ಮಹಿಳೆಯರ ಕೋಚ್‌ನಲ್ಲೇ ಯುವತಿಯರ ರಹಸ್ಯ ಚಿತ್ರೀಕರಣ: ಇಲ್ಲೂ ರಕ್ಷಣೆಯಿಲ್ಲ ಎಂದು ಕಿಡಿಕಾರಿದ ನೆಟ್ಟಿಗರು!
Viral Video: ಸಾರ್ವಜನಿಕ ಸಾರಿಗೆ ಅಂತ ಬಂದಾಗ ಹೆಚ್ಚಿನ ಸ್ತ್ರೀಯರು ಮಹಿಳೆಯರ ಬೋಗಿಯನ್ನು ಹತ್ತುತ್ತಾರೆ, ಇದು ರೈಲಿನಲ್ಲಿರುವ ಉಳಿದ ಬೋಗಿಗಳಿಗಿಂತ ಸುರಕ್ಷಿತ ಆಯ್ಕೆಯಾಗಿದೆ ಎಂದು ಭಾವಿ ಸುತ್ತಾರೆ. ಆದರೆ ಇಲ್ಲೂ ಸುರಕ್ಷಿತ ಇಲ್ಲ ಅಂದ್ರೆ ನೀವು ನಂಬುತ್ತೀರಾ?ಹೌದು ಮಹಿಳಾ ಬೋಗಿಯಲ್ಲೇ ಸಹ ಪ್ರಯಾಣಿಕರು ಇಬ್ಬರು ಯುವತಿಯರ ರಹಸ್ಯ ಚಿತ್ರೀಕರಣ ಮಾಡಿರುವ ಘಟನೆಯೊಂದು ವರದಿಯಾಗಿದೆ.
ಮಹಿಳೆಯರ ಕೋಚ್ ನಲ್ಲೇ ಯುವತಿಯರ ರಹಸ್ಯ ಚಿತ್ರೀಕರಣ -
ನವದೆಹಲಿ,ಜೂ.11: ಇಂದು ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆ ಮಾಡುವ ಅನೇಕ ಘಟನೆಗಳು ವರದಿಯಾಗಿವೆ. ಸಾರ್ವಜನಿಕ ಸಾರಿಗೆಯಲ್ಲಿ ಕಿರುಕುಳ, ಉದ್ಯೋಗ ಸ್ಥಳದಲ್ಲಿ ದೌರ್ಜನ್ಯ ಹೀಗೆ ಅನೇಕ ಘಟನೆಗಳನ್ನು ನೀವು ಕೇಳಿರಬಹುದು. ಹೀಗಾಗಿ ಕೆಲವೆಡೆ ಮಹಿಳೆಯರಿಗಾಗಿಯೇ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಅದರಲ್ಲೂ ಸಾರ್ವಜನಿಕ ಸಾರಿಗೆ ಅಂತ ಬಂದಾಗ ಹೆಚ್ಚಿನ ಸ್ತ್ರೀಯರು ಮಹಿಳೆಯರ ಬೋಗಿಯನ್ನು ಹತ್ತುತ್ತಾರೆ, ಇದು ರೈಲಿನಲ್ಲಿರುವ ಉಳಿದ ಬೋಗಿಗಳಿಗಿಂತ ಸುರಕ್ಷಿತ ಆಯ್ಕೆಯಾಗಿದೆ ಎಂದು ಭಾವಿಸುತ್ತಾರೆ. ಆದರೆ ಇಲ್ಲೂ ಸುರಕ್ಷಿತ ಇಲ್ಲ ಅಂದ್ರೆ ನೀವು ನಂಬುತ್ತೀರಾ?ಹೌದು ಮಹಿಳಾ ಬೋಗಿ ಯಲ್ಲೇ ಸಹ ಪ್ರಯಾಣಿಕರು ಇಬ್ಬರು ಯುವತಿಯರ ರಹಸ್ಯ ಚಿತ್ರೀಕರಣ (Viral News) ಮಾಡಿರುವ ಘಟನೆಯೊಂದು ವರದಿಯಾಗಿದೆ.
ಸ್ಥಳೀಯ ರೈಲಿನಲ್ಲಿ ಜನದಟ್ಟಣೆಯ ಮಹಿಳೆಯರ ವಿಭಾಗದಲ್ಲಿಯೇ ಈ ಈ ಘಟನೆ ನಡೆದಿದೆ. ಇಲ್ಲೂ ಕೂಡ ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳಗಳನ್ನು ಹುಟ್ಟುಹಾಕುವಂತೆ ಮಾಡಿದೆ. ಇಬ್ಬರು ಮಹಿಳೆಯರು ಇದು ಸುರಕ್ಷಿತ ಪ್ರಯಾಣ ಎಂದು ನಂಬಿ ಕೋಚ್ ಹತ್ತಿದ್ದರು. ಆದಾಗ್ಯೂ, ಅವರು ನೆಲದ ಮೇಲೆ ಕುಳಿತಿದ್ದ ಇಬ್ಬರು ಮಹಿಳೆಯರನ್ನು ಗಮನಿಸಿದಾಗ ಅವರ ಒಪ್ಪಿಗೆಯಿಲ್ಲದೆ ಮಹಿಳೆಯರು ಛಾಯಾಚಿತ್ರಗಳನ್ನು ತೆಗೆದುಕೊಂಡಿರುವುದನ್ನು ಗಮನಿಸಿದ್ದಾರೆ.
ವಿಡಿಯೋ ನೋಡಿ:
Ladies compartment isn't even safe anymore from ladies itself😭🙏
— Ghar Ke Kalesh (@gharkekalesh) June 10, 2026
Two young women boarded a crowded ladies’ compartment thinking it would be safe, only to be secretly photographed by two women sitting on the floor.
The shots focused on their chest, waist, and under the skirt.… pic.twitter.com/Sjc0Z3xTxE
ಇಬ್ಬರು ಮಹಿಳೆಯರು ಯುವತಿಯರ ಅನುಮತಿಯಿಲ್ಲದೆಯೇ ಮೊಬೈಲ್‌ನಲ್ಲಿ ಕ್ಲೋಸ್-ಅಪ್ ಫೋಟೋಗಳನ್ನು ತೆಗೆಯುತ್ತಿದ್ದರು. ಈ ಫೋಟೋಗಳು ಎದೆ, ಸೊಂಟ ಮತ್ತು ಅವರ ಸ್ಕರ್ಟ್‌ಗಳ ಕೆಳಗೆ ಸೇರಿದಂತೆ ಖಾಸಗಿ ಅಂಗಗಳ ಮೇಲೆ ಕೇಂದ್ರೀಕರಿಸಿದೆ ಎಂದು ಅವರು ದೂರಿದ್ದಾರೆ. ಆ ಮಹಿಳೆ ಫೋಟೋಗಳನ್ನು ಡಿಲೀಟ್ ಮಾಡಲು ಕೂಡ ಒಪ್ಪುತ್ತಿಲ್ಲ. ಕೇವಲ ಒಂದು ಫೋಟೋ ಡಿಲೀಟ್ ಮಾಡಿ ಇನ್ನೊಂದನ್ನು ತನ್ನ ಬಳಿಯೇ ಇಟ್ಟು ಕೊಳ್ಳಲೇ ಎಂದು ಕೇಳಿದ್ದಾರೆ.
Viral Video: ಇಂಡಿಗೋ ವಿಮಾನ ರದ್ದು; ಪುತ್ರನಿಗಾಗಿ 800 ಕಿ.ಮೀ ದೂರ ಕಾರು ಚಲಾಯಿಸಿದ ತಂದೆ!
ಈ ಘಟನೆಯಿಂದ ಬೇಸತ್ತ ಯುವತಿಯರು ಮುಂದಿನ ನಿಲ್ದಾಣದಲ್ಲೇ ರೈಲಿನಿಂದ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಕೋಚ್ ನಲ್ಲಿದ್ದ ಇತರೆ ಯಾವುದೇ ಪ್ರಯಾಣಿಕರು ಯುವತಿಯರ ಪರವಾಗಿ ಬೆಂಬಲ ನೀಡದೆ ಸುಮ್ಮನೆ ಕುಳಿತಿದ್ದಾರೆ. ಸದ್ಯ ಈ ವೀಡಿಯೊ ಭಾರೀ ವೈರಲ್ ಆಗಿದ್ದು, ಸಾರ್ವ ಜನಿಕ ಸಾರಿಗೆಯಲ್ಲಿ ಗೌಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ.
ಬಳಕೆದಾರರೊಬ್ಬರು "ಪುರುಷ ಅಥವಾ ಮಹಿಳೆ, ಅವರ ಒಪ್ಪಿಗೆಯಿಲ್ಲದೆ ಯಾರೊಂದಿಗೂ ಫೋಟೋ ಕ್ಲಿಕ್ಕಿಸಲು ಯಾರಿಗೂ ಅವಕಾಶ ನೀಡಬಾರದು" ಎಂದು ಬರೆದಿದ್ದಾರೆ. ಮತ್ತೊಬ್ಬರು ಅನುಮತಿಯಿಲ್ಲದೆ ಫೋಟೋ ತೆಗೆಯುವುದು ಅಪರಾಧ.. ಇವರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಕಾಮೆಂಟ್ ಮಾಡಿದ್ದಾರೆ.