IPL 2027: ಅಸಮಾಧಾನದೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ತೊರೆಯಲು ಮುಂದಾದ ಅಭಿಷೇಕ್ ಶರ್ಮಾ!
2027ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ನಿಮಿತ್ತ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಹಲವು ಅಚ್ಚರಿ ಬೆಳವಣಿಗೆಗಳು ನಡೆಯುತ್ತಿವೆ. ಸ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಎಸ್‌ಆರ್‌ಎಚ್ ತಂಡವನ್ನು ತೊರೆಯಲಿದ್ದಾರೆಂದು ವರದಿಯಾಗಿದೆ. ನಾಯಕತ್ವದ ವಿಚಾರದಲ್ಲಿ ಮುನಿಸಿಕೊಂಡಿರುವ ಅವರು ಮುಂದಿನ ಸೀಸನ್ ಬೇರೆ ತಂಡದ ಪರ ಆಡಲು ಬಯಸುತ್ತಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ತೊರೆಯಲು ಮುಂದಾದ ಅಭಿಷೇಕ್ ಶರ್ಮಾ. -
ನವದೆಹಲಿ: ಮುಂಬರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ಟೂರ್ನಿಯ ನಿಮಿತ್ತ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದಲ್ಲಿ ಹಲವು ಅಚ್ಚರಿ ಬೆಳೆವಣಿಗೆಗಳು ನಡೆಯುತ್ತಿವೆ. ಎಸ್‌ಆರ್‌ಎಚ್ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ (Abhishek Sharma) ಮುಂದಿನ ಸೀಸನ್‌ನಲ್ಲಿ ಬೇರೆ ಫ್ರಾಂಚೈಸಿ ಪರ ಆಡಲು ನಿರ್ಧರಿಸಿದ್ದು, ಹೈದರಾಬಾದ್ ಫ್ರಾಂಚೈಸಿಯನ್ನು ತೊರೆಯಲಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. 2019ರಿಂದ 2026ರ ಟೂರ್ನಿಯವರೆಗೂ ಪಂಜಾಬ್ ಮೂಲದ ಎಡಗೈ ಬ್ಯಾಟ್ಸ್‌ಮನ್ ಆರೆಂಜ್ ಆರ್ಮಿ ತಂಡಕ್ಕೆ ಕೀ ಬ್ಯಾಟ್ಸ್‌ಮನ್ ಆಗಿದ್ದರು. ಆದರೆ, ಅವರು ಎಸ್‌ಆರ್‌ಎಚ್ ತಂಡದ ಮೇಲಿನ ಅಸಮಾಧಾನದೊಂದಿಗೆ ನಿರ್ಗಮಿಸಲು ನಿರ್ಧರಿಸಿದ್ದಾರೆಂದು ವರದಿಗಳು ತಿಳಿಸಿವೆ.
2026ರ ಐಪಿಎಲ್ ಟೂರ್ನಿಯ ಆರಂಭಿಕ ಕೆಲ ಪಂದ್ಯಗಳಲ್ಲಿ ಎಸ್‌ಆರ್‌ಎಚ್ ತಂಡವನ್ನು ಇಶಾನ್ ಕಿಶನ್ ಮುನ್ನಡೆಸಿದ್ದರು. ಏಕೆಂದರೆ ನಾಯಕ ಪ್ಯಾಟ್ ಕಮಿನ್ಸ್ ಅವರು ಆರಂಭಿಕ ಕೆಲ ಪಂದ್ಯಗಳಿಗೆ ಅಲಭ್ಯರಾಗಿದ್ದರು. ನಂತರ ಆಸೀಸ್ ನಾಯಕ ತಂಡಕ್ಕೆ ಬಂದ ಬಳಿಕ ಹೈದರಾಬಾದ್ ತಂಡವನ್ನು ಮುನ್ನಡೆಸಿದ್ದರು. ಅಂದ ಹಾಗೆ 2027ರ ಐಪಿಎಲ್ ಟೂರ್ನಿಗೆ ಪ್ಯಾಟ್ ಕಮಿನ್ಸ್ ಅಲಭ್ಯರಾಗುತ್ತಿದ್ದಾರೆ. ಏಕೆಂದರೆ, ಅವರಿಗೆ ಬಿಡುವಿಲ್ಲದೆ ಇಂಟರ್‌ನ್ಯಾಷನಲ್ ವೇಳಾಪಟ್ಟಿ ಇದೆ. ಹಾಗಾಗಿ ಇಶಾನ್ ಕಿಶನ್‌ಗೆ ಎಸ್‌ಆರ್‌ಎಚ್ ನಾಯಕತ್ವವನ್ನು ನೀಡಲು ಹೈದರಾಬಾದ್ ಫ್ರಾಂಚೈಸಿ ಮುಂದಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಭಿಷೇಕ್ ಶರ್ಮಾಗೆ ಅಸಮಾಧಾನ ಉಂಟಾಗಿದೆ.
Asian Games 2026 Final: ಚಿನ್ನದ ಪದಕಕ್ಕಾಗಿ ಭಾರತ vs ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಕದನ!
ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ, ಅಭಿಷೇಕ್ ಶರ್ಮಾ ಅವರನ್ನು ಸೇರಿಸಿಕೊಳ್ಳಲು ಐದು ಬಾರಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್, ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಆಸಕ್ತಿ ಹೊಂದಿವೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಇನ್ನೂ ಯಾವುದೇ ಅಧಿಕೃತ ಪ್ರಕಟಣೆಗಳು ಹೊರಬಿದ್ದಿಲ್ಲ.
"ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವ ಇಶಾನ್ ಕಿಶನ್‌ಗೆ ಹೋಗಿದ್ದರಿಂದ ಅಭಿಷೇಕ್ ಶರ್ಮಾ ಅಸಮಾಧಾನಗೊಂಡಿರುವುದು ರಹಸ್ಯವೇನಲ್ಲ. ಅವರು ದೀರ್ಘಾವಧಿಯಿಂದ ಎಸ್‌ಆರ್‌ಎಚ್ ತಂಡದಲ್ಲಿದ್ದಾರೆ ಹಾಗೂ ಅವರು ನಾಯಕನಾಗಿಬೇಕೆಂಬ ಇಂಗಿತವನ್ನು ಹೊಂದಿದ್ದಾರೆ. ಮುಂಬೈ ಇಂಡಿಯನ್ಸ್, ಗುಜರಾತ್ ಟೈಟನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಎಡಗೈ ಬ್ಯಾಟ್ಸ್‌ಮನ್‌ಗೆ ಕಾಯುತ್ತಿವೆ. ಇನ್ನು ಯುವರಾಜ್ ಸಿಂಗ್ ಮೆಂಟರ್ ಆಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಅಭಿಷೇಕ್ ಶರ್ಮಾ ಅವರನ್ನು ಕರೆಸಿಕೊಳ್ಳಲು ಆಸಕ್ತಿಯನ್ನು ಹೊಂದಿದೆ," ಎಂದು ಮೂಲಗಳು ಹೇಳಿರುವುದನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
Asian Games 2026: ಭಾರತ vs ಪಾಕಿಸ್ತಾನ ಫೈನಲ್ ನೋಡಲು ಮೊಹ್ಸಿನ್ ನಖ್ವಿ ಬರಲ್ವಂತೆ!
ಅಭಿಷೇಕ್ ಶರ್ಮಾ ಬಗ್ಗೆ ಎಸ್‌ಆರ್‌ಎಚ್ ಸಿಇಓ ಹೇಳಿದ್ದೇನು?
ಈ ಸುದ್ದಿಯ ಕುರಿತು ಪ್ರತಿಕ್ರಿಯಿಸಿದ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ತಂಡದ ಸಿಇಒ ಕೆ ಷಣ್ಮುಗಂ, ಅಭಿಷೇಕ್ ಶರ್ಮಾ ತಂಡ ತೊರೆಯುವ ಕುರಿತಾದ ಮಾತುಕತೆಗಳು ಸತ್ಯವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಮೂಲಗಳ ಪ್ರಕಾರ, ಅಭಿಷೇಕ್ ಶರ್ಮಾ ಹೈದರಾಬಾದ್ ತಂಡವನ್ನು ತೊರೆಯಲು ಆಸಕ್ತಿ ಹೊಂದಿದ್ದಾರೆ. ಸದ್ಯಕ್ಕೆ ನಾಯಕತ್ವದ ಜವಾಬ್ದಾರಿ ಇಲ್ಲದಿದ್ದರೂ ಬೇರೆ ತಂಡವನ್ನು ಸೇರಿಕೊಳ್ಳಲು ಅವರು ಸಿದ್ಧರಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಐಪಿಎಲ್‌ನಲ್ಲಿ ನಾಯಕತ್ವದ ಅವಕಾಶಗಳು ಕಡಿಮೆ ಇವೆ. ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಲಖನೌ ಸೂಪರ್ ಜಯಂಟ್ಸ್ (ಎಲ್‌ಎಸ್‌ಜಿ) ತಂಡಗಳು ನಾಯಕತ್ವದ ಅವಕಾಶ ಹೊಂದಿರುವ ಸಂಭಾವ್ಯ ಆಯ್ಕೆಗಳಾಗಿವೆ. ಉಳಿದ ಬಹುತೇಕ ತಂಡಗಳಲ್ಲಿ ನಾಯಕತ್ವದ ಸ್ಥಾನಗಳು ಈಗಾಗಲೇ ನಿರ್ಧಾರವಾಗಿವೆ ಎಂದು ಮೂಲಗಳು ತಿಳಿಸಿವೆ.
ಎಸ್‌ಆರ್‌ಎಚ್ ಮತ್ತು ಅಭಿಷೇಕ್ ಶರ್ಮಾ ಪರಸ್ಪರ ಒಪ್ಪಿಗೆಯೊಂದಿಗೆ ಬೇರ್ಪಡಲು ನಿರ್ಧರಿಸಿದರೂ, ಅವರು ಯಾವ ತಂಡವನ್ನು ಸೇರಲಿದ್ದಾರೆ ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಅಲ್ಲದೆ, ಅಭಿಷೇಕ್ ಅವರನ್ನು ಬಿಡುಗಡೆ ಮಾಡಲು ಎಸ್‌ಆರ್‌ಎಚ್ ಯಾವ ರೀತಿಯ ಒಪ್ಪಂದಕ್ಕೆ ಮುಂದಾಗಲಿದೆ ಎಂಬ ಕುತೂಹಲವೂ ಇದೆ. ಹಣದ ವಹಿವಾಟಿನ ಮೂಲಕ ಆಟಗಾರನನ್ನು ಬಿಡುಗಡೆ ಮಾಡಲಾಗುತ್ತದೆಯೇ ಅಥವಾ ಆಟಗಾರರ ವಿನಿಮಯದ ಮೂಲಕ ಒಪ್ಪಂದ ನಡೆಯಲಿದೆಯೇ ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಇಲ್ಲ.