IND vs AFG: ರಿಷಭ್ ಪಂತ್‌ರನ್ನು ಟೆಸ್ಟ್ ಉಪ ನಾಯಕತ್ವದಿಂದ ಕೆಳಗಿಳಿಸಲು ಕಾರಣವೇನು?
ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಇನ್ನೂ ಭಾರತದ ಟೆಸ್ಟ್ ಯೋಜನೆಗಳಲ್ಲಿ ಪ್ರಮುಖ ಭಾಗವಾಗಿದ್ದಾರೆ ಎಂದು ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಸ್ಪಷ್ಟಪಡಿಸಿದ್ದಾರೆ. ಉಪನಾಯಕ ಸ್ಥಾನ ಹಾಗೂ ಏಕದಿನ ತಂಡದಲ್ಲಿನ ಸ್ಥಾನ ಕಳೆದುಕೊಂಡಿದ್ದರೂ, ಪಂತ್ ಮೇಲಿನ ತಂಡದ ವಿಶ್ವಾಸ ಅಚಲವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಭಾರತ ಟೆಸ್ಟ್ ತಂಡದಲ್ಲಿ ಕೆಎಲ್ ರಾಹುಲ್‌ಗೆ ಉಪ ನಾಯಕನ ಜವಾಬ್ದಾರಿಯನ್ನು ನೀಡಲಾಗಿದೆ.
ರಿಷಭ್ ಪಂತ್ ಟೆಸ್ಟ್ ಉಪ ನಾಯಕತ್ವ ಕಳೆದುಕೊಳ್ಳಲು ಕಾರಣವೇನು? -
ಗುವಾಹಟಿ: ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಗೆ 15 ಸದಸ್ಯರ ಭಾರತ ತಂಡವನ್ನು ಅಜಿತ್ ಅಗರ್ಕರ್ (Ajit Agarkar) ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು ಮೇ 19 ರಂದು ಪ್ರಕಟಿಸಿದೆ. ಆದರೆ, ಭಾರತ ಒಡಿಐ ತಂಡದಲ್ಲಿ ಸ್ಥಾನ ಕಳೆದುಕೊಂಡ ರಿಷಭ್ ಪಂತ್ (Rishabh Pant), ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದರೂ ಉಪನಾಯಕತವನ್ನು ಕಳೆದುಕೊಂಡಿದ್ದಾರೆ. ಇದರಿಂದಾಗಿ ಪಂತ್ ಅವರ ಟೆಸ್ಟ್ ತಂಡದ ಸ್ಥಾನದ ಬಗ್ಗೆಯೂ ಅನುಮಾನಗಳು ಶುರುವಾಗಿವೆ. ಭಾರತ ತಂಡವನ್ನು ಪ್ರಕಟಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಜಿತ್ ಅಗರ್ಕರ್, ಪಂತ್ ಅವರ ಸ್ಥಾನದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ರಿಷಭ್ ಪಂತ್ ಅವರನ್ನು ಇನ್ನೂ ಭಾರತದ ಅತ್ಯಂತ ಮೌಲ್ಯಯುತ ಟೆಸ್ಟ್ ಕ್ರಿಕೆಟಿಗರಲ್ಲಿ ಒಬ್ಬರಾಗಿ ಆಯ್ಕೆದಾರರು ಪರಿಗಣಿಸುತ್ತಿದ್ದಾರೆ ಎಂದು ಅಜಿತ್ ಅಗರ್ಕರ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು. “ರಿಷಭ್ ಅದ್ಭುತ ಟೆಸ್ಟ್ ಆಟಗಾರ. ಸ್ಪಷ್ಟವಾಗಿ ಹೇಳುವುದಾದರೆ, ಈ ಕ್ಷಣದಲ್ಲಿ ಅವರು ಏಕದಿನ ತಂಡದ ಭಾಗವಾಗಿಲ್ಲ,” ಎಂದು ಅಗರ್ಕರ್ ಹೇಳಿದರು.
“ಅವರು ಯಾವಾಗಲೂ ಇದ್ದಂತೆಯೇ ಅತ್ಯುತ್ತಮ ಟೆಸ್ಟ್ ಆಟಗಾರನಾಗಿ ಬೆಳೆಯಬೇಕೆಂದು ನಾವು ಬಯಸುತ್ತೇವೆ. ಟೆಸ್ಟ್ ತಂಡದಲ್ಲಿ ಅವರ ಸ್ಥಾನ ಕುರಿತು ಯಾವುದೇ ಆತಂಕವಿಲ್ಲ ಎಂದು ನಾನು ಭಾವಿಸುತ್ತೇನೆ,” ಎಂದು ಅವರು ಖಚಿತಪಡಿಸಿದರು.
IND vs AFG: ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ಗೆ ಭಾರತ ತಂಡವನ್ನು ಪ್ರಕಟಿಸಿದ ಬಿಸಿಸಿಐ!
ಭಾರತದ ಏಕದಿನ ಕ್ರಿಕೆಟ್ ತಂಡದ ಸಂಯೋಜನೆ ಪ್ರಸ್ತುತ ವಿಭಿನ್ನ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಅವರು ವಿವರಿಸಿದರು. ವಿಕೆಟ್ ಕೀಪಿಂಗ್ ವಿಭಾಗದಲ್ಲಿ ಬೇರೆ ಆಯ್ಕೆಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂಬುದನ್ನೂ ಅವರು ಸ್ಪಷ್ಟಪಡಿಸಿದರು. “ಏಕದಿನ ಕ್ರಿಕೆಟ್ ವಿಚಾರಕ್ಕೆ ಬಂದರೆ, ಈ ಕ್ಷಣದಲ್ಲಿ ನಾವು ಎರಡು ವಿಭಿನ್ನ ಆಯ್ಕೆಗಳೊಂದಿಗೆ ಮುಂದುವರಿದಿದ್ದೇವೆ,” ಎಂದು ಅಗರ್ಕರ್ ಹೇಳಿದರು.
ಈ ಹೇಳಿಕೆ ಮೂಲಕ ರಿಷಭ್ ಪಂತ್ ಅವರನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಮುಖ ಆಟಗಾರನಾಗಿ ಮುಂದುವರಿಸುತ್ತಿದ್ದರೂ, ಏಕದಿನ ಮಾದರಿಯಲ್ಲಿ ತಂಡದ ಸಮತೋಲನ ಮತ್ತು ತಂತ್ರದ ಆಧಾರದ ಮೇಲೆ ಇತರ ವಿಕೆಟ್ ಕೀಪರ್‌ಗಳಿಗೆ ಅವಕಾಶ ನೀಡಲಾಗುತ್ತಿದೆ ಎಂಬ ಸಂದೇಶವನ್ನು ಆಯ್ಕೆ ಸಮಿತಿ ನೀಡಿದೆ.
🚨 News 🚨
— BCCI (@BCCI) May 19, 2026
Presenting #TeamIndia's squads for the @IDFCFIRSTBank Test match and the 3️⃣-match ODI series against Afghanistan in June 🙌#INDvAFG pic.twitter.com/hFiABALLld
ರಿಷಭ್ ಪಂತ್ ಅವರನ್ನು ಟೆಸ್ಟ್ ಉಪ ನಾಯಕತ್ವದಿಂದ ತೆಗೆದಿದ್ದೇಕೆ?
ರಿಷಭ್ ಪಂತ್ ಅವರನ್ನು ಟೆಸ್ಟ್ ತಂಡದ ಉಪನಾಯಕ ಸ್ಥಾನದಿಂದ ತೆಗೆದುಹಾಕಿರುವುದು, ಭಾರತದ ಹೊಸ ಟೆಸ್ಟ್ ನಾಯಕ ಶುಭಮನ್ ಗಿಲ್ ನೇತೃತ್ವದಲ್ಲಿ ನಡೆಯುತ್ತಿರುವ ದೊಡ್ಡ ಮಟ್ಟದ ನಾಯಕತ್ವ ಪುನರ್‌ವ್ಯವಸ್ಥೆಯ ಭಾಗವೆಂದು ಕಾಣುತ್ತಿದೆ.
ಗಿಲ್ ತಂಡವನ್ನು ಮುನ್ನಡೆಸುತ್ತಿರುವ ಹಿನ್ನೆಲೆ, ಆಯ್ಕೆದಾರರು ಈಗ ಉಪನಾಯಕತ್ವದ ಜವಾಬ್ದಾರಿಯನ್ನು ಹೆಚ್ಚು ಅನುಭವ ಹೊಂದಿರುವ ಕೆಎಲ್ ರಾಹುಲ್ ಅವರಿಗೆ ನೀಡಿದ್ದಾರೆ. ಎಲ್ಲಾ ಮಾದರಿಗಳಲ್ಲಿಯೂ ರಾಹುಲ್ ಡ್ರೆಸ್ಸಿಂಗ್ ರೂಮ್‌ನ ಹಿರಿಯ ಆಟಗಾರರಲ್ಲಿ ಒಬ್ಬರಾಗಿದ್ದು, ತಂಡದ ನಾಯಕತ್ವ ಗುಂಪಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಆದರೆ, ಈ ನಾಯಕತ್ವ ಬದಲಾವಣೆ ಪಂತ್ ಅವರ ಟೆಸ್ಟ್ ಕ್ರಿಕೆಟ್ ಮೌಲ್ಯದ ಮೇಲಿನ ವಿಶ್ವಾಸ ಕಡಿಮೆಯಾಗಿದೆ ಎಂಬುದನ್ನು ಸೂಚಿಸುವುದಿಲ್ಲ.
IND vs AFG: ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ ಗುರ್ನೂರ್ ಬ್ರಾರ್ ಯಾರು?
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಗಾಯಗೊಂಡಿದ್ದರೂ, ಪಂತ್ 2025ರ ರೆಡ್-ಬಾಲ್ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಏಳು ಪಂದ್ಯಗಳ 13 ಇನಿಂಗ್ಸ್‌ಗಳಲ್ಲಿ ಅವರು 629 ರನ್‌ಗಳನ್ನು 48.38ರ ಸರಾಸರಿಯಲ್ಲಿ ಹಾಗೂ 77.75ರ ಸ್ಟ್ರೈಕ್ ರೇಟ್‌ನಲ್ಲಿ ಗಳಿಸಿದ್ದರು. ಇಂಗ್ಲೆಂಡ್ ವಿರುದ್ಧ ಲೀಡ್ಸ್ ಟೆಸ್ಟ್‌ನಲ್ಲಿ ಎರಡು ಶತಕಗಳ ಜೊತೆಗೆ ನಾಲ್ಕು ಅರ್ಧಶತಕಗಳನ್ನು ಕೂಡ ದಾಖಲಿಸಿದ್ದರು.