ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತ ಟಿ20ಐ ತಂಡದಲ್ಲಿ ಗಾಯಾಳು ತಿಲಕ್‌ ವರ್ಮಾ ಸ್ಥಾನ ತುಂಬಬಲ್ಲ ಮೂವರು ಆಟಗಾರರು!

ನ್ಯೂಜಿಲೆಂಡ್‌ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಗೂ ಮುನ್ನ ಭಾರತ ತಂಡದ ಯುವ ಬ್ಯಾಟ್ಸ್‌ಮನ್‌ ತಿಲಕ್‌ ಗಾಯಕ್ಕೆ ಗಾಯಕ್ಕೆ ತುತ್ತಾಗಿ, ಶಸ್ತ್ರಿ ಚಿಕಿತ್ಸೆಗೆ ಒಳಗಾಗಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಆರಂಭಿಕ ಮೂರು ಪಂದ್ಯಗಳಿಗೆ ತಿಲಕ್‌ ವರ್ಮಾ ಅಲಭ್ಯರಾಗಿದ್ದಾರೆ. ಅವರ ಬದಲು ಮೂರು ಆಟಗಾರರ ಪೈಕಿ ಒಬ್ಬರನ್ನು ಬಿಸಿಸಿಐ ಪರಿಗಣಿಸಬಹುದು.

ಭಾರತ ತಂಡದಲ್ಲಿ ತಿಲಕ್‌ ವರ್ಮಾ ಸ್ಥಾನ ತುಂಬಬಲ್ಲ ಮೂವರು ಆಟಗಾರರು!

ತಿಲಕ್‌ ವರ್ಮಾ ಸ್ಥಾನದಲ್ಲಿ ಆಡಬಲ್ಲ ಮೂವರು ಆಟಗಾರರು. -

Profile
Ramesh Kote Jan 9, 2026 7:30 PM

ನವದೆಹಲಿ: ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ (ICC T20 World Cup 2026) ಇನ್ನೇನು ಒಂದು ತಿಂಗಳು ಬಾಕಿ ಇರುವಾಗಲೇ ಭಾರತ ತಂಡಕ್ಕೆ (Indian Cricket Team) ಗಾಯದ ಸಮಸ್ಯೆ ಎದುರಾಗಿದೆ. ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಗಾಯಕ್ಕೆ ತುತ್ತಾಗಿದ್ದ ತಿಲಕ್‌ ವರ್ಮಾ (Tilak Verma) ಅವರು ಇದೀಗ ನ್ಯೂಜಿಲೆಂಡ್‌ ವಿರುದ್ಧದ ಆರಂಭಿಕ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಕೊನೆಯ ಎರಡು ಪಂದ್ಯಗಳಿಗೆ ಅವರನ್ನು ಪರಿಗಣಿಸುವುದು ಕೂಡ ಅನುಮಾನ. ಜನವರಿ 21 ರಂದು ಭಾರತ ಹಾಗೂ ಕಿವೀಸ್‌ ನಡುವೆ ಟಿ20ಐ ಸರಣಿ ಆರಂಭವಾಗಲಿದೆ.

ಭಾರತ ಟಿ20ಐ ತಂಡದಲ್ಲಿ ಈಗಾಗಲೇ ಶಿವಂ ದುಬೆ ಹಾಗೂ ರಿಂಕು ಸಿಂಗ್‌ ಇದ್ದಾರೆ. ಆದರೆ, ಆರಂಭಿಕ ಮೂರು ಪಂದ್ಯಗಳಿಗೆ ತಿಲಕ್‌ ವರ್ಮಾ ಸ್ಥಾನಕ್ಕೆ ಬೇರೆ ಯಾವುದೇ ಆಟಗಾರ ಇಲ್ಲ. ಹಾಗಾಗಿ ಆಯ್ಕೆದಾರರು ಬದಲಿ ಆಟಗಾರನನ್ನು ಹುಡುಕುತ್ತಿದೆ. ಒಂದು ವೇಳೆ ಕಿವೀಸ್‌ ಟಿ20ಐ ಸರಣಿಯಿಂದ ತಿಲಕ್‌ ಸಂಪೂರ್ಣವಾಗಿ ಹೊರ ಬಿದ್ದರೆ ಟಿ20 ವಿಶ್ವಕಪ್‌ ಟೂರ್ನಿಗೂ ಕೂಡ ಭಾರತ ತಂಡಕ್ಕೆ ಗಾಯದ ಭೀತಿ ಎದುರಾಗಬಹುದು.

ಅಂದ ಹಾಗೆ ಕವೀಸ್‌ ವಿರುದ್ಧದ ಟಿ20ಐ ಸರಣಿಗೆ ತಿಲಕ್‌ ವರ್ಮಾ ಸ್ಥಾನಕ್ಕೆ ಮೂವರು ಆಟಗಾರರನ್ನು ಬಿಸಿಸಿಐ ಪರಿಗಣಿಸಬಹುದು. ಈ ಮೂವರು ಆಟಗಾರರನ್ನು ಇಲ್ಲಿ ವಿವರಿಸಲಾಗಿದೆ.

ಮಹಿಳಾ ಪ್ರೀಮಿಯರ್‌ ಲೀಗ್‌ 2025-26: ರಾಂಚಿ ರಾಯಲ್ಸ್‌ ವಿರುದ್ಧ ಎಸ್‌ಜಿ ಪೈಪರ್ಸ್‌ಗೆ ಸೋಲು!

ದೇವದತ್‌ ಪಡಿಕ್ಕಲ್‌

ದೇಶಿ ಕ್ರಿಕೆಟ್‌ನಲ್ಲಿ ವಿಶೇಷವಾಗಿ ವಿಜಯ್ ಹಝಾರೆ ಟ್ರೋಫಿ ಟೂರ್ನಿ ಸೇರಿದಂತೆ ದೇವದತ್ ಪಡಿಕ್ಕಲ್ ಎಲ್ಲಾ ಮಾದರಿಗಳಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕರ್ನಾಟಕದ ಬ್ಯಾಟ್ಸ್‌ಮನ್ ಇದುವರೆಗೆ ಕೇವಲ 7 ಇನಿಂಗ್ಸ್‌ಗಳಲ್ಲಿ 91.42 ರ ಸರಾಸರಿಯಲ್ಲಿ 620 ರನ್ ಗಳಿಸಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲೂ ಸಹ, ಅವರು ಉತ್ತಮ ಲಯದಲ್ಲಿದ್ದರು. ಅವರು ಇಲ್ಲಿ 167.02 ರ ಪ್ರಭಾವಶಾಲಿ ಸ್ಟ್ರೈಕ್ ರೇಟ್‌ನಲ್ಲಿ 6 ಪಂದ್ಯಗಳಲ್ಲಿ 309 ರನ್ ಸಿಡಿಸಿದ್ದರು.

ಇದರ ಆಧಾರದ ಮೇಲೆ ಬಿಸಿಸಿಐ ಆಯ್ಕೆದಾರರು ಕರ್ನಾಟಕ ಆಟಗಾರನನ್ನು ಭಾರತ ತಂಡಕ್ಕೆ ಸೇರಿಸಬಹುದು. ತಿಲಕ್‌ ವರ್ಮಾ ಕೂಡ ಎಡಗೈ ಬ್ಯಾಟ್ಸ್‌ಮನ್‌ ಹಾಗಾಗಿ, ಅವರಿಗೆ ಪಡಿಕ್ಕಲ ಸೂಕ್ತ ಬದಲಿ ಆಟಗಾರನಾಗಬಹುದು.

ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ ನಿವೃತ್ತಿಯಿಂದ ಹೊರಬರಬೇಕೆಂದ ರಾಬಿನ್‌ ಉತ್ತಪ್ಪ!

ಋತುರಾಜ್‌ ಗಾಯಕ್ವಾಡ್‌

ದೇಶಿ ಕ್ರಿಕೆಟ್‌ನಲ್ಲಿ ಋತುರಾಜ್ ಗಾಯಕ್ವಾಡ್ ಮಹಾರಾಷ್ಟ್ರ ಪರ ಆಡುತ್ತಿದ್ದು, ಅವರನ್ನು ತಿಲಕ್ ವರ್ಮಾ ಅವರ ಬದಲಿಯಾಗಿ ನೋಡಬಹುದು. 28ನೇ ವಯಸ್ಸಿನ ಆಟಗಾರ ಈ ಹಿಂದೆಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಮತ್ತು ಅವರ ಹೊಂದಾಣಿಕೆಯ ಆಟದ ಶೈಲಿಯನ್ನು ಪರಿಗಣಿಸಿ ಅವರು ಕೂಡ ಉತ್ತಮ ಆಯ್ಕೆಯಾಗಿದೆ. ಆರಂಭಿಕ ಆಟಗಾರನಾಗಿ ಹೆಚ್ಚು ಸೂಕ್ತವಾಗಿರುವ ಗಾಯಕ್ವಾಡ್ ಐಪಿಎಲ್‌ ಟೂರ್ನಿಯಲ್ಲಿಯೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ ಹೊರತಾಗಿಯೂ ಋತುರಾಜ್‌ ಗಾಯಕ್ವಾಡ್‌ ಅವರನ್ನು ಏಕದಿನ ತಂಡದಿಂದ ಕೈ ಬಿಡಲಾಗಿದೆ. ಹಾಗಾಗಿ ಆಯ್ಕೆದಾರರು ಗಾಯಕ್ವಾಡ್‌ ಅವರನ್ನು ಕನಿಷ್ಠ ಟಿ20ಐ ತಂಡಕ್ಕೆ ಪರಿಗಣಿಸಬಹುದು.

IND vs NZ: ನ್ಯೂಜಿಲೆಂಡ್‌ ವಿರುದ್ಧ ಟಿ20ಐ ಸರಣಿಯ ಆರಂಭಿಕ 3 ಪಂದ್ಯಗಳಿಂದ ತಿಲಕ್‌ ವರ್ಮಾ ಔಟ್‌!

ಶ್ರೇಯಸ್‌ ಅಯ್ಯರ್‌

ಭಾರತದ ಟಿ20 ತಂಡಕ್ಕೆ ಮತ್ತೆ ಮರಳಬಹುದಾದ ಒಬ್ಬ ದೊಡ್ಡ ಹೆಸರು ಶ್ರೇಯಸ್ ಅಯ್ಯರ್. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಆಡಲು ಫಿಟ್ ಎಂದು ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿ ತಿಳಿಸಿದೆ ಮತ್ತು 2025-26ರ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಮುಂಬೈ ಪರ ಹಿಮಾಚಲ ಪ್ರದೇಶ ವಿರುದ್ಧ 53 ಎಸೆತಗಳಲ್ಲಿ 82 ರನ್ ಗಳಿಸುವ ಮೂಲಕ ಮೈದಾನಕ್ಕೆ ಮರಳಿದ್ದರು.

ಈ ಹಿಂದೆಯೂ ಶ್ರೇಯಸ್‌ ಅಯ್ಯರ್‌ ಅವರು ಭಾರತ ಟಿ20ಐ ತಂಡದಲ್ಲಿ ಆಡಿದ್ದರು. 2023ರ ಡಿಸೆಂಬರ್‌ನಲ್ಲಿ ಭಾರತದ ಪರ ಕೊನೆಯ ಟಿ20ಐ ಪಂದ್ಯವನ್ನು ಆಡಿದ್ದರು. ಇದೀಗ ತಿಲಕ್‌ ವರ್ಮಾ ಗಾಯಕ್ಕೆ ತುತ್ತಾಗಿರುವ ಕಾರಣ, ಶ್ರೇಯಸ್‌ ಅಯ್ಯರ್‌ ಅವರನ್ನು ಪರಿಗಣಿಸಬಹುದು.