ಯುವಕನ ಹೆಲಿಕಾಪ್ಟರ್ ಪ್ರಯಾಣದ ಕನಸನ್ನು ನನಸಾಗಿಸಿದ ಹರಿಯಾಣ ಸಿಎಂ
Viral News: ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ ಯುವಕನೊಬ್ಬನಿಗೆ ಹೆಲಿಕಾಪ್ಟರ್ ಪ್ರಯಾಣ ಮಾಡಲು ಅವಕಾಶ ನೀಡಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಸಾರ್ವಜನಿಕ ಕಾರ್ಯಕ್ರಮವೊಂದನ್ನು ಕೊನೆಗೊಳಿಸಿ ಹೆಲಿಕಾಪ್ಟರ್ ಏರಲು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಸಿದ್ಧರಾಗಿದ್ದರು. ಅದೇ ವೇಳೆ ಬ್ಯಾರಿಕೇಡ್ ಆಚೆ ನಿಂತಿದ್ದ ಯುವಕನ ಮಾತನ್ನು ಅರ್ಥೈಸಿಕೊಂಡು ಆತನನ್ನು ಹೆಲಿಕಾಪ್ಟರ್ ಸವಾರಿ ಮಾಡಿಸುವ ಮೂಲಕ ಎಲ್ಲರನ್ನು ಹುಬ್ಬೇರಿಸಿದ್ದಾರೆ.
ಹೆಲಿಕಾಪ್ಟರ್ ಸವಾರಿ ಮಾಡಿಸಿದ ಹರಿಯಾಣ ಸಿಎಂ -
ಚಂಡೀಗಢ, ಫೆ. 19: ಹರಿಯಾಣದ ಜಿಂದ್ ಜಿಲ್ಲೆಯ ಉಚಾನಾದಲ್ಲಿ ಅಪರೂಪದ ಘಟನೆಯೊಂದು ನಡೆದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಯುವಕನೊಬ್ಬನಿಗೆ ಹೆಲಿಕಾಪ್ಟರ್ ಪ್ರಯಾಣ ಮಾಡಲು ಅವಕಾಶ ನೀಡಿದ್ದು ಎಲ್ಲರನ್ನು ಅಚ್ಚರಿಗೊಳಿಸಿದೆ. ಸಾರ್ವಜನಿಕ ಕಾರ್ಯಕ್ರಮವೊಂದನ್ನು ಮುಗಿಸಿ ಹೆಲಿಕಾಪ್ಟರ್ ಏರಲು ಮುಖ್ಯಮಂತ್ರಿ (Haryana CM) ನಯಾಬ್ ಸಿಂಗ್ ಸೈನಿ ಸಿದ್ಧರಾಗಿದ್ದರು. ಅದೇ ವೇಳೆ ಬ್ಯಾರಿಕೇಡ್ ಆಚೆ ನಿಂತಿದ್ದ ಯುವಕನ ಮಾತನ್ನು ಅರ್ಥೈಸಿಕೊಂಡು ಆತನಿಗೆ ಹೆಲಿಕಾಪ್ಟರ್ ಸವಾರಿ ಮಾಡಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ಜಿಂದ್ ಜಿಲ್ಲೆಯಲ್ಲಿ 103.31 ಕೋಟಿ ರು.ಗಳ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಯನ್ನು ನೆರೆವೇರಿಸಲು ಸಿಎಂ ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿ ಹೆಲಿಕಾಪ್ಟರ್‌ನಲ್ಲಿ ಹೋಗಲು ತಯಾರಾಗುತ್ತಿದ್ದಂತೆ ಬ್ಯಾರಿಕೇಡ್‌ಗಳ ಆಚೆಯಿಂದ ಒಂದು ಧ್ವನಿ ಮೊಳಗಿತು. ʼʼಓ ಅಂಕಲ್ ಸೈನಿ, ನಾನು ಕೂಡ ಹೆಲಿಕಾಪ್ಟರ್‌ನಲ್ಲಿ ಕುಳಿತುಕೊಳ್ಳುತ್ತೇನೆʼʼ ಎಂದು ಸುಮಾರು 50 ಮೀಟರ್ ದೂರದಿಂದ ಯುವಕನು ಕೂಗಿದ್ದಾನೆ.
ವಿಡಿಯೊ ಇಲ್ಲಿದೆ:
“आ ताऊ सैनी, हमने भी बिठाले जहाज म्ह; बिठावैगा के!”
— Haryana BJP (@BJP4Haryana) February 18, 2026
"उचाना में लड़के की पुकार सुनकर CM नायब सिंह सैनी जी ने उसे पास बुलाया और हेलीकॉप्टर में बिठाया"@NayabSainiBJP @_KrishanBedi @Mla4Uchana pic.twitter.com/r8my7l8SFA
ಸೋನು ಎಂಬ ಯುವಕ ಹರಿಯಾಣಿ ಭಾಷೆಯಲ್ಲಿ ಈ ರೀತಿ ಮನವಿ ಮಾಡಿದ್ದಾನೆ. ʼʼಓ ತಾವು ಸೈನಿ, ನಮ್ಮನ್ನೂ ಈ ಜಹಾಜ್ /ಹೆಲಿಕಾಪ್ಟರ್ ಒಳಗೆ ಕೂರಿಸಿಕೊಳ್ತೀರಾ?ʼʼ ಎಂದು ಕೇಳಿದ್ದಾನೆ. ಇದನ್ನು ಗಮನಿಸಿದ ಸಿಎಂ ತಕ್ಷಣವೇ ಭದ್ರತಾ ಅಧಿಕಾರಿಗಳಿಗೆ ಆತನನ್ನು ಒಳಗೆ ಕರೆತರಲು ಸೂಚನೆ ನೀಡಿದ್ದಾರೆ. ಅಚ್ಚರಿಯೆಂದರೆ, ಸೋನುಗೆ ಹೆಲಿಕಾಪ್ಟರ್ ಒಳಗೆ ಮುಖ್ಯಮಂತ್ರಿ ಪಕ್ಕದಲ್ಲೇ ಕುಳಿತುಕೊಳ್ಳುವ ಅವಕಾಶ ಕೂಡ ಸಿಕ್ಕಿದೆ
ಅತ್ತೆಯನ್ನು ನೋಡಿಕೊಳ್ಳಲು ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಿದ ಪತಿ!
ಯುವಕನು ಈ ಬಗ್ಗೆ ಮೆಚ್ಚುಗೆ ವ್ಯಕ್ಯ ಪಡಿಸಿದ್ದು, ʼʼನನ್ನನ್ನು ಕರೆದಾಗ ತಮಾಷೆ ಎಂದುಕೊಂಡೆ. ಅವರು ನನ್ನ ಮಾತು ಕೇಳಿ ಬಳಿಗೆ ಕರೆದರು. ಹೆಲಿಕಾಪ್ಟರ್‌ನಲ್ಲಿ ಕುಳಿತಿದ್ದು ಇದೇ ಮೊದಲು. ಸಿಎಂಗೆ ಹೂವುನ್ನು ಅರ್ಪಿಸಿ ಈ ಅನುಭವವನ್ನು ಮರೆಯಲಾಗದುʼʼ ಎಂದು ಬಣ್ಣಿಸಿದ್ದಾನೆ. ಹರಿಯಾಣ ಬಿಜೆಪಿ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದೆ. ಈ ಕ್ಲಿಪ್ ತ್ವರಿತವಾಗಿ ಗಮನ ಸೆಳೆದು, 3.5 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ. ಹಲವರು ಸಿಎಂ ಸೈನಿಯ ಕಾರ್ಯವನ್ನು ಮೆಚ್ಚಿದ್ದಾರೆ.