ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Fact Check: ಭಾರತೀಯ ಸೇನೆಯನ್ನು ಕೇಸರಿಯನ್ನಾಗಿಸಲು ಮೋಹನ್‌ ಭಾಗವತ್‌ ಮೋದಿಗೆ ಮನವಿ ಸಲ್ಲಿಸಿದ್ರಾ? ವೈರಲ್‌ ವಿಡಿಯೊ ಹಿಂದಿನ ಸತ್ಯಾಂಶ ಇಲ್ಲಿದೆ

ಭಾರತೀಯ ಸೇನೆಯನ್ನು ಕೇಸರಿ ಮಾಡಬೇಕು, ಸೇನೆಯಲ್ಲಿರುವ ಹಿಂದೂಯೇತರರನ್ನು ತೆಗೆದು ಹಾಕಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದು ಅಸಲಿ ವಿಡಿಯೊ ಅಲ್ಲ ಡೀಪ್ ಫೇಕ್ ವಿಡಿಯೊ ಎಂದು ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಸ್ಪಷ್ಟಪಡಿಸಿದೆ.

ಮೋಹನ್ ಭಾಗವತ್ ವಿವಾದಾತ್ಮಕ ಹೇಳಿಕೆ ಹಿಂದಿನ ರಹಸ್ಯವೇನು?

ಮೋಹನ್ ಭಾಗವತ್ (ಸಂಗ್ರಹ ಚಿತ್ರ) -

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (pm narendra modi) ಅವರ ಡೀಪ್ ಫೇಕ್ (deep fake) ವಿಡಿಯೊವೊಂದು ಇತ್ತೀಚೆಗೆ ವೈರಲ್ (Viral video) ಆದ ಬೆನ್ನಲ್ಲೇ ಇದೀಗ ರಾಷ್ಟ್ರೀಯ ಸ್ವಯಂಸೇವಕ ಸಂಘ (Rashtriya Swayamsevak Sangh) ಮುಖ್ಯಸ್ಥ ಮೋಹನ್ ಭಾಗವತ್ (RSS Chief Mohan Bhagwat) ಅವರು ಡೀಪ್ ಫೇಕ್ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತೀಯ ಸೇನೆಗೆ (Indian Army) ಕೇಸರಿ ಬಣ್ಣ ಕೊಡಬೇಕು, ಸೇನೆಯಲ್ಲಿರುವ ಶೇ. 50ರಷ್ಟು ಜಾತಿಯೇತರ ಹಿಂದೂಗಳನ್ನು ತೆಗೆದುಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಆದರೆ ಇದು ಸುಳ್ಳು ಸುದ್ದಿ ಎಂದು ಪತ್ರಿಕಾ ಮಾಹಿತಿ ಬ್ಯೂರೋ (Press Information Bureau) ಸ್ಪಷ್ಟಪಡಿಸಿದೆ.

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತೀಯ ಸೇನೆಯನ್ನು ಕೇಸರಿ ಮಾಡಿ ಎಂದು ಹೇಳಿಲ್ಲ ಹಾಗೂ ಸೇನೆಯಲ್ಲಿರುವ ಶೇ.50 ರಷ್ಟು ಜಾತಿಯೇತರ ಹಿಂದೂಗಳನ್ನು ತೆಗೆದುಹಾಕುವಂತೆಯೂ ತಿಳಿಸಿಲ್ಲ ಎಂದು ಪಿಐಬಿ ಹೇಳಿದೆ.

Fact Check: ಭಾರತದ ರಫೇಲ್ ಜೆಟ್‌ಗಳನ್ನು ಪಾಕಿಸ್ತಾನ ನಾಶಪಡಿಸಿದೆ ಎಂದ ಪ್ರಧಾನಿ ಮೋದಿ; ವಿಡಿಯೊ ಅಸಲಿಯತ್ತೇನು?

ಮೋಹನ್ ಭಾಗವತ್ ಅವರ ವೈರಲ್ ಕ್ಲಿಪ್ ಅನ್ನು ಪತ್ರಿಕಾ ಮಾಹಿತಿ ಬ್ಯೂರೋ ಪರಿಶೀಲನೆ ಮಾಡಿದ್ದು, ಇದು ನಕಲಿ ವಿಡಿಯೊ. ನಕಲಿ ಧ್ವನಿಮುದ್ರಿಕೆ ಮಾಡಿ ಹಂಚಲಾಗಿದೆ. ಅಧಿಕೃತ ದೃಶ್ಯಾವಳಿಯಲ್ಲಿ ಅವರು ಯಾವುದೇ ರೀತಿಯಲ್ಲಿ ಸೈನ್ಯದ ಬಗ್ಗೆ ಉಲ್ಲೇಖ ಮಾಡಿಲ್ಲ. ಈ ಕುರಿತು ಆರ್‌ಎಸ್‌ಎಸ್ ಮತ್ತು ಬಿಜೆಪಿ ಚರ್ಚಿಸಿದೆ ಎಂದು ಪಿಐಬಿ ದೃಢಪಡಿಸಿದೆ.



ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಮೋಹನ್ ಭಾಗವತ್ ಅವರು ಭಾರತೀಯ ಸೇನೆಯನ್ನು ಶುದ್ಧವಾಗಿಡಲು ಅದಕ್ಕೆ ಕೇಸರಿ ಬಣ್ಣ ಕೊಡಬೇಕು. ಶೇ.50 ಕ್ಕಿಂತ ಹೆಚ್ಚು ಜಾತಿಯೇತರ ಹಿಂದೂಗಳನ್ನು ತೆಗೆದು ಹಾಕಬೇಕು ಎಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿ ಪಿಐಬಿ ಮೂಲ ವಿಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿದೆ. ಸಾರ್ವಜನಿಕರನ್ನು ದಾರಿ ತಪ್ಪಿಸಲು ಇಂತಹ ನಕಲಿ ವಿಡಿಯೊಗಳನ್ನು ಉದ್ದೇಶಪೂರ್ವಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ನಾಗರಿಕರು ಎಚ್ಚರವಾಗಿರುವಂತೆ ತಿಳಿಸಿದೆ.

ಪಾನಿಪುರಿ ಪ್ರಿಯರೇ ಎಚ್ಚರ...ಎಚ್ಚರ... ಪಾನಿಪುರಿ ಮಸಾಲೆಯಲ್ಲಿ ಜೀವಂತ ಇಲಿ ಪತ್ತೆ: ಶಾಕಿಂಗ್‌ ವಿಡಿಯೊ ನೋಡಿ

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನವು ಭಾರತದ ರಫೇಲ್ ಜೆಟ್‌ಗಳನ್ನು ನಾಶಪಡಿಸಿದೆ ಎಂದು ಹೇಳಿರುವ ವಿಡಿಯೊವೊಂದು ಇತ್ತೀಚೆಗೆ ವೈರಲ್ ಆಗಿತ್ತು. ಇದು ಡೀಪ್‌ಫೇಕ್ ಎಂಬುದಾಗಿ ಬುಧವಾರ ಪಿಐಬಿ ದೃಢಪಡಿಸಿತ್ತು.