ಅಣ್ಣಾವ್ರ ಜನುಮ ದಿನದ ನಿಮಿತ್ತ ಡಾ. ರಾಜ್‌ಕುಮಾರ್‌ಗೆ ವಿಶೇಷ ಗೌರವ ಸಲ್ಲಿಸಿದ ಆರ್‌ಸಿಬಿ!
ಕರ್ನಾಟಕದ ದಿಗ್ಗಜ ನಟ, ಬಂಗಾರದ ಮನುಷ್ಯ, ವರ ನಟ ಡಾ ರಾಜ್‌ಕುಮಾರ್ ಅವರ 97ನೇ ಜನುಮ ದಿನಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಶೇಷ ಗೌರವವನ್ನು ಸಲ್ಲಿಸಿದೆ. ಆರ್‌ಸಿಬಿ ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಹಾಕುವ ಮೂಲಕ ಅಣ್ಣಾವ್ರ ಪುಣ್ಯ ಸ್ಮರಣೆಯನ್ನು ಮಾಡಿಕೊಂಡಿದೆ.
ಡಾ ರಾಜ್‌ಕುಮಾರ್‌ಗೆ ವಿಶೇಷ ಗೌರವ ಸಲ್ಲಿಸಿದ ಆರ್‌ಸಿಬಿ. -
ಬೆಂಗಳೂರು: ನಟ ಸಾರ್ವಭೌಮ, ವರ ನಟ ಡಾ ರಾಜ್‌ಕಮಾರ್ (Dr RaJkumar) ಅವರ 97ನೇ ಜನುಮ ದಿನದ ನಿಮಿತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ವಿಶೇಷ ಗೌರವ ಸಲ್ಲಿಸಿದೆ. ಪ್ರತೀ ವರ್ಷದಂತೆ ಈ ವರ್ಷವೂ ಆರ್‌ಸಿಬಿ, ಬಂಗಾರದ ಮನಷ್ಯ ಡಾ ರಾಜ್‌ಕುಮಾರ್ ಅವರನ್ನು ಸ್ಮರಿಸಿಕೊಂಡಿದೆ. ಪ್ರಸ್ತುತ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿ ನಡೆಯುತ್ತಿರುವ ಸಮಯದಲ್ಲಿಯೇ ಆರ್‌ಸಿಬಿ ಅಣ್ಣಾವ್ರ ಬಗ್ಗೆ ಪೋಸ್ಟ್ ಹಾಕಿರುವುದು ಕನ್ನಡದ ಅಭಿಮಾನಿಗಳ ಪ್ರೀತಿಗೆ ಪಾತ್ರವಾಗಿದೆ. ಅಷ್ಟೇ ಅಲ್ಲದೆ ರಾಜ್‌ಕುಮಾರ್ ಅವರ ಜನುಮ ದಿನದಂದೆ ಆರ್‌ಸಿಬಿ ತಂಡ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟನ್ಸ್ ಎದುರು ಕಾದಾಟ ನಡೆಸಲಿದೆ.
ತನ್ನ ಎಕ್ಸ್ ಖಾತೆಯಲ್ಲಿ ಆರ್‌ಸಿಬಿ ಹಂಚಿಕೊಂಡ ಡಾ ರಾಜ್‌ಕುಮಾರ್ ಅವರ ಫೋಟೋಗೆ "ನಟ ಸಾರ್ವಭೌಮ, ಕರ್ನಾಟಕ ರತ್ನ, ಬಂಗಾರದ ಮನುಷ್ಯ, ಡಾ. ರಾಜ್ ಕುಮಾರ್ ಅವರ ಜನ್ಮದಿನದ ಸವಿನೆನಪು. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಎಂದು ಹೇಳಿದ ನಮ್ಮ "ರಾಜ್" ಅವರಿಗೆ ರಾಜ ನಮನ," ಎಂಬ ಶೀರ್ಷಿಕೆಯನ್ನು ಬರೆದಿದೆ.
RCB vs GT: ಗುಜರಾತ್ ಟೈಟನ್ಸ್ ಎದುರು ಆರ್‌ಸಿಬಿ ಗೆಲ್ಲುವ ನೆಚ್ಚಿನ ತಂಡ! ಇದಕ್ಕೆ ಕಾರಣ ಇಲ್ಲಿದೆ
ಡಾ ರಾಜ್‌ಕುಮಾರ್ ಸಿನಿಮಾ ವೃತ್ತಿ ಬದುಕು
ಬಾಲ್ಯದಲ್ಲಿ ಮುತ್ತು ರಾಜ್ ಎಂದೇ ಕರೆಯುತ್ತಿದ್ದ ರಾಜ್‌ಕುಮಾರ್ ಅವರು 1929ರ ಏಪ್ರಿಲ್ 29 ರಂದು ಚಾಮರಾಜ ನಗರ ಜಿಲ್ಲೆಯ ತಳವಾಡಿ ತಾಲೂಕಿನ ಗಾಜನೂರಿನ ಪುಟ್ಟ ಸ್ವಾಮಯ್ಯ ಹಾಗೂ ಲಕ್ಷ್ಮಮ್ಮ ಅವರ ದಂಪತಿಗೆ ಜನಿಸಿದ್ದರು. ಅವರು ಬಾಲ್ಯದಲ್ಲಿಯೇ ಅಪಾರ ನಟನೆಯ ಪ್ರತಿಭೆಯನ್ನು ಹೊಂದಿದ್ದ ರಾಜ್‌ಕುಮಾರ್ ಅವರು ಐದು ದಶಕಕ್ಕೂ ಅಧಿಕ ಅವಧಿ ಕನ್ನಡ ಚಿತ್ರ ರಂಗದಲ್ಲಿ ಸೇವೆ ಸಲ್ಲಿಸಿದ್ದು, ದೇವತಾ ಮನುಷ್ಯ, ಭಕ್ತ ಕುಂಬಾರ, ಬಬ್ರು ವಾಹನ ಸೇರಿದಂತೆ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆಯ ಜೊತೆಗೆ ಗಾಯಕರಾಗಿ ಹಾಗೂ ಯೋಗಪಟುವಾಗಿ ರಾಜ್‌ಕುಮಾರ್ ಗಮನ ಸೆಳೆದಿದ್ದಾರೆ.
ನಟ ಸಾರ್ವಭೌಮ, ಕರ್ನಾಟಕ ರತ್ನ, ಬಂಗಾರದ ಮನುಷ್ಯ, ಡಾ. ರಾಜ್ ಕುಮಾರ್ ಅವರ ಜನ್ಮದಿನದ ಸವಿನೆನಪು. ♥️
— Royal Challengers Bengaluru (@RCBTweets) April 24, 2026
"ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಎಂದು ಹೇಳಿದ ನಮ್ಮ "ರಾಜ್" ಅವರಿಗೆ ರಾಜ ನಮನ. 👑
Honouring the legacy of Dr. Rajkumar, a true icon of Indian and Kannada cinema whose presence, voice and spirit… pic.twitter.com/xqRTpXRciF
1954 ರಲ್ಲಿ 'ಬೇಡರ ಕಣ್ಣಪ್ಪ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದ ರಾಜ್‌ಕುಮಾರ್, ಕರ್ನಾಟಕ ಸಿನಿಮಾ ಮಾತ್ರವಲ್ಲದೆ ಭಾರತೀಯ ಸಿನಿಮಾದ ದಿಗ್ಗಜ ನಟರ ಸಾಲಿನಲ್ಲಿ ಇವರು ಗುರುತಿಸಿಕೊಂಡಿದ್ದಾರೆ. ಅವರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಪದ್ಮ ಭೂಷಣ, ಕರ್ನಾಟಕ ರತ್ನ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
RCB vs GT: ತವರಿನ ಕೊನೆಯ ಲೀಗ್ ಪಂದ್ಯದಲ್ಲಿ ಹಲವು ದಾಖಲೆ ಮೇಲೆ ಕಣ್ಣಿಟ್ಟ ಆರ್‌ಸಿಬಿ ಆಟಗಾರರು
2026ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪಯಣ
2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಪ್ರದರ್ಶನವನ್ನು ತೋರುತ್ತಿದೆ. ಇಲ್ಲಿಯವರೆಗೂ ಆಡಿದ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ ಎರಡರಲ್ಲಿ ಸೋಲು ಅನುಭವಿಸಿದೆ. ಒಟ್ಟು 8 ಅಂಕಗಳನ್ನು ಕಲೆ ಹಾಕಿರುವ ಆರ್‌ಸಿಬಿ ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನವನ್ನು ಅಲಂಜಕರಿಸಿದೆ. ಇದೀಗ ಶುಕ್ರವಾರ ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ಎದುರು ತನ್ನ ಕೊನೆಯ ತವರು ಪಂದ್ಯವನ್ನು ಆರ್‌ಸಿಬಿ ಆಡಲಿದೆ.