Jana Nayagan : ದಳಪತಿ ವಿಜಯ್ ‘ಜನ ನಾಯಗನ್’ ಸಿನಿಮಾದಿಂದ ಬಿಗ್ ಅಪ್ಡೇಟ್; ಹೊಸ ಪೋಸ್ಟರ್ ಔಟ್, ರಿಲೀಸ್ ಯಾವಾಗ?
ಇತ್ತೀಚಿನ ಕರೂರ್ (Karoor) ಕಾಲ್ತುಳಿತ ಘಟನೆಯ ನಂತರ ಬಿಡುಗಡೆಯನ್ನು ಮುಂದೂಡಬಹುದು ಎಂಬ ಊಹಾಪೋಹಗಳ ನಡುವೆ ಈ ಅಪ್ಡೇಟ್ ಬಂದಿದೆ. ರಿಲೀಸ್ ಆದ ಬಳಿಕ ಅಮೆಜಾನ್ ಪ್ರೈಮ್ (Amazon Prime) ವಿಡಿಯೊ ಒಟಿಟಿಯಲ್ಲಿ ಪ್ರಸಾರ ಕಾಣಲಿದೆ. ವಿಜಯ್ (Thalapathy Vijay) ಅವರ ಈ ಕೊನೆಯ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ (KVN Production) ನಿರ್ಮಾಣ ಮಾಡುತ್ತಿದೆ.
thalapathy Vijay -
ದಳಪತಿ ವಿಜಯ್ (Thalapathy Vijay) ಅವರ 'ಜನ ನಾಯಗನ್' ( 'Jana Nayagan' ) ಚಿತ್ರದ ನಿರ್ಮಾಪಕರು ಗುರುವಾರ ಚಿತ್ರದ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ವಿಜಯ್ ಅವರ ಕೊನೆಯ ಚಿತ್ರದ ಅಧಿಕೃತ ನಿರ್ಮಾಪಕರಾದ ಕೆವಿಎನ್ ಪಿಕ್ಚರ್ಸ್, ಹೊಸ ಪೋಸ್ಟರ್ ಅನ್ನು ಎಕ್ಸ್ ನಲ್ಲಿ ಟಿಪ್ಪಣಿಯೊಂದಿಗೆ ಪೋಸ್ಟ್ ಮಾಡಿದೆ. ನವೆಂಬರ್ 8 ರಂದು ಮೊದಲ ಸಿಂಗಲ್ ಬಿಡುಗಡೆಯೊಂದಿಗೆ ಚಿತ್ರದ ಪ್ರಚಾರ ಪ್ರಾರಂಭವಾಗಲಿದೆ.
ನಟ ವಿಜಯ್ ಅವರ ಬಹು ನಿರೀಕ್ಷಿತ ಚಿತ್ರ 'ಜನ ನಾಯಗನ್' ನಿರ್ಮಾಪಕರು ಈ ಮೋದಲೇ ಯೋಜಿಸಿದಂತೆ ಜನವರಿ 9, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದೀಗ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ ಚಿತ್ರತಂಡ. ಇತ್ತೀಚಿನ ಕರೂರ್ ಕಾಲ್ತುಳಿತ ಘಟನೆಯ ನಂತರ ಬಿಡುಗಡೆಯನ್ನು ಮುಂದೂಡಬಹುದು ಎಂಬ ಊಹಾಪೋಹಗಳ ನಡುವೆ ಈ ಅಪ್ಡೇಟ್ ಬಂದಿದೆ. ಕರೂರು ಘಟನೆಯಿಂದ ಸಿನಿಮಾ ಮುಂದಕ್ಕೆ ಹೋಗಲಿದೆ ಎಂದು ಹೇಳಲಾಗಿತ್ತು. ಇದಕ್ಕೆ ತಂಡದವರು ಸ್ಪಷ್ಟನೆ ಕೊಟ್ಟಿದ್ದಾರೆ.
