Thalapathy Vijay: ಕರೂರು ಕಾಲ್ತುಳಿತ ಕೇಸ್; ಶೀಘ್ರದಲ್ಲೇ ಮೃತರ ಕುಟುಂಬ ಭೇಟಿ ಮಾಡಲಿರುವ ದಳಪತಿ ವಿಜಯ್
TVK Chief Vijay: ಕರೂರು ಕಾಲ್ತುಳಿತದ ಘಟನೆ ಬಳಿಕ ತೀವ್ರ ಟೀಕೆಗೆ ಗುರಿ ಆಗಿದ್ದ ಟಿವಿಕೆ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ಅವರು ಮೃತರ ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಲು ಮುಂದಾಗಿದ್ದಾರೆ. ಈ ಹಿಂದೆ ಗಾಯಾಳುಗಳು ಹಾಗೂ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದರು. ಮೃತರ ಕುಟುಂಬಗ್ಗೆ ತಲಾ 20 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 2 ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದ್ದರು.
ದಳಪತಿ ವಿಜಯ್ -
ಚೆನ್ನೈ: ಕರೂರು ಕಾಲ್ತುಳಿತದ (Karur Stampede) ಘಟನೆ ಬಳಿಕ ತೀವ್ರ ಟೀಕೆಗೆ ಗುರಿ ಆಗಿದ್ದ ತಮಿಳಗ ವೆಟ್ರಿ ಕಳಗಂಪಕ್ಷದ (Tamilaga Vettri Kazhagam) ಮುಖ್ಯಸ್ಥ ದಳಪತಿ ವಿಜಯ್ (Thalapathy Vijay) ಅವರು ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟವರ ಕುಟುಂಬಗಳನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಕ್ಟೋಬರ್ 27ರಂದು ಟಿವಿಕೆ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ಚೆನ್ನೈನ ಕರೂರಿಗೆ ತೆರಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದ್ದು, ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ 41 ಮಂದಿ ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಲಿದ್ದಾರೆ. ಮೂಲಗಳ ಪ್ರಕಾರ, “ನಮ್ಮ ನಾಯಕರು ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ, ಅವರೊಂದಿಗೆ ಸಮಯ ಕಳೆಯಲು ಇಚ್ಛಿಸಿದ್ದು, ಅವರ ಜೊತೆ ಮಾತುಕತೆ ನಡೆಸಲು ಬಯಸಿದ್ದಾರೆ. ಈ ಭೇಟಿಯನ್ನು ಅರ್ಥಪೂರ್ಣಗೊಳಿಸುವ ಉದ್ದೇಶವನ್ನು ಪಕ್ಷ ಹೊಂದಿದ್ದು, ಇಡೀ ದಿನ ಮೃತ ಕುಟುಂಬ ಸದಸ್ಯರ ಜೊತೆ ಕಳೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Viral Video: ಕಂಡ ಕಂಡವರ ಮೇಲೆ ಬೆಲ್ಟ್‌ನಿಂದ ಹಲ್ಲೆ ನಡೆಸಿ ಮಹಿಳಾ ಬೌನ್ಸರ್‌ಗಳ ಅಟ್ಟಹಾಸ!
ಅಲ್ಲದೇ ಈ ಸಭೆ ನಡೆಸಲು ಈಗಾಗಲೇ ಸಾಕಷ್ಟು ಸ್ಥಳಗಳನ್ನು ಪಕ್ಷ ನೋಡಿದ್ದು, ಸೂಕ್ತವಾದ ಯಾವುದೇ ಜಾಗ ದೊರೆತಿಲ್ಲ ಎನ್ನಲಾಗಿದೆ. ಈ ಬಗ್ಗೆಯೂ ಪಕ್ಷ ತಿಳಿಸಿದ್ದು. “ಕರೂರಿನಲ್ಲಿ ಹಲವು ಸ್ಥಳಗಳನ್ನು ಪರಿಶೀಲಿಸಿದ್ದೇವೆ, ಆದರೆ ಯಾವ ಸ್ಥಳವೂ ಅಂತಿಮವಾಗಿಲ್ಲ. ಕರೂರು ಪೊಲೀಸರು ಸೂಚಿಸಿದ ಸ್ಥಳವು ನಾಯಕ ಹಾಗೂ ಸಂತ್ರಸ್ತ ಕುಟುಂಬಗಳ ಭದ್ರತೆಗೆ ಸೂಕ್ತವಾಗಿರಲಿಲ್ಲ. ಈವರೆಗೂ ನೋಡಿದ ಅಷ್ಟು ಸ್ಥಳವೂ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ಅಲ್ಲಿ ಹೆಚ್ಚಿನ ಜನರನ್ನು ಸೇರಿಸುವುದು ಹಾಗೇ ಜನಸಂದಣಿಯನ್ನು ನಿಯಂತ್ರಿಸುವುದೂ ಕಷ್ಟವಾಗುತ್ತಿತ್ತು. ಹಾಗಾಗಿ ಅಂತಹ ಸ್ಥಳವನ್ನು ನಾವು ತಿರಸ್ಕರಿಸಿದ್ದೇವೆ. ಅಲ್ಲದೇ ಈ ಬಾರೀ ಹೆಚ್ಚಿನ ಮುತುವರ್ಜಿ ಹಾಗೂ ಮುನ್ನಚ್ಚೆರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಈ ಹಿಂದೆ ನಡೆದಂತ ಅವಘಡ ಪುನರಾವರ್ತಿಸದಂತೆ ಎಚ್ಚರಿಕೆ ವಹಿಸದ್ದೇವೆ ಎಂದು ಹೇಳಿದೆ.
ಕಾಲ್ತುಳಿತ ಘಟನೆಯಾದ ಬಳಿಕ ಪಶ್ಚಾತ್ತಾಪವಿಲ್ಲದೆವಿಲ್ಲದೆ ವಿಜಯ್ ಘಟನಾ ಸ್ಥಳದಿಂದ ಓಡಿ ಹೋದರು ಎಂಬ ಆರೋಪವೂ ಕೇಳಿಬಂದಿತ್ತು. ಆ ಬೆನ್ನಲ್ಲೇ ಪ್ರಕರಣ ನಡೆದು ಹತ್ತು ದಿನವಾದ ಬಳಿಕ ವಿಡಿಯೋ ಕಾಲ್‌ನಲ್ಲಿ ಘಟನೆಯಲ್ಲಿ ಮೃತಪಟ್ಟವರ ಕುಟಂಬಸ್ಥರೊಂದಿಗೆ ಮಾತನಾಡಿದ್ದರು. ಜೊತೆಗೆ ಶೀಘ್ರವೇ ಕರೂರಿಗೆ ಬಂದು ವೈಯಕ್ತಿಕವಾಗಿ ಮೃತರ ಕುಟುಂಬಸ್ಥರನ್ನು ಖುದ್ದು ಭೇಟಿಯಾಗುವುದಾಗಿ ಸ್ಪಷ್ಟನೆ ಕೊಟ್ಟಿದ್ದರು. ಇದೀಗ ಅದನ್ನು ಕಾರ್ಯರೂಪಕ್ಕೆ ಟಿವಿಕೆ ಪಕ್ಷ ಸಿದ್ದತೆ ಮಾಡಿಕೊಳ್ಳುತ್ತಿದ್ದು, ದಳಪತಿ ವಿಜಯ್ ತಮ್ಮ ಮೇಲೆ ಕೇಳಿ ಬಂದಿದ್ದ ಆರೋಪಗಳಿಗೆ ಉತ್ತರ ನೀಡಲು ಸಜ್ಜಾಗಿದ್ದಾರೆ.
ಇನ್ನು ತಮಿಳುನಾಡಿನ ಕರೂರಿನಲ್ಲಿ ನಟ ಹಾಗೂ ರಾಜಕಾರಣಿ ದಳಪತಿ ವಿಜಯ್ ಆಯೋಜಿಸಿದ್ದ ಪ್ರಚಾರದ ರ‍್ಯಾಲಿಯ ವೇಳೆ ಕಾಲ್ತುಳಿತ ಉಂಟಾಗಿ 36 ಜನರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಘಟನೆ ತಮಿಳುನಾಡಿನ ಚಿತ್ರಣವನ್ನೇ ಬದಲಾಯಿಸಿತು. ದಳಪತಿ ವಿಜಯ್ ಹಾಗೂ ಇಡೀ ತಮಿಳುನಾಡಿನ ಪಾಲಿಗೆ ಇದೊಂದು ಕರಾಳ ಅಧ್ಯಾಯ ಆಗಿತ್ತು. ಈವರೆಗೂ ಯಾವುದೇ ರಾಜಕೀಯ ಪಕ್ಷದ ರ‍್ಯಾಲಿಯಲ್ಲಿ ಇಷ್ಟು ದೊಡ್ಡ ದುರಂತ ಆಗಿರಲಿಲ್ಲ. ಅಲ್ಲದೇ ರಾಜಕೀಯ ವಲಯದಲ್ಲಿಯೂ ಈ ಘಟನೆ ಅಲ್ಲೋಲಕಲ್ಲೋಲ ಸೃಷ್ಟಿಸಿತು.
ತಮ್ಮದೇ ಟಿವಿಕೆ ಪಕ್ಷದ ರ‍್ಯಾಲಿಯಲ್ಲಿ ಭಾಗವಹಿಸಿದ್ದ ವೇಳೆ ನೂಕುನುಗ್ಗಲು ಉಂಟಾಗಿ ಈ ದುರಂತ ಸಂಭವಿಸಿದ್ದ ಕಾರಣ ತಮಿಳು ನಟ ಹಾಗೂ ಟಿವಿಕೆ ಪಕ್ಷದ ನಾಯಕ ವಿಜಯ್ ಮೃತರ ಕುಟುಂಬಕ್ಕೆ ತಲಾ 20 ಲಕ್ಷ ರೂ. ಪರಿಹಾರ ಘೋಷಿಸಿದ್ದರು.
ಕಳೆದ ತಿಂಗಳು ನಡೆದ ಈ ರ‍್ಯಾಲಿಯಲ್ಲಿ ಸುಮಾರು 60 ಸಾವಿರ ಜನರು ಭಾಗವಹಿಸಿದ್ದರು ಎನ್ನಲಾಗಿದೆ. ಕಾಲ್ತುಳಿತಕ್ಕೆ ಹೊಣೆ ಯಾರು ಎಂಬುದನ್ನು ತಿಳಿಯಲು ತನಿಖೆ ಮಾಡಲಾಗುತ್ತಿದೆ. ಆದರೆ ರಾಜಕೀಯಕ್ಕೆ ಕಾಲಿಟ್ಟಿರುವ ದಳಪತಿ ವಿಜಯ್ ಅವರಿಗೆ ಈ ಘಟನೆಯಿಂದ ಆರಂಭದಲ್ಲೇ ಹಿನ್ನಡೆ ಆಗಿದ್ದು, ಇಷ್ಟು ದಿನವಾದರೂ ಸಂತ್ರಸ್ತರನ್ನು ಭೇಟಿಯಾಗಿಲ್ಲ ಎಂದು ವಿಜಯ್ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು.