ಹಾಗೇ ಅಶ್ವಿನ ಇ ಬಗ್ಗೆಯೂ ಕಾವ್ಯ ಅವರು ಟಾಸ್ಕ್ ಏನೂ ಆಡಿಲ್ಲ ಅಂತ ಅಸಮಾಧಾನ ಹೊರ ಹಾಕಿದ್ದಾರೆ. ಆದರೆ ಮಾಳು, ಗಿಲ್ಲಿ, ರಘು, ರಜತ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Bigg Boss Kannada 12: ಧ್ರುವಂತ್‌ಗೆ ಆಟ, ರಕ್ಷಿತಾಗೆ ಪ್ರಾಣ ಸಂಕಟ; ಸೀಕ್ರೆಟ್ ರೂಮ್‌ನಲ್ಲಿ ಪುಟ್ಟಿ ನಡುಕ!
‘ನಾನು ಯಾರಿಗೂ ಕಣ್ಣೀರು ಹಾಕಿದವನಲ್ಲ, ಆದರೆ ರಕ್ಷಿತಾ ಹೋಗಿದ್ದು ಬೇಸರವಾಯ್ತು, ಆಕೆಯನ್ನು ಬಹಳ ಮಿಸ್ ಮಾಡಿಕೊಳ್ಳಲಿದ್ದೇನೆ’ ಎಂದರು ಗಿಲ್ಲಿ.
I would like to buy 100gms of Kavya's confidence..
— Prasad (@Prasad_C_) December 14, 2025
By doing nothing if you are not surprised about #Rakshita leaving then .. i need that tonic #bbk12 pic.twitter.com/7nQa7thlmj
ರಘು ಅವರು ರಕ್ಷಿತಾ ಹೋಗುವಾಗ, ನೆನಪಿಗೆಂದು ಅವರ ಆಭರಣವನ್ನೇ ತೆಗೆದುಕೊಟ್ಟರು. ರಜತ್ ಸಹ, ‘ನಾನು ಕಳೆದ ಸೀಸನ್ನಲ್ಲಿಯೂ ಸಹ ಯಾರನ್ನೂ ಹಚ್ಚಿಕೊಂಡಿರಲಿಲ್ಲ ಆದರೆ ರಕ್ಷಿತಾ ಅನ್ನು ಬಹಳ ಹಚ್ಚಿಕೊಂಡಿದ್ದೆ’ ಎಂದು ಬೇಸರ ಮಾಡಿಕೊಂಡರು.
ರಕ್ಷಿತಾ ಟೆನ್ಷನ್
ಅಶ್ವಿನಿ, ಗಿಲ್ಲಿ, ರಜತ್, ಧ್ರುವಂತ್, ರಕ್ಷಿತಾ, ಸ್ಪಂದನಾ ಇನ್ನೂ ಕೆಲವರು ನಾಮಿನೇಟ್ ಆಗಿದ್ದರು. ಹಲವರು ಸೇಫ್ ಆಗಿ ಕೊನೆಗೆ ರಜತ್, ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರುಗಳು ಅಂತಿಮವಾಗಿ ಉಳಿದಿದ್ದರು. ರಜತ್ ಅವರನ್ನು ಮನೆಯಲ್ಲೇ ಉಳಿಸಿ, ಧ್ರುವಂತ್ ಮತ್ತು ರಕ್ಷಿತಾರನ್ನು ಎವಿಕ್ಟ್ ಎಂದು ಘೋಷಿಸಲಾಯ್ತು. ಆದರೀಗ ಇಬರಿಬ್ಬರು ಸೀಕ್ರೆಟ್ ರೂಮ್‌ನಲ್ಲಿ ಇದ್ದಾರೆ. ಅದರಲ್ಲೂ ಧ್ರುವಂತ್ ಕೊಟ್ಟ ಕಾಟಕ್ಕೆ ತಲೆ ಮೇಲೆ ಕೈ ಇಟ್ಟುಕೊಂಡು ಫುಲ್ ಟೆನ್ಷನ್ ಆಗಿದ್ದಾರೆ ರಕ್ಷಿತಾ.
Gilli About Rakshitha 🙃#BBK12 #BiggBossKannada12 #KicchaSudeep #Gilli #Rakshitha pic.twitter.com/6FIjH7zScA
— IPL (@predictipl) December 14, 2025
ಮನೆಮಂದಿ ಧ್ರುವಂತ್ ಹಾಗೂ ರಕ್ಷಿತಾ ಅವರು ಔಟ್ ಆಗಿದ್ದಾರೆ ಎಂದು ಭಾವಿಸಿದ್ದಾರೆ. ಹೀಗಾಗಿ ಅವರೆಲ್ಲರೂ ಹಿಂದೆ ಮಾತನಾಡಿರೋದು ಧ್ರುವಂತ್ ಹಾಗೂ ರಕ್ಷಿತಾ ಮುಂದೆ ವಿಡಿಯೋ ಪ್ಲೇ ಆಗಿದೆ. ಮನೆಯ ಒಳಗೆ ಚೈತ್ರಾ ಅವರು ರಾಶಿಕಾ ಬಳಿ, ರಕ್ಷಿತಾದು ಒಂದೇ ಸಮಸ್ಯೆ ಅಂದ್ರೆ ತುಂಬಾ ಕನ್‌ಫ್ಯೂಸ್ ಆಗಿರ್ತಾ ಇದ್ಲು ಎಂದಿದ್ದಾರೆ.
ಇನ್ನು ರಜತ್, ರಕ್ಷಿತಾ ಮನೆಯಿಂದ ಹೊರಗೆ ಹೋಗುವಾಗ ಪ್ರತಿಯೊಬ್ಬರ ಕಣ್ಣಲ್ಲಿ ನೀರು ಇತ್ತು. ಧ್ರುವಂತ್‌ಗೆ ಯಾರು ಒಬ್ಬರು ಮಾತನಾಡಿಸಲಿಲ್ಲ ಎಂದಿದ್ದಾರೆ. ಈ ವೇಳೆ ರಕ್ಷಿತಾ, ಧ್ರುವಂತ್‌ಗೆ ನನ್ನ ಜನ ನನ್ನನ್ನು ಬಿಟ್ಟುಕೊಡಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಈ ಇಬ್ಬರು ಸೀಕ್ರೆಟ್ ರೂಮ್‌ಗೆ ? ಎಲಿಮಿನೇಶನ್ ಕಥೆ ಏನು?
ಮನೆಮಂದಿ ರಕ್ಷಿತಾ ಬಗ್ಗೆ ಒಳ್ಳೆಯ ಅಭಿಪ್ರಾಯ ಹೇಳಿದ್ದಕ್ಕೆ ಏನೋ, ಧ್ರುವಂತ್ ವ್ಯಂಗ್ಯ ಮಾಡಲು ಶುರು ಮಾಡಿದರು. ನಿನ್ನಂಥವರೇ, ನಿನ್ನ ಇಡೀ ಮನೆಯಲ್ಲಿ ಡ್ರಾಮಗಳನ್ನು ನೋಡಿಕೊಂಡೇ ಬಂದಿದ್ದೇನೆ ಎಂದಿದ್ದಾರೆ. ಧ್ರುವಂತ್ ಕೊಡೋ ಕಾಟಕ್ಕೆ, ಅಯ್ಯೋ ದೇವರೇ ಒಂದೇ ರೂಮಲ್ಲಿ ನಿಮ್ಮ ಜೊತೆ ಹೇಗೆ ಇರೋದು! ಅಂತ ಫುಲ್ ಟೆನ್ಷನ್ ಮಾಡಿಕೊಂಡಿದ್ದಾರೆ.