ಅಜಿತ್ ಕುಮಾರ್ ಅವರೊಂದಿಗೆ ಮೂರು ಯಶಸ್ವಿ ಚಿತ್ರಗಳಲ್ಲಿ ಕೆಲಸ ಮಾಡಿದ್ದ ಹೆಚ್. ವಿನೋತ್ ನಿರ್ದೇಶನದ ' ಜನ ನಾಯಗನ್' ವಿಜಯ್ ಅವರ ಸಿನಿಮೀಯ ವೃತ್ತಿಜೀವನದಿಂದ ನಿವೃತ್ತಿ ಹೊಂದುವ ಮೊದಲು ಅವರ ಕೊನೆಯ ಚಿತ್ರವಾಗಿರುವುದರಿಂದ ಇದು ಮಹತ್ವದ ಪ್ರಾಜೆಕ್ಟ್ ಆಗಿರಲಿದೆ ಎನ್ನಲಾಗುತ್ತಿದೆ.
ಅಮೆಜಾನ್ ಪ್ರೈಮ್ ವಿಡಿಯೋ ಲೋಗೋವನ್ನು ಸಹ ಹೊಂದಿದೆ. ಹೊಸ ವಿಷಯಗಳಿಗಾಗಿ ಕಾತರದಿಂದ ಕಾಯುತ್ತಿರುವ ವಿಜಯ್ ಅಭಿಮಾನಿಗಳಿಗೆ ಸಂಗೀತ ರಸದೌತಣ ನೀಡುವ ಭರವಸೆ ನೀಡಿ, ಚಿತ್ರದ ಮೊದಲ ಸಿಂಗಲ್ ಅನ್ನು ನವೆಂಬರ್ 8 ರಂದು ಬಿಡುಗಡೆ ಮಾಡುವುದಾಗಿ ಚಲನಚಿತ್ರ ನಿರ್ಮಾಪಕರು ಘೋಷಿಸಿದ್ದಾರೆ.
ಹಿಂದಿನ ಹಲವಾರು ಪೋಸ್ಟರ್ಗಳಂತೆ, ಇದು ಕೂಡ ಅವರನ್ನು ಜನಸಮೂಹದಿಂದ ಸುತ್ತುವರೆದಿದೆ, ನೀಲಿ ಶರ್ಟ್ ಮತ್ತು ಏವಿಯೇಟರ್ಗಳಲ್ಲಿ ಕ್ಲಾಸಿಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ ನಟ. 'ಜನ ನಾಯಗನ್' ಚಿತ್ರವು ಜನವರಿ 9ರ ಸಂಕ್ರಾಂತಿ ಹಬ್ಬದಂದು ಬಿಡುಗಡೆಯಾಗಲಿದೆ.
ಈ ವರ್ಷದ ಆರಂಭದಲ್ಲಿ, ಚಿತ್ರತಂಡವು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿತು, ಅದರಲ್ಲಿ ವಿಜಯ್ ಡೆನಿಮ್ ಶರ್ಟ್ ಮತ್ತು ಕಪ್ಪು ಜೀನ್ಸ್ ಧರಿಸಿ, ಕಾರಿನ ಮೇಲೆ ನಿಂತು ಹರ್ಷೋದ್ಗಾರ ಮಾಡುತ್ತಿರುವ ಜನಸಮೂಹದೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ಪೋಸ್ ನೀಡಿದ್ದರು.
ಈ ಸಿನಿಮಾ ಬಳಿಕ ವಿಜಯ್ ಅವರು ರಾಜಕೀಯಕ್ಕೆ ಕಾಲಿಡಲಿದ್ದಾರೆ. ಹೀಗಾಗಿಯೇ ಸಿನಿಮಾನ ರಾಜಕೀಯ ಕಥಾ ಹಂದರದ ಹಿನ್ನೆಲೆಯಲ್ಲಿ ಮಾಡಲಾಗುತ್ತಿದೆ ಎಂದು ವರದಿ ಆಗಿದೆ. ಬಾಬಿ ಡಿಯೋಲ್ ಮತ್ತು ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ರಿಲೀಸ್ ಆದ ಬಳಿಕ ಅಮೆಜಾನ್ ಪ್ರೈಮ್ ವಿಡಿಯೊ ಒಟಿಟಿಯಲ್ಲಿ ಪ್ರಸಾರ ಕಾಣಲಿದೆ.ವಿಜಯ್ ಅವರ ಈ ಕೊನೆಯ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದೆ. ಕನ್ನಡದಲ್ಲಿ ಯಶಸ್ವಿಯಾಗಿ ಕೆಲ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಕೆವಿಎನ್ ‘ಜನ ನಾಯಗನ್’ ಸಿನಿಮಾ ಮೂಲಕ ತಮಿಳಿಗೆ ಕಾಲಿರಿಸಿದೆ.