ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮುಂಬೈಯಲ್ಲಿ ತಡರಾತ್ರಿ ಒಂಟಿಯಾಗಿ ಪ್ರಯಾಣ: ಜೀವನದಲ್ಲಿ ಮೊದಲ ಬಾರಿಗೆ ಭಯವಿಲ್ಲದೆ ಕ್ಯಾಬ್ ಹತ್ತಿದೆ ಎಂದ ಮಹಿಳೆ

Viral News: ಮುಂಬೈಯಲ್ಲಿ ತಡರಾತ್ರಿ ಟ್ಯಾಕ್ಸಿಯಲ್ಲಿ ಪ್ರಯಾಣಿಸಿದ ಮಹಿಳೆಯೊಬ್ಬರು ಈ ಅನುಭವವನ್ನು ಹಂಚಿಕೊಂಡಿದ್ದಾರೆ. ಯಾವುದೇ ಭಯವಿಲ್ಲದೆ  ಪ್ರಯಾಣಿಸಲು ಹೇಗೆ ಸಾಧ್ಯವಾಯಿತು ಎಂಬುವುದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಚಾಲಕಿಯೊಬ್ಬರ ಟ್ಯಾಕ್ಸಿ ಬುಕ್ ಮಾಡಿರುವುದರಿಂದ ಯಾವುದೇ ಸುರಕ್ಷತೆ ಬಗ್ಗೆ ಯೋಚಿಸದೆ ಆರಾಮದಾಯಕವಾಗಿ ಪ್ರಯಾಣಿಸಲು ಸಾಧ್ಯವಾಯಿತು ಎಂದು ವಿವರಿಸಿದ್ದಾರೆ.

ತಡರಾತ್ರಿ ಮುಂಬೈಯಲ್ಲಿ ಟ್ಯಾಕ್ಸಿ ಪ್ರಯಾಣಿಸಿದ ಮಹಿಳೆಯ ಪೋಸ್ಟ್ ವೈರಲ್

ತಡರಾತ್ರಿ ಮುಂಬೈ ಟ್ಯಾಕ್ಸಿ ಪ್ರಯಾಣದ ಅನುಭವ ಹಂಚಿಕೊಂಡ ಮಹಿಳೆ -

Profile
Pushpa Kumari Oct 29, 2026 4:38 PM

ಮುಂಬೈ, ಅ. 29: ಇತ್ತೀಚೆಗೆ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನಿಸುವಂತಹ ಅನೇಕ ಘಟನೆಗಳು ನಡೆದಿವೆ. ಏಕಾಂಗಿಯಾಗಿ ಪ್ರಯಾಣಿಸುತ್ತಿರುವ ಮಹಿಳೆಯರಿಗೆ ಅಸುರಕ್ಷತೆ, ಅಭದ್ರತೆ ಕಾಡುತ್ತಿದೆ. ಮುಂಬೈಯಲ್ಲಿ ತಡರಾತ್ರಿ ಟ್ಯಾಕ್ಸಿಯಲ್ಲಿ ಪ್ರಯಾಣಿಸಿದ ಮಹಿಳೆಯೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಪ್ರಯಾಣದ ಉದ್ದಕ್ಕೂ ಯಾವುದೇ ಭಯವಿಲ್ಲದೆ  ಪ್ರಯಾಣಿಸಲು ಹೇಗೆ ಸಾಧ್ಯವಾಯಿತು ಎಂಬುವುದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ (Viral News) ಮಾಡಿಕೊಂಡಿದ್ದಾರೆ. ಚಾಲಕಿಯೊಬ್ಬರ ಟ್ಯಾಕ್ಸಿ ಬುಕ್ ಮಾಡಿರುವುದರಿಂದ ಯಾವುದೇ ಸುರಕ್ಷತೆ ಬಗ್ಗೆ ಯೋಚಿಸದೆ ಆರಾಮದಾಯಕವಾಗಿ ಪ್ರಯಾಣಿಸಲು ಸಾಧ್ಯವಾಯಿತು ಎಂದಿದ್ದಾರೆ.

ಮುಂಬೈಯಲ್ಲಿ ನಡೆದ ಒಂದು ಸಾಮಾನ್ಯ ಕ್ಯಾಬ್ ಪ್ರಯಾಣವು ಸೋಷಿಯಲ್ ಮೀಡಿಯಾ ಬಳಕೆದಾರರ ಗಮನ ಸೆಳೆದಿದೆ. ಚಾಲಕಿಯೊಂದಿಗೆ ಪ್ರಯಾಣ ಮಾಡಿದಾಗ ತಮಗೆ ಅಪರೂಪದ ಸುರಕ್ಷತಾ ಭಾವನೆ ಸಿಕ್ಕಿತು. ಯಾವುದರ ಬಗ್ಗೆಯೂ ಯೋಚಿಸದೆ ಸುರಕ್ಷಿತವಾಗಿ ಮನೆ ಸೇರಬಹುದು ಎನ್ನುವ ಆ ತೃಪ್ತಿಯೇ ಸಾಕು. ವೈಯಕ್ತಿಕ ಸುರಕ್ಷತೆಯ ಬಗ್ಗೆ ಸದಾ ಚಿಂತಿಸದೆ ಪ್ರಯಾಣಿಸುವುದು ಹೇಗಿರುತ್ತದೆ ಎಂಬುದರ ಅನುಭವ ದೊರೆತಿದ್ದಾಗಿ ಹೇಳಿದ್ದಾರೆ.

ವಿಡಿಯೊ ನೋಡಿ:

ತಡರಾತ್ರಿ ಚಾಲಕಿ ನಡೆಸುತ್ತಿದ್ದ ಟ್ಯಾಕ್ಸಿಯಲ್ಲಿ ಅಪೂರ್ವಾ ಎಂಬ ಮಹಿಳೆ ಪ್ರಯಾಣಿಸಿದ ಅನುಭವ ಶೇರ್ ಮಾಡಿದ್ದಾರೆ. ವಿಮಾನ ನಿಲ್ದಾಣದಿಂದ ಮನೆಗೆ ತೆರಳಲು ಚಾಲಕಿಯ ಟ್ಯಾಕ್ಸಿ ಬುಕ್ ಮಾಡಿದ್ದರು. ಸಾಮಾನ್ಯವಾಗಿ ಚಾಲಕನ ಟ್ಯಾಕ್ಸಿಯಲ್ಲಿ ಪ್ರಯಾಣಿಸುವುದಾದರೆ ತಮ್ಮ ಲೈವ್ ಲೊಕೇಶನ್ ಹಂಚಿಕೊಳ್ಳುವುದು, ಕುಟುಂಬದವರ ಜತೆ ಫೋನ್‌ನಲ್ಲಿ ಇರುವುದು ಸಾಮಾನ್ಯ. ಆದರೆ ಈ ಪ್ರಯಾಣದಲ್ಲಿ ಯಾವುದೇ ಆತಂಕವಿಲ್ಲದೆ ಆರಾಮವಾಗಿ ಕುಳಿತು ಪ್ರಯಾಣಿಸಿದೆ ಎಂದು ಅಪೂರ್ವಾ ತಿಳಿಸಿದ್ದಾರೆ.

ಸಾರ್ವಜನಿಕರ ಮುಂದೆಯೇ ನದಿಗೆ ಕಸ ಎಸೆದ ದಂಪತಿ; ತಲೆ ತಗ್ಗಿಸಿದ ನಾಗರಿಕ ಸಮಾಜ

"ಇಂದು ನನಗೆ ಪುರುಷನಂತೆ ಎನಿಸಿತು. ದೈನಂದಿನ ಜೀವನದ ಪ್ರತಿಯೊಂದು ಹಂತದಲ್ಲೂ ಸುರಕ್ಷತೆಯ ಬಗ್ಗೆ ಯೋಚಿಸದೆ ಮುಕ್ತವಾಗಿ ಓಡಾಡುವ ಸ್ವಾತಂತ್ರ್ಯ ಪುರುಷರಿಗಿದೆ. ಅಂತಹ ಅನುಭವ ನನಗೆ ಇಂದು ಸಿಕ್ಕಿತುʼʼ ಎಂದಿದ್ದಾರೆ. ಅಪೂರ್ವಾ ಅವರ ಈ ಮಾತುಗಳಿಗೆ ನೆಟ್ಟಿಗರಿಂದ ಅಪಾರ ಬೆಂಬಲ ವ್ಯಕ್ತವಾಗಿದೆ.

ಈ ಬಗ್ಗೆ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದು, ಮಹಿಳೆಯರಿಗೆ ಸಿಗುವ ಈ ಸ್ವಾತ್ರಂತ್ರ್ಯ ಎಷ್ಟು ದೊಡ್ಡ ವರ ಎಂಬುದು ಇದರಿಂದ ಅರ್ಥವಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಒಬ್ಬರು, ʼʼಒಬ್ಬಂಟಿಯಾಗಿ ಪ್ರಯಾಣ ಮಾಡುವ ಮಹಿಳೆ ಪ್ರತಿಕ್ಷಣ ಆತಂಕದಲ್ಲೇ ಇರಬೇಕಾಗುತ್ತದೆʼʼ ಎಂದು ಹೇಳಿದ್ದಾರೆ.