9 ತಿಂಗಳ ತುಂಬು ಗರ್ಭಿಣಿಯನ್ನು 2 ಗಂಟೆ ಕಾಯಿಸಿದ ಬ್ಯಾಂಕ್ ಸಿಬ್ಬಂದಿ: ಕನಿಷ್ಠ ಮಾನವೀಯತೆಯೂ ಇಲ್ಲ ಎಂದ ನೆಟ್ಟಿಗರು
Viral News: ಬ್ಲಾಕ್ ಆಗಿದ್ದ ಬ್ಯಾಂಕ್ ಖಾತೆಯನ್ನು ಸಕ್ರಿಯಗೊಳಿಸಲು ಬಂದಿದ್ದ 9 ತಿಂಗಳ ಗರ್ಭಿಣಿಯೊಬ್ಬರನ್ನು ಸುಮಾರು ಎರಡು ಗಂಟೆಗಳ ಕಾಲ ಕಾಯಿಸಿದ ದೂರೊಂದು ಕೇಳಿಬಂದಿದೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಬ್ಯಾಂಕ್‌ನಲ್ಲಿ ತನ್ನ ಸರದಿಗಾಗಿ ಕಾದು ಕುಳಿತ ಗರ್ಭಿಣಿ -
ನವದೆಹಲಿ, ಅ. 29: ಕೆಲವೊಂದು ಬ್ಯಾಂಕ್‌ಗಳಲ್ಲಿ ಸಿಬ್ಬಂದಿ ಗ್ರಾಹಕರ ಜತೆ ಸರಿಯಾಗಿ ವರ್ತಿಸದಿರುವ ಬಗ್ಗೆ ಅನೇಕ ದೂರು ಕೇಳಿ ಬರುತ್ತಲೇ ಇದೆ. ಗ್ರಾಹಕರ ಜತೆ ಸರಿಯಾಗಿ ಸಂವಹನ ಮಾಡದೇ ಇರುವುದು, ಹೆಚ್ಚು ಹೊತ್ತು ಕಾಯಿಸುವುದು ಹೀಗೆ ವರ್ತಿಸುವ ಸಿಬ್ಬಂದಿಯಿಂದ ಅನೇಕರು ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವೆಡೆ ತಾವೇ ಬ್ಯಾಂಕ್ ಮ್ಯಾನೇಜರ್ ಎಂಬಂತೆ ವರ್ತಿಸುವವರೂ ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಬ್ಲಾಕ್ ಆಗಿದ್ದ ಖಾತೆಯನ್ನು ಸಕ್ರಿಯಗೊಳಿಸಲು ಆಗಮನಿಸಿ 9 ತಿಂಗಳ ಗರ್ಭಿಣಿಯೊಬ್ಬರನ್ನು ಬ್ಯಾಂಕ್ ಶಾಖೆಯಲ್ಲಿ ಸುಮಾರು 2 ಗಂಟೆಗಳ ಕಾಲ ಕಾಯಿಸಿದ ದುರೊಂದು ಕೇಳಿಬಂದಿದೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಬ್ಯಾಂಕ್ ಶಾಖೆಯೊಂದಕ್ಕೆ ಬಂದಿದ್ದ 9 ತಿಂಗಳ ಗರ್ಭಿಣಿಯೊಬ್ಬರು ಸುಮಾರು 2 ಗಂಟೆಗಳ ಕಾಲ ಕಾಯಬೇಕಾಯಿತು ಎಂಬ ಆರೋಪ ಸದ್ಯ ಸದ್ದು ಮಾಡುತ್ತಿದೆ. ವಿಡಿಯೊದಲ್ಲಿ ಗರ್ಭಿಣಿ ಮಹಿಳೆ ಕಾಯುತ್ತಿರುವಾಗ ಬ್ಯಾಂಕ್ ಸಿಬ್ಬಂದಿ ಊಟ ಮಾಡುತ್ತಿರುವುದು ಕಂಡುಬಂದಿದೆ.
ವಿಡಿಯೊ ನೋಡಿ:
SHAMEFUL BEHAVIOUR BY CANARA BANK EMPLOYEES! 💔 A 9-months-pregnant woman visited Canara Bank to reactivate her blocked account, but allegedly faced misbehaviour from bank employees. Is this how a pregnant woman should be treated? Such... Read news https://t.co/5MFA1lV7zL
— Advika (@Imadvika1) October 29, 2026
ತನ್ನ ನಿರ್ಬಂಧಿತ ಬ್ಯಾಂಕ್ ಖಾತೆಯನ್ನು ಪುನಃ ಸಕ್ರಿಯಗೊಳಿಸಲು ಬ್ಯಾಂಕ್ ಶಾಖೆಯೊಂದಕ್ಕೆ 9 ತಿಂಗಳ ಗರ್ಭಿಣಿ ಆಗಮಿಸಿದ್ದರು. ಆಗ ಬ್ಯಾಂಕ್ ಸಿಬ್ಬಂದಿ ಸೂಕ್ತವಾಗಿ ಸ್ಪಂದಿಸದೆ ಊಟ ಮಾಡುತ್ತಾ ಕುಳಿತಿದ್ದಾರೆ. ಇದರಿಂದಾಗಿ ಗರ್ಭಿಣಿ ಸುಮಾರು 2 ಗಂಟೆ ಕಾಯ ಬೇಕಾಯಿತು.
ರಾಜಸ್ಥಾನ ಎಕ್ಸ್‌ಪ್ರೆಸ್‌ವೇಯಲ್ಲೇ ಪಾರ್ಟಿ ಮಾಡಿದ ಕುಟುಂಬ
ಮತ್ತೊಬ್ಬ ಗ್ರಾಹಕರು ಈ ದೃಶ್ಯ ಸೆರೆಹಿಡಿದಿದ್ದು ಅತ್ತ ಬ್ಯಾಂಕ್ ಸಿಬ್ಬಂದಿ ಊಟದ ವಿರಾಮದಲ್ಲಿದ್ದರೆ ಇತ್ತ ಗರ್ಭಿಣಿ ಅಸಹಾಯಕತೆಯಿಂದ ಕಾಯುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. "9 ತಿಂಗಳ ಗರ್ಭಿಣಿ ತಮ್ಮ ಖಾತೆ ಸರಿಪಡಿಸಿಕೊಳ್ಳಲಯ ಬಂದಿದ್ದರು. ಸಿಬ್ಬಂದಿ ಊಟ ಮುಗಿದಿದ್ದರೂ ಗ್ರಾಹಕರ ಕೆಲಸ ಮಾಡಿಕೊಡದೆ ವಿಳಂಬ ಮಾಡುತ್ತಿದ್ದಾರೆ. ಕನಿಷ್ಠ ಮಾನವೀಯತೆಯೂ ಇಲ್ಲʼʼ ಎಂದು ಅವರು ಕಿಡಿಕಾರಿದ್ದಾರೆ.
ಆದಾಗ್ಯೂ, ಈ ಘಟನೆ ನಡೆದ ನಿಖರ ಸ್ಥಳ ಮತ್ತು ಬ್ಯಾಂಕ್ ಶಾಖೆಯ ಮಾಹಿತಿ ಲಭ್ಯವಾಗಿಲ್ಲ. ವಿಡಿಯೊ ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಬ್ಯಾಂಕ್ ಸಿಬ್ಬಂದಿ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಬಳಕೆದಾರರು ಬ್ಯಾಂಕ್ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಪ್ರತಿಯೊಬ್ಬ ಗ್ರಾಹಕರನ್ನೂ ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.