ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ಕಿಚ್ಚನ ಚಪ್ಪಾಳೆ ಬಗ್ಗೆ ರಜತ್ ಕಿಶನ್ ಹೇಳಿದ್ದೇನು?

Rajath: ಬಿಗ್‌ ಬಾಸ್‌ ಸೀಸನ್‌ 12ರ ಫಿನಾಲೆಗೆ ಇನ್ನು ಕೆಲವೇ ದಿನ ಬಾಕಿ ಇದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಸದ್ಯಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಕಿಚ್ಚನ ಚಪ್ಪಾಳೆ ಬಗ್ಗೆ ಸಖತ್‌ ಚರ್ಚೆಗಳು ಆಗುತ್ತಿವೆ ಇದೀಗ ಮಾಜಿ ಬಿಗ್‌ ಬಾಸ್‌ ಸ್ಪರ್ಧಿ ರಜತ್‌ ಈ ಬಗ್ಗೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.

ಕಿಚ್ಚನ ಚಪ್ಪಾಳೆ ಬಗ್ಗೆ ರಜತ್ ಕಿಶನ್  ಹೇಳಿದ್ದೇನು?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jan 12, 2026 6:43 PM

ಬಿಗ್‌ ಬಾಸ್‌ ಸೀಸನ್‌ 12ರ (Bigg Boss Kannada 12) ಫಿನಾಲೆಗೆ ಇನ್ನು ಕೆಲವೇ ದಿನ ಬಾಕಿ ಇದೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಸದ್ಯಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಕಿಚ್ಚನ ಚಪ್ಪಾಳೆ (kicchana chappale) ಬಗ್ಗೆ ಸಖತ್‌ ಚರ್ಚೆಗಳು ಆಗುತ್ತಿವೆ ಇದೀಗ ಮಾಜಿ ಬಿಗ್‌ ಬಾಸ್‌ ಸ್ಪರ್ಧಿ ರಜತ್‌ (Rajath Bigg boss Kannada) ಈ ಬಗ್ಗೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ರಜತ್‌ ಮಾತನಾಡಿ, ಒಳ್ಳೆಯದ್ದು ಮಾತನಾಡಿದ್ರೂ ಮಾತಾಡ್ತಾರೆ. ಕೆಟ್ಟದ್ದು ಮಾತನಾಡಿದ್ದರೂ ಮಾತಾಡ್ತಾರೆ. ಸರಿ ಇವಾಗ ಯಾರಿಗೆ ಕೊಡಬೇಕು? ಹಾಗಾದ್ರೆ? ಇಡೀ ತಂಡ, ಸುದೀಪ್‌ ಸರ್‌ ಅವರು ಎಲ್ಲವನ್ನೂ ನೋಡಿಯೇ ಕೊಟ್ಟಿರ್ತಾರೆ. ಯಾರಿಗೆ ಕೊಡಬೇಕು ಅಂತ ನಿರ್ಧಾರ ಮಾಡಿ ಕೊಡೋದು ದೊಡ್ಡ ಸೆಗ್‌ಮೆಂಟ್‌. ಕಿಚ್ಚನ ಚಪ್ಪಾಳೆ ಯೋಚನೆ ಮಾಡಿಯೇ ಕೊಡ್ತಾರೆ ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada 12: ಟಕರು ಟಕರು ಟಮಟೆ ಏಟು, ಕನ್ನಡ ಜನತೆ ಅಲ್ಟಿಮೇಟು; ಗಿಲ್ಲಿ ಡೈಲಾಗ್‌ಗೆ ಫ್ಯಾನ್ಸ್‌ ಫಿದಾ

ಯೋಚನೆ ಮಾಡಿ ಕೊಟ್ಟಿರುತ್ತಾರೆ

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗುವುದು ಎಷ್ಟು ಮುಖ್ಯವೋ ಅದಕ್ಕಿಂತಲೂ ಹೆಚ್ಚು ದೊಡ್ಡದು, ಮಹತ್ವ ಹೊಂದಿರುವುದು ಕಿಚ್ಚನ ಚಪ್ಪಾಳೆ. ಅದನ್ನು ತುಂಬಾ ಯೋಚನೆ ಮಾಡಿ ಕೊಟ್ಟಿರುತ್ತಾರೆ. ಅಶ್ವಿನಿ ಅವರಿಗಾಗಲಿ, ಧ್ರುವಂತ್ ಅವರಿಗಾಗಲಿ ಸುದೀಪ್ ಅವರು ಕಿಚ್ಚನ ಚಪ್ಪಾಳೆ ಕೊಟ್ಟಿದ್ದಾರೆ ಎಂದರೆ ಅವರು ಅರ್ಹರುನಿಮಗೆ ಯಾರಿಗೆ ಬೇಕೋ ಅವರಿಗೇ ಕಿಚ್ಚನ ಚಪ್ಪಾಳೆ ಕೊಟ್ಟುಕೊಂಡು ಹೋಗೋಕೆ ಆಗತ್ತಾ? ಆಗಲ್ಲ ತಾನೇ? ಈಗ ಕಿಚ್ಚನ ಚಪ್ಪಾಳೆ ಕೊಟ್ಟಿರುವುದು ಸರಿ ಇದೆ ಅಂತ ನನಗೆ ಅನಿಸುತ್ತದೆ’ ಎಂದು ರಜತ್ ಅವರು ಹೇಳಿದ್ದಾರೆ.

ಕಳೆದ ವಾರದ ಎಲಿಮಿನೇಷನ್‌ನಲ್ಲಿ ರಾಶಿಕಾ ಶೆಟ್ಟಿ ಅವರನ್ನು ಎಲಿಮಿನೇಟ್‌ ಮಾಡಲಾಗಿದೆ. ಸದ್ಯ ಧನುಷ್‌, ಗಿಲ್ಲಿ ನಟ, ಅಶ್ವಿನಿ ಗೌಡ, ರಘು, ರಕ್ಷಿತಾ ಶೆಟ್ಟಿ, ಕಾವ್ಯ ಮತ್ತು ಧ್ರುವಂತ್‌ ಅವರು ಮನೆಯೊಳಗೆ ಉಳಿದುಕೊಂಡಿದ್ದಾರೆ. ಇವರಲ್ಲೀಗ ಧನುಷ್‌ ಅವರನ್ನು ಹೊರತುಪಡಿಸಿ, ಮಿಕ್ಕ ಎಲ್ಲಾ ಆರು ಸ್ಪರ್ಧಿಗಳು ನಾಮಿನೇಟ್‌ ಆಗಿದ್ದಾರೆ.

ಅಂದಹಾಗೆ, ಈ ವಾರ ಮಿಡ್‌ ವೀಕ್‌ ಎಲಿಮಿನೇಷನ್‌ ಇರಲಿದೆ. ಬುಧವಾರದೊತ್ತಿಗೆ ಒಬ್ಬ ಸ್ಪರ್ಧಿ ಸದ್ದಿಲ್ಲದೇ ಮನೆಯಿಂದ ಎಲಿಮಿನೇಟ್‌ ಆಗಲಿದ್ದಾರೆ. ಆ ಎಲಿಮಿನೇಷನ್‌ಗೆಂದು ಈ ಆರು ಮಂದಿಯನ್ನು ನೇರವಾಗಿ ನಾಮಿನೇಟ್‌ ಮಾಡಲಾಗಿದೆ. ಇವರಲ್ಲೀಗ ಮಿಡ್‌ ವೀಕ್‌ ಎಲಿಮೇಷನ್‌ ಆಗೋದ್ಯಾರು ಎಂಬ ಬಗ್ಗೆ ಚರ್ಚೆಗಳು ಶುರುವಾಗಿವೆ. ‌

ಇದನ್ನೂ ಓದಿ: Bigg Boss Kannada 12: ಮಲ್ಲಮ್ಮ ಬಗ್ಗೆ ಧ್ರುವಂತ್‌ ಅಸಮಾಧಾನ! ನನಗೆ ನೀವು, ನಿಮಗೆ ನಾನು ಎಂದ ಅಶ್ವಿನಿ

ಗಿಲ್ಲಿ, ರಘು ಥರದ ಘಟಾನುಟಿಗಳೇ ನಾಮಿನೇಷನ್ ಪಟ್ಟಿಯಲ್ಲಿದ್ದಾರೆ. ಈ ಆರು ಮಂದಿಯಲ್ಲಿ ಯಾರೇ ಎಲಿಮಿನೇಟ್‌ ಆದರೂ ಅದು ಶಾಕಿಂಗ್‌ ಆಗಿರಲಿ. ಇಷ್ಟು ದಿನಗಳ ಬಿಗ್‌ ಬಾಸ್‌ ಮನೆಯಲ್ಲಿದ್ದರೂ, ಮಂಗಳವಾರದ ಸಂಜೆವರೆಗೂ ನಡೆಯುವ ವೋಟಿಂಗ್‌ನಲ್ಲಿ ಎಲ್ಲವೂ ನಿರ್ಧಾರವಾಗಲಿದೆ.