ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada Finale: ಪ್ರತಿಸ್ಪರ್ಧಿಗಳಿಗೆ ಟಫ್‌ ಫೈಟ್‌ ಕೊಟ್ಟಿದ್ದ ರಘು ಮನೆಯಿಂದ ಹೊರಗೆ!

Raghu Bigg boss Kannada: ಬಿಗ್‌ ಬಾಸ್‌ ಸೀಸನ್‌ 12ರಲ್ಲಿ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟವರು ರಘು . ಧನುಷ್‌ ಗೌಡ, ಗಿಲ್ಲಿ ನಟ, ಅಶ್ವಿನಿ ಗೌಡ, ಕಾವ್ಯ ಶೈವ, ರಕ್ಷಿತಾ ಶೆಟ್ಟಿ ಹಾಗೂ ಮ್ಯೂಟೆಂಟ್‌ ರಘು ಫಿನಾಲೆ ತಲುಪಿದ್ದರು. ಆದರೆ ರಘು ಕೂಡ ಟಫ್‌ ಫೈಟ್‌ ಕೊಟ್ಟವರು. ಟ್ರೋಫಿ ಗೆಲ್ತಾರೆ ಅಂದುಕೊಂಡವರಿಗೆ ನಿರಾಸೆ ಆಗಿದೆ. ಈಗ ಮನೆಯಿಂದ ಹೊರಗೆ ಬಂದಿದ್ದಾರೆ ರಘು. ಧನುಷ್‌ 5th Runner Up ಆದ್ರೆ, ಟಾಪ್‌ 4th ಆಗಿ ರಘು ಹೊರಹೊಮ್ಮಿದ್ದಾರೆ. ಧನುಷ್‌ ಬೆನ್ನಲ್ಲೇ ರಘು ಮನೆಯಿಂದ ಔಟ್‌ ಆಗಿದ್ದಾರೆ.

ಪ್ರತಿಸ್ಪರ್ಧಿಗಳಿಗೆ ಟಫ್‌ ಫೈಟ್‌ ಕೊಟ್ಟಿದ್ದ ರಘು ಮನೆಯಿಂದ ಹೊರಗೆ!

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jan 18, 2026 8:06 PM

ಬಿಗ್‌ ಬಾಸ್‌ ಸೀಸನ್‌ 12ರಲ್ಲಿ (Bigg Boss Kannada 12) ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟವರು ರಘು (Wild Card Entry Raghu). ಧನುಷ್‌ ಗೌಡ, ಗಿಲ್ಲಿ ನಟ, ಅಶ್ವಿನಿ ಗೌಡ, ಕಾವ್ಯ ಶೈವ, ರಕ್ಷಿತಾ ಶೆಟ್ಟಿ ಹಾಗೂ ಮ್ಯೂಟೆಂಟ್‌ ರಘು ಫಿನಾಲೆ ತಲುಪಿದ್ದರು. ಆದರೆ ರಘು ಕೂಡ ಟಫ್‌ ಫೈಟ್‌ ಕೊಟ್ಟವರು. ಟ್ರೋಫಿ (Trophy) ಗೆಲ್ತಾರೆ ಅಂದುಕೊಂಡವರಿಗೆ ನಿರಾಸೆ ಆಗಿದೆ. ಈಗ ಮನೆಯಿಂದ ಹೊರಗೆ ಬಂದಿದ್ದಾರೆ ರಘು. ಟಾಪ್‌ 6 ಧನುಷ್‌ ಆದ್ರೆ, ಟಾಪ್‌ 5 ಆಗಿ ರಘು ಹೊರಹೊಮ್ಮಿದ್ದಾರೆ. ಧನುಷ್‌ ಬೆನ್ನಲ್ಲೇ ರಘು ಮನೆಯಿಂದ ಔಟ್‌ ಆಗಿದ್ದಾರೆ.

ಅನ್ನ ನೀಡೋ ನಳಮಹಾರಾಜ

ರಘು ಅಂದರೆ ಮೊದಲಿಗೆ ಇಡೀ ಮನೆಗೆ ಅನ್ನ ನೀಡೋ ನಳಮಹಾರಾಜ ಆಗಿದ್ದರು. ಎಷ್ಟೇ ಕೋಪ, ತಾಪ ಇದ್ರೂ ಅಡುಗೆ ಮನೆಯಲ್ಲಿ ರಘು ವೆರೈಟಿ ತಿಂಡಿ, ತಿನಿಸುಗಳನ್ನ ಮಾಡೋದನ್ನ ಮರೆಯುತ್ತಿರಲಿಲ್ಲ. ಆ ವಿಚಾರಕ್ಕೆ ಸಾಕಷ್ಟು ಬಾರಿ ಗಿಲ್ಲಿ ಜೊತೆ ಜಗಳ ಆಗಿದ್ದೂ ಇದೆ.

ಇನ್ನು ರಘು ಕೂಡ ಬಿಗ್‌ ಬಾಸ್‌ ಮನೆಯಲ್ಲಿ ಸ್ವಲ್ಪ ಸೈಲೆಂಟ್‌ ಇದ್ದರೂ ಗಿಲ್ಲಿ ಜೊತೆ ಒಳ್ಳೆಯ ಬಾಡಿಂಗ್‌ ಇತ್ತು. ಇವರಿಬ್ಬರ ಜೋಡಿ ಟ್ರೋಲ್‌ ಕೂಡ ಆಗಿತ್ತು. ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮಕ್ಕೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದವರು ರಘು. ಕಾಲಿಡುತ್ತಿದ್ದಂತೆಯೇ ಅಶ್ವಿನಿ ಗೌಡ ಹಾಗೂ ಜಾಹ್ನವಿ ಜೊತೆ ರಘು ಕಿತ್ತಾಡಿಕೊಂಡರು.

ಇದನ್ನೂ ಓದಿ: Bigg Boss Kannada 12: ಕಿಚ್ಚನ ಚಪ್ಪಾಳೆ ಬಗ್ಗೆ ತಲೆಕೆಡಿಸಿಕೊಳ್ಳೋಬೇಡಿ, ನಿಮ್ಮ ಜೀವನ ಮೇಲೆ ಗಮನ ಹರಿಸಿ ; ಕಿಚ್ಚ ಸುದೀಪ್‌

ಟಾಸ್ಕ್‌ನಲ್ಲಿ ಉತ್ತಮ

ಟಾಸ್ಕ್‌ನಲ್ಲಿ ಯಾರೇ ಉತ್ತಮ ಪ್ರದರ್ಶನ ಕೊಟ್ಟರೂ ಪ್ರಶಂಸೆ ನೀಡುತ್ತಿದ್ದರು. ಟ್ರೂ ಚಾಂಪಿಯನ್‌ ರೀತಿಯಲ್ಲಿ ಬೆನ್ನುತಟ್ಟಿದ್ದಾರೆ. ಹೀಗಾಗಿನೇ ಅಶ್ವಿನಿ ರಘು ನಡುವೆ ಎಷ್ಟೇ ಗಲಾಟೆ ಆದ್ರೂ ಸರಿಹೋಗಿದೆ. ವೀಕೆಂಡ್‌ ನಲ್ಲಿ ಇವರಿಬ್ಬರ ಎಂಟರ್ ಟೈನ್ಮೆಂಟ್‌ನ ವೀಕ್ಷಕರು ಎಂಜಾಯ್‌ ಮಾಡ್ತಿದ್ದರು.

ರಕ್ಷಿತಾ ಮುದ್ದಿನ ಅಣ್ಣ

ರಘು ಕಂಡರೆ ರಕ್ಷಿತಾಗೆ ತುಂಬಾ ಪ್ರೀತಿ. . ಸುದೀಪ್‌ ಅವರು ಸ್ಪರ್ಧಿಗಳು ಉಡುಗೊರೆಗಳ ವಿನಿಮಯ ಮಾಡಿಕೊಳ್ಳುವಂತೆ ಹೇಳಿದರು. ಆಗ ಒಬ್ಬೊಬ್ಬರು ತಮಗೆ ಇಷ್ಟವಾದವರಿಗೆ ಒಂದೊಂದು ಗಿಫ್ಟ್‌ ನೀಡಿದರು. ಈ ವೇಳೆ ರಕ್ಷಿತಾ ಶೆಟ್ಟಿ ನಡೆ ಎಲ್ಲರಿಗೂ ಅಚ್ಚರಿಯನ್ನು ಉಂಟು ಮಾಡಿತು.

ರಘು ಅವರಿಗೆ ರಕ್ಷಿತಾ ನೀಡಿದ ಉಡುಗೊರೆ ಎಲ್ಲರಿಗೂ ಶಾಕ್‌ ನೀಡಿತು. ಯಾಕೆಂದರೆ, ರಕ್ಷಿತಾ ತಮ್ಮಲ್ಲಿದ್ದ ಉತ್ತಮ ಮೆಡಲ್‌ ಅನ್ನು ರಘುಗೆ ನೀಡಿದರು. ರಘು ಅವರು ನನಗೆ ಅಣ್ಣ ಇದ್ದಂತೆ, ನಾನು ಇಲ್ಲಿಂದ ಹೊರಗೆ ಹೋದಮೇಲೂ ಅವರು ನನ್ನೊಂದಿಗೆ ಬೆಂಬಲವಾಗಿ ಇರುತ್ತಾರೆ ಎಂಬ ರಕ್ಷಿತಾ ಮಾತುಗಳನ್ನು ಕೇಳಿದ ಮೇಲೆ ರಘು ಭಾವುಕರಾದರು.

ಇದನ್ನೂ ಓದಿ: Bigg Boss Kannada 12: ಅಶ್ವಿನಿ ತಮ್ಮ ಶ್ರಮದಿಂದ ಮುಂದೆ ಬಂದ್ರು ಎಂದ ನಾರಾಯಣ ಗೌಡ; ಗಿಲ್ಲಿ ಪರ ಪ್ರವೀಣ್‌ ಶೆಟ್ಟಿ ಹೇಳಿದ್ದೇನು ಗೊತ್ತಾ?

ಟಾಪ್‌ 3 ಸ್ಥಾನದಲ್ಲಿ ಪಕ್ಕಾ ಇರ್ತಾರೆ ಅನ್ನೋದು ಬಿಗ್ ಬಾಸ್‌ ಅಭಿಮಾನಿಗಳ ಅಭಿಪ್ರಾಯ ಆಗಿತ್ತು. ಆದರೀಗ ಉಲ್ಟಾ ಆಗಿದೆ.