ಆಸ್ಟ್ರೇಲಿಯಾ ವಿರುದ್ಧ ಸೋತು ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಭಾರತ
ICC Women's T20 World Cup 2026: ಹಾಲಿ ಆವೃತ್ತಿಯಲ್ಲಿ ಕಳಪೆ ಬ್ಯಾಟಿಂಗ್ ನಡೆಸಿ ಟೀಕೆಗೆ ಗುರಿಯಾಗಿದ್ದ ಹರ್ಮನ್‌ಪ್ರೀತ್ ಕೌರ್ ಮಹತ್ವದ ಪಂದ್ಯದಲ್ಲಿ ನಾಯಕಿಯ ಆಟವಾಡಿದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಅವರು ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. 27 ಎಸೆತಗಳಿಂದ 3 ಸಿಕ್ಸರ್ ಮತ್ತು 6 ಬೌಂಡರಿ ನೆರವಿನಿಂದ 56 ರನ್ ಬಾರಿಸಿದರು. ಪಂದ್ಯ ಸೋತ ಕಾರಣ ಅವರ ಈ ಪ್ರದರ್ಶನ ವ್ಯರ್ಥವಾಯಿತು.
Australia Women -
ಲಾರ್ಡ್ಸ್, ಜೂ.28: ಆರು ಬಾರಿಯ ವಿಶ್ವ ಚಾಂಪಿಯನ್ಸ್ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಅಂತರದ ಸೋಲು ಕಂಡ ಭಾರತ ಮಹಿಳಾ ತಂಡ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿತು. ಗೆಲುವು ಕಂಡ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡ ಸೆಮಿಫೈನಲ್ ಪ್ರವೇಶಿಸಿತು. ದಿನದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾದೇಶ ವಿರುದ್ಧ 4 ವಿಕೆಟ್ ಅಂತರದ ಗೆಲುವು ಸಾಧಿಸಿತ್ತು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 170 ರನ್ ಬಾರಿಸಿತು. ಆದರೆ ಈ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲವಾಯಿತು. ಆಸ್ಟ್ರೇಲಿಯಾ 19 ಓವರ್‌ಗಳಲ್ಲಿ 4 ವಿಕೆಟ್‌ಗೆ 172 ರನ್ ಬಾರಿಸಿ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿತು.
ಚೇಸಿಂಗ್ ವೇಳೆ ಆಸ್ಟ್ರೇಲಿಯಾ ಪರ ಎಲ್ಲಿಸ್ ಪೆರ್ರಿ(56) ಮತ್ತು ಆಶ್ಲೆ ಆಶ್ಲೀ ಗಾರ್ಡ್ನರ್(53*) ಅಜೇಯ ಅರ್ಧಶತಕ ಬಾರಿಸಿ ಭಾರತದ ಗೆಲುವು ಕಸಿದರು. ಭಾರತ ಪರ ಶ್ರೀ ಚರಣಿ 2 ವಿಕೆಟ್ ಕಿತ್ತರೂ ಅವರಿಗೆ ಇತರ ಬೌಲರ್‌ಗಳಿಂದ ಉತ್ತಮ ಸಾಥ್ ಸಿಗಲಿಲ್ಲ. ಇದು ಸೋಲಿಗೆ ಕಾರಣವಾಯಿತು. ಪಂದ್ಯ ವೀಕ್ಷಿಸಲು ಬಂದ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್‌ಗೆ ನಿರಾಸೆ ಉಂಟಾಯಿತು. ಉಭಯ ಆಟಗಾರರು ತಮ್ಮ ಕುಟುಂಬ ಸಮೇತರಾಗಿ ಲಾರ್ಡ್ಸ್ ಮೈದಾನದಲ್ಲಿ ಹಾಜರಿದ್ದು ಭಾರತ ಮಹಿಳಾ ತಂಡಕ್ಕೆ ಬೆಂಬಲ ಸೂಚಿದರು. ಆದರೆ ತಂಡ ಸೋಲಿನೊಂದಿಗೆ ವಿಶ್ವಕಪ್ ಅಭಿಯಾನ ಮುಗಿಸಿತು.
ಭಾರತಕ್ಕೆ ವೈಟ್‌ವಾಶ್ ಮುಖಭಂಗ; ಐತಿಹಾಸಿಕ ಸರಣಿ ಗೆದ್ದ ಐರ್ಲೆಂಡ್
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಭಾರತ ಆರಂಭಿಕರಾದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮ ಅವರ ಬಿರುಸಿನ ಬ್ಯಾಟಿಂಗ್ ಮೂಲಕ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ ಈ ಜೋಡಿ 66 ರನ್ ಒಟ್ಟುಗೂಡಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿತು. ಮಂಧಾನಗಿಂತ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಶಫಾಲಿ 34(26 ಎಸೆತ, 3 ಬೌಂಡರಿ, 2 ಸಿಕ್ಸರ್) ರನ್ ಗಳಿಸಿದ ವೇಳೆ ಸೋಫಿ ಮೊಲಿನೆಕ್ಸ್ ಎಸೆತವನ್ನು ಬ್ಯಾಕ್‌ಫುಟ್ ಹೊಡೆತ ಬಾರಿಸುವಲ್ಲಿ ಪ್ರಯತ್ನದಲ್ಲಿ ಕ್ಲೀನ್ ಬೌಲ್ಡ್ ಆದರು.
Australia are headed into the #T20WorldCup semi-finals 💪 pic.twitter.com/qLv7zujLts
— ICC (@ICC) June 28, 2026
ಶಫಾಲಿ ವಿಕೆಟ್ ಪತನದ 17 ರನ್ ಅಂತರದಲ್ಲಿ ಸ್ಮೃತಿ ಮಂಧಾನ ರನೌಟ್ ಸಂಕಟಕ್ಕೆ ಸಿಲುಕಿ ವಿಕೆಟ್ ಕಳೆದುಕೊಂಡರು. ಅವರು 37 ಎಸೆತಗಳಿಂದ 38 ರನ್ ಗಳಿಸಿದರು. ಜೆಮಿಮಾ ರೋಡ್ರಿಗಸ್ 34ರನ್ ಗಳಿಸಿ ರಿಟೈರ್ಡ್ ಔಟ್ ಆದರು.
ಕೌರ್ ಸ್ಫೋಟಕ ಬ್ಯಾಟಿಂಗ್
ಹಾಲಿ ಆವೃತ್ತಿಯಲ್ಲಿ ಕಳಪೆ ಬ್ಯಾಟಿಂಗ್ ನಡೆಸಿ ಟೀಕೆಗೆ ಗುರಿಯಾಗಿದ್ದ ಹರ್ಮನ್‌ಪ್ರೀತ್ ಕೌರ್ ಮಹತ್ವದ ಪಂದ್ಯದಲ್ಲಿ ನಾಯಕಿಯ ಆಟವಾಡಿದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಅವರು ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. 27 ಎಸೆತಗಳಿಂದ 3 ಸಿಕ್ಸರ್ ಮತ್ತು 6 ಬೌಂಡರಿ ನೆರವಿನಿಂದ 56 ರನ್ ಬಾರಿಸಿದರು. ಪಂದ್ಯ ಸೋತ ಕಾರಣ ಅವರ ಈ ಪ್ರದರ್ಶನ ವ್ಯರ್ಥವಾಯಿತು.