ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss: ಬಿಗ್​ಬಾಸ್ ಮನೆಯಲ್ಲಿ ನಡೆಯಿತು ನಿಶ್ಚಿತಾರ್ಥ!

Bigg Boss: ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಅರಳುವುದು ಸಹಜ. ಆದರೆ ಬಿಗ್ ಬಾಸ್ ಮನೆಯಲ್ಲಿ ಇದುವರೆಗೆ ನಿಶ್ಚಿತಾರ್ಥ ನಡೆದಿಲ್ಲ. ಇದು ಯಾವುದೇ ಭಾಷೆಯಲ್ಲಿ ಅಥವಾ ಯಾವುದೇ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಡೆದಿಲ್ಲ. ತೆಲುಗಿನಲ್ಲಿ ಮೊದಲ ಬಾರಿಗೆ, ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯ ನಿಶ್ಚಿತಾರ್ಥ ನಡೆದಿದೆ. ಪ್ರಸ್ತುತ ‘ಬಿಗ್ ಬಾಸ್ ತೆಲುಗು ಸೀಸನ್ 10' ರಿಯಾಲಿಟಿ ಶೋನಲ್ಲಿ ಹತ್ತನೇ ವಾರದ ಫ್ಯಾಮಿಲಿ ವೀಕ್ ಸಂಭ್ರಮ ನಡೆಯುತ್ತಿದ್ದು, ಸ್ಪರ್ಧಿಗಳ ಕುಟುಂಬಸ್ಥರು ಮತ್ತು ಆಪ್ತರು ಹೌಸ್ ಒಳಗೆ ಬಂದು ಸಂಭ್ರಮಿಸುತ್ತಿದ್ದಾರೆ.

Bigg Boss: ಬಿಗ್​ಬಾಸ್ ಮನೆಯಲ್ಲಿ ನಡೆಯಿತು ನಿಶ್ಚಿತಾರ್ಥ!

ಬಿಗ್‌ ಬಾಸ್‌ ತೆಲುಗು -

Yashaswi Devadiga
Yashaswi Devadiga Nov 11, 2026 7:44 PM

ಬಿಗ್ ಬಾಸ್ ಮನೆಯಲ್ಲಿ (Bigg boss telugu) ಪ್ರೀತಿ ಅರಳುವುದು ಸಹಜ. ಆದರೆ ಬಿಗ್ ಬಾಸ್ ಮನೆಯಲ್ಲಿ ಇದುವರೆಗೆ ನಿಶ್ಚಿತಾರ್ಥ ನಡೆದಿಲ್ಲ. ಇದು ಯಾವುದೇ ಭಾಷೆಯಲ್ಲಿ ಅಥವಾ ಯಾವುದೇ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಡೆದಿಲ್ಲ. ತೆಲುಗಿನಲ್ಲಿ ಮೊದಲ ಬಾರಿಗೆ, ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯ ನಿಶ್ಚಿತಾರ್ಥ ನಡೆದಿದೆ. ಪ್ರಸ್ತುತ ‘ಬಿಗ್ ಬಾಸ್ ತೆಲುಗು ಸೀಸನ್ 10' ರಿಯಾಲಿಟಿ ಶೋನಲ್ಲಿ ಹತ್ತನೇ ವಾರದ ಫ್ಯಾಮಿಲಿ ವೀಕ್ (Family Week) ಸಂಭ್ರಮ ನಡೆಯುತ್ತಿದ್ದು, ಸ್ಪರ್ಧಿಗಳ ಕುಟುಂಬಸ್ಥರು ಮತ್ತು ಆಪ್ತರು ಹೌಸ್ ಒಳಗೆ ಬಂದು ಸಂಭ್ರಮಿಸುತ್ತಿದ್ದಾರೆ. ಅದರ ಒಂದು ಭಾಗವಾಗಿ ನಟ ಶಿವಕುಮಾರ್ ಅವರ ಗೆಳತಿ ಹಾಗೂ ನಟಿ ಪ್ರಿಯಾಂಕಾ ಜೈಸ್ವಾಲ್ ಹೌಸ್ ಒಳಗೆ ಪ್ರವೇಶಿಸಿದ್ದಾರೆ.

ಪ್ರಿಯಾಂಕಾ ಫ್ಯಾಮಿಲಿ ವೀಕ್‌ನ ಭಾಗವಾಗಿ ಶಿವ್‌ಗಾಗಿ ಮನೆಗೆ ಬಂದರು. ಕಳೆದ ಕೆಲವು ವರ್ಷಗಳಿಂದ ಈ ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಜೋಡಿಯು ಹೌಸ್‌ನಲ್ಲಿರುವ ಇತರ ಸ್ಪರ್ಧಿಗಳ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದೆ. ಇದಕ್ಕೆ ಸಂಬಂಧಿಸಿದ ಇತ್ತೀಚಿನ ಪ್ರೋಮೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: Bigg Boss Kannada 13: ಮಂಜು-ಯಶಸ್ ಕಿರಿಕ್; ಮಹಾಕವಿಯ ಚುಚ್ಚುವ ಮಾತು ಶುರು

ಶಿವಕುಮಾರ್ಗಾಗಿ ಪ್ರಿಯಾಂಕಾ ವಿಶೇಷವಾಗಿ ಬಟ್ಟೆಗಳನ್ನು ಸಹ ತಂದಿದ್ದರು. ನಂತರ ಶೋನಲ್ಲಿ ಇಬ್ಬರೂ ಉಂಗುರಗಳನ್ನು ಸಹ ಬದಲಾಯಿಸಿಕೊಂಡು ಎಂಗೇಜ್‌ಮೆಂಟ್ ಮಾಡಿಕೊಂಡರು. ಹೊಸದಾಗಿ ಮದುವೆಯಾದ ಹೆಣ್ಣು ಹಾಗೂ ಗಂಡು ಮನೆಗೆ ಕಾಲಿಡುವ ಸನ್ನಿವೇಶವನ್ನು ಇಲ್ಲಿ ಮರುಸೃಷ್ಟಿಸಲಾಯಿತು.
ಇಂದಿನ ಸಂಚಿಕೆಯಲ್ಲಿ ಮುಖೇಶ್, ಶಿವ ಮತ್ತು ಅಮನ್ ಕುಟುಂಬಗಳು ಕಾಣಿಸಿಕೊಳ್ಳಲಿವೆ. ಮುಖೇಶ್ ಕುಟುಂಬದ ಪ್ರೋಮೋ ಈಗಾಗಲೇ ಹೊರಬಂದಿದೆ. ಈ ಪ್ರೋಮೋದಲ್ಲಿ, ಪ್ರಿಯಾಂಕಾ ಶಿವನಿಗಾಗಿ ಬಂದಿದ್ದಾರೆ.

ಇದನ್ನೂ ಓದಿ: Bigg Boss Kannada 13: ಮಂಜ -ಯಶಸ್‌ ನಡುವಿನ ವೈಮನಸ್ಸು; ಮತ್ತೆ ರದ್ದಾಯ್ತು ಟಾಸ್ಕ್!

ತೆಲುಗು ಬಿಗ್ ಬಾಸ್ ಇತಿಹಾಸದಲ್ಲಿ, ಮನೆಯಲ್ಲಿ ಒಬ್ಬ ಸ್ಪರ್ಧಿ ತನ್ನ ಗೆಳತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವುದು ವಿಶೇಷ ಆಕರ್ಷಣೆಯಾಗಿದೆ. ಸಾಮಾನ್ಯವಾಗಿ, ಕುಟುಂಬ ವಾರದಲ್ಲಿ ಕುಟುಂಬ ಸದಸ್ಯರ ಆಗಮನದೊಂದಿಗೆ ಭಾವನಾತ್ಮಕ ದೃಶ್ಯಗಳು ಕಂಡುಬರುತ್ತವೆ. ಆದರೆ ಈ ಬಾರಿ, ಶಿವ-ಪ್ರಿಯಾಂಕ ಅವರ ನಿಶ್ಚಿತಾರ್ಥದೊಂದಿಗೆ ಮನೆಯಲ್ಲಿ ವಿವಾಹದ ಸದ್ದು ಕೇಳಿಬರುತ್ತಿದೆ. ಈ ವಿಶೇಷ ಕ್ಷಣಗಳು ಪ್ರೇಕ್ಷಕರನ್ನು ಹಾಗೂ ಅವರ ಅಭಿಮಾನಿಗಳನ್ನು ಆಕರ್ಷಿಸುತ್ತಿವೆ.