ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆರ್‌ಸಿಬಿ ಎದುರಿನ ಉದ್ಘಾಟನ ಪಂದ್ಯದಲ್ಲೇ ಮಹತ್ವದ ದಾಖಲೆ ಬರೆಯಲು ಇಶಾನ್‌ ಕಿಶನ್‌ ಸಜ್ಜು

Ishan Kishan: ಮುಖ್ಯ ತರಬೇತುದಾರ ಡೇನಿಯಲ್ ವೆಟ್ಟೋರಿ, ಕಿಶನ್ ಅವರನ್ನು ಹಂಗಾಮಿ ನಾಯಕನನ್ನಾಗಿ ನೇಮಿಸುವ ತಂಡದ ನಿರ್ಧಾರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿ, ಅವರು ಆತ್ಮವಿಶ್ವಾಸದ ಆಟಗಾರ ಮತ್ತು ನಾಯಕ ಎಂದು ಸಾಬೀತುಪಡಿಸಿರುವುದರಿಂದ ಅವರಿಗೆ ಜವಾಬ್ದಾರಿಯನ್ನು ವಹಿಸುವಲ್ಲಿ ಆಡಳಿತ ಮಂಡಳಿಯು ಯಾವುದೇ ಹಿಂಜರಿಕೆಯನ್ನು ಹೊಂದಿರಲಿಲ್ಲ ಎಂದು ಹೇಳಿದರು.

ಐಪಿಎಲ್‌ ಉದ್ಘಾಟನ ಪಂದ್ಯದಲ್ಲೇ ದಾಖಲೆ ಬರೆಯಲು ಇಶಾನ್‌ ಕಿಶನ್‌ ಸಜ್ಜು

Skipper Ishan -

Abhilash BC
Abhilash BC Mar 28, 2026 12:42 PM

ಬೆಂಗಳೂರು, ಮಾ.28: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 19ನೇ ಆವೃತ್ತಿ(IPL 2026) ಇಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ(M Chinnaswamy Stadium)ದಲ್ಲಿ ಶುರುವಾಗಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(RCB vs SRH) ಮತ್ತು ಮಾಜಿ ಚಾಂಪಿಯನ್‌ ಸನ್‌ರೈಸರ್ಸ್‌ ಹೈದರಾಬಾದ್‌ ಮುಖಾಮುಖಿಯಾಗಲಿವೆ. ಆಸೀಸ್‌ನ ಪ್ಯಾಟ್‌ ಕಮಿನ್ಸ್‌ ಬದಲಾಗಿ ಹೈದರಾಬಾದ್‌ ತಂಡವನ್ನು ಮುನ್ನಡೆಸಲಿರುವ ಇಶಾನ್‌ ಕಿಶನ್‌(Ishan Kishan) ಮೊದಲ ಪಂದ್ಯದಲ್ಲೇ ದಾಖಲೆಯೊಂದನ್ನು ನಿರ್ಮಿಸಲಿದ್ದಾರೆ.

27 ವರ್ಷ 253 ದಿನಗಳು ತುಂಬಿದ ಕಿಶನ್, ಸನ್‌ರೈಸರ್ಸ್ ಹೈದರಾಬಾದ್‌ನ ಐಪಿಎಲ್ ಇತಿಹಾಸದಲ್ಲಿ ತಂಡವನ್ನು ಮುನ್ನಡೆಸಿದ ಭಾರತದ ಅತ್ಯಂತ ಕಿರಿಯ ನಾಯಕ ಎನಿಸಿಕೊಳ್ಳಲಿದ್ದಾರೆ. ಒಟ್ಟಾರೆಯಾಗಿ, ಅವರು ಫ್ರಾಂಚೈಸಿಯನ್ನು ಮುನ್ನಡೆಸುವ ಎರಡನೇ ಕಿರಿಯ ನಾಯಕರಾಗಲಿದ್ದಾರೆ. 2018 ರ ಋತುವಿನಲ್ಲಿ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್( 27 ವರ್ಷ 244 ದಿನ) ತಂಡವನ್ನು ಮುನ್ನಡೆಸಿದ್ದರು. ಶಿಖರ್ ಧವನ್, ಮನೀಶ್ ಪಾಂಡೆ ಮತ್ತು ಭುವನೇಶ್ವರ್ ಕುಮಾರ್ ಈ ಹಿಂದೆ ಐಪಿಎಲ್‌ನಲ್ಲಿ ಎಸ್‌ಆರ್‌ಎಚ್ ಅನ್ನು ಮುನ್ನಡೆಸಿದ್ದ ಇತರ ಭಾರತೀಯ ಆಟಗಾರರು.

ಮುಖ್ಯ ತರಬೇತುದಾರ ಡೇನಿಯಲ್ ವೆಟ್ಟೋರಿ, ಕಿಶನ್ ಅವರನ್ನು ಹಂಗಾಮಿ ನಾಯಕನನ್ನಾಗಿ ನೇಮಿಸುವ ತಂಡದ ನಿರ್ಧಾರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿ, ಅವರು ಆತ್ಮವಿಶ್ವಾಸದ ಆಟಗಾರ ಮತ್ತು ನಾಯಕ ಎಂದು ಸಾಬೀತುಪಡಿಸಿರುವುದರಿಂದ ಅವರಿಗೆ ಜವಾಬ್ದಾರಿಯನ್ನು ವಹಿಸುವಲ್ಲಿ ಆಡಳಿತ ಮಂಡಳಿಯು ಯಾವುದೇ ಹಿಂಜರಿಕೆಯನ್ನು ಹೊಂದಿರಲಿಲ್ಲ ಎಂದು ಹೇಳಿದರು.

"ಇಶಾನ್ ಐಪಿಎಲ್‌ನಲ್ಲಿ ಬಹಳ ಸಮಯದಿಂದ ಇದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ಹಲವಾರು ತಂಡಗಳೊಂದಿಗೆ ಇದ್ದಾರೆ ಮತ್ತು ಅವರು ಬಹಳ ಯಶಸ್ವಿಯಾಗಿದ್ದಾರೆ, ಆದ್ದರಿಂದ, ಅವರು ಅದರ ಸುತ್ತ ತಮ್ಮದೇ ಆದ ಆತ್ಮವಿಶ್ವಾಸವನ್ನು ತರುತ್ತಾರೆ" ಎಂದು ವೆಟ್ಟೋರಿ ಶುಕ್ರವಾರ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

'ಧೈರ್ಯದಿಂದ ಆಟವಾಡಿ'; ಸನ್‌ರೈಸರ್ಸ್‌ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಶುಭ ಹಾರೈಸಿದ ವಿಜಯ್‌ ಮಲ್ಯ

ಇತ್ತೀಚೆಗೆ ಇಶಾನ್‌ ಅವರ ನಾಯಕತ್ವದಲ್ಲಿ ಜಾರ್ಖಂಡ್ ರಾಜ್ಯ ತಂಡವು ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯನ್ನು ಗೆದ್ದಿತ್ತು. ಹರಿಯಾಣ ವಿರುದ್ಧದ ಫೈನಲ್ ಸೇರಿದಂತೆ ಅವರ ತಂಡವು ಟೂರ್ನಿಯಲ್ಲಿ 11 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಗೆದ್ದು ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಒಟ್ಟಾರೆಯಾಗಿ, ಅವರು 2019 ರಿಂದ 29 ಟಿ20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ ಮತ್ತು ಅವುಗಳಲ್ಲಿ 24 ಪಂದ್ಯಗಳನ್ನು ಅದ್ಭುತವಾಗಿ ಗೆದ್ದಿದ್ದಾರೆ.

ಆರ್‌ಸಿಬಿ ಮತ್ತು ಹೈದರಾಬಾದ್‌ ತಂಡಗಳು ಸ್ಫೋಟಕ ಬ್ಯಾಟರ್‌ಗಳನ್ನು ನೆಚ್ಚಿಕೊಂಡಿರುವ ಕಾರಣ ಉದ್ಘಾಟನ ಪಂದ್ಯ ಭಾರೀ ಜಿದ್ದಾಜಿದಿನಿಂದದ ಕೂಡಿರುವ ನಿರೀಕ್ಷೆಯಿದೆ. ಇನ್ನೊಂದೆಡೆ ಚಿನ್ನಸ್ವಾಮಿ ಮೈದಾನದ ಬೌಂಡರಿಗಳು ಚಿಕ್ಕದಾಗಿರುವ ಕಾರಣ ದೊಡ್ಡ ಮೊತ್ತಕ್ಕೆ ಅಡ್ಡಿಯಿಲ್ಲ. ಅಭಿಷೇಕ್‌ ಶರ್ಮ, ಟ್ರಾವಿಸ್‌ ಹೆಡ್‌ ಮತ್ತು ಕ್ಲಾಸೆನ್‌ ಸಿಡಿದು ನಿಂತರೆ ತಂಡದ ಮೊತ್ತ 250 ಪ್ಲ್‌ಸ್‌ ದಾಖಲಾದರೂ ಅಚ್ಚರಿಯಿಲ್ಲ.

ಸಂಭವನೀಯ ಆಟಗಾರರು

ಆರ್‌ಸಿಬಿ: ಫಿಲ್‌ ಸಾಲ್ಟ್‌, ವಿರಾಟ್ ಕೊಹ್ಲಿ, ವೆಂಕಟೇಶ್‌‌ ಅಯ್ಯರ್‌, ರಜತ್‌ ಪಾಟೀದಾರ್(ನಾಯಕ), ಜಿತೇಶ್‌‌ ಶಮಾ, ಕೃನಾಲ್‌ ಪಾಂಡ್ಯ, ಟಿಮ್ ಡೇವಿಡ್‌,‌ ರೊಮಾರಿಯೊ ಶೆಫರ್ಡ್‌, ಸುಯಶ್‌ ಶರ್ಮಾ, ಭುವನೇಶ್ವರ್‌ ಕುಮಾರ್,‌ ಜೇಕಬ್‌ ಡಫಿ, ಮಂಗೇಶ್‌ ಯಾದವ್‌.

ಸನ್‌ರೈಸರ್ಸ್: ಅಭಿಷೇಕ್‌ ಶರ್ಮಾ, ಟ್ರಾವಿಸ್‌ ಹೆಡ್‌, ಇಶಾನ್‌ ಕಿಶನ್‌(ನಾಯಕ), ನಿತೇಶ್‌ ಕುಮಾರ್‌, ಹೆನ್ರಿಚ್‌ ಕ್ಲಾಸೆನ್‌, ಲಿವಿಂಗ್‌ಸ್ಟೋನ್‌, ಸಲೀಲ್‌, ಹರ್ಷ್‌ ದುಬೆ, ಶಿವಾಂಗ್‌, ಕಾರ್ಸ್‌, ಹರ್ಷಲ್‌, ಉನಾದ್ಕಟ್‌.