ಬೆಂಗಳೂರು ಸ್ಟಾರ್ಟ್‌ಅಪ್‌ನಿಂದ 'ಪರಮ್' ಸೃಷ್ಟಿ; ಸ್ವದೇಶಿ ರೋಬೋಟ್ ನಾಯಿ ವಿಶೇಷತೆಗಳೇನು?
ಬೆಂಗಳೂರು ಮೂಲದ ಒಂದು ಸ್ಟಾರ್ಟ್‌ಅಪ್ ಸಂಸ್ಥೆ ‘ಪರಮ್’ ಎಂಬ ಶಕ್ತಿಶಾಲಿ ಸ್ವದೇಶಿ ರೋಬೋಟ್ ನಾಯಿಯನ್ನು ಅಭಿವೃದ್ಧಿಪಡಿಸಿದೆ. ಈ ರೋಬೋಟ್ ನಾಯಿ ಅತ್ಯಾಧುನಿಕ ರೋಬೋಟಿಕ್ಸ್ ಮತ್ತು ಎಐ ತಂತ್ರಜ್ಞಾನಗಳನ್ನು ಬಳಸಿ ನಿರ್ಮಿಸಲಾಗಿದ್ದು, ಭದ್ರತೆ, ನಿಗಾವಹಣೆ ಮತ್ತು ಕೈಗಾರಿಕಾ ಬಳಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉಪಯೋಗಿಸಬಹುದಾಗಿದೆ. ‘ಪರಮ್’ ಅನಾವರಣವು ಭಾರತದಲ್ಲಿ ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿಗೆ ಮತ್ತೊಂದು ಪ್ರಮುಖ ಹೆಜ್ಜೆಯಾಗಿ ಪರಿಗಣಿಸಲಾಗಿದೆ. ಇದು ‘ಮೇಡ್ ಇನ್ ಇಂಡಿಯಾ’ ಅಭಿಯಾನಕ್ಕೆ ಉತ್ತೇಜನ ನೀಡುವುದರ ಜೊತೆಗೆ, ಜಾಗತಿಕ ಮಟ್ಟದಲ್ಲಿ ಭಾರತೀಯ ರೋಬೋಟಿಕ್ಸ್ ಕ್ಷೇತ್ರದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.
ಪರಮ್ -
ದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ 'ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ (India AI Impact Expo) 2026'ರಲ್ಲಿ ಬೆಂಗಳೂರು (Bengaluru) ಮೂಲದ 'ಜನರಲ್ ಆಟೋನಮಿ (General Autonomy)' ಎಂಬ ರೋಬೋಟಿಕ್ಸ್ ಸ್ಟಾರ್ಟ್‌ಅಪ್ (robotics startup) ತನ್ನ ವಿಶೇಷ ಆವಿಷ್ಕಾರವಾದ 'ಪರಮ್ (Param)' ರೋಬೋಟ್ ನಾಯಿಯನ್ನು ಪ್ರದರ್ಶಿಸಿ ಎಲ್ಲರ ಗಮನ ಸೆಳೆದಿದೆ. ಇದನ್ನು ಕೇವಲ ಭಾರತ (India)ದಲ್ಲಿ ಜೋಡಣೆ ಮಾಡಿದ್ದಲ್ಲ, ಬದಲಿಗೆ ಭಾರತೀಯ ಇಂಜಿನಿಯರ್‌ಗಳೇ ಸಂಪೂರ್ಣವಾಗಿ ಮೊದಲಿನಿಂದ ರೂಪಿಸಿದ್ದಾರೆ ಎಂದು ಕಂಪನಿ ಹೆಮ್ಮೆಯಿಂದ ಹೇಳಿಕೊಂಡಿದೆ.
'ಪರಮ್' ನ ವಿಶೇಷತೆಗಳು:
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಪರಮ್ ಬೆಂಗಳೂರಿನ ಟ್ರಾಫಿಕ್ (Teaffic) ನಡುವೆ ಲೀಲಾಜಾಲವಾಗಿ ನಡೆಯುವುದನ್ನು ಕಾಣಬಹುದು. ಇದು ಸ್ವಯಂಚಾಲಿತವಾಗಿ ಅಡೆತಡೆಗಳನ್ನು ಪತ್ತೆಹಚ್ಚುವುದು, 30 ಸೆಂ.ಮೀ ವರೆಗಿನ ಮೆಟ್ಟಿಲುಗಳನ್ನು ಹತ್ತುವುದು ಮತ್ತು ಕಡಿಮೆ ಎತ್ತರದ ಜಾಗಗಳಲ್ಲಿ ಏಡಿಯಂತೆ ನಡೆಯುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ, ಬಿದ್ದಾಗ ತಾನಾಗಿಯೇ ಎದ್ದು ನಿಲ್ಲುವ (Automatic fall recovery) ಮತ್ತು ಸ್ವತಂತ್ರವಾಗಿ ದಾರಿ ಹುಡುಕುವ ತಂತ್ರಜ್ಞಾನವನ್ನೂ ಇದು ಒಳಗೊಂಡಿದೆ.
ಚಾಟ್‌ಜಿಪಿಟಿ ಮತ್ತು ಜೆಮಿನಿಯನ್ನೇ ಹಿಂದಿಕ್ಕಿದ 'ಸರ್ವಂ ಎಐ' ಸಂಸ್ಥಾಪಕ 'ಪ್ರತ್ಯುಶ್ ಕುಮಾರ್' ಯಾರು?
ಪ್ರಧಾನ ಮಂತ್ರಿಗಳ ಮೆಚ್ಚುಗೆ:
ಕಳೆದ ತಿಂಗಳು 'ಸ್ಟಾರ್ಟ್‌ಅಪ್ ಇಂಡಿಯಾ' ದಶಕದ ಸಂಭ್ರಮದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ರೋಬೋಟ್ ಅನ್ನು ಪ್ರದರ್ಶಿಸಲಾಗಿತ್ತು. ಈ ವೇಳೆ ಮೋದಿಯವರು ಸ್ಟಾರ್ಟ್‌ಅಪ್ ಸಂಸ್ಥಾಪಕರಿಗೆ, "ದೆಹಲಿಯ ಚಳಿಗಾಲದಲ್ಲಿ ಪರಮ್‌ನ ಜಾಗ್ರತೆ ವಹಿಸಿ" ಎಂದು ತಮಾಷೆಯಾಗಿ ಸಲಹೆ ನೀಡಿದ್ದರು. ಕಳೆದ ಏಳು ತಿಂಗಳುಗಳಿಂದ ಈ ಯೋಜನೆಯ ಮೇಲೆ ಕೆಲಸ ಮಾಡುತ್ತಿರುವುದಾಗಿ ಸ್ಟಾರ್ಟ್‌ಅಪ್ ತಿಳಿಸಿದೆ.
ರೋಬೋಟ್ ನಾಯಿಗಳ ಬಳಕೆ:
ಈ ನಾಲ್ಕು ಕಾಲಿನ ರೋಬೋಟ್‌ಗಳು ಚಕ್ರಗಳಿರುವ ಯಂತ್ರಗಳು ಹೋಗಲಾಗದ ಕಠಿಣ ಭೂಪ್ರದೇಶಗಳಲ್ಲಿ ಸುಲಭವಾಗಿ ಚಲಿಸಬಲ್ಲವು. ಕೈಗಾರಿಕಾ ತಪಾಸಣೆ, ಅಪಾಯಕಾರಿ ರಕ್ಷಣಾ ಕಾರ್ಯಾಚರಣೆಗಳು, ರಕ್ಷಣಾ ಇಲಾಖೆಯ ಲಾಜಿಸ್ಟಿಕ್ಸ್ ಮತ್ತು ವೈಜ್ಞಾನಿಕ ಸಂಶೋಧನೆಗಳಲ್ಲಿ ಇವುಗಳ ಬಳಕೆ ಅತ್ಯಂತ ಸಹಕಾರಿಯಾಗಿದೆ.