Bigg Boss Kannada 13: ಮನೆ ಕೆಲಸ ಮಾಡೋದಕ್ಕೆ ಕಿರಣ್ ಶಾಸ್ತ್ರೀ ತಕರಾರು!
Bigg Boss Kannada 13: ‘ಬಿಗ್ ಬಾಸ್ ಸೀಸನ್ 13’ರಲ್ಲಿ ಎಮರ್ಜೆನ್ಸಿ ಎಕ್ಸಿಟ್ ಎಂಬ ಪದ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಿದೆ. ಗಿ ಕಳಪೆ ಪಡೆದು ಜೈಲಿಗೆ ಹೋದರೂ ಎಲಿಮಿನೇಷನ್ ಟೆನ್ಶನ್‌ನಿಂದ ಕಿರಣ್ ಶಾಸ್ತ್ರಿ ಬಚಾವ್ ಆಗಿದ್ದಾರೆ. ವಿಶೇಷವಾಗಿ ಕಿರಣ್ ಶಾಸ್ತ್ರಿ ಅವರ ನಡವಳಿಕೆ ಹಾಗೂ ಆಟದ ತಂತ್ರಗಳ ಕುರಿತು ಮನೆಯಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕಿರಣ್ ಶಾಸ್ತ್ರಿ ಅವರು 'ಕಳಪೆ' (Kalape) ಎಂದು ಬಹುತೇಕರು ಅಭಿಪ್ರಾಯ ಪಟ್ಟಿದ್ದಾರೆ.
ಬಿಗ್ ಬಾಸ್ ಕನ್ನಡ -
‘ಬಿಗ್ ಬಾಸ್ ಸೀಸನ್ 13’ರಲ್ಲಿ (Bigg Boss Kannada 13) ಎಮರ್ಜೆನ್ಸಿ ಎಕ್ಸಿಟ್ ಎಂಬ ಪದ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಿದೆ. ಗಿ ಕಳಪೆ ಪಡೆದು ಜೈಲಿಗೆ ಹೋದರೂ ಎಲಿಮಿನೇಷನ್ ಟೆನ್ಶನ್‌ನಿಂದ ಕಿರಣ್ ಶಾಸ್ತ್ರಿ ಬಚಾವ್ ಆಗಿದ್ದಾರೆ. ವಿಶೇಷವಾಗಿ ಕಿರಣ್ ಶಾಸ್ತ್ರಿ (Kiran Shastri) ಅವರ ನಡವಳಿಕೆ ಹಾಗೂ ಆಟದ ತಂತ್ರಗಳ ಕುರಿತು ಮನೆಯಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕಿರಣ್ ಶಾಸ್ತ್ರಿ ಅವರು 'ಕಳಪೆ' (Kalape) ಎಂದು ಬಹುತೇಕರು ಅಭಿಪ್ರಾಯ ಪಟ್ಟಿದ್ದಾರೆ.
ಇದೀಗ ಮನೆ ಕೆಲಸ ಮಾಡೋದಕ್ಕೆ ಕಿರಣ್ ಶಾಸ್ತ್ರೀ ತಕರಾರು ಎತ್ತುತ್ತಿದ್ದಾರೆ. ಸೌತೆಕಾಯಿ ಕಟ್ ಮಾಡಿ ಕೊಡಲು ಧನುಷ್ ಹೇಳಿದರು. ಆದರೆ ಕಿರಣ್ ಇದ್ದವರು ಉಜ್ಜಿಕೊಡಿ ಮಾಡ್ತಾರೆ ಅಂತ ಹಿಂಗಾ ಮಾಡ್ಸೋದು ಅಂತ ಸುಮ್ಮನೆ ಆಗಿದ್ದಾರೆ. ಮಂಜ ಇದ್ದವರು ನಿನಗೆ ಇರೋದು ಒಂದೇ ಕೆಲಸ ಅದಾದ್ರೂ ಅಚ್ಚುಕಟ್ಟು ಮಾಡು ಎಂದಿದ್ದಾರೆ. ತರಕಾರಿ ಕಟ್ ಮಾಡಲ್ಲ ಎಂದಿದ್ದಾರೆ. ಮಂಜು ಇದ್ದವರು ಕ್ಷಮೆ ಕೇಳಬೇಕಾ? ಎಂದಿದ್ದಾರೆ. ಒಟ್ಟಾರೆಯಾಗಿ ಕಿರಣ್ ಕಾಟ ಮನೆಯಲ್ಲಿ ಜೋರಾಗಿದೆ.
ಇದನ್ನೂ ಓದಿ: Road Accident: ಗಣೇಶ ವಿಸರ್ಜನೆ ವೀಕ್ಷಿಸಲು ಹೊರಟವರ ಕಾರು ಅಪಘಾತ, ಇಬ್ಬರ ಸಾವು
ಟಾಸ್ಕ್‌ಗಳಲ್ಲಿ ಅತ್ಯದ್ಭುತ ಪ್ರದರ್ಶನ
ಈ ವಾರ ಹಲವು ಸ್ಪರ್ಧಿಗಳು ಗಗನ್ಅ ವರನ್ನು ಅತ್ಯುತ್ತಮ ಆಟಗಾರ ಎಂದು ಆಯ್ಕೆ ಮಾಡಿದರು. ಕಳೆದ ವಾರ ಆಸಿಯಾ ಅವರಿಗೆ ಚಿನ್ನದ ಮೆಡಲ್ಗಳು ಸಿಕ್ಕಿತ್ತು. ಈ ವಾರ ಮನೆಯೊಳಗೆ ನಡೆದ ಕಠಿಣ ಸವಾಲುಗಳು ಮತ್ತು ಟಾಸ್ಕ್‌ಗಳಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ನಟ ಗಗನ್ ಅವರಿಗೆ 'ಉತ್ತಮ ಆಟಗಾರ' ಗೌರವ ದೊರೆತಿದೆ. ಈ ಮೆಡ್‌ಲ್ ಅನ್ನು ಗಗನ್ ಗೆಳೆಯ ತಾಂಡವ್‌ಗೆ ಡೆಡಿಕೇಟ್ ಮಾಡಿದರು.
ತಾಂಡವ್ ಹೋಗುವಾಗ ಕಿರಣ್ ವರ್ತಿಸಿದ ರೀತಿ, ಮನೆಯಲ್ಲಿ ನಿಯಮಗಳನ್ನು ಮುರಿದಿದ್ದು, ಅಕ್ಕ ಎನ್ನುತ್ತಿದ್ದ ಸೌಂದರ್ಯಾ ಅವರನ್ನೇ ಮನೆಯಿಂದ ಹೊರಗೆ ಹಾಕಲು ಯತ್ನಿಸಿದ್ದು, ಸಣ್ಣಪುಟ್ಟ ವಿಷಯಗಳಿಗೂ ಜಗಳ ತೆಗೆದು ವಾತಾವರಣ ಕೆಡಿಸಿದ್ದು ಅವರ ವಿರುದ್ಧ ಮತ ಬೀಳಲು ಪ್ರಮುಖ ಕಾರಣಗಳು.
ಅಣ್ಣ ಕಿರಣ್‌ಗೆ ಗ್ಯಾಸ್ಟ್ರಿಕ್ ಆಗಿದೆ.. ಗಂಜಿ ಕುಡಿದು ಅವರ ಆರೋಗ್ಯ ಸರಿ ಆಗಲಿ ಎಂದು ಜೈಲಿಗೆ ಕಳುಹಿಸುತ್ತಿದ್ದೇನೆ..” ಎಂದು ಸೌಂದರ್ಯ ಹೇಳಿದರು.
ಇದನ್ನೂ ಓದಿ: Bigg Boss Kannada 13: ವಾರದ ʻಉತ್ತಮʼ ಗಗನ್, ಪದಕ ಗೆಳೆಯ ತಾಂಡವ್‌ಗೆ ಡೆಡಿಕೇಟ್!
ಕಿರಣ್ ಸಹ ಇದೇ ರೀತಿಯ ಕಾರಣಗಳನ್ನು ನೀಡಿ ಸೌಂದರ್ಯಾ ಅವರ 50% ಮತವನ್ನು ತೆಗೆದುಕೊಂಡಿದ್ದರು. ಆಸಿಯಾ, ಸಂಗೀತಾ ಇನ್ನೂ ಕೆಲವರು ಲಿಖಿತ್ ಹೆಸರನ್ನು ಸಹ ತೆಗೆದುಕೊಂಡರು. ಗಗನ್ ಅವರು ಧನುಶ್ ಹೆಸರನ್ನು ತೆಗೆದುಕೊಂಡರು